- ಸಮಾಜಕಾರ್ಯ ಪುಸ್ತಕಗಳು
- >
- ಸಮುದಾಯ ಸಂಘಟನೆ
ಸಮುದಾಯ ಸಂಘಟನೆ
SKU:
$0.00
Unavailable
per item
ಸಮುದಾಯ ಸಂಘಟನೆ
ಸಮುದಾಯ ಸಂಘಟನೆಯು ಅಭಿವೃದ್ಧಿಶೀಲ ಸಮಾಜಗಳಿಗೆ ಹೆಚ್ಚು ಸೂಕ್ತವೂ, ಸಂಗತವೂ ಆದ ವಿಧಾನವೆಂದು ಅನುಭವದಿಂದ ಕಂಡುಕೊಳ್ಳಲಾಗಿದೆ. ಸಮಾಜಕಾರ್ಯವನ್ನು ಒಂದು ವೃತ್ತಿಯೆಂದು ಪರಿಗಣಿಸಿ, ಸರಿಯಾದ ಪ್ರಶಿಕ್ಷಣವನ್ನು ಭಾರತದಲ್ಲಿ ಆರಂಭಿಸಿದ್ದುದು 1936ರಲ್ಲಿ ಅಲ್ಲಿಂದೀಚೆಗೆ ಸಮಾಜಕಾರ್ಯದಲ್ಲಿ ಮಹತ್ತರವಾದ ಬದಲಾವಣೆಗಳಾಗಿವೆ. ದೇಶದಲ್ಲಿ ಮುಖ್ಯವಾಗಿ ರಾಜಕೀಯ ಮತ್ತು ಆರ್ಥಿಕ ಸ್ಥಿತ್ಯಂತರಗಳಾಗಿದ್ದುದರಿಂದ ದೇಶದ ಸಮಸ್ಯೆಗಳಲ್ಲಿ ಮತ್ತು ಅವುಗಳ ಪರಿಹಾರ ಪರಿಕ್ರಮಗಳಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿತು. ರಾಷ್ಟ್ರವು ಪ್ರಜಾತಂತ್ರಾತ್ಮಕ ಸಮಾಜವಾದವನ್ನು ತನ್ನ ತತ್ತ್ವಾದರ್ಶವನ್ನಾಗಿ ಸ್ವೀಕರಿಸಿದುದರಿಂದಲೂ, ಕ್ಷೇಮ ರಾಜ್ಯವನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿರುವುದರಿಂದಲೂ ಸಮಾಜಕಾರ್ಯಕ್ಕೆ ಗುರುತರ ಹೊಣೆಯು ಬಂದೊದಗಿದೆ. ಸಮಾಜಕಾರ್ಯವು ಪರಿಣಾಮಕರವಾಗಿ ಅನುಷ್ಠಾನಗೊಳ್ಳಬೇಕಾದರೆ ಸಮಾಜಕಾರ್ಯಕರ್ತರು ಎಲ್ಲ ದೃಷ್ಟಿಗಳಿಂದಲೂ ಶಕ್ತಿಸಂಪನ್ನರಾಗಿರಬೇಕಾಗುತ್ತದೆ. ಕಾರ್ಯವನ್ನು ಯಾವ ರೀತಿಯಲ್ಲಿ ಮಾಡಬೇಕೆಂಬುದನ್ನು ಅವರು ಸರಿಯಾಗಿ ಅರಿತುಕೊಂಡಿರಬೇಕಾಗುತ್ತದೆ.
ಗ್ರಾಮಗಳಲ್ಲೂ, ನಗರಗಳಲ್ಲೂ ಸಮುದಾಯ ಸಂಘಟನೆಯ ಕಾರ್ಯವನ್ನು ಸರಕಾರದವರೂ, ಸಾರ್ವಜನಿಕರೂ ಕೈಗೊಂಡಿರುವುದರಿಂದ ಅವರಿಗೆ ಬೇಕಾದ ಸೂಕ್ತ ಸಾಹಿತ್ಯವನ್ನು ಒದಗಿಸಬೇಕಾಗಿದೆ. ಈ ಅಂಶವನ್ನು ಗಮನದಲ್ಲಿರಿಸಿಕೊಂಡು ನನ್ನ ಅನುಭವ, ಅಧ್ಯಯನ ಮತ್ತು ದೇಶದಲ್ಲಿನ ಆಗುಹೋಗುಗಳನ್ನೂ ಗಮನದಲ್ಲಿರಿಸಿಕೊಂಡು ಈ ಪುಸ್ತಕವನ್ನು ರಚಿಸಿರುವೆ. ಅನೇಕ ದೃಷ್ಟಿಗಳಿಂದ ಇದು ತೀರಾ ಭಿನ್ನವಾದ ಗ್ರಂಥ. ಅನುಬಂಧ ರೋಮಾಂಚಕಾರಕ ಸಂಘಟನೆಯ ಎರಡು ಪ್ರಸಂಗಗಳು ಓದುಗರಿಗೆ ಮತ್ತು ಕಾರ್ಯಕರ್ತರಿಗೆ ರೋಮಾಂಚಕಾರಕ ವಾಸ್ತವತೆಯ ಅರಿವನ್ನು ನೀಡುತ್ತವೆ ಎಂದು ಆಶಿಸುತ್ತೇನೆ. ಈ ಪುಸ್ತಕವು ಸಮಾಜಕಾರ್ಯದಲ್ಲಿ ತೊಡಗಿದ ಎಲ್ಲ ತೆರನ ಕಾರ್ಯಕರ್ತರಿಗೆ ಉಪಯುಕ್ತ ಸಾಹಿತ್ಯವಾಗುತ್ತದೆಂದು ಭಾವಿಸುತ್ತೇನೆ.
ಎಚ್.ಎಂ. ಮರುಳಸಿದ್ಧಯ್ಯ
8-3-1983
ಪರಿವಿಡಿ
ಸಮುದಾಯ ಸಂಘಟನೆ
1. ಸಮುದಾಯದ ಪರಿಕಲ್ಪನೆ
2. ಸಮುದಾಯ ಸಂಘಟನೆ
3. ಮೂಲ ಗ್ರಹಿಕೆಗಳು
4. ಮುಖ್ಯವಾದ ಕೆಲವು ಸೂತ್ರಗಳು
5. ತಂತ್ರಗಳೂ, ಕೌಶಲ್ಯಗಳೂ
6. ಸಮುದಾಯ ಸಂಘಟಕ
7. ಸಮುದಾಯದ ಕೋಶ
ಅನುಬಂಧಗಳು
1. ಅನುಬಂಧ-1 : ಎರಡು ಭಾಷ್ಪಗಳ ನಡುವೆ
2. ಅನುಬಂಧ-2 : ಅಭ್ಯುದಯದಲ್ಲಿ ಸಮಾಜಕಾರ್ಯ ಶಿಕ್ಷಣದ ಪ್ರಯೋಗ
3. ಅನುಬಂಧ-3 : ಒಂದು ಸಮಾಜ ಸೇವಾಶಿಬಿರ
4. ಅನುಬಂಧ-4 : ನಿರ್ಮಲ ಕರ್ನಾಟಕ
5. ಅನುಬಂಧ-5 : ಪಂಚಮುಖಿ ಅಭ್ಯುದಯ ಪ್ರಾಯೋಜನೆ
6. ಅನುಬಂಧ-6 : ಸಮುದಾಯ ನೆಲೆಯ ಪುನಃಶ್ಚೇತನ (ಇಂದೂಮತಿರಾವ್)
ಇತರೆ
1. ಶಬ್ದಕೋಶ
2. ಸಾಂದರ್ಭಿಕ ಸಾಹಿತ್ಯ
3. ಭಾರತದಲ್ಲಿರುವ ಸಮಾಜಕಾರ್ಯ ಪ್ರಶಿಕ್ಷಣ ಶಾಲೆಗಳು