Niruta Publications
  • Home
  • About Us
    • Ramesha's Profile
  • Publication With Us
    • Inviting Authors
    • Niruta's Read & Write Initiative
    • Leaders Talk
    • Inviting Articles
    • Promote Your Books
  • Our Services
  • Collaborate with Niruta Publications
  • HR Blog
    • Editor's Blog
    • Blog
    • English Articles
    • Kannada Articles
  • Online Store
  • Media Mentions
    • Photos
    • Videos
  • Join Our Online Groups
  • Contact Us
  • Home
  • About Us
    • Ramesha's Profile
  • Publication With Us
    • Inviting Authors
    • Niruta's Read & Write Initiative
    • Leaders Talk
    • Inviting Articles
    • Promote Your Books
  • Our Services
  • Collaborate with Niruta Publications
  • HR Blog
    • Editor's Blog
    • Blog
    • English Articles
    • Kannada Articles
  • Online Store
  • Media Mentions
    • Photos
    • Videos
  • Join Our Online Groups
  • Contact Us
Niruta Publications
  • Human Resource
  • >
  • ಮಾನವ ಸಂಪನ್ಮೂಲ ಮಾರ್ಗದರ್ಶಿ

ಮಾನವ ಸಂಪನ್ಮೂಲ ಮಾರ್ಗದರ್ಶಿ

SKU:
$0.00
Unavailable
per item
ಮುನ್ನುಡಿ
 
ಯಾವುದೇ ಸಂಸ್ಥೆಯಲ್ಲಿ ಉದ್ಯೋಗ ಪ್ರಾರಂಭವಾದಾಗ, ಪ್ರತಿ ನೌಕರನಿಗೆ ಆಯಾ ಸಂಸ್ಥೆಯ ಸಂಪೂರ್ಣ ಮಾಹಿತಿ, ಅವನ ಕೆಲಸ ಕೆಲಸದ ರೀತಿ, ನೀತಿ, ನಿಯಮಗಳು, ಜವಾಬ್ದಾರಿ, ಹಕ್ಕು ಬಾಧ್ಯತೆಗಳು, ಇತ್ಯಾದಿಗಳ ತಿಳುವಳಿಕೆ ನೀಡುವುದು ಅವಶ್ಯ. ನೌಕರ ಮಾನಸಿಕವಾಗಿ ಹಾಗೂ ವ್ಯವಹಾರಿಕವಾಗಿ ತನ್ನ ಸಂಸ್ಥೆಯ ಕೆಲಸದ ಜೊತೆ ಹೊಂದಿಕೊಳ್ಳುತ್ತಾನೆ. ಹಾಗೆಯೇ ಸಂಸ್ಥೆ/ ಕಂಪನಿಯ ಕೂಡ ತನ್ನ ಗುರಿಗಳನ್ನು ಸಾಧಿಸಲು ಹಾಗೂ ನೌಕರನ ಸಂಪೂರ್ಣ ಸಾಮಥ್ರ್ಯ ಕೌಶಲ್ಯಗಳನ್ನು ಉಪಯೋಗಿಸುವ ವಾತಾವರಣ ನಿರ್ಮಾಣ ಮಾಡಬೇಕಾಗುತ್ತದೆ. ಅಲ್ಲದೆ ಇದು ಕಾನೂನಿನ ಒಂದು ಸಹಜ ಕ್ರಿಯೆ ಹಾಗೂ ಕಾರ್ಮಿಕ ಕಾನೂನಿನ ವ್ಯವಹಾರ/ಸಂಬಂಧಿಗಳ ಭದ್ರ ಬುನಾದಿಯ ಅವಶ್ಯಕತೆಯೂ ಹೌದು. ಇದು ಯಶಸ್ವಿಯಾಗಿ, ಪರಿಣಾಮಕಾರಿ ಆಗಬೇಕಾದರೆ ನೌಕರನಿಗೆ ತನ್ನ ಸಂಸ್ಥೆಯ, ತನ್ನ ಕೆಲಸದ ರೀತಿ ನೀತಿಗಳ ಆಡಳಿತ ವೈಖರಿ ಬಗೆಗೆ ಸಂಪೂರ್ಣ ಜ್ಞಾನ ಅರಿವು ಬೇಕು. ಈ ದಿಶೆಯಲ್ಲಿ ಪ್ರಾರಂಭಿಕ ಹಂತದಲ್ಲಿ ಅವನಿಗೆ ಸಂಸ್ಥೆಯ ಪರಿಚಯ, ಧ್ಯೇಯ, ಉದ್ದೇಶ, ಗುರಿ, ಮೌಲ್ಯಗಳು, ಸುರಕ್ಷೆ, ಗುಣಮಟ್ಟ, ಪರಿಸರ ಇತ್ಯಾದಿ ನೀತಿಗಳ ಬಗ್ಗೆ, ಕಂಪನಿಯು ಹೊಂದಿರುವ ಬದ್ಧತೆ ಮತ್ತು ಜಾರಿ ಮಾಡುವ ವಿಧಾನದ ಅರಿವು ಇದ್ದರೆ ಅವನು ತಾನು ಯಶಸ್ವಿ ಉದ್ಯೋಗಿ ಆಗುವುದರ ಜೊತೆ ಕಂಪನಿಯ ಯಶಸ್ವಿಗೂ ತನ್ನ ಪಾಲಿನ ದೇಣಿಗೆ ನೀಡಲು ಸಮರ್ಥನಾಗುತ್ತಾನೆ.
​
ಇದಕ್ಕೆ ಸಂಬಂಧಿಸಿದ ಅನೇಕಾನೇಕ ದಿನನಿತ್ಯದ ಸಂಸ್ಕರಣೆಯ ವಿಷಯಗಳ ಬಗ್ಗೆ ಸದಾ ಮನನ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಎಲ್ಲೆಡೆ ವ್ಯವಹಾರದಲ್ಲಿ ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆ ಪ್ರತಿಗಳು, ಟಿಪ್ಪಣಿ ಸೂಚನೆಗಳು ನಡವಳಿಕೆಗಳು ಸಾಮಾನ್ಯ ಭಾಷೆ ಇಂಗ್ಲೀಷಿನಲ್ಲಿ ಇರುವುದು ವಾಡಿಕೆ. ಆದರೆ ಅನೇಕ ಸಾರಿ ಈ ರೀತಿಯ ಭಾಷೆ ಸಾಹಿತ್ಯ ಅದರಲ್ಲಡಗಿದ ಮೂಲ ಅರ್ಥ ಉದ್ದೇಶಗಳನ್ನು ಅವರವರ ಮಾತೃ ಭಾಷೆ ಅಥವಾ ಸ್ಥಳೀಯ ಆಡು ಭಾಷೆಯಲ್ಲಿ ದೊರೆತು ತಿಳಿಸಿ ಓದಿ ಹೇಳಿದಾಗ, ಓದಿದಾಗ, ವ್ಯಾಸ್ಯಾಂಗ ಮಾಡಿದಾಗ ಮನನವಾಗುವುದು ಸಹಜ. ಆ ಮೂಲಕ ಅವನ ಆತ್ಮ ವಿಶ್ವಾಸ ಹೆಚ್ಚುವುದು ಹಾಗೂ ಒಂದು ರೀತಿಯ ಅಭಿಮಾನ ಅಸ್ಥೆ ಬಂದಲ್ಲಿ ಆಶ್ಚರ್ಯವಿಲ್ಲ.
​
ವಿಶೇಷವಾಗಿ ಗ್ರಾಮೀಣ ಭಾಗದಿಂದ ಬಂದ ಸಮುದಾಯ ಹಿಂದುಳಿದ ಸ್ಥಳಗಳಿಂದ ಬಂದ/ ಸಮುದಾಯ, ಅನೇಕಾನೇಕ ಕಾರಣಗಳಿಂದ ಇಂಗ್ಲೀಷ ಭಾಷೆಯಲ್ಲಿ ಹಿಂದುಳಿದಾಗ ಅಥವಾ ಅದರ ಬಗ್ಗೆ ಅರಾಮವೆನಿಸದೆ ಇರುವವರಿಗೆ, ಸಂಕೋಚ ಹಾಗೂ ಕೆಲವೊಮ್ಮೆ ತಾರತಮ್ಯ ಭಾವನೆ/ ಕೀಳರಮೆ ಎನಿಸಿದಲ್ಲಿ ಅವರ ಭಾಷೆಯಲ್ಲಿ ಅರ್ಥಮಾಡಿಕೊಂಡಲ್ಲಿ, ತಿಳಿದಲ್ಲಿ ಅವರು ತುಂಬಾ ಅರಾಮವಾಗಿ ಹೆಚ್ಚಿನ ಆತ್ಮ ಸ್ಥೈರ್ಯದಿಂದ ಕೆಲಸ/ ವ್ಯವಹಾರದಲ್ಲಿ ಮುನ್ನುಗಿ ಉತ್ತಮ ಉತ್ಕೃಷ್ಟ ನೌಕರರಾದ ಉದಾಹರಣೆಗಳಿವೆ. ಇದನ್ನು ಮನಗಂಡು ಹಾಗೂ ಇದರ ಅವಶ್ಯಕತೆ ಅನೇಕಾನೇಕ ಕಡೆ ನಾನು ಕಂಡಿದ್ದರಿಂದ, ಕೆಲವರು ವ್ಯಕ್ತಪಡಿಸಿದ್ದರಿಂದ ನಾಡ ಭಾಷೆ ಪ್ರಚಲಿತ ಆದ್ಯತೆ ಎಂದು ಹೇಳುತ್ತಿರುವುದರಿಂದ ಈ ಗ್ರಂಥದ ನಿರ್ಮಾಣ ಸರಳವಾಗಿ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಎಂದರೆ ಸಂಸ್ಥೆಯ ಗುರಿ ಧ್ಯೇಯ ದೃಷ್ಟಿ ಮೌಲ್ಯಗಳಿಂದ ಪ್ರಾರಂಭಿಸಿ ಸುರಕ್ಷತೆ ಗುಣಮಟ್ಟ ಪರಿಸರ ಇತ್ಯಾದಿಗಳನ್ನು ಜೋಡಿಸಿ ನೌಕರನ ನಿಯೋಜನಾ (Appointment) ಪತ್ರಗಳನ್ನು ವಿವಿಧ ಹುದ್ದೆಗಳಿಗೆ ಅವನ ಪರಿಕ್ಷಾ ಅವಧಿಯ ನಡೆ (Probation)ರೀತಿ ನಮೂನೆ ನಿರ್ಮಿಸಿದ್ದೇನೆ.
​
ಅದೇ ರೀತಿ ಸಂಸ್ಥೆ ನಡೆಯಲು ಅವಶ್ಯವಿರುವ ಅನೇಕ ಪೂರಕ ಒಪ್ಪಂದಗಳ (Contracts) ಎಂದರೆ ಸೆಕ್ಯೂರಿಟಿ, ಲೇಬರ ಕಾಂಟ್ರಾಕ್ಟ, ಉಪಹಾರದ ಗೃಹ ಗುತ್ತಿಗೆ  (Contract) ಇತ್ಯಾದಿಗಳ ನಮೂನೆ ನೌಕರನ ಕಾರ್ಯಕ್ಷಮತೆಯ ಮಾದರಿ ನಮೂನೆ ಸಂಘಗಳ ಜೊತೆ ಆದ ಒಪ್ಪಂದಗಳನ್ನು ನೌಕರನ (Service Condition) ಅನುಕೂಲತೆಗಳು ನಿಯೋಜನಾ ನೀತಿ (Leave Policy etc)ಗಳ ನಮೂನೆ ನೀಡಿದ್ದೇನೆ. ಈ ರೀತಿಯ ಬಗೆ ಬಗೆಯ ರೀತಿಯ ಅಯಾಮ ವಿಷಯಕ್ಕೆ ಸಂಬಂಧಿಸಿದ ರೀತಿ, ನಮೂನೆಗಳನ್ನು ನನ್ನ ಇತರ ಕೃತಿಗಳಲ್ಲಿ ವಿವರವಾಗಿ ನೀಡಿದ್ದೇನೆ. ಅದರಲ್ಲಿಯ ಕೆಲವೊಂದನ್ನು ಇದರಲ್ಲಿ ಪುನಃ ನೀಡಿದ್ದೇನೆ.
​
ಒಂದೇ ಮಾತಿನಲ್ಲಿ ತಿಳಿಸಬೇಕೆಂದರೆ ಅವಶ್ಯವಿರುವವರು, ಬೇಕೆಂದವರು ತಮ್ಮ ತಮ್ಮ ಅನುಕೂಲ ಬೇಡಿಕೆ ಅಧರಿಸಿ ಈ ನಮೂನೆಗಳನ್ನು ನೋಡಬಹುದು, ಉಪಯೋಗಿಸಬಹುದು. ಹಾಗೂ ಎಚ್ಆರ್‍ಡಿ (HRD) ಸಾಹಿತ್ಯದಲ್ಲಿ ಈ ರೀತಿಯ ದೊರೆಯುವ (Ready Made) ವಿಷಯಗಳು ಲಭ್ಯವಾಗಿ ಸಿದ್ಧಪಡಿಸಿದ ರೂಪದಲ್ಲಿ ಬರಲಿರುವ ಜನಾಂಗಕ್ಕೆ ಇದೂಂದು ಮಾದರಿ ಕೃತಿ ಆಗಲಿ ಎಂದು ತಿಳಿದು ಸಹೃದಯ ಓದುಗರಿಗೆ ವಿನಮ್ರವಾಗಿ ನೀಡುತ್ತಿದ್ದೇನೆ. ಇದರಲ್ಲಿಯ ತಪ್ಪು ಒಪ್ಪುಗಳಿಗೆ ನಾನು ಮುಕ್ತ. ಸಲಹೆ, ಟೀಕೆಗಳು ಸದಾ ಸ್ವಾಗತ.
​
ಕೃತಿ ತರಲು ಸಹಕರಿಸಿದ ನನ್ನ ಸಹಾಯಕ ಮಂಜುನಾಥ ಆರ್ ಎಸ್  ಸಹಾಯ, ಕಂಪ್ಯೂಟರಿಗೊಳಿಸಲು ಅಪಾರ, ಅವರ ಸಹಕಾರ ನಾನು ಸ್ಮರಿಸಲೇಬೇಕು. ಅದೇ ರೀತಿ ಕೃತಿ ಹೊರಬರಲು, ರಚಿಸಲು ಸಹಾಯ, ಮಾರ್ಗದರ್ಶನ ನೀಡಿದ ಅನೇಕಾನೇಕರಿಗೆ ನನ್ನ ಧನ್ಯವಾದಗಳು. ಈ ಕೃತಿ ಪುಸ್ತಕ ರೂಪದಲ್ಲಿ ತಂದು ಪ್ರಕಟಿಸಲು ಮುಂದೆ ಬಂದು ನೆರವಾದ ಶ್ರೀ ರಮೇಶ ಎಂ.ಎಚ್., ನಿರಾತಂಕ ಇವರಿಗೆ ನಾನು ಆಭಾರಿ. ನನ್ನ ವೃತ್ತಿ ಮಿತ್ರರು, ತರುಣ ಪೀಳಿಗೆ, ಓದುಗರು ತಮ್ಮ ತಮ್ಮ ಅಭಿಪ್ರಾಯ ಈ ಕೃತಿ ಬಗ್ಗೆ ತಿಳಿಸಿದಲ್ಲಿ ನನಗೆ ಸಂತೋಷ.
 
ಇತಿ ವಂದನೆಗಳೂಂದಿಗೆ
ರಾಮ್ ಕೆ ನವರತ್ನ
 
ಪರಿವಿಡಿ
 
1. ಸಂಸ್ಥೆಯ ಗುರಿ, ಧ್ಯೇಯ, ಮೌಲ್ಯಗಳು
   ಉದ್ದೇಶ (Objective), ದೃಷ್ಟಿ (Vision), ಧ್ಯೇಯ (Mission)
2. ಸಾಮಾನ್ಯ ನಿಯೋಜನಾ ಪತ್ರಗಳು
   a.         ಉದ್ಯೋಗ ನೇಮಕಾತಿ ಪತ್ರ (Appointment Letter)
   b.         ಶಿಶುಕ್ಷ ತರಬೇತಿ ಪತ್ರ (Apprentice Appointment)
   c.         ಪರೀಕ್ಷಾರ್ಥಿ ನಿಯೋಜನಾ ಪತ್ರ (Appointment order on Probation)
   d.         ತರಬೇತಿಯಲ್ಲಿರುವವರಿಗೆ ನಿಯೋಜನಾ ಪತ್ರ (Appointment order for Trainee)
3. ಒಪ್ಪಂದಗಳು (Contracts/Agreements)
   1.         ವೈದ್ಯಾಧಿಕಾರಿ ನೇಮಕ   (Engagement of medical officer/ Doctor)
   2.         ಉಪಾಹಾರ ಗೃಹದ ಗುತ್ತಿಗೆ (Canteen Contract)
   3.         ಭದ್ರತಾ ವ್ಯವಸ್ಥೆಯ ಗುತ್ತಿಗೆ (Security Agency)
   4.         ತುಣುಕು, ಮುರುಕು (Contract Scrap Dealer)
   5.         ಗುತ್ತಿಗೆ ಕಾರ್ಮಿಕರ ಒಪ್ಪಂದ (Contract Labour)
   6.         ಪೂರಕ ಸೇವೆಗಳ ಒಪ್ಪಂದ (Agreement for Supplementary Services)
   7.         ಸಂಘದ ಜೊತೆಗಿನ ಒಡಂಬಡಿಕೆ    (Agreement of settlement)
4. ಸ್ಥಾಯಿ ಆದೇಶಗಳ ನಮೂನೆ (Standing Order)             
5. ಸುರಕ್ಷಾ ನೀತಿ (Safety Policy)
6.  ಮಾನವ ಸಂಪನ್ಮೂಲ ನೀತಿಗಳು (HR Policies)
   1.         ನಿಯೋಜನಾ/ ನೇಮಕಾತಿ ರೀತಿಯ ನೀತಿ (Recruitment Policy)
   2.         ರಜೆಯ ನೀತಿ (Leave Policy)
   3.         ನೌಕರರ ಕಾರ್ಯಕ್ಷಮತೆ ನಮೂನೆ ಮಾದರಿ (Employee Appraisal)
7. HRD ನೀತಿಯಲ್ಲಿ ಇರಬೇಕಾದ ಕೆಲವೊಂದು ಮುಖ್ಯ ಅಂಶಗಳು
   1.         ಬಾಲ ಕಾರ್ಮಿಕ ನಿಯಂತ್ರಣ ಮತ್ತು ನಿಷೇಧ (Child Labour Prevention and Regulation)
   2.         ತಡವಾಗಿ ಬರುವಿಕೆ, ಗೈರು ಹಾಜರಿ (Absent and Late Coming)
   3.         ವಸತಿ ಗೃಹದ ಸೌಕರ್ಯ (Quarters Facility) 
   4.         ರಾಜೀನಾಮೆ/ ಕೆಲಸದಿಂದ ತೆಗೆಯುವುದು/ವಜಾಮಾಡುವ ನಿಯಮ. (Termination/ Dismissal Rule)
   5.         ಸಂಬಳದ ನೀತಿ. (Wage Policy)
   6.         ಆರೋಗ್ಯ ಮತ್ತು ಸುರಕ್ಷಾ ನೀತಿ. (Health and Safety Policy)
   7.         ಅಧಿಕ ಕಾಲದ ಕೆಲಸಕ್ಕೆ ಹೆಚ್ಚುವರಿ ವೇತನ (Over Time Policy)
   8.         ವೇತನ ಸಹಿತ ವಾರ್ಷಿಕ ರಜೆ.
   9.         ಸಾಮಾನ್ಯ ಶಿಸ್ತು. (General Discipline)
   10.       ಅಮಾನತ್ತು. (Suspension)
   11.       ಜೀವನ ನಿರ್ವಹಣೆ ಭತ್ಯೆ. (Subsistance Allowance)
   12.       ಶಿಕ್ಷೆ/ ದಂಡನೆ ನೀಡಲು ಶಿಸ್ತು ಕ್ರಮದ ರೀತಿಗಳು. (Discipline Procedure — Punishment)
8.           ಲೈಂಗಿಕ ಕಿರುಕುಳ ನಿವಾರಣೆ ರೀತಿ ನಿಯಮಗಳ ಮಾದರಿ. (Prevention of Sexual Harassment Rules Model)
9.           ತರಬೇತಿಯ ಅಭಿಪ್ರಾಯ ನಮೂನೆ (Traning Feedback)
10.         ಕಾರ್ಮಿಕ ಕಾಯಿದೆ ಪದ್ಯಗಳು 
11.         ಆಯ್ದ ಆಂಗ್ಲ ಭಾಷೆ ನಮೂನೆಗಳು (Selected English Formats) 
     a.  Apprentices Appointment
     b.  Appointment Letter On Probation
     c.  Appointment order for Trainee
     d. Engagement of Medical Officer
     e.  Canteen Contract
12.         ಶಬ್ದ ಸೂಚಿ - ಇಂಗ್ಲೀಷ ಕನ್ನಡ (Words to Know English Kannada)
13.         ಗ್ರಂಥ ಋಣಿ (Bibliography)
14.         ಲೇಖಕರ ಇತರೆ ಕೃತಿಗಳು (Other Publications of Author)
  • Facebook
  • Twitter
  • Pinterest
  • Google+
Not Available

SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • EDITOR'S BLOG
  • HR BLOG
  • PUBLICATION WITH US
  • TRANSLATION & TYPING
  • VIDEOS

TRAINING

  • CERTIFICATE TRAINING COURSES
  • TRAINING PROGRAMMES

nIRATHANKA CITIZENS CONNECT

  • NIRATHANKA CITIZENS CONNECT

JOB

  • JOB PORTAL​
  • FREELANCE SPOKEN ENGLISH TRAINER
  • FREELANCE TRANSLATOR

HR SERVICES

  • ​COMPLIANCE SUPPORT
  • CONSULTING
  • CONTRACT LABOUR
  • CONTRACT LABOUR LICENCE & CONSULTING
  • DOMESTIC ENQUIRY
  • DRAFTING OF LEGAL DOCUMENTS
  • HR AND COMPLIANCE AUDIT
  • HUMAN RESOURCE PROCESS AND POLICY FORMULATION
  • ISO CERTIFICATION​
  • LEGAL ASSISTANCE
  • ORGANISATIONAL AND JOB DESIGNS
  • PAYROLL
  • RECRUITMENT & STAFFING SERVICES
  • STAFFING - WHITE & BLUE COLLAR
  • ​STANDING ORDERS CERTIFICATION
  • ​TRADEMARK

OTHER SERVICES

  • ​APARTMENT RESIDENTS WELFARE ASSOCIATION REGISTRATION
  • LICENCES AND NOCs FROM FIRE, AGRICULTURE, STATE EXCISE DEPARTMENTS
  • MSME REGISTRATION
  • ​NGO / TRUST / SOCIETY / ASSOCIATION, COOPERATIVE SOCIETY & PVT. LTD. COMPANY REGISTRATION
  • ​SHOPS & ESTABLISHMENT REGISTRATION​

NIRATHANKA

  • ​CSR
  • TREE PLANTATION PROJECT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe



Picture
Follow Niruta Publications WhatsApp Channel
Follow Social Work Learning Academy WhatsApp Channel
Follow Social Work Books WhatsApp Channel



JOIN OUR ONLINE GROUPS


ONLINE STORE


Copyright Niruta Publications 2021,    Website Designing & Developed by: www.mhrspl.com