Niruta Publications
  • Home
  • About Us
    • Ramesha's Profile
  • Publication With Us
    • Niruta's Read & Write Initiative
    • Leaders Talk
    • Inviting Articles
    • Promote Your Books
  • Our Services
  • Collaborate with Niruta Publications
    • Join Our Online Groups
  • Nirathanka Club House
  • HR Blog
    • Editor's Blog
    • Blog
    • English Articles
    • Kannada Articles
  • Online Store
  • Media Mentions
    • Photos
    • Videos
  • Contact Us
  • Home
  • About Us
    • Ramesha's Profile
  • Publication With Us
    • Niruta's Read & Write Initiative
    • Leaders Talk
    • Inviting Articles
    • Promote Your Books
  • Our Services
  • Collaborate with Niruta Publications
    • Join Our Online Groups
  • Nirathanka Club House
  • HR Blog
    • Editor's Blog
    • Blog
    • English Articles
    • Kannada Articles
  • Online Store
  • Media Mentions
    • Photos
    • Videos
  • Contact Us
Niruta Publications
  • Social Work Books
  • >
  • ಸಮಾಜಕಾರ್ಯ

ಸಮಾಜಕಾರ್ಯ

SKU:
$0.00
Unavailable
per item
ಮುನ್ನುಡಿ
​

ಭಾರತದಲ್ಲಿ ಸಮಾಜಕಾರ್ಯ ಶಿಕ್ಷಣ ಪ್ರಾರಂಭವಾಗಿ ಎಂಟು ದಶಕಗಳೇ ಸಂದವು. 1936 ಮುಂಬಯಿಯ ಟಾಟಾ ಸಂಸ್ಥೆಯಲ್ಲಿ ಪ್ರಾರಂಭವಾದ ಸಮಾಜಕಾರ್ಯ ಶಿಕ್ಷಣ ಇಂದು ದೇಶದ ಎಲ್ಲ ರಾಜ್ಯಗಳಿಗೂ ತಲುಪಿದೆ. ಪ್ರಾರಂಭದ ಹಂತದಲ್ಲಿ ಎಲ್ಲವೂ ವಿದೇಶಿಮಯವಾಗಿತ್ತು. ಈ ಸಮಾಜಕಾರ್ಯದ ಶಿಕ್ಷಣ : ಪಠ್ಯಕ್ರಮ, ಪುಸ್ತಕಗಳು, ರಚನೆ ಮತ್ತು ಸ್ವರೂಪ ಹಾಗೂ ಅಧ್ಯಾಪಕರೂ ಕೂಡಾ. ಈ ಕಳೆದ ಎಂಟು ದಶಕಗಳಲ್ಲಿ ಹಲವಾರು ಪ್ರಗತಿಪರ ಬದಲಾವಣೆಗಳು ಸಮಾಜಕಾರ್ಯ ಶಿಕ್ಷಣದಲ್ಲಿ ಕಾಣಸಿಗುತ್ತಿವೆ. ಆದರೂ ಕೂಡಾ ಹೇಳಿಕೊಳ್ಳುವಂತಹ ಗುಣಾತ್ಮಕ ಪರಿವರ್ತನೆ ತರುವಲ್ಲಿ ನಾವೆಲ್ಲರೂ ವಿಫಲರಾಗಿದ್ದೇವೆ ಎಂದರೆ ಅತಿಶಯೋಕ್ತಿಯಾಗಲಾರದು.

ರಾಷ್ಟ್ರೀಯ ಸಮಾಜಕಾರ್ಯ ಮಂಡಳಿ (National Council on Social Work Education), ರಾಷ್ಟ್ರಮಟ್ಟದ ಸಮಾಜಕಾರ್ಯಕರ್ತರ ಕ್ರಿಯಾತ್ಮಕ ಸಂಘಟನೆ, ಸ್ಥಳೀಯ ಸಾಹಿತ್ಯದಲ್ಲಿ ಕೃಷಿ ಇವುಗಳು ನಮ್ಮ ವೃತ್ತಿಯ ಭಾರತದಲ್ಲಿಯ ಪ್ರಮುಖವಾದ ನ್ಯೂನ್ಯತೆಗಳು. ಇವುಗಳ ಕೊರತೆಯಿಂದ ವೃತ್ತಿಪರ ಸಮಾಜಕಾರ್ಯ ಸೋಲನ್ನು ಅನುಭವಿಸುವ ದಾರಿ ಹಿಡಿದಿದೆ. ಸೂಕ್ತ ಸಮಯದಲ್ಲಿ ನಾವು ಸರಿಪಡಿಸಿಕೊಳ್ಳದಿದ್ದರೆ ಚಿಂತಾಜನಕವಾದ ಸೋಲನ್ನಪ್ಪುತ್ತೇವೆ.

ಸಮಾಜಕಾರ್ಯ ಶಿಕ್ಷಣದ ಸ್ಥಳೀಯ ಸಾಹಿತ್ಯದ ಲಭ್ಯತೆ (Availability of indigenous Literature in Social Work Education) ಸಮಾಜಕಾರ್ಯ ವೃತ್ತಿಯನ್ನು ಗುಣಾತ್ಮಕವಾಗಿ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಬಹುತಾಂಶ ಹಿರಿಯ ಸಮಾಜಕಾರ್ಯ ಶಿಕ್ಷಣ ತಜ್ಞರು ಈ ದಿಸೆಯಲ್ಲಿ ಗಮನೀಯವಾದ ಕಾರ್ಯ ಮಾಡಿಲ್ಲ. ಅಪವಾದಾತ್ಮಕವಾಗಿ ಎನ್ನುವಂತೆ ಕೆಲವೇ ಹಿರಿಯ ಶಿಕ್ಷಣ ತಜ್ಞರು ಸ್ಥಳೀಯ ಸಮಾಜಕಾರ್ಯ ಸಾಹಿತ್ಯ ಸೃಷ್ಟಿಸುವಲ್ಲಿ ಯಶಸ್ಸು ಹೊಂದಿದ್ದಾರೆ. ಪ್ರೊ. ಎಚ್.ಎಂ. ಮರುಳಸಿದ್ಧಯ್ಯ, ಡಾ. ಶಂಕರ ಪಾಠಕ, ಡಾ. ಗೋರೆ, ಪ್ರೊ. ಗೌರಿ ರಾಣಿ ಬ್ಯಾನರ್ಜಿಯವರನ್ನು ಉದಾಹರಣೆಗಾಗಿ ನಮೂದಿಸಬಹುದು.

ನಾವು ಕೈಕೊಂಡ ಸಂಶೋಧನೆ, ನಾವು ಅನುಭವಿಸಿದ ಕ್ಷೇತ್ರಾನುಭವ, ನಮ್ಮ ಅಧ್ಯಯನ, ನಮ್ಮ ಚಿಂತನ-ಮನನಗಳೆಲ್ಲ ಪುಸ್ತಕಗಳಾಗಿ ಹೊರಬಂದಾಗ ನಮ್ಮ ಸಮಾಜಕಾರ್ಯ ವೃತ್ತಿ ಶ್ರೀಮಂತವಾಗುತ್ತದೆ. ಡಾ. ರಮೇಶ ಸೋನಕಾಂಬಳೆಯವರು ಈ ದಿಸೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಅವರು ತಾವು ಕೈಕೊಂಡ ಸಂಶೋಧನೆ ಕ್ಷೇತ್ರದಲ್ಲಿ ಪಡೆದ ಅನುಭವ ಪುಸ್ತಕದ ರೂಪದಲ್ಲಿ ಪ್ರಕಟಿಸಿ ಸಮಾಜಕಾರ್ಯದ ವಿದ್ಯಾರ್ಥಿ ವೃಂದಕ್ಕೂ ಹಾಗೂ ಕ್ಷೇತ್ರದಲ್ಲಿ ಕಾರ್ಯತತ್ಪರರಾಗಿರುವ ವೃತ್ತಿಪರ ಸಮಾಜಕಾರ್ಯಕರ್ತರಿಗೂ ಒಂದು ದಾರಿಯನ್ನು ತೋರಿಸುತ್ತಿದ್ದಾರೆ. ಡಾ.ರಮೇಶ ಅವರು ವಿದ್ಯಾರ್ಥಿ ದೆಸೆಯಿಂದಲೇ ಬರೆಯುತ್ತಾ ಬಂದಿದ್ದಾರೆ. ವೃತ್ತ ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಅವರ ಬರಹವನ್ನು ನಾವು ಗಮನಿಸಬಹುದಾಗಿದೆ.

ಸ್ಥಳೀಯ ಸಾಹಿತ್ಯವಂತು ಬೇಕೇ ಬೇಕು. ಆದರೆ ಅದು ಸ್ಥಳೀಯ ಭಾಷೆಯಲ್ಲಿ ಆದರೆ ಇನ್ನೂ ಉತ್ತಮ. ಡಾ. ರಮೇಶ ಸೋನಕಾಂಬಳೆಯವರ ಪ್ರಸ್ತುತ ``ಸಮಾಜಕಾರ್ಯ ಪುಸ್ತಕವು ಸಮಾಜಕಾರ್ಯ ಶಿಕ್ಷಣ ಹಾಗೂ ಸಮಾಜಕಾರ್ಯ ವೃತ್ತಿಗೆ ಮಹತ್ತರವಾದ ಕೊಡುಗೆಯಾಗಲಿದೆ. ವಿಶೇಷವಾಗಿ ವಿದ್ಯಾರ್ಥಿ ವೃಂದ ಹಾಗೂ ಯುವ ಶಿಕ್ಷಕ ಸಂಶೋಧಕರಿಗೆ ಮಾರ್ಗದರ್ಶಿಯಾಗಲಿದೆ.
ಪ್ರಸ್ತುತ ಸಮಾಜಕಾರ್ಯ ಪುಸ್ತಕ ಹತ್ತು ಅಧ್ಯಾಯಗಳಲ್ಲಿ ಮಂಡಿಸಲಾಗಿದೆ. ಈ ಪುಸ್ತಕವು ಪ್ರಮುಖವಾಗಿ ಸಮಾಜಕಾರ್ಯದ ಪರಿಕಲ್ಪನೆಗಳು, ವಿಧಾನಗಳು, ಮೌಲಿಕ ಕಾರ್ಯಕ್ಷೇತ್ರಗಳು, ಸಮಾಜಕಾರ್ಯ ಶಿಕ್ಷಣದ ಜಾಗತಿಕ ಇತಿಹಾಸ, ಸಮಾಜಕಾರ್ಯದ ತತ್ವಜ್ಞಾನ ಹಾಗೂ ಉದ್ದೇಶಗಳನ್ನು ಒಳಗೊಂಡಿದೆ. ಒಂಬತ್ತನೇ ಅಧ್ಯಾಯದಲ್ಲಿ ಮಂಡಿಸಿದ ಭಾರತದ ಸಮಾಜಕಾರ್ಯದ ನವರತ್ನಗಳು ಒಂದು ಹೊಸ ಆಯಾಮವೆಂದೇ ಹೇಳಬೇಕು. ಪುಸ್ತಕದ ಕೊನೆಗೆ ಸೇರಿಸಿದ ಅನುಬಂಧಗಳು ಈ ನಿಟ್ಟಿನಲ್ಲಿ ಹೆಚ್ಚಿನ ಜ್ಞಾನವನ್ನು ಪಡೆಯಲು ಸಹಕರಿಸುತ್ತವೆ.

ಸಮಾಜಕಾರ್ಯದ ಪ್ರತಿಯೊಂದು ವಿಧಾನದ ಮೇಲೆ ಒಂದೊಂದು ಸ್ವತಂತ್ರ ಪುಸ್ತಕದ ಅವಶ್ಯಕತೆ ಇದೆ. ಅಲ್ಲದೆ ಕ್ಷೇತ್ರಕಾರ್ಯದ ಕುರಿತು ಕೂಡಾ ಕನ್ನಡದಲ್ಲಿ ಬರೆಯುವ ಅವಶ್ಯಕತೆ ಇದೆ. ಮುಂಬರುವ ದಿನಗಳಲ್ಲಿ ಡಾ. ರಮೇಶ ಅವರು ಈ ಜವಾಬ್ದಾರಿಯನ್ನು ಸ್ವೀಕರಿಸುತ್ತಾರೆಂದು ಆಶಿಸುತ್ತೇನೆ.

ಅಂತರ್ಜಾಲಗಳ ಇಂದಿನ ಆಧುನಿಕ ಯುಗದಲ್ಲಿ ಬರೆಯುವವರಿದ್ದರೂ ಓದುಗರು ಸಿಗುವುದಿಲ್ಲ ! ಆದುದರಿಂದ ಸಮಾಜಕಾರ್ಯದ ವಿದ್ಯಾರ್ಥಿಗಳು, ಅಧ್ಯಾಪಕರು, ಸಂಶೋಧಕರು ಹಾಗೂ ವೃತ್ತಿಪರ ಸಮಾಜಕಾರ್ಯಕರ್ತರು ಪ್ರಸ್ತುತ ``ಸಮಾಜಕಾರ್ಯ ಪುಸ್ತಕವನ್ನು ಓದಿ ಅರಿತುಕೊಂಡು ಅದರಲ್ಲಿರುವ ಜ್ಞಾನವನ್ನು ತಮ್ಮ ವೃತ್ತಿಯಲ್ಲಿ ಬಳಸುವಂತಾಗಲಿ ಎಂದು ನಾವೆಲ್ಲ ಆಶಿಸೋಣವೆ.....!

ಆತಂಕವಿಲ್ಲದ ನಿರಾತಂಕದ ರಮೇಶರೆಂದೇ ನಮ್ಮೆಲ್ಲರಿಗೂ ಚಿರ ಪರಿಚಿತರಾದ ಶ್ರೀ ರಮೇಶ ಅವರ ಕಾರ್ಯ ಈ ನಿಟ್ಟಿನಲ್ಲಿ ಶ್ಲಾಘನೀಯ. ಅವರು ನವ ಬರಹಗಾರರಿಗೆ ಉತ್ತೇಜಿಸುತ್ತಿದ್ದಾರೆ. ಅವರು ಇನ್ನೂ ಇಂತಹ ಹಲವಾರು ಸಮಾಜಕಾರ್ಯ ಪುಸ್ತಕಗಳು ಪ್ರಕಟಿಸಲಿ.
 
ಡಾ. ಬಸವರಾಜ ಲಾವಣಿ
ನಿರ್ದೇಶಕರು, ಯಶವಂತರಾವ ಚವ್ಹಾಣ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ಸ್ಟಡೀಸ್ ಅಂಡ್ ರಿಸರ್ಚ್‍, ಭಾರತಿ ವಿದ್ಯಾಪೀಠ ವಿಶ್ವವಿದ್ಯಾಲಯ, ಪುಣೆ-411038
​

ಪರಿವಿಡಿ

ಅಧ್ಯಾಯಗಳು
1. ಸಮಾಜಕಾರ್ಯ
1.1         ಪೀಠಿಕೆ 
1.2         ಆಧುನಿಕ ಸಮಾಜ
1.3         ಸಮಾಜಕಾರ್ಯ: ಅರ್ಥ ಮತ್ತು ವ್ಯಾಖ್ಯೆ
1.4         ಸಮಾಜಕಾರ್ಯದ ಸ್ವರೂಪ
1.5         ಸಮಾಜಕಾರ್ಯದ ವ್ಯಾಪ್ತಿ
1.6         ಸಮಾಜಕಾರ್ಯದ ಉದ್ದೇಶಗಳು 
1.7         ಸಮಾಜಕಾರ್ಯದ ಮೌಲ್ಯಗಳು
1.8         ಸಮಾಜಕಾರ್ಯದ ತತ್ವಗಳು
 
2. ಸಮಾಜಕಾರ್ಯ ವಿಧಾನಗಳು
2.1         ಪೀಠಿಕೆ 
2.2         ವ್ಯಕ್ತಿಗತ ಸಮಾಜಕಾರ್ಯ
2.3         ವೃಂದಗತ ಸಮಾಜಕಾರ್ಯ
2.4         ಸಮುದಾಯ ಸಂಘಟನೆ 
2.5         ಸಾಮಾಜಿಕ ಕ್ರಿಯೆ
2.6         ಸಮಾಜಕಾರ್ಯ ಸಂಶೋಧನೆ
2.7         ಸಮಾಜಕಾರ್ಯ ಆಡಳಿತ
 
3. ಸಮಾಜಕಾರ್ಯದ ಪ್ರಮುಖ ಪರಿಕಲ್ಪನೆಗಳು:
3.1         ಪೀಠಿಕೆ 
3.2         ಸಮಾಜ ಕಲ್ಯಾಣ
3.3         ಸಮಾಜ ಸೇವೆ  
3.4         ಸಮಾಜ ಸುಧಾರಣೆ
3.5         ಸಾಮಾಜಿಕ ಅಭಿವೃದ್ಧಿ
3.6         ಸಾಮಾಜಿಕ ಭದ್ರತೆ
 
4. ಸಮಾಜಕಾರ್ಯದ ಮೂಲ ಪರಿಕಲ್ಪನೆಗಳು:
4.1         ಪೀಠಿಕೆ
4.2         ಪಾತ್ರದ ಕಲ್ಪನೆ 
4.3         ಸಂಬಂಧದ ಕಲ್ಪನೆ
4.4         ಅಗತ್ಯತೆಯ ಕಲ್ಪನೆ
4.5         ಅನುಭೂತಿ ಶಕ್ತಿ 
4.6         ಅಹಂ ಶಕ್ತಿ
4.7         ಆಧ್ಯಾತ್ಮಿಕತೆ ಹಾಗು ಸಮಾಜಕಾರ್ಯ
 
5. ಸಮಾಜಕಾರ್ಯದ ಮೌಲಿಕ ಕಾರ್ಯಕ್ಷೇತ್ರಗಳು:
5.1         ಪೀಠಿಕೆ 
5.2         ಮಾನವ ಹಕ್ಕುಗಳು
5.3         ಮೂಲಭೂತ ಹಕ್ಕುಗಳು 
5.4         ನಾಗರಿಕ ಹಕ್ಕುಗಳು
5.5         ಸಾಮಾಜಿಕ ನ್ಯಾಯ
5.6         ರಾಜ್ಯನೀತಿ ನಿರ್ದೇಶಕ ತತ್ವಗಳು
 
6. ಸಮಾಜಕಾರ್ಯದ ತಾತ್ವಿಕತೆ ಹಾಗೂ ಉದ್ದೇಶಿತ ಕಾರ್ಯಗಳು:
6.1         ಪೀಠಿಕೆ 
6.2         ಸಂಪ್ರದಾಯಿಕ ತತ್ವಶಾಸ್ತ್ರ
6.3         ವೃತ್ತಿಪರ ತತ್ವಶಾಸ್ತ್ರ
6.4         ಉದ್ದೇಶಿತ ಕಾರ್ಯಚಟುವಟಿಕೆಗಳು
6.5         ಪರಿಹಾರಾತ್ಮಕ ಕಾರ್ಯಗಳು
6.6         ಸುಧಾರಣಾತ್ಮಕ ಅಥವಾ ಉತ್ತಮಪಡಿಸುವಿಕೆಯ ಕಾರ್ಯಗಳು
6.7         ಪುನರ್ವಸತಿಯ ಕಾರ್ಯಗಳು
6.8         ತಡೆಗಟ್ಟುವಿಕೆಯ ಕಾರ್ಯಗಳು
6.9         ಬೆಂಬಲಿಸುವಿಕೆಯ ಕಾರ್ಯಗಳು
6.10       ಅಭಿವೃದ್ಧಿಯ ಕಾರ್ಯಗಳು
6.11       ಉತ್ತೇಜನ ಅಥವಾ ಬಡತಿಯ ಕಾರ್ಯಗಳು
 
7. ಸಮಾಜಕಾರ್ಯ ವೃತ್ತಿ:
7.1         ಪೀಠಿಕೆ 
7.2         ವೃತ್ತಿಯ ಪ್ರಕಾರಗಳು
7.3         ವೃತ್ತಿಯ ಪ್ರಮುಖ ಲಕ್ಷಣಗಳು
7.4         ಭಾರತದಲ್ಲಿ ವೃತ್ತಿ ಸಮಾಜಕಾರ್ಯ ಶಿಕ್ಷಣ 
7.5         ಸಮಾಜಕಾರ್ಯ ವೃತ್ತಿ ಮತ್ತು ಸವಾಲುಗಳು
7.6         ವೃತ್ತಿಪರ ಸಮಾಜಕಾರ್ಯಕರ್ತರ ಗುಣಲಕ್ಷಣಗಳು
7.7         ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೃತ್ತಿ ಸಂಘಟನೆಗಳು
 
8. ಸಮಾಜಕಾರ್ಯದ ಐತಿಹಾಸಿಕ ಅಭಿವೃದ್ಧಿ:
 ಬ್ರಿಟನ್ನಲ್ಲಿ ಸಮಾಜಕಾರ್ಯ:
8.1         ಪೀಠಿಕೆ 
8.2         ರಾಷ್ಟ್ರದ ಮಧ್ಯಸ್ಥಿಕೆ
8.3         ಎಲಿಜಬೆಥ್ ಅವರ ಬಡವರ ಕಾನೂನು ಸಂಹಿತೆ
8.4         ಅನುಕಂಪದ ಸಂಘಟನಾ ಸಮಾಜ
8.5         ಬೆವೆರಿಡ್ಜ್ ವರದಿ 
 
 ಅಮೇರಿಕದಲ್ಲಿ ಸಮಾಜಕಾರ್ಯ:
8.6         ಪೀಠಿಕೆ 
8.7         ಆರಂಭಿಕ ಬಡತನದ ಪರಿಹಾರ ಕ್ರಮಗಳು
8.8         ಭಿಕ್ಷಾಗೃಹಗಳ ಅವಧಿ
8.9         ರಾಜ್ಯದ ಆಶ್ರಯದಲ್ಲಿ ಸಮಾಜಸೇವೆ
8.10       ಖಾಸಗಿ ಸಮಾಜಕಲ್ಯಾಣ ಸಂಸ್ಥೆಗಳು
8.11       ವಸಾಹತು ವಸತಿ ಆಂದೋಲನ
 
 ಭಾರತದಲ್ಲಿ ಸಮಾಜಕಾರ್ಯ:
8.12       ಪೀಠಿಕೆ 
8.13       ಭಾರತೀಯ ಸಂಸ್ಕೃತಿಯಲ್ಲಿ ಸಮಾಜ ಸೇವಾ ಸಂಪ್ರದಾಯ
8.14       ಅನುಕಂಪದ ಕಾರ್ಯಗಳಲ್ಲಿ ಧಾರ್ಮಿಕ ಬೇರುಗಳು                         
8.15       ಸಮಾಜಸೇವೆಗಳಲ್ಲಿ ಜನಾನುರಾಗತೆ, ಅವಿಭಕ್ತ ಕುಟುಂಬ ಹಾಗೂ ಜಾತಿ ಗುಂಪುಗಳ ಪಾತ್ರ
8.16       ಬ್ರಿಟಿಷರ ಕಾಲದಲ್ಲಿ ಸಮಾಜಕಾರ್ಯ
8.17       ಭಾರತದಲ್ಲಿ 19 ಮತ್ತು 20ನೇ ಶತಮಾನದಲ್ಲಾದ ಸಮಾಜ ಸುಧಾರಣಾ ಆಂದೋಲನ
8.18       ಸ್ವಾತಂತ್ರ್ಯಾನಂತರ ಭಾರತದಲ್ಲಿ ಸಮಾಜಕಲ್ಯಾಣದ ಉಗಮ ಹಾಗು ಬೆಳವಣಿಗೆ
 
9. ಭಾರತದ ಸಮಾಜಕಾರ್ಯ ಕ್ಷೇತ್ರದ ನವರತ್ನಗಳು: ಲಕ್ಷಾಂತರ ಮಂದಿಯ ಜೀವನವನ್ನು ಬದಲಾಯಿಸಿದಮಹಿಳಾ ಕಾರ್ಯಕರ್ತರು
9.1         ಡಾ. ಶಾಂತಿ ರಂಗನಾಥನ್
9.2         ಡಾ. ನಳಿನಿ ಗಂಗಾಧರನ್
 
10. ಸಮಾಜಕಾರ್ಯದ ಮಿಥ್ಯಗಳು
 
ಅನುಬಂಧಗಳು :
ಸಮಾಜಕಾರ್ಯ ವೃತ್ತಿಪರ ನೀತಿ ಸಂಹಿತೆಗಳು
Universal Declaration of Human Rights
ಉಪಯುಕ್ತ ಗ್ರಂಥ ವಿವರಣೆ  
  • Facebook
  • Twitter
  • Pinterest
  • Google+
Buy Now

SITE MAP


Site

  • HOME
  • ABOUT US
  • BLOG
  • COLLABORATE WITH NIRUTA PUBLICATIONS
  • EDITOR'S BLOG
  • HR BLOG
  • PUBLICATION WITH US
  • TRANSLATION & TYPING
  • VIDEOS

TRAINING

  • CERTIFICATE TRAINING COURSES
  • TRAINING PROGRAMMES

nIRATHANKA cLUB hOUSE

  • NIRATHANKA CLUB HOUSE

JOB

  • CURRENT JOB OPENINGS
  • FIND FREELANCE JOBS​
  • FREELANCE SPOKEN ENGLISH TRAINER
  • FREELANCE TRANSLATOR

HR SERVICES

  • ​COMPLIANCE SUPPORT
  • CONSULTING
  • CONTRACT LABOUR
  • CONTRACT LABOUR LICENCE & CONSULTING
  • DOMESTIC ENQUIRY
  • DRAFTING OF LEGAL DOCUMENTS
  • HR AND COMPLIANCE AUDIT
  • HUMAN RESOURCE PROCESS AND POLICY FORMULATION
  • ISO CERTIFICATION​
  • LEGAL ASSISTANCE
  • ORGANISATIONAL AND JOB DESIGNS
  • PAYROLL
  • RECRUITMENT & STAFFING SERVICES
  • STAFFING - WHITE & BLUE COLLAR
  • ​STANDING ORDERS CERTIFICATION
  • ​TRADEMARK

OTHER SERVICES

  • ​APARTMENT RESIDENTS WELFARE ASSOCIATION REGISTRATION
  • LICENCES AND NOCs FROM FIRE, AGRICULTURE, STATE EXCISE DEPARTMENTS
  • MSME REGISTRATION
  • ​NGO / TRUST / SOCIETY / ASSOCIATION, COOPERATIVE SOCIETY & PVT. LTD. COMPANY REGISTRATION
  • ​SHOPS & ESTABLISHMENT REGISTRATION​

NIRATHANKA

  • ​CSR
  • TREE PLANTATION PROJECT

POSH

  • OUR ASSOCIATES
  • OUR CLIENTS
  • POSH
  • POSH BLOG​
  • WANT TO BECOME AN EXTERNAL MEMBER FOR AN IC?

OUR OTHER WEBSITES

  • WWW.HRKANCON.COM
  • WWW.MHRSPL.COM
  • WWW.NIRATANKA.ORG​

Subscribe



JOIN OUR ONLINE GROUPS


JOIN WHATSAPP BROADCAST


ONLINE STORE


Copyright Niruta Publications 2021,    Website Designing & Developed by: www.mhrspl.com