Niruta Publications
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
Niruta Publications
  • General Books
  • >
  • ಸೋಲು ಸಾವಲ್ಲ ಗೆಲುವು ಸುಖವಲ್ಲ

ಸೋಲು ಸಾವಲ್ಲ ಗೆಲುವು ಸುಖವಲ್ಲ

SKU:
$0.00
Unavailable
per item
ಮುನ್ನುಡಿ
 
ಮನುಷ್ಯನ ಜೀವನವೆಂಬುದು ಸುಖವೆಂಬ ಮರೀಚಿಕೆಯ ಬೆನ್ನತ್ತುವ ಪಯಣ. ಈ ಪಯಣದಲ್ಲಿ ಕಷ್ಟಗಳ ಸರಮಾಲೆ ಸುತ್ತಿಕೊಳ್ಳುತ್ತಲೇ ಇರುತ್ತದೆ. ಕೆಲವೊಮ್ಮೆ ದೊರೆತ ಯಶಸ್ಸು ಮುಂದೊಂದು ದಿನ ಕಷ್ಟಗಳ ಬೇಡಿಯನ್ನು ತೊಡಿಸುತ್ತದೆ. ಇನ್ನು ಕೆಲವೊಮ್ಮೆ ನಾವು ಸೋತ ಸೋಲುಗಳೇ ನಮ್ಮ ಬದುಕಿಗೆ ಹೊಸ ಮೆರಗು ನೀಡುತ್ತದೆ. ಬದುಕಿನ ಪಯಣವನ್ನು ಚೆನ್ನಾಗಿ ಅರ್ಥೈಸಿಕೊಂಡು ಓದುಗರಿಗೆ ಜೀವನದ ಅರ್ಥವನ್ನು ತಿಳಿಸಿಕೊಡುವ ಅರ್ಥಪೂರ್ಣ ಸಸಾಹಸಕ್ಕೆ ತೊಡಗಿದ ಲೇಖಕ ದೇವರಾಜುರವರು ಈ ಪುಸ್ತಕವನ್ನು ರಸವತ್ತಾಗಿ ಉಣಬಡಿಸಿದ್ದಾರೆ.
​
ಮನುಷ್ಯ ತನ್ನ ಜೀವನದಲ್ಲಿ ಪ್ರತಿಯೊಂದನ್ನು ಹೋರಾಟದಿಂದಲೇ ಪಡೆದುಕೊಳ್ಳಬೇಕು ಎಂದು ಸ್ಪಷ್ಟವಾಗಿ ಹೇಳುತ್ತಾ ತಮ್ಮ ಬರಹದಲ್ಲಿ ಹೇಳುವ ಲೇಖಕರು "ಹುಟ್ಟು ಉಚಿತವಲ್ಲ ಹೋರಾಟ'' ಎಂಬ ಉಪಶೀರ್ಷಿಕೆ ನೀಡಿದ್ದಾರೆ. ಸಿನಿಮಾ ನೋಡುವ ಪ್ರೇಕ್ಷಕ ಅದರೊಳಗಿನ ಕಥೆ ತನ್ನ ಜೀವನದ ಘಟನೆಗಳಿಗೆ ಹೋಲಿಕೆಯಾಗುವಂತೆ ಇದ್ದರೆ ಆ ಸಿನಿಮಾ ತುಂಬಾ ಇಷ್ಟವಾಗುತ್ತದೆ. ಅದೇ ರೀತಿ ಒಂದು ಪುಸ್ತಕದೊಳಗಿನ ಕೆಲವು ಘಟನೆಗಳು ಓದುಗರ ಜೀವನದ ಘಟನೆಗಳಿಗೆ ಹತ್ತಿರವಾದರೆ ಆ ಪುಸ್ತಲ ಓದುಗರ ಮೆಚ್ಚುಗೆ ಪಡೆದುಕೊಳ್ಳುತ್ತದೆ. ಓದುಗರ ನಾಡಿಮಿಡಿತವನ್ನು ಅರ್ಥ ಮಾಡಿಕೊಂಡಿರುವ ಲೇಖಕರು ಅದನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ.
ಅರಿವಿನ ಗುರು ಯಾರಾದರೇನು ? ಉಪಶೀರ್ಷಿಕೆ ನಿಜಕ್ಕೂ ಈ ಪುಸ್ತಕ ಅರಿವಿನ ಗುರು. ಇಲ್ಲಿರುವ ಪ್ರತಿಯೊಂದು ಉಪಶೀರ್ಷಿಕೆಗಳು ಓದುಗರಲ್ಲಿ ಅರಿವಿನ ಗುರುವಾಗಿ ಹೊಮ್ಮುತ್ತದೆ. ಒಳ್ಳೆಯವರಿಗ್ಎ ಕಷ್ಟಗಳು ಹೆಚ್ಚು. ನಮ್ಮ ಬದುಕಿಗೆ ಹೊಳಪು ಬರಬೇಕೆಂದರೆ ಕಷ್ಟಗಳ ಸರಮಾಲೆಯನ್ನು ಹೊತ್ತು ತಿರುಗಿ ಒಳ್ಳೆಯತನವಗನ್ನು ಉಸಿರಾಗಿಸಿಕೊಳ್ಳಬೇಕು. ಕಥಾನಾಯಕ ಇಂಥ ಕಷ್ಟಗಳ ಮಳೆಗರೆದರೂ ತಮನ್ನ ಒಳ್ಳೆಯತನವನ್ನು ಬಿಟ್ಟುಕೊಡದಿದ್ದಾಗ ಬದುಕು ಹೇಗೆ ಅರ್ಥಪೂರ್ಣವಾಗಿರುತ್ತದೆ ಎಂಬುದನ್ನು ಲೇಖಕರು ಅರ್ಥಪೂರ್ಣವಾಗಿ ತಿಳಿಸಿದ್ದಾರೆ. ಪ್ರತಿಯೊಬ್ಬ ಸಹೃದಯಿಗೂ ಇಲ್ಲಿರುವ ಘಟನೆಗಳು ತನ್ನ ಬದುಕಿಗೆ ಸಂಬಂಧಪಟ್ಟಿದೆ ಎಂಬ ಭಾವನೆ ಮೂಡುತ್ತದೆ.
​
ಹೆಣ್ಣು ಭೂಮಿತಾಯಿ ಎಂದು ವರ್ಣಿಸಿರುವುದಕ್ಕೆ ನಿಜವಾದ ಅರ್ಥವಿದೆ. ಮಳೆಗಾಲದಲ್ಲಿ ಅತಿಯಾದ ಮಳೆಯಾದರೂ ಅಥವಾ ಮಳೆ ಬಾರದಿದ್ದರೂ ಬದುಕು ಅಲ್ಲೋಲ ಕಲ್ಲೋಲ ಆಗುವಂತೆ, ಗಂಡಿನ ಜೀವನದಲ್ಲಿ ಬರುವ ಹೆಣ್ಣು ತನ್ನ ಗಂಡನನ್ನು ಅತಿಯಾದ ದಿಗ್ಬಂಧನದಲ್ಲಿಟ್ಟರೂ ಅಥವಾ ಗೂಳಿಯಂತೆ ತಿರುಗುವುದಕ್ಕೆ ಬಿಟ್ಟರೂ ಗಂಡಿನ ಬದುಕು ಯಾತನಾಮಯವಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಯಶಸ್ಸಿನ ಹಿಂದೆ ಹೆಣ್ಣಿರುವಂತೆಯೇ ಪ್ರತಿಯೊಬ್ಬ ವ್ಯಕ್ತಿಯ ಅವನತಿಯಲ್ಲಿಯೂ ಹೆಣ್ಣಿನ ಪಾತ್ರವಿರುತ್ತದೆ. ಲೇಖಕರು ಇಲ್ಲಿ ಹೆಣ್ಣನ್ನು ಹೊಗಳದೆ, ತೆಗಳದೆ ಆಕೆಯ ಪಾತ್ರ ನಿರ್ವಹಣೆಯನ್ನು ಅಪರೋಕ್ಷವಗಾಗಿ ಬಿಂಬಿಸಿದ್ದಾರೆ.
​
ಉಪಶೀರ್ಷಿಕೆಗಳು, ಪಾತ್ರಗಳ ಜೋಡಣೆ, ನಿರೂಪಣಾ ಶಕ್ತಿ ಹೀಗೆ ಪ್ರತಿಯೊಂದು ಹಂತದಲ್ಲಿಯೂ ಓದುಗನ ಮನಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬಂದಿರುವ ಬರೆಯುವ ಶೈಲಿಯು ಅದ್ಭುತವಾಗಿದೆ. ಉಸಿರು ಬಿಗಿಹಿಡಿದು ಓದಲು ಆರಂಭಿಸುವ ಓದುಗ ಕೊನೆಯವರೆಗೂ ತನ್ನ ಕುತೂಹಲವನ್ನು ಉಳಿಸಿಕೊಳ್ಳುತ್ತಾನೆ.
​
ಸೋತು ಆತ್ಮಹತ್ಯೆ ಮಾಡಿಕೊಳ್ಳಲು ಬಯಸುವವರು ಗೆದ್ದು ಮಾನವೀಯತೆಯನ್ನು ಮರೆತವರು, ಬದುಕಿನಲ್ಲಿ ಕಷ್ಟಗಳನ್ನು ಎದುರಿಸಲು ಹೆದರುವವರು ಈ ಪುಸ್ತಕವನ್ನು ಓದಲೇಬೇಕು. "ಸೋಲು ಸಾವಲ್ಲ ಗೆಲುವು ಸುಖವಲ್ಲ" ಎಂಬುದು ನಿಜಕ್ಕೂ ಅರ್ಥಪೂರ್ಣ.
​
ದೇವರಾಜುರವರು ಅತ್ಯುತ್ತಮ ಲೇಖಕರಾಗಿ ಈ ಪುಸ್ತಕದ ಮೂಲಕ ಹೊರಹೊಮ್ಮಿದ್ದು, ಪ್ರತಿಯೊಬ್ಬ ಓದುಗರಿಗೂ ಈ ಪುಸ್ತಕ ಬದುಕಿನ ಕೈಗನ್ನಡಿಯಾಗಿ ಯಶಸ್ಸನ್ನು ಕೊಡಲಿ ಎಂದು ಹೃದಯಪೂರ್ವಕವಾಗಿ ಆಶಿಸುತ್ತೇನೆ.
 
ರನ್ನರಾಜ
ಪ್ರಖ್ಯಾತ ಲೇಖಕರು
 
 
ಪರಿವಿಡಿ
 
  1. ಜೀವನ ಅನಿರೀಕ್ಷಿತ ಸವಾಲು
  2. ಸಾವಿಗೂ ಸಿದ್ಧತೆ ಬೇಕು ?
  3. ಸಾಯಲೂ ಒಂದು ಸೂಕ್ತ ಸ್ಥಳ ಬೇಕಲ್ಲವೇ.....
  4. ಅರಿವಿಗೆ ಗುರು ಯಾರಾದರೇನು ?
  5. ಮರಳಿ ಬಾ ಬಾಲ್ಯವೇ ಮೊಗದ ನಗು ಅರಳಿಸಲು
  6. ತುಂಟತನವಿಲ್ಲದೇ ಬಾಲ್ಯಕ್ಕೆ ಬೆಲೆಯೆಲ್ಲಿ.....
  7. ಉದ್ದೇಶ ಒಳ್ಳೆಯದಾದರೆ ದಾರಿಯೂ ಒಳ್ಳೆಯದೇ
  8. ತರ್ಕವಿಲ್ಲದಿದ್ದರೂ ವಾದ ಸತ್ಯವಿಲ್ಲದಿದ್ದರೂ ಶೋಧ
  9. ಮೋಹವೆಂಬುದು ಮಾಯೆ ಅರ್ಥವಾಗದ ಛಾಯೆ
  10. ವಿದ್ಯೆಯಿಲ್ಲವೆಂದ ಸ್ವಾಮೀಜಿ ಓದಲೇಬೇಕೆಂದ ಅಪ್ಪ
  11. ಶ್ರದ್ಧೆ ಮತ್ತು ಆಸಕ್ತಿಯಿದ್ದರೆ ಅಸಾಧ್ಯವೂ ಸಾಧ್ಯವೇ
  12. ಓದಿಗಾಗಿ ಒಡವೆ ಮಾರಿದರು : ಲೇವಡಿ ಮಾಡುವವರಿಗೆ ಚಾವಡಿ ಸಿಕ್ಕಿತು
  13. ವಿದ್ಯೆ ಹಠವಾಯತಿತು, ಪ್ರೀತಿ ಚಟವಾಯಿತು ಮೋಹ ಮರೆಯಾಯಿತು
  14. ಓದು ಮುಗಿಯಿತು ಜೈಲು ಕರೆಯಿತು
  15. ಸತ್ತ ಅಪ್ಪ ನಿಂತ ಭರವಸೆ
  16. ಬದಲಾದ ಕನಸು ಬೇಕೆನಿಸಿದ ಹಣ
  17. ಬದುಕಿನ ಬಂಡಿಗೆ ಬೇರೊಂದು ಊರು
  18. ಅವಶ್ಯಕತೆ ಹೊಸತನ್ನು ಸೃಷ್ಟಿಸುತ್ತದೆ
  19. ಕನಸುಗಳನ್ನು ಆವರಿಸಿದವರು ಯಾರು ?
  20. ಮನಸ್ಸು ಎಲ್ಲಿಗೆ ಓಡಿತು
  21. ಬಯಸಿದಾಗ ಬರದಿದ್ದು ಸುಮ್ಮನಾದಾಗ ಸಿಕ್ಕಿತು
  22. ಅಂತರಂಗ ಅರಿಯಿತು ದೇಹಗಳು ಬೆರೆತವು
  23. ಪ್ರೀತಿಯಿದ್ದರೆ ಸಂಸಾರ ಸುಂದರ
  24. ಮೆಚ್ಚಕ್ಕೆ ಹೊನ್ನು ಇಚ್ಚೆಯರಿವ ಸತಿ ಸ್ವರ್ಗಕ್ಕೆ.....
  25. ಮಾಡಿದ್ದೆಲ್ಲಾ ಒಳ್ಳೆಯದೇ ಮುಟ್ಟಿದ್ದೆಲ್ಲಾ ಚಿನ್ನವೇ
  26. ಕರುಳ ಬಳ್ಳಿ ಚಿಗುರಿತು ಕಡಿದ ಸಂಬಂಧ ಕೂಡಿತು
  27. ಹುಟ್ಟು ಉಚಿತವಲ್ಲ.....ಹೋರಾಟ
  28. ಮಗು ಅತ್ತು ತಾಯಿ ನಗುವ ವಿಶೇಷ ಕ್ಷಣ
  29. ಪರಿಸರವೇ ಆಲೋಚನೆಗಳಿಗೆ ಸ್ಫೂರ್ತಿ
  30. ಕೆಟ್ಟದ್ದು ಕೇಕೆ ಹಾಕಿತು ಒಳ್ಳೆಯದು ತಲೆ ಬಾಗಿತು
  31. ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ
  32. ಭಾವ ಜೀವಿಗೆ ಬೀಸಿದ ಬಿಸಿಗಾಳಿ
  33. ನೆಮ್ಮದಿಗಿಂತ ತೋರಿಕೆ ಪ್ರತಿಷ್ಠೆಗಳೇ ಮುಖ್ಯ
  34. ಮಾತು ತಪ್ಪಿನ ಕಂತೆ, ಮನೆ ಮಿಲ್ಟ್ರಿ ಆಫೀಸ್‍
  35. ಜವಾಬ್ದಾರಿಯ ಪಾಠ ಶುರುವಾಯಿತು
  36. ಹೋಲಿಕೆ ಬೇಕೆನಿಸಿತು ಸ್ವಂತಿಕೆ ಬೇಡವೆನಿಸಿತು
  37. ಸಂಸಾರದ ಗುಟ್ಟು ಬೀದಿ ಚರ್ಚೆಯಾಯಿತು
  38. ಆದರ್ಶವೇ ದುಃಖ ಆದರ್ಶ‍ವೇ ದೌರ್ಬಲ್ಯ
  39. ನೋವು ಮಂಜುಗಡ್ಡೆ ಕಣ್ಣು ಬತ್ತಿದ ಕೆರೆ
  40. ಕಳಕಳಿ ಕೇವಲ, ಬಾಯಿ ಮಾತ್ರ ಮೊದಲು
  41. ಗೆಲ್ಲಲು ಸ್ಫೂರ್ತಿ ಬೇಕು ನಿರಾಸೆಯಲ್ಲ
  42. ಅತ್ತೆ ದೂರಾದರೆ ಗಂಡ ಹತ್ತಿರವಾಗುತ್ತಾನೆ
  43. ಬೇರೆಯವರಿಗೆ ಬೇಜಾರಾಗುತ್ತೆ ಅಂತಲೇ ಜೀವನ ನಡೆಸುತ್ತೇವೆ
  44. ಸುಮ್ಮನಿರಬಾರದೇಕೆ.....ಎನಿಸಿತು
  45. ಸಾಧನೆಗೆ ಸ್ಫೂರ್ತಿಯೋ, ಸೋಲಿಗೆ ಸಾರಥಿಯೋ
  46. ಅಮ್ಮ ಹಾಸಿಗೆ ಹಿಡಿದಳು
  47. ಸಾವಿಗಾಗಿ ಶಾಪ ಹಾಕಿದಳು
  48. ಆಸೆಯೋ-ಗುರಿಯೋ, ಸುಖವೋ-ಸಂತೋಷವೋ
  49. ವಜ್ರದ ಹೊಳಪಿಗಿಂತ ಅದರ ಹರಿತ ಹೆಚ್ಚು
  50. ವಸ್ತುಗಳ ಮುಂದೆ ಪ್ರೀತಿಗೆ ಬೆಲೆಯಿಲ್ಲ
  51. ಅರ್ಧಾಂಗಿಯೆಂಬ ಹರಿದ ಅಂಗಿ
  52. ಗಳಿಕೆಗಿಂತ ಉಳಿಕೆ, ಸಾಧನೆಗಿಂತ ಸುಧಾರಣೆ ಬೇಕು
  53. ಹೆತ್ತವಳ ಕಣ್ಣು ಮುಚ್ಚಿತು, ಮಗನ ಹೃದಯ ಬೆಚ್ಚಿತು
  54. ಎಷ್ಟು ಕಷ್ಟವೋ ಹೊಂದಿಕೆಯೆಂಬುದೀ ಬದುಕಿನಲಿ
  55. ಸಾವಿಗಿಂತ ಸುಖವುಂಟೆ
  56. ಸಾವು ಖಚಿತವಾದರೂ ಕೆಲವೊಮ್ಮೆ ಘಟನೆ, ಆಕಸ್ಮಿಕ, ಪರಿಸ್ಥಿತಿ
  57. ಸುಜ್ಞಾನಿಗಳ ಸಂಘವೇ ಸಾಧನೆಗೆ ಸ್ಫೂರ್ತಿ
  58. ಬೇರೆಯವರ ಕಷ್ಟವೂ...ಸಮಾಧಾನ ನೀಡುತ್ತದೆ
  59. ಅತಿಯಾದ ಹೊಂದಾಣಿಕೆ ದೌರ್ಬಲ್ಯ
  60. ದ್ವೇಷ ಹುಟ್ಟಿರುವುದೇ ಭಯ ಮತ್ತು ಅಜ್ಞಾನದಿಂದ
  61. ಧೈರ್ಯಂ ಸರ್ವರ್ತ್ರ ಸಾಧನಂ
  62. ಕಳೆದು ಹೋದದ್ದಕ್ಕೇ ಬೆಲೆ ಹೆಚ್ಚು
  63. ಪಶ್ಚಾತ್ತಾಪನಕ್ಕಿಂತಲೂ  ಶಿಕ್ಷೆಯುಂಟೆ.....
  • Facebook
  • Twitter
  • Pinterest
  • Google+
Not Available

Site
  • Home
  • About Us
  • Editor's Blog
  • Leader's Talk
  • Blog
  • Online Store
  • Videos
  • Join Our Online Groups
Vertical Divider
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
Join

Vertical Divider
Contact us
080-23213710
+91-8073067542
Mail-nirutapublications@gmail.com
Our Other Websites
www.hrkancon.com 
www.niratanka.org  
www.mhrspl.com
www.nirutapublications.org
Receive email updates on the new books & offers
for the subjects of interest to you.
Copyright Niruta Publications 2021
Website Designing & Developed by: www.mhrspl.com