Niruta Publications
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
Niruta Publications
  • Health Books
  • >
  • ಆರೋಗ್ಯವೇ ಭಾಗ್ಯ

ಆರೋಗ್ಯವೇ ಭಾಗ್ಯ

SKU:
$0.00
Unavailable
per item
ಪರಿವಿಡಿ
​

1. ಸ್ವಸ್ಥ - ಆರೋಗ್ಯವಂತನ ನಿರೂಪಣೆ     
2. ಆರೋಗ್ಯದ ಸೂತ್ರಗಳು
            ಅ. ದಿನಚರ್ಯೆ
            ಆ. ಋತುಚರ್ಯೆ
3. ಮೂರು ಆಧಾರ ಸ್ತಂಭಗಳು
            ಅ. ಆಹಾರ
            ಆ. ನಿದ್ರೆ           
            ಇ. ಬ್ರಹ್ಮಚರ್ಯೆ
4. ವೇಗಗಳನ್ನು ತಡೆದರೆ ಉಂಟಾಗುವ ತೊಂದರೆಗಳು
5. ಪಾಲಿಸಬೇಕಾದ ಕೆಲವು ಸಾಮಾನ್ಯ ನಿಯಮಗಳು
6. ಆಹಾರ ದ್ರವ್ಯಗಳು, ಹಣ್ಣು, ತರಕಾರಿ ಮತ್ತು ಸೊಪ್ಪುಗಳು
7. ಪ್ರಚಲಿತವಿರುವ ರೋಗಗಳಲ್ಲಿ ಪಥ್ಯ-ಅಪಥ್ಯ ವಿಚಾರಗಳು
8. ಮುತ್ತಿನಂತಹ ಮಾತುಗಳು
9. ವಿಶೇಷವಾದ ಲೇಖನಗಳು
10. ಮುಗಿಸುವ ಮುನ್ನ.....
11. ಓದುಗರಲ್ಲಿ ವಿನಂತಿ


ಈ ಕೃತಿಯ ಬಗ್ಗೆ ಡಾ. ಶಿವಾನಂದಯ್ಯನವರ ಅಪೇಕ್ಷೆಯಂತೆ ನನ್ನ ಅಭಿಪ್ರಾಯವನ್ನು ತುಂಬಾ ಸಂತೋಷದಿಂದ ವ್ಯಕ್ತಪಡಿಸುತ್ತೇನೆ.
​
ಡಾ. ಶಿವಾನಂದಯ್ಯನವರು ಒಬ್ಬ ತಜ್ಞ ವೈದ್ಯ. ಅವರ ಈ `ಆರೋಗ್ಯವೇ ಭಾಗ್ಯ’ ಕೃತಿಯನ್ನು ಅವಲೋಕಿಸಿದಾಗ ಇದು ಎಂಥ ಅಮೂಲ್ಯವಾದ ಮತ್ತು ಎಂಥ ಉಪಯುಕ್ತವಾದ ಪ್ರಕಟಣೆ ಎಂದೆನಿಸುತ್ತದೆ. ಔಷಧೋಪಚಾರವು ದೇಹ, ಮನಸ್ಸು, ವೃಂದ, ಸಮುದಾಯ-ಇವೆಲ್ಲವನ್ನೂ ಒಳಗೊಳ್ಳುವ ಒಂದು ಶಿಸ್ತುಬದ್ಧವಾದ ಪ್ರಕ್ರಿಯೆ. ಒಂದು ದೃಷ್ಟಿಯಿಂದ ಇದು ಶಿಸ್ತುಗಳ ಶಿಸ್ತು. ಹಾಗೆ ನೋಡಿದರೆ ಎಲ್ಲ ಉಪಚಾರ ಪ್ರಕ್ರಿಯೆಗಳೂ ಶಿಸ್ತುಬದ್ಧವಾದವುಗಳು. ಪ್ರಪಂಚದ ವಿವಿಧ ಕಡೆ ನಡೆಯುತ್ತಿರುವ ಸಂಶೋಧನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಈ ಕಾರಣದಿಂದ ನವನವೀನವಾದ ಆವಿಷ್ಕಾರಗಳು ಅಚ್ಚರಿಯ ರೀತಿಯಲ್ಲಿ ಬೆಳೆಯುತ್ತಲೇ ಇವೆ. ಈ ಮಾತು ಎಲ್ಲ ಶಿಸ್ತುಗಳಿಗೂ ಅನ್ವಯಿಸುತ್ತದೆ. ಇಂಥ ಬೆಳವಣಿಗೆಯು ಸಮಾಜದ ಮೇಲೆ ಗಾಢ ಪ್ರಭಾವವನ್ನು ಬೀರುತ್ತಿರುವುದರಿಂದ ಸಮಾಜವು ಸಂಕೀರ್ಣಗೊಳ್ಳುತ್ತಲೇ ಸಾಗಿದೆ. ಈ ವಿಚಾರಗಳು ಈ ಕೃತಿಯಲ್ಲಿ ನೇರವಾಗಿ ಪ್ರಸ್ತಾಪವಾಗದಿದ್ದರೂ ಅಲ್ಲಲ್ಲಿ ಹೊಳೆಯುತ್ತಿರುವುದನ್ನು ಚಿಂತನಶೀಲರು ಕಾಣಬಹುದು.

ಕನ್ನಡಿಗರಿಗೆ ಸಂಸ್ಕೃತ ಭಾಷೆಯಲ್ಲಿರುವ ವೈದ್ಯಕ್ಕೆ ಸಂಬಂಧಿಸಿದ ಉಕ್ತಿಗಳು ಈ ಕೃತಿಯ ಮೂಲಕ ಪರಿಚಯವಾಗುತ್ತಿರುವುದು ಒಂದು ಮೆಚ್ಚುವಂತಹ ಕಾರ್ಯ. ಆದರೂ ಕನ್ನಡದಲ್ಲಿ ವ್ಯಾಖ್ಯಾನವು ಇನ್ನೂ ವಿಸ್ತಾರವಾಗಬೇಕಾಗುತ್ತದೆ ಎನ್ನಿಸುತ್ತದೆ.

ಈ ಕೃತಿಯು ಜನರ ಆರೋಗ್ಯವರ್ಧನೆಗೆ ದಾರಿದೀಪ ಆಗಲಿ ಎಂದು ಹಾರೈಸುತ್ತಾ ಡಾ. ಶಿವಾನಂದಯ್ಯನವರಿಗೆ ನನ್ನ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.
 
ಡಾ. ಎಚ್.ಎಂ. ಮರುಳಸಿದ್ಧಯ್ಯ
ನಿವೃತ್ತ ಪ್ರಾಧ್ಯಾಪಕರು, 69, `ಈಶಕೃಪೆ, 3ನೆಯ ಅಡ್ಡರಸ್ತೆ, 24ನೆಯ ಮುಖ್ಯರಸ್ತೆ, ಜೆ.ಪಿ. ನಗರ, ಬೆಂಗಳೂರು - 560078

  • Facebook
  • Twitter
  • Pinterest
  • Google+
Not Available

Site
  • Home
  • About Us
  • Editor's Blog
  • Leader's Talk
  • Blog
  • Online Store
  • Videos
  • Join Our Online Groups
Vertical Divider
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
Join

Vertical Divider
Contact us
080-23213710
+91-8073067542
Mail-nirutapublications@gmail.com
Our Other Websites
www.hrkancon.com 
www.niratanka.org  
www.mhrspl.com
www.nirutapublications.org
Receive email updates on the new books & offers
for the subjects of interest to you.
Copyright Niruta Publications 2021
Website Designing & Developed by: www.mhrspl.com