- ಸಮಾಜಕಾರ್ಯ ಪುಸ್ತಕಗಳು
- >
- ಸಮಾಜಕಾರ್ಯ : ಬೆಳವಣಿಗೆಯ ಹಂತಗಳು
ಸಮಾಜಕಾರ್ಯ : ಬೆಳವಣಿಗೆಯ ಹಂತಗಳು
SKU:
$0.00
Unavailable
per item
ಮುನ್ನುಡಿ
ತಮ್ಮ ಪರಿಶುದ್ಧ ದುಡಿಮೆಯಿಂದ ಗಳಿಸಿದುದನ್ನು ದಾಸೋಹಂ ಭಾವದಿಂದ ಸಮಾಜದ ಹಿತಕ್ಕೆ ವ್ಯಯಿಸುತ್ತಾ ಸಾರ್ಥಕವಾಗಿ ಬದುಕಿದ ಶ್ರೀನಿವಾಸ ರಘೋಜಿಯವರ 78ನೆಯ ಜಯಂತಿ ನಿಮಿತ್ತ ಏರ್ಪಡಿಸಿದ್ದ ದತ್ತಿ ಉಪನ್ಯಾಸವನ್ನು ಈ ವರ್ಷ ನೀಡಲು ನನಗೆ ಆಹ್ವಾನ ನೀಡಿದ, ಉಪನ್ಯಾಸವನ್ನು ಕಲಬುರ್ಗಿಯ ಪ್ರಾಜ್ಞಸಭಾಸದರ ಮುಂದೆ ಮಾಡಲು ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಿದ ಡಾ. ಪಿ.ಎಸ್. ಶಂಕರ ಪ್ರತಿಷ್ಠಾನ ಹಾಗೂ ಶ್ರೀ ಸಂಗಮೇಶ್ವರ ವೆಲ್‍ಫೇರ್ ಟ್ರಸ್ಟ್, ಗುಲಬರ್ಗಾ, ಇವರಿಗೆ ಸಹಜವಾಗಿಯೇ ನನ್ನ ಕೃತಜ್ಞತೆಗಳು ಸಲ್ಲುತ್ತವೆ. ಉಪನ್ಯಾಸದ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ, ಮೆಚ್ಚುಗೆಯ ಮಾತನ್ನಾಡಿದ ಹಿರಿಯ ವೈದ್ಯ, ಪ್ರಬುದ್ಧ ಕೃತಿಕಾರ, ಸಜ್ಜನ ಮಿತ್ರ ಡಾ. ಪಿ.ಎಸ್. ಶಂಕರ ಅವರಿಗೂ, ನನಗೆ ಗೌರವಾದರಗಳನ್ನು ತೋರಿಸಿದ ರಘೋಜಿ ಕುಟುಂಬ ವರ್ಗದವರಿಗೂ ನಾನು ಉಪಕೃತ.
ಲಕ್ಷಾಂತರ ವರ್ಷಗಳ ಇತಿಹಾಸದ ಮಾನವ ಸಮಾಜದಲ್ಲಿ ಇತ್ತೀಚೆಗಷ್ಟೆ ನೂರರ ಗಡಿಯನ್ನು ದಾಟಿರುವ ಸಮಾಜಕಾರ್ಯವು ಹೇಗೆ ಬೆಳೆಯುತ್ತಲಿದೆ, ಇದರ ಅಸ್ಥಿತೆಯು ಗಟ್ಟಿಗೊಳ್ಳುತ್ತಿರುವಾಗಲೇ ಇದಕ್ಕೆ ಇದುರಾದ ಸವಾಲುಗಳು ಯಾವುವು, ಇದು ನಿಜವಾಗಿಯೂ ಮಾನವನ ಅಭ್ಯುದಯಕ್ಕೆ ತಾರಕ ಮಾಧ್ಯಮವಾಗುವುದು ಹೇಗೆ, ಇತ್ಯಾದಿ ಪ್ರಶ್ನಾಂಶಗಳನ್ನು ಕೇವಲ ಕೆಲವೇ ಪುಟಗಳಲ್ಲಿ ವಿವರಿಸುವುದು ಹಾಗಿರಲಿ ಸ್ಥೂಲವಾಗಿ ಪ್ರಸ್ತಾಪಿಸುವುದೂ ಅಸಾಧ್ಯ ಎಂಬುದನ್ನು ಬಲ್ಲೆ. ಆದರೆ, ದತ್ತಿ ಉಪನ್ಯಾಸವು ಕೇವಲ ಕಿವಿಯ ಆಹಾರವಾಗಿ ಹೋಗದೆ ಪುಸ್ತಿಕೆಯ ರೂಪದಲ್ಲಿ ಹೊರಬಂದು ಕಣ್ಣು-ನಾಲಗೆಗೆ ಆಹಾರವಾಗಬೇಜಕೆಂಬ ಉತ್ಸಾಹಿ ತರುಣಮಿತ್ರರ ಒತ್ತಾಯದಿಂದ ಕರಿಯನ್ನು ಕನ್ನಡಿಯಲ್ಲಿ ತೋರಿಸುವ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ. ಜುಲೈ 14 ರಂದು ಗುಲಬರ್ಗದಲ್ಲಿ ಉಪನ್ಯಾಸವಾಗಿ, ಅದೇ ನಗರದ 'ಶಿವಪ್ರಶಾಂತ' ಪ್ರಕಾಶನವು ವಾರದೊಳಗೇ ಮುದ್ರಣಗೊಳಿಸಿ, 29ರಂದು ಪುಸ್ತಿಕೆಯಾಗಿ ಬಿಡುಗಡೆಯಾಗುವಂತೆ ನೋಡಿಕೊಳ್ಳುತ್ತಿರುವುದು ಚೋದ್ಯದ ಸಂಗತಿಯಲ್ಲವೆ ? ಇದು ಸಾಧ್ಯವಾದದ್ದು ಕಿರಿಯ ಗೆಳೆಯರಾದ ಶ್ರೀ ಎಸ್.ಎಸ್. ಹಿರೇಮಠ ಮತ್ತು ಶ್ರೀ ಜಿ.ಆರ್. ಶೀಲವಂತರ ಕ್ರಿಯಾ ಚೇತನದಿಂದ. ಇವರಿಗೂ ನಾನು ಕೃತಜ್ಞ.
ಎಚ್.ಎಂ. ಮರುಳಸಿದ್ಧಯ್ಯ
ಪರಿವಿಡಿ
ನೆಲೆ-ಹಿನ್ನೆಲೆ

- ಪಾತ್ರ ಪಲ್ಲಟ
- ಎರಡಾದ ಪರಿ
- ಸಾಣೆಗೊಂಡ ಪರಿಣತಿ
- ಹೊರಳಿ ಮನೆಗೆ