- General Books
- >
- ನಮ್ಮೊಳಗೆ ನಾವಿಲ್ಲ
ನಮ್ಮೊಳಗೆ ನಾವಿಲ್ಲ
SKU:
$0.00
Unavailable
per item
ಮುನ್ನುಡಿ
ಶ್ರೀ ಚನ್ನಸಂದ್ರ ಈರೇಗೌಡ ದೇವರಾಜು ರವರು ತಮ್ಮ "ನಮ್ಮೊಳಗೆ ನಾವಿಲ್ಲ" ಎಂಬ ಚೊಚ್ಚಲ ಕೃತಿಗೆ ಮುನ್ನುಡಿ ಬರೆಯಲು ಕೇಳಿಕೊಂಡಾಗ ಅವರೊಂದಿಗಿನ ಮಾತು ಅವರೊಬ್ಬ ಭಾವಜೀವಿ ಮತ್ತು ಸಾಮಾಜಿಕ ಚಿಂತಕ ಎಂದೆನಿಸಿತು. ಅವರ ಮೊದಲ ಲೇಖನ "ಜನನಿ ಜನ್ಮದಾತ" ಅವರ ಹೃದಯದ ಬಾಗಿಲು ತೆರೆದು, "ಆದರ್ಶ ತಂದೆ ತಾಯಿಗಳು ನೂರು ಶಿಕ್ಷಕರಿಗಿಂತಲೂ ಶ್ರೇಷ್ಠ" ಎಂಬ ಮಾತು ಅವರ ಜೀವನ ಮೌಲ್ಯಗಳಿಗಿಡಿದ ಕನ್ನಡಿ.
ಗಳಿಕೆ ಮತ್ತು ಉಳಿಕೆಯ ಆಲೋಚನೆ ವಿಭಿನ್ನವಾಗಿದ್ದು, ದೇವರ ಕಲ್ಪನೆಯನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ನೋಡುವ ಅವರ ಗಟ್ಟಿತನ ಮೆಚ್ಚುವಂಥದ್ದು. ಮನುಷ್ಯ ತನ್ನ ಹುಟ್ಟಿನಿಂದ ಸಾವಿನವರೆಗೆ ಹಲವಾರು ಪಾತ್ರಗಳನ್ನು ಅವರು ಹೇಗೆ ಅರ್ಥೈಸಿಕೊಂಡಿದ್ದಾರೆ, ಹೇಗೆ ಅರ್ಥೈಸಿಕೊಂಡರೆ ಸೂಕ್ತ ಎಂಬ ವಿವರಣೆಗಳು ನಮ್ಮ ಕಣ್ಮುಂದೆ ನಡೆದಂತೆ ಭಾಸವಾಗುತ್ತದೆ. ವ್ಯಕ್ತಿ ತಾನು ದೈಹಿಕ ಮತ್ತು ಮಾನಸಿಕವಾಗಿ ಬೆಳೆಯುತ್ತಿದ್ದಂತೆ ತನ್ನ ಆಲೋಚನೆಗಳನ್ನು ಹೇಗೆ ಬದಲಾಯಿಸಿಕೊಳ್ಳುತ್ತಾನೆ ಎಂದು ಯಥಾವತ್ತಾಗಿ ಚಿತ್ರಿಸಿದ್ದಾರೆ. ಬೇರೆಲ್ಲೋ ಕೇಳಿದ ನೋಡಿದ ಘಟನೆಗಳಿಗೆ ಭಾವನಾತ್ಮಕವಾಗಿ ಸ್ಪಂದಿಸುವ ನಾವು ನಮ್ಮ ಕುಟುಂಬ, ಸಂಬಂಧಗಳಲ್ಲಿ ವ್ಯತಿರಿಕ್ತವಾಗಿ ವರ್ತಿಸುವುದು ಯಾಕೆ ಮತ್ತು ಹೇಗೆ ಎಂದು ತಿಳಿಸಿದ್ದಾರೆ.
ಆಧುನಿಕತೆಯ ಗಾಳಿಯೊಂದಿಗೆ ವಾಸ್ತವತೆಯನ್ನು ತೂರುವುದರ ಬದಲು ವಾಸ್ತವದೊಂದಿಗೆ ಆಧುನಿಕತೆಯನ್ನು ಸೇರಿಸಿಕೊಳ್ಳುವ ಪ್ರಯತ್ನದಲ್ಲಿ ಸೋತಿದ್ದೇವೆ. ಸಾಮಾಜಿಕ ಪರಿಸ್ಥಿತಿ ಸರ್ಕಾರದ ನೀತಿಗಳನ್ನು ಅಲ್ಲಲ್ಲಿ ಕುಟುಕುವ ಕೆಲಸ ಮಾಡಿದ್ದು ತಮ್ಮ ಅನಿಸಿಕೆಗಳನ್ನು ನೇರವಾಗಿ ಹೇಳಿದ್ದಾರೆ.
ನಮ್ಮ ಸಮಾಜ ಸ್ವಾರ್ಥ, ಪ್ರತಿಷ್ಠೆ, ದುರಾಸೆಗಳೆಂಬ ಮಾಯಾ ಜಿಂಕೆಯ ಮೋಹದಿಂದ ಹೊರಬಂದು ಪ್ರೀತಿ, ವಿಶ್ವಾಸ, ನಂಬಿಕೆ, ಆತ್ಮೀಯತೆ, ಸಹಕಾರಗಳೆಂಬ ಸಂತೃಪ್ತ ಭಾವನೆಗಳಿಗೆ ಬೆಲೆ ಕೊಡಬೇಕೆಂಬ ಅವರ ಮಾತನ್ನು ಎಲ್ಲರೂ ಒಪ್ಪುತ್ತಾರೆ ಆದರೆ ಅನುಸರಿಸುವುದಿಲ್ಲ ಎಂಬ ಕೊರಗನ್ನು ಓದುಗರು ನೀಗಿಸಬೇಕಿದೆ.
ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ಶಿಸ್ತುಬದ್ಧವಾಗಿ ರೂಪಿಸಿಕೊಳ್ಳಬೇಕಾದರೆ ಜೀವನ ಕೌಶಲ್ಯಗಳಾದ ಸಂವಹನ, ಸಮಸ್ಯೆನಿವಾರಣೆ, ಸಮಯ ನಿರ್ವಹಣೆ, ಒತ್ತಡ ನಿರ್ವಹಣೆ ಮತ್ತು ಕೆಲಸದಲ್ಲಿನ ಶ್ರೇಷ್ಠತೆಗಳು ಅವಶ್ಯಕ ಎಂದು ರೂಢಿಸಿಕೊಳ್ಳಲು ಸಲಹೆ ನೀಡುತ್ತಾರೆ.
ಒಟ್ಟಾರೆ ಈ ಕೃತಿಯ ಲೇಖನಗಳನ್ನು ಅವಲೋಕಿಸಿದಾಗ ಶ್ರೀಯುತ ಚ.ಈ. ದೇವರಾಜು ರವರು ಒಬ್ಬ ವಿಭಿನ್ನ ವ್ಯಕ್ತಿಯಾಗಿ ಕಾಣುತ್ತಾರೆ. ಚಿಂತನಶೀಲರಾಗಿ, ಆಲೋಚನೆ, ಕಳಕಳಿ, ಅಭಿಮಾನ, ಮಾರ್ಗದರ್ಶನ ಮುಂದಿನ ಯುವ ಪೀಳಿಗೆಗೆ ದಿಗ್ದರ್ಶನದಂತಿವೆ. ಅವರಲ್ಲಿನ ಚಿಂತನೆಗಳನ್ನು ಓದುತ್ತಾ ಹೋದಂತೆ ಯಾವುದೋ ಒಂದು ಚಿಂತನಾ ಶಕ್ತಿ, ಆಲೋಚನಾ ಲಹರಿ ನಮ್ಮನ್ನು ಭಿನ್ನ ರೀತಿಯ ಚಿಂತನೆಗಳಿಗೆ ಈಡು ಮಾಡುತ್ತವೆ. ಒಬ್ಬ ಗ್ರಾಮೀಣ ರೈತ ಕುಟುಂಬದ ಮಗನಾಗಿ ಹಳ್ಳಿಯ ಪರಿಸರದಲ್ಲಿ ಹುಟ್ಟಿ ಬೆಳೆದು ಈ ಸಮಾಜದ ದೇಶದ ಬಗ್ಗೆ ಚಿಂತಿಸುವ ಗುಣ ಶ್ರೀಯುತರಲ್ಲಿ ಗಾಢವಾಗಿದೆ. ಇವರ ಎಲ್ಲಾ ಕಾರ್ಯಗಳು ಸಮಾಜಮುಖಿಯಾಗಿ ಸಮಾಜದ ಏಳಿಗೆಗೆ ಶ್ರಮಿಸುವುಗಳಾಗಿವೆ. ಇವರು ಮಾಡುವ ಒಂದೊಂದು ಕೆಲಸಗಳು ಮುಂದಿನ ಪೀಳಿಗೆಗೆ ಒಳಿತನ್ನು ಬಯಸುವ ಚಿಂತನೆಗಳಾಗಿವೆ. ಅವರು ನಡೆಸುವ ವ್ಯಕ್ತಿತ್ವ ವಿಕಸನ, ಜೀವನ ಕೌಶಲ್ಯ, ಶಿಕ್ಷಣ, ಪರಿಸರ, ಮಹಿಳಾ ಸಬಲೀಕರಣದಂತಹ ಉಪಯುಕ್ತ ಕಾರ್ಯಗಳನ್ನು ಮಾಡುತ್ತಾ ಹೆತ್ತ ತಂದೆತಾಯಿಗೆ ಮತ್ತು ಬದುಕು ಕೊಟ್ಟ ಊರಿಗೆ ಹೆಸರು ತರುತ್ತಿದ್ದಾರೆ. ತಾವು ಸಂಪಾದಿಸಿದ್ದರಲ್ಲಿ ದೀನ ದಲಿತರಿಗೆ ಸಹಾಯ ಮಾಡುತ್ತಾ ಸಮಾಜ ಚಿಂತಕರಾಗಿ, ಸಮಾಜಮುಖಿಯಾಗಿ ಶ್ರೀಯುತರು ಕಾಣುತ್ತಾರೆ ಹಾಗೆಯೇ ಇತರರಿಗೆ ಮಾದರಿಯಾಗಿದ್ದಾರೆ.
ಶ್ರೀಯುತರು ತಮ್ಮ ಚೊಚ್ಚಲ ಕೃತಿ "ನಮ್ಮೊಳಗೆ ನಾವಿಲ್ಲ" ಎಂಬ ಕೃತಿಯ ಲೇಖನಗಳಲ್ಲಿ ಭಿನ್ನತೆ ಇದೆ. ಓದಿಸಿಕೊಳ್ಳುವ ಗುಣವಿದೆ, ವೈವಿಧ್ಯತೆ ಇದೆ, ನೈಜತೆ ಇದೆ. ಒಂದೊಂದು ಲೇಖನ ಚಿಂತಿಸುವಂತೆ, ಬುದ್ಧಿಯನ್ನು ಒರೆ ಹಚ್ಚುವಂತಿವೆ. ಇದರಲ್ಲಿರುವ ಇಪ್ಪತ್ಮೂರು ಲೇಖನಗಳು ಮನುಷ್ಯನ ಜೀವನದ ಬದಲಾವಣೆಗೆ ತಿಳಿವಳಿಕೆಯ ಮೆಟ್ಟಿಲುಗಳಂತಿವೆ. ಈ ಕೃತಿಯನ್ನು ಪ್ರತಿಯೊಬ್ಬರೂ ಓದಲೇಬೇಕು. ಓದಿದ ಮೇಲೆ ಪ್ರತಿ ಲೇಖನಗಳ ಸಂದೇಶಗಳು ನಮ್ಮ ಜೀವನದಲ್ಲಿ ಒಂದಲ್ಲಾ ಒಂದು ಬದಲಾವಣೆಯನ್ನು ತರಬಲ್ಲವು. ಈ ದಾರಿಯಲ್ಲಿ ಮುನ್ನುಡಿಯಿಡುತ್ತಿರುವ ಇವರ ಶ್ರಮ ಸಾರ್ಥಕವಾಗಲಿ. ಈ ಕೃತಿಯು ಯಶಸ್ಸನ್ನು ಗಳಿಸಲಿ. ಪ್ರಪ್ರಥಮವಾಗಿ ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ ಇವರಿಂದ ಮತ್ತಷ್ಟು ವಿಭಿನ್ನ ಕೃತಿಗಳು ಬಂದು ಕನ್ನಡಾಂಬೆಯ ಸಾಹಿತ್ಯ ಕಣಜ ತುಂಬಲಿ ಎಂದು ಹೃದಯ ತುಂಬಿ ಹಾರೈಸುವ
ಕೂ.ಗಿ. ಗಿರಿಯಪ್ಪ
ಪರಿವಿಡಿ

- ಜನನಿ ಜನ್ಮದಾತ : ಅಸ್ತಿತ್ವದ ಹರಿಕಾರರು
- ಗಳಿಕೆ – ಉಳಿಕೆ
- ದೇವರು : ಸ್ವಲ್ಪ ಭಕ್ತಿ ಉಳಿದದ್ದೆಲ್ಲಾ ಭಯ
- ಮಕ್ಕಳು : ನಮ್ಮ ಕನಸುಗಳ ಹೊಣೆಗಾರರೇ ?
- ವೃದ್ಧಾಪ್ಯ ; ಮತ್ತೊಮ್ಮೆ ಬಾಲ್ಯದೆಡೆಗೆ
- ಜಾತಿ, ಧರ್ಮ ಮತ್ತು ರಾಜಕೀಯ
- ಪ್ರತಿಷ್ಠೆ – ಎಂಬ ಪಂಜರದಲ್ಲಿ
- ಯುವ ಜನಾಂಗ – ಎಲ್ಲಿಗೀ ಪಯಣ !
- ಏರಿದ ಜನಸಂಖ್ಯೆ – ಇಳಿಯದ ತಾರತಮ್ಯ
- ಕೃಷಿ ಮತ್ತು ಆಹಾರ
- ಸ್ವಚ್ಛತೆ ಮತ್ತು ಆರೋಗ್ಯ
- ಶಿಕ್ಷಣ ಮತ್ತು ಜೀವನ
- ಮಾತು – ಹಿತಮಿತವಾದರೆಷ್ಟು ಚೆನ್ನ
- ಒತ್ತಡ – ಗೆಲ್ಲಬಲ್ಲೆನೇ ?
- ಸಮಸ್ಯೆ – ಇಲ್ಲದವರು ಯಾರು ?
- ಸಕಾರಾತ್ಮಕ ಆಲೋಚನೆ
- ಯಶಸ್ಸು – ಇಲ್ಲದ ಮನಸ್ಸು
- ಸ್ವಾರ್ಥ – ಎಲ್ಲಿಯವರೆಗೆ ?
- ಸಂಬಂಧ – ಇಲ್ಲದ ಅನುಬಂಧ
- ಸ್ವಾತಂತ್ರ್ಯ ಮತ್ತು ಸಮಾನತೆ
- ಭ್ರಷ್ಟಾಚಾರ ಮತ್ತು ನಾವು
- ಸ್ವಂತಿಕೆ – ನಾವು ನಾವಾಗಿರಲು
- ಪ್ರಕೃತಿ – ನಮ್ಮಿಂದಾಯಿತೇ ವಿಕೃತಿ