Niruta Publications
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
Niruta Publications
  • General Books
  • >
  • ಅಮ್ಚೆ ವಾರಾಡ್

ಅಮ್ಚೆ ವಾರಾಡ್

SKU:
$0.00
Unavailable
per item
ಅಮ್ಚೆ ವಾರಾಡ್ ಎಂಬುದು ಮರಾಠಿ ಪದ. ನಮ್ಮ ಮದುವೆ ಎಂದು ಇದರ ಕನ್ನಡ ಅವತರಣಿಕೆ. ಮರಾಠಿ ನ್ಯಾಕ್ ಸಮುದಾಯದ ಮದುವೆ ಆಚರಣೆಗಳಿಗೆ ಸಂಬಂಧಪಟ್ಟ ವಿಚಾರಗಳು ಈ ಕೃತಿಯಲ್ಲಿ ಅಡಕವಾಗಿದೆ. ಮರಾಠಿಗರು ದಕ್ಷಿಣ ಕನ್ನಡದಲ್ಲಿ ನ್ಯಾಕ್ ಎಂದೇ ಗುರುತಿಸಿಕೊಂಡವರು. ಮೂಲ ಬುಡಕಟ್ಟುಗಳಾದ ಇವರು ಮಹಾರಾಷ್ಟ್ರ ಮೂಲದ ಕ್ಷತ್ರಿಯ ವಂಶಸ್ಥರು ಗೋವಾ, ಕೇರಳ ಮತ್ತು ಕರ್ನಾಟಕ ರಾಜ್ಯಕ್ಕೆ ವಲಸೆ ಬಂದವರು ಎಂದು ಸಂಶೋಧಿತ ಆಧಾರ ಗ್ರಂಥಗಳು ಹೇಳುತ್ತವೆ. ಈ ಸಮಾಜಕ್ಕೆ ವಿಶೇಷವಾದ ತಳಪಾಯವಿದ್ದು, ಕುಲಸಂಸ್ಕಾರಗಳು ಮತ್ತು ನಿತ್ಯವಿಧಿಗಳು ಸಂಶೋಧನಾತ್ಮಕ ವಿಷಯಗಳಾಗಿವೆ.
​

ಮರಾಠಿ ನಾಕ್ ಸಮಾಜದಲ್ಲಿ ಮತ್ತೆ ಪಂಗಡಗಳಿದ್ದು ಬರಿಗಳಾಗಿ ವಿಭಾಗ ಹೊಂದಿದೆ. ಪ್ರತಿಯೊಂದು ಬರಿಗಳಲ್ಲಿ ಒಂದೊಂದು ರೂಪದ ಕುಲದೇವರನ್ನು ಪೂಜಿಸುತ್ತಾರೆ. ಹುಟ್ಟಿನಿಂದ ಹಿಡಿದು ಮರಣಾದಿ ಆಚರಣೆಗಳು ಬಹಳ ವೈಶಿಷ್ಟ್ಯವಾಗಿವೆ. ಆದರೆ ಕ್ರಮೇಣವಾಗಿ ಮರಾಠಿ ಪೀಳಿಗೆಯು ಬೆಳೆಯುತ್ತಿರಲು ಈ ಕುಲಸಂಸ್ಕಾರಗಳ ಆಚರಣೆಯಲ್ಲಿ, ಕಟ್ಟುಪಾಡುಗಳಲ್ಲಿ ಸಡಿಲಿಕೆ ಬಹುತೇಕವಾಗಿ ಗೋಚರಿಸುತ್ತದೆ. ಅಲ್ಲದೆ ಶಿಕ್ಷಣ, ಉದ್ಯೋಗ, ನಗರೀಕರಣ, ವಾಣಿಜ್ಯೀಕರಣ ಪ್ರಾಬಲ್ಯದಿಂದ ಮರಾಠಿ ನ್ಯಾಕ್ ಸಮಾಜದಲ್ಲಿ ನಾವು ಮರಾಠಿಗರು ಎಂದು ಗುರುತಿಸಿಕೊಳ್ಳುವವರೇ ಕಡಿಮೆ ಆಗಿದೆ. ಸಮಾಜದ ಮೂಲ ನಿರ್ವಹಣಾ ಭಾಷೆಯಾದ ಮರಾಠಿ ಭಾಷೆಯೇ ಇಂದಿನ ಪೀಳಿಗೆಗೆ ತಿಳಿದಿಲ್ಲ. ತಾವು ಗಿರಿಜನರು, ಬುಡಕಟ್ಟು ಜನಾಂಗದವರು ಎಂದು ಕೇವಲ ಜಾತಿ ಪ್ರಮಾಣಪತ್ರದಲ್ಲಿ ತಿಳಿದಿದ್ದು, ತಮ್ಮ ಮೂಲ ಸಂಪ್ರದಾಯಗಳು ಬಹಳ ಶ್ರೇಷ್ಠಕರವಾಗಿದೆ ಎನ್ನುವ ವಿಚಾರವೇ ತಿಳಿದಿಲ್ಲ. ಅಲ್ಲದೆ ಇನ್ನೊಂದು ಖೇಧಕರ ಸಂಗತಿಯೆಂದರೆ ಇತರ ಸಮಾಜದ ಆಚರಣೆಗಳನ್ನು ಮರಾಠಿ ನ್ಯಾಕ್ ಸಮಾಜದಲ್ಲಿ ಅಳವಡಿಸಿಕೊಳ್ಳುವುದು ಜಾಸ್ತಿಯಾಗುತ್ತಿದೆ. ಈ ರೀತಿ ಆದರೆ ಮುಂದೊಮ್ಮೆ ಮರಾಠಿ ನ್ಯಾಕ್ ಸಮಾಜದ ಆಚರಣೆಗಳು ನಾಮಾವಶೇಷವಾಗಬಹುದಾದ ಸಂಭವಗಳಿವೆ. ಈ ದಿಸೆಯಲ್ಲಿ ಮರಾಠಿ ನ್ಯಾಕ್ ಸಮಾಜದ ಮದುವೆ ಆಚರಣೆಗಳ ಬಗ್ಗೆ ಒಂದು ಪರಿಧಿಯನ್ನಷ್ಟೆ ಆಯ್ಕೆ ಮಾಡಿಕೊಂಡು ಈ ಕೃತಿಯನ್ನು ರಚಿಸಿದ್ದೇನೆ. ಅದಕ್ಕೆ ಪೂರಕವಾಗಿ ಕೃತಿಗೆ ಅಮ್ಚೆ ವಾರಾಡ್ ಎಂದು ಶೀರ್ಷಿಕೆಯನ್ನಿಟ್ಟು ಮರಾಠಿ ನ್ಯಾಕ್ ಸಮಾಜದ ಮದುವೆ ಆಚರಣೆಗಳ ಬಗ್ಗೆ ಸಾಧ್ಯವಾದಷ್ಟು ವಿಚಾರವನ್ನು ದತ್ತಸಂಗ್ರಹಣೆ ಮಾಡಿದ್ದೇನೆ. ಇಂದಿನ ಮರಾಠಿ ನ್ಯಾಕ್ ಸಮಾಜದ ಪೀಳಿಗೆಯು ತಮ್ಮ ಸಮಾಜದ ಆಚರಣೆಗಳ ಬಗ್ಗೆ ಅರಿತುಕೊಳ್ಳಲು ಈ ಕೃತಿಯು ಉಪಯುಕ್ತವಾಗಬಹುದೆಂಬ ನಂಬಿಕೆ. ಮರಾಠಿ ನ್ಯಾಕ್ ಸಮಾಜದ ಇಂದಿನ ಪೀಳಿಗೆಯ ಸದಸ್ಯೆಯಾಗಿ ಇದು ನನ್ನ ಜವಾಬ್ದಾರಿಯೂ ಆಗಿದೆ. ಜೊತೆಗೆ ಕೆಲವೊಂದು ಮರಾಠಿ ಪದಗಳನ್ನು (ಅದರ ಕನ್ನಡ ಭಾವಾರ್ಥದೊಂದಿಗೆ) ಸಂಗ್ರಹಿಸಿ ಪಟ್ಟಿ ಮಾಡಿದ್ದೇನೆ. ಇನ್ನುಳಿದಂತೆ ಬುಡಕಟ್ಟು ಜನಾಂಗಗಳ ಬಗ್ಗೆ ಅಧ್ಯಯನ ಮಾಡುವವರಿಗೆ ಈ ಕೃತಿಯು ಉಪಯುಕ್ತವಾಗಬಹುದು ಎಂದು ನಂಬುತ್ತಾ, ಇನ್ನುಳಿದ ಮರಾಠಿ ನ್ಯಾಕ್ ಸಮಾಜದ ಹಿರಿಯರ ಆಶೀರ್ವಾದವು ನನ್ನ ಈ ಪ್ರಯತ್ನದ ಮೇಲೆ ಇರಲಿ ಎಂದು ಆಶಿಸುತ್ತೇನೆ.
 
ಡಾ. ಯಶಸ್ವಿನಿ ಬಟ್ಟಂಗಾಯ 




​ಪರಿವಿಡಿ
​
  1. ಮರಾಠಿ ನ್ಯಾಕ್‍ ಸಮಾಜ – ಪೀಠಿಕೆ
  2. ದತ್ತ ಸಂಗ್ರಹಣೆ / ಸಂಶೋಧನಾ ವಿಧಾನ
  3. ಮರಾಠಿ ಸಮಾಜದಲ್ಲಿರುವ ವಿವಿಧ ಬರಿಗಳು – ಪೀಠಿಕೆ
  4. ನಿಶ್ಚಿತಾರ್ಥದ ಕ್ರಮಗಳು
  5. ಮದುರಂಗಿ ಶಾಸ್ತ್ರ
  6. ಮರಾಠಿ ನ್ಯಾಕ್‍ರಲ್ಲಿ ಮದುವೆಯ ಧಾರಾ ಕಾರ್ಯಕ್ರಮ
  7. ಮನೋರಂಜನಾ ಕಾರ್ಯಕ್ರಮಗಳು
  8. ಮದುವೆ ಅಂದು – ಇಂದು
  9. ಉಪಸಂಹಾರ
  10. ಮರಾಠಿ ಪದಗಳು
  11. ಗ್ರಂಥ ಋಣ​
  • Facebook
  • Twitter
  • Pinterest
  • Google+
Not Available

Site
  • Home
  • About Us
  • Editor's Blog
  • Leader's Talk
  • Blog
  • Online Store
  • Videos
  • Join Our Online Groups
Vertical Divider
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
Join

Vertical Divider
Contact us
080-23213710
+91-8073067542
Mail-nirutapublications@gmail.com
Our Other Websites
www.hrkancon.com 
www.niratanka.org  
www.mhrspl.com
www.nirutapublications.org
Receive email updates on the new books & offers
for the subjects of interest to you.
Copyright Niruta Publications 2021
Website Designing & Developed by: www.mhrspl.com