Niruta Publications
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
Niruta Publications
  • General Books
  • >
  • ಮಾಕುಂಟಿಯ ಮುದುಕರು

ಮಾಕುಂಟಿಯ ಮುದುಕರು

SKU:
$0.00
Unavailable
per item
ಪರಿವಿಡಿ
​

ನನ್ನ ನುಡಿಗಳು 
ಬಿನ್ನಹ  
ಮುನ್ನುಡಿ
ಕೃತಜ್ಞತೆಗಳು
1.         ಉದ್ದೇಶ ಮತ್ತು ಯೋಜನೆ
2.         ನಾನು ಆಯ್ದುಕೊಂಡ ಸಮುದಾಯ
3.         ತಾರುಣ್ಯ ಮತ್ತು ವೃದ್ಧಾಪ್ಯ
4.         ಮುದುಕರು ಮತ್ತು ಅವರ ಪಾತ್ರ  
5.         ಮುದುಕರು ಮತ್ತು ಅವರ ಕುಟುಂಬ
6.         ಬಳಗಸ್ಥರು ಮತ್ತು ಜಾತಿ ಬಾಂಧವರೊಡನೆ ಮುದುಕರು
7.         ಮುದುಕರು ಮತ್ತು ಸಮುದಾಯ
8.         ಮುದುಕರು ಮತ್ತು ಸಮಾಜದ ಪ್ರತಿಕ್ರಿಯೆ 
9.         ಮುದುಕರ ಸಮಸ್ಯೆಗಳು 
10.       ದುಃಖ ಮತ್ತು ಸಂತಸದ ಕ್ಷಣಗಳು
11.       ಸಂಕ್ಷಿಪ್ತವಾಗಿ
12.       ಚಿತ್ರಗಳು
​

ಔಷಧ ಕ್ಷೇತ್ರದಲ್ಲಿನ ಬೆಳವಣಿಗೆಯಿಂದ ಮತ್ತು ಔಷಧೋಪಚಾರಗಳನ್ನು ಕೊಡುವ ಗುಣಮಟ್ಟದ ಆಸ್ಪತ್ರೆಗಳಿಂದ, ಮರಣದ ಸಂಖ್ಯೆ ಇಳಿಮುಖವಾಗಿದೆ, ಮತ್ತು ಹಿರಿ ವಯಸ್ಕರ ಸಂಖ್ಯೆ ಹೆಚ್ಚಾಗಿದೆ. ಇದರಿಂದ, `ಮುಪ್ಪು ಶಾಸ್ತ್ರದ ಬಗ್ಗೆ ಆಸಕ್ತಿ ಮತ್ತು ಸಂಶೋಧನೆಗಳು ಹೆಚ್ಚಾಗುತ್ತಿವೆ. ಈ ಶಾಸ್ತ್ರಕ್ಕೆ, ವೈದ್ಯಕೀಯ, ಮಾನಸಿಕ ಮತ್ತು ಸಮಾಜಶಾಸ್ತ್ರ ಕ್ಷೇತ್ರದ ತಜ್ಞರು ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಈ ಕ್ಷೇತ್ರವು ಮುಪ್ಪಡರಿದವರು ಅನುಭವಿಸುವ ತೊಂದರೆಗಳನ್ನು ಗುರುತಿಸಿ ಅವುಗಳ ಅಧ್ಯಯನವನ್ನು ಮಾಡುತ್ತಾರೆ.
​

ಮರುಳಸಿದ್ಧಯ್ಯನವರು ಸಮಾಜೋ-ಮಾನವಶಾಸ್ತ್ರ ದೃಷ್ಟಿಕೋನದಿಂದ ``ಮಾಕುಂಟಿಯ ಮುದುಕರು’’ ಪುಸ್ತಕವನ್ನು ಚಿಕ್ಕದಾಗಿ, ಚೊಕ್ಕವಾಗಿ ಹೊರತಂದಿದ್ದಾರೆ. ಬರಿ ಮುಪ್ಪಾದವರ ಸಮಸ್ಯೆಗಳನ್ನು ಅಧ್ಯಯನ ಮಾಡುವುದಲ್ಲದೆ, ಬದಲಾಗುತ್ತಿರುವ ಹಳ್ಳಿ ಸಮುದಾಯದಲ್ಲಿ ಮುದುಕರ ಪಾತ್ರದ ಬಗ್ಗೆ ವಿಶ್ಲೇಷಣೆಯನ್ನೂ ಮಾಡಿದ್ದಾರೆ. ಮಾಕುಂಟಿಯ ಮುದುಕರು ಒಟ್ಟು ಕುಟುಂಬದಲ್ಲಿ, ರಕ್ತ ಸಂಬಂಧಗಳಲ್ಲಿ ಮತ್ತು ಜಾತಿ ವ್ಯವಸ್ಥೆಯಲ್ಲಿ ಹೇಗೆ ತಮ್ಮ ಸಾಂಪ್ರದಾಯಕ ಪಾತ್ರವನ್ನು ಆಡುತ್ತಾರೆ ಎಂದು ತೋರಿಸಿದ್ದಾರೆ. ಹಾಗೆಯೇ ತಮ್ಮ ಸಾಮಾಜಿಕ ಸ್ಥಾನಮಾನ, ಪ್ರಭಾವಗಳನ್ನು ಕಿರಿಯ ಪೀಳಿಗೆಯವರ ಮುಂದೆ ಪಂಚಾಯಿತಿರಾಜ್ ಮೂಲಕ ಹೇಗೆ ಕಳೆದುಕೊಳ್ಳುತ್ತಿದ್ದಾರೆ ಎಂಬುದನ್ನೂ ವಿಶದಪಡಿಸಿದ್ದಾರೆ. ಆದರೂ ಹಿರಿಯರು ಅಜ್ಜ-ಅಜ್ಜಿಯರ ಪಾತ್ರಗಳಲ್ಲಿ, ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ, ಮದುವೆ ಸಂಬಂಧಗಳನ್ನು ಕೂಡಿಸುವಲ್ಲಿ ವಿಶೇಷಾಧಿಕಾರವನ್ನು ಪಡೆದಿರುತ್ತಾರೆ ಎಂಬುದನ್ನು ಒಪ್ಪಿಕೊಳ್ಳಬೇಕಾದ ಅಂಶವಾಗಿದೆ. ಮದುವೆ, ಮತ್ತಿತರ ಸಮಾರಂಭಗಳಲ್ಲಿ, ಇವರು ಕುಟುಂಬದ ಪ್ರತಿನಿಧಿಯಾಗಿ ಕಂಡುಬರುತ್ತಾರೆ. ಹೀಗಾಗಿ ಇವರುಗಳು ರಕ್ತ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ.

ಮರುಳಸಿದ್ಧಯ್ಯನವರು ಹೀಗೆ ವೀಕ್ಷಿಸುತ್ತಾರೆ ; ವೃದ್ಧರನ್ನು ವಯಸ್ಸಾಗುವಿಕೆ ಮತ್ತು ಅತಿ ವಯಸ್ಸಾಗುವಿಕೆ ಎಂದು ಎರಡು ಭಾಗಗಳನ್ನಾಗಿ ಮಾಡಬಹುದು. ಸರಾಸರಿ 55 ರಿಂದ 65 ವರ್ಷಗಳ ಒಳಗಿನವರು ದೈಹಿಕ ದೃಢತೆಯುಳ್ಳವರು, ಆದುದರಿಂದ ಹಣಕಾಸನ್ನು ಸಂಪಾದಿಸಬಲ್ಲವರು, ತಮ್ಮ ಕುಟುಂಬವನ್ನು ಹತೋಟಿಯಲ್ಲಿಟ್ಟುಕೊಳ್ಳಬಲ್ಲವರಾಗಿರುತ್ತಾರೆ. 65 ವರ್ಷಗಳನ್ನು ದಾಟಿದವರು, ಹಕ್ಕುದಾರಿಕೆಯನ್ನು ಬಿಟ್ಟುಕೊಟ್ಟಿರುವುದಿಲ್ಲವಾದರೂ ತಮ್ಮ ಅಧಿಕಾರವು ತಮ್ಮ ಕೈಗಳಿಂದ ಯುವಕರ ಕೈಗೆ ಜಾರುತ್ತಿರುವುದನ್ನು ಗಮನಿಸಬಹುದು.

ಅವರು ಇದನ್ನೂ ಗಮನಿಸುತ್ತಾರೆ; ಇತ್ತೀಚಿನ ದಿನಗಳಲ್ಲಿ ಹಳ್ಳಿಗಳಲ್ಲಿ ತಂದೆ ತಾಯಿಗಳಿದ್ದರೂ ಕುಟುಂಬ ಭಾಗವಾಗುತ್ತಿರುವುದು, ವಿಶೇಷವಾಗಿ ಪಿತೃಗಳು 65 ವರ್ಷಗಳನ್ನು ದಾಟಿದಾಗ. ಮುದುಕರ ಪಾತ್ರದ ಅಧ್ಯಯನದ ಜೊತೆಗೆ, ಮರುಳಸಿದ್ಧಯ್ಯನವರು ಕುಟುಂಬದ ಒಂದು ಒಳನೋಟವನ್ನು ಕೊಡುತ್ತಾರೆ ; ಆಸ್ತಿಯ ಭಾಗದ ಜೊತೆಗೆ ಅಪ್ಪ-ಅಮ್ಮಂದಿರನ್ನೂ ಭಾಗ ಮಾಡಿಕೊಳ್ಳುವುದು ! ಆಸ್ತಿ ಭಾಗವಾದಾಗ, ಗಂಡು ಮಕ್ಕಳು ತಮ್ಮ ತಾಯಿಯನ್ನು ತಮ್ಮ ಜೊತೆಗೇ ಇರಿಸಿ ಪೋಷಿಸಲು ಬಯಸುತ್ತಾರೆ. ಅದೇ ಸೊಸೆಯಂದಿರು ತಮ್ಮ ಅತ್ತೆಗಿಂತ ಮಾವನೇ ಜೊತೆಗೆ ಇರಬೇಕೆಂದು ಇಚ್ಚಿಸುತ್ತಾರೆ. ಗ್ರಾಮೀಣ ಸಮಾಜದ ರಚನೆಯಲ್ಲಿ ಕುಟುಂಬದ ಹಿರಿಯನ ಪಾತ್ರ ಮತ್ತು ಪಿತೃವಂಶದ ಕ್ರಮ ಬೇರೂರಿದೆ. ಇದರ ನಡುವೆಯೂ, ವಿಧವೆ ಅಥವಾ ವಿಚ್ಛೇದಿತ ಮಗಳು ತನ್ನ ತೌರು ಮನೆಗೆ ವಾಪಾಸಾದಾಗ ಆ ಕುಟುಂಬದ ನಿಯಂತ್ರಣ, ನಿರ್ವಹಣೆಗೆ ತೊಡಗಿ ತನ್ನ ತಂದೆ-ತಾಯಿಗಳ ನೆರಳಾಗಿ ನಿಲ್ಲುತ್ತಾಳೆ. ಇದಕ್ಕೆ ಅನೇಕ ಜ್ವಲಂತ ಉದಾಹರಣೆಗಳನ್ನು ಮರುಳಸಿದ್ಧಯ್ಯನವರು ಕೊಡುತ್ತಾರೆ.

ಮರುಳಸಿದ್ಧಯ್ಯನವರ ಈ ಕಾರ್ಯ ಒಂದೇ ಹಳ್ಳಿಗೆ ಸೀಮಿತವಾಗಿದ್ದರೂ ಈ ಪರಿಶೋಧನೆಯು ವಿವರಣಾತ್ಮಕವಾಗಿಯೂ, ಸೀಮಿತ ಪರದೆಯನ್ನು ಮೀರಿದ್ದಾಗಿದೆ. ಸಂಪ್ರದಾಯ ನಿಷ್ಠ ಸಮಾಜದಲ್ಲಿ ಆಗುತ್ತಿರುವ ರೂಪಾಂತರಗಳು ಮತ್ತು ಈ ರೂಪಾಂತರಗಳಿಂದ ಹಿರಿಯ ತಲೆಮಾರಿನವರಿಗೆ ತಟ್ಟುವ ಪರಿಣಾಮಗಳನ್ನು ಈ ಪುಸ್ತಕದಲ್ಲಿ ಸಂಗತಿಗಳ ಮೂಲಕ ಸೆರೆಹಿಡಿಯಲಾಗಿದೆ. ಈ ಪರಿಣಾಮದ ಬಗೆಗಳು ಪಟ್ಟಣ ಪ್ರದೇಶ ಮತ್ತು ಹಳ್ಳಿಗೊಂಚಲಿನಲ್ಲಿ ಸಾಮ್ಯತೆ ಇದ್ದರೂ ವಿಭಿನ್ನವಾಗಿರುತ್ತವೆ.
​
ಮರುಳಸಿದ್ಧಯ್ಯನವರ ಈ ಸಂಶೋಧನೆಯು ಸಮಾಜೋ-ಮಾನವಶಾಸ್ತ್ರ ಸಾಹಿತ್ಯಕ್ಕೆ ಒಂದು ಹೊಸ ಸೇರ್ಪಡೆ ಎಂದು ಸಂತೋಷದಿಂದ ಹೇಳಬಯಸುತ್ತೇನೆ.
 
- ಎಂ.ಎಸ್. ಗೋರೆ

  • Facebook
  • Twitter
  • Pinterest
  • Google+
Not Available

Site
  • Home
  • About Us
  • Editor's Blog
  • Leader's Talk
  • Blog
  • Online Store
  • Videos
  • Join Our Online Groups
Vertical Divider
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
Join

Vertical Divider
Contact us
080-23213710
+91-8073067542
Mail-nirutapublications@gmail.com
Our Other Websites
www.hrkancon.com 
www.niratanka.org  
www.mhrspl.com
www.nirutapublications.org
Receive email updates on the new books & offers
for the subjects of interest to you.
Copyright Niruta Publications 2021
Website Designing & Developed by: www.mhrspl.com