Shekhar Ganagaluru
|
ಶೇಖರ್ ಗಣಗಲೂರು, ಬೆ೦ಗಳೂರು ಗ್ರಾಮಾ೦ತರ ಜಿಲ್ಲೆ, ಹೊಸಕೋಟೆ ತಾಲೂಕಿನ ಗಣಗಲೂರು ಗ್ರಾಮದವರು. ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಬೆ೦ಗಳೂರು ವಿಶ್ವವಿದ್ಯಾನಿಲಯದಿ೦ದ ಮತ್ತು ಎಲ್.ಎಲ್.ಬಿ ಯನ್ನು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಿ೦ದ ಪಡೆದು, ಪ್ರಸ್ತುತ ಬಿಯೆಸ್ಸೆ ಮ್ಯಾನುಫ್ಯಾಕ್ಚರಿ೦ಗ್ ಕ೦. ಪ್ರೈ ಲಿ., ಸ೦ಸ್ಥೆಯಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ಮಾನವ ಸ೦ಪನ್ಮೂಲ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹವ್ಯಾಸಿ ತರಬೇತಿದಾರರಾದ ಶೇಖರ್‌ರವರು ಕಾರ್ಮಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದರಲ್ಲಿ ನಿಪುಣರು. ಇವರು ತಮ್ಮ ಸಹಜ ಜೀವನ ಶೈಲಿ, ಸಕಾರಾತ್ಮಕ ಮನೋಭಾವ, ವ್ಯವಸ್ಥಿತವಾದ ಕಾರ್ಯವಿಧಾನ ಮತ್ತು ಸಂವಹನ ಕೌಶಲ್ಯಗಳಿ೦ದ ಬಹುಬೇಗ ಹತ್ತಿರವಾಗುತ್ತಾರೆ.
|
Govindaraju N.S.
|
ಲೇಖಕರು ಆಟೋಮೊಬೈಲ್, ಟೆಕ್ಸ್ ಟೈಲ್ ಮತ್ತಿತರ ಉದ್ಯಮಗಳಿಗೆ ಸ್ಪ್ರಿಂಗ್ಸ್ ಮತ್ತು ಸ್ಟಾಂಪ್ಡ್ ಬಿಡಿ ಭಾಗಗಳನ್ನು ತಯಾರಿಸುವ ಜರ್ಮನಿ ಮೂಲದ ಬಹುರಾಷ್ಟ್ರೀಯ ಕಂಪನಿ ಮೆ.ಕರ್ನ್-ಲಿಬರ್ಸ್ ಇಂಡಿಯಾ ಪ್ರೈ.ಲಿ., ತುಮಕೂರು ಇಲ್ಲಿ ಮಾನವ ಸಂಪನ್ಮೂಲ ಪ್ರಧಾನ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅಲ್ಲದೆ, ಉದ್ಯಮ ಮಾಲೀಕರ ಸಂಘವಾದ ಗ್ರೇಟರ್ ನೆಲಮಂಗಲ ಇಂಡಸ್ಟ್ರೀಸ್ ಅಸೋಸಿಯೇಷನ್ ಮತ್ತು ತುಮಕೂರು ಹೆಚ್‌ಆರ್ ಫೋರಂನ ಹಾಲಿ ಅಧ್ಯಕ್ಷರೂ ಸಹ ಆಗಿದ್ದಾರೆ.
ಲೇಖಕರು ಸಮಾಜ ಕಾರ್ಯ (MSW -ಮಾನವ ಸಂಪನ್ಮೂಲ ವಿಷಯದಲ್ಲಿ ವಿಶೇಷ ಅಭ್ಯಾಸ) ಮತ್ತು ವ್ಯವಹಾರ ಆಡಳಿತ (MBA) ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಹೊಂದಿದ್ದು, ಕಾನೂನು ವಿಷಯದಲ್ಲಿಯೂ ಸಹ (LLB) ಪದವಿ ಪಡೆದಿರುತ್ತಾರೆ. ಮಾನವ ಸಂಪನ್ಮೂಲ ವಿಭಾಗದ ವಿವಿಧ ಕೆಲಸಗಳಲ್ಲಿ ಸುಮಾರು ಎರಡು ದಶಕಗಳಿಗೂ ಹೆಚ್ಚಿನ ಕಾಲ ಕೆಲಸ ನಿರ್ವಹಿಸಿದ್ದು ಮಾನವ ಸಂಪನ್ಮೂಲ ಕಾರ್ಯಾಚರಣೆ ಮತ್ತು ವಿವಿಧ ತಂತ್ರಗಳ ಅಳವಡಿಕೆಯಲ್ಲಿ ವಿಶೇಷ ಪರಿಣಿತಿ ಹೊಂದಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಲೇಖಕರು ಟೆಕ್ಸ್ ಟೈಲ್, ಆಹಾರೋತ್ಪನ್ನಗಳು, ಔಷಧಿಗಳು, ಇಂಜಿನಿಯರಿಂಗ್ ಇತ್ಯಾದಿ ಉತ್ಪನ್ನಗಳನ್ನು ತಯಾರಿಸುವ ಭಾರತೀಯ ಮತ್ತು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡಿರುತ್ತಾರೆ. ಅಲ್ಲದೆ, ಜೈವಿಕ ತಂತ್ರಜ್ಞಾನದ ಯಂತ್ರೋಪಕರಣಗಳ ತಯಾರಿಕೆಯಲ್ಲಿ ಮಂಚೂಣಿಯಲ್ಲಿರುವ ಜರ್ಮನಿ ಮೂಲದ ಮತ್ತೊಂದು ಬಹುರಾಷ್ಟ್ರೀಯ ಕಂಪನಿ ಮೆ.ಸಾರ್ಟೋರಿಯಸ್ ಸ್ಟೆಡಿಂ ಇಂಡಿಯಾ ಪ್ರೈ.ಲಿ., ನೆಲಮಂಗಲ ಇಲ್ಲಿ ಮಾನವ ಸಂಪನ್ಮೂಲ ನಿರ್ದೇಶಕರಾಗಿ ಸುಮಾರು ಏಳು ವರ್ಷಗಳಿಗಿಂತಲೂ ಹೆಚ್ಚಿನ ಕಾಲ ಕೆಲಸ ನಿರ್ವಹಿಸಿದ್ದಾರೆ. ಮಾನವ ಸಂಪನ್ಮೂಲ ಅಭಿವೃದ್ಧಿ, ತರಬೇತಿ ಮತ್ತಿತರ ವಿಷಯಗಳ ಬಗ್ಗೆ ಚರ್ಚಿಸಲು ಏಷಿಯಾ ಹಾಗೂ ಐರೋಪ್ಯ ದೇಶಗಳಿಗೆ ಸಾಕಷ್ಟು ಸಲ ಭೇಟಿ ನೀಡಿದ್ದಾರೆ. ತಮ್ಮ ಇಲ್ಲಿಯವರೆಗಿನ ಅನುಭವದಲ್ಲಿ ಉದ್ಯಮ ಸ್ಥಾಪನೆ, ಬದಲಾವಣೆಗಳ ನಿರ್ವಹಣೆ, ನೀತಿ ರೂಪಣೆ, ನಾಯಕತ್ವ ಅಭಿವೃದ್ಧಿ, ನೇಮಕಾತಿ ಪ್ರಕ್ರಿಯೆ, ಕಾರ್ಮಿಕ ಬಾಂಧವ್ಯಗಳು, ಪ್ರತಿಭೆಗಳ ನಿರ್ವಹಣೆ ಮುಂತಾದ ವಿಚಾರಗಳ ಮೇಲೆ ಕೆಲಸ ಮಾಡಿದ್ದಾರೆ. ಅಲ್ಲದೆ, ನೇಮಕಾತಿ ಮತ್ತು ಅಭಿವೃದ್ಧಿಯ ವಿಷಯಗಳಲ್ಲಿ ವಿಶೇಷವಾಗಿ ಉಪಯೋಗಿಸುವ ಸಾಧನವಾದ ಕ್ಯುಬಿಕ್ಸ್ ಪರ್ಸನಾಲಿಟಿ ಮತ್ತು ಪ್ರಿಪರೆನ್ಸ್ ಇನ್ವೆಂಟರಿ (PAPI) ಇದರ ಬಳಕೆಯಲ್ಲಿ ವಿಶೇಷ ತರಬೇತಿಯನ್ನು ಪಡೆದಿದ್ದಾರೆ ಹಾಗೂ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್‌ಮೆಂಟ್‌ನ ಆಜೀವ ಸದಸ್ಯರೂ ಆಗಿದ್ದಾರೆ. |
Dr. Narayanappa T.V.
|
Dr. Narayanappa T.V., is from farmer's family from Mulbagal of Kolar Dis. He joined the Department of Factories and Boilers, Govt of Karnataka in the Year 1995 as Inspector of Factories. He has been serving in the department in the various positions and presently working as Deputy Director of Factories, Bengaluru. Prior to this, he was associated with M/s National Aerospace Laboratories, Bengaluru during year 1994 – 1995 as scientist and involved in Flight Mechanics and Controls, Commissioning and testing of Low Speed Wind Tunnel, and Testing of Scaled Aerodynamic Models. He also served for 7 years (1987-1994) in M/s Hindustan Aeronautics Ltd., Bengaluru and involved in Design and Development of Advanced Light Helicopter (ALH) Components, CAD, Development of Casting drawings, etc.
Academic Profile: He was awarded Doctor of Philosophy (Ph.D) in the faculty of Mechanical Engineering Science from V.T.U, Belagavi for the thesis of “A Study of Safety Climate and Safety Engineering Systems in Major Hazardous Industries (MHI's) in Karnataka” through JSSATE, Bengaluru in March 2019. Acquired Master of Engineering in Mechanical Machine Design, in the year 1994 and Bachelor of Engineering in Mechanical Engineering from BMS College of Engineering, Bangalore University in the year 1992. Areas of Expertise: Research on Industrial Safety, Safety Climate, Safety Culture, Implementation of BBS in Industries, Organising seminars and workshops to train Industrial workers, management personnel on safety and health. Conducting safety audits, Hazop study and Risk assessment in Chemical Industries. He is instrumental in developing a measuring instrument to measure safety climate in MAH factories. |
Dr. C.R. Gopal
|
ಡಾ. ಸಿ.ಆರ್. ಗೋಪಾಲ್ ರವರು 1-1-1953 ರಂದು ಜನಿಸಿದರು. ಶ್ರೀಯುತರು ಎಂ.ಎ., ಎಂ.ಎಸ್.ಡಬ್ಲ್ಯೂ., ಡಿ.ಆರ್.ಎಸ್.ಎಲ್., ಪಿಜಿ, ಡಿಬಿಎ, ಪಿಹೆಚ್‌ಡಿ ಪದವಿಗಳನ್ನು ಪಡೆದಿದ್ದಾರೆ. ಇವರು ಒಂದು ವರ್ಷದ ಬೋಧನೆ, 33 ವರ್ಷಗಳ ಮಾನವ ಸಂಪನ್ಮೂಲ ಹಾಗೂ ಆಡಳಿತ ಇಲಾಖೆಗಳಲ್ಲಿ ಕೆಲಸದ ಅನುಭವವನ್ನು ಹೊಂದಿದ್ದಾರೆ. ಶ್ರೀಯುತರು ಇದುವರೆಗೂ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಸುಮಾರು ವರ್ಷಗಳಿಂದ ಸಮಾಜಕಾರ್ಯದ ಹೆಜ್ಜೆಗಳು ತ್ರೈಮಾಸಿಕ ಪತ್ರಿಕೆಯ ಸಂಪಾದಕ ಸಮಿತಿಯ ಸದಸ್ಯರಾಗಿದ್ದಾರೆ.
|
Gangadhara Reddy N.
|
ಶ್ರೀಮತಿ ಲಕ್ಷ್ಮಮ್ಮ ಮತ್ತು ಶ್ರೀಯುತ ನಾರಾಯಣಸ್ವಾಮಿ ದಂಪತಿಗಳ ದ್ವಿತೀಯ ಪುತ್ರರಾದ ಗಂಗಾಧರ ರೆಡ್ಡಿ ಎನ್ ರವರು ಚಿಕ್ಕಬಳ್ಳಾಪುರ ಜಿಲ್ಲೆಯ ಚಲಕಾಯಲಪರ್ತಿ ಎಂಬ ಪುಟ್ಟ ಗ್ರಾಮದ ಕೃಷಿಕ ಕುಟುಂಬದಲ್ಲಿ ಜನಿಸಿದರು. ಸ್ಥಳೀಯ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಶಾಲೆ ಹಾಗೂ ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಿ, ಸಮಾಜಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಹಾಗೂ ಎಂ.ಫಿಲ್ ಪದವಿಗಳನ್ನು ಕ್ರಮವಾಗಿ ಬೆಂಗಳೂರು ಹಾಗೂ ಪಾಂಡಿಚೇರಿ ವಿಶ್ವವಿದ್ಯಾಲಯಗಳಿಂದ ಪಡೆದರು. ತದನಂತರ ಮಕ್ಕಳ ಹಕ್ಕುಗಳ ಸಂರಕ್ಷಣಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತದ ಹೆಸರಾಂತ ಸಂಸ್ಥೆ ಹಾಗೂ ಜಾಲ (ನೆಟ್‌ವರ್ಕ್) ಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಪಡೆದಿದ್ದಾರೆ. ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದಲ್ಲಿ ಪೂರ್ಣಕಾಲಿಕ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಸರ ಹಾಗೂ ಜೀವವೈವಿಧ್ಯತೆ ಸಂರಕ್ಷಣಾ ಕ್ಷೇತ್ರದಲ್ಲಿ ವಿಶೇಷ ಆಸಕ್ತಿಯುಳ್ಳ ಶ್ರೀಯುತರು ತಮ್ಮ ವಿದ್ಯಾರ್ಥಿಗಳ ಸಹಕಾರದೊಂದಿಗೆ ಉಸಿರಿಗಾಗಿ ಹಸಿರು ಎಂಬ ಸ್ವಯಂ-ಸೇವಾ ಸಂಸ್ಥೆಯನ್ನು ಹುಟ್ಟುಹಾಕಿ, ಕರ್ನಾಟಕ ರಾಜ್ಯದ ಬಯಲುಸೀಮೆಯ ಜಿಲ್ಲೆಗಳಲ್ಲಿ ಹಸಿರನ್ನು ಪಸರಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಬಯಲುಸೀಮೆಯ ವಿವಿಧ ಶಾಲೆ-ಕಾಲೇಜುಗಳ ಆವರಣ ಮತ್ತು ಸರ್ಕಾರಿ ಜಮೀನುಗಳಲ್ಲಿ ಸುಮಾರು 20,000ಕ್ಕೂ ಅಧಿಕ ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.
ಮೂಲತಃ ಕೃಷಿಕರಾಗಿರುವ ಶ್ರೀಯುತರು ವ್ಯವಸಾಯದ ಜೀವಾಳ ಅಂತರ್ಜಲಕ್ಕೆ ಮಾರಕವಾಗಿರುವ ನೀಲಗಿರಿ ಮರಗಳ ಬೆಳವಣಿಗೆಯ ವಿರುದ್ಧ ಬಯಲುಸೀಮೆಯ ಜಿಲ್ಲೆಗಳಲ್ಲಿ ಜನಾಂದೋಲನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಬೋಧಿಸುವುದರೊಂದಿಗೆ ಸಮಾಜಕಾರ್ಯವನ್ನು ನಿಜ ಜೀವನದಲ್ಲಿ ಆಚರಿಸುತ್ತಿರುವ ಕೆಲವೇ ಪ್ರಶಿಕ್ಷಕರಲ್ಲಿ ಶ್ರೀಯುತರೂ ಒಬ್ಬರು. ಸಾವಯವ ಕೈತೋಟ, ಪ್ಲಾಸ್ಟಿಕ್ ಮುಕ್ತ ಜೀವನ ಶೈಲಿ ಹಾಗೂ ಹಸಿರು ಆಚರಣೆ ಮುಂತಾದ ವಿಭಿನ್ನ ಪರಿಕಲ್ಪನೆಗಳನ್ನು ಆಚರಣೆಗೆ ತಂದು ಈ ಮೂಲಕ ಆರೋಗ್ಯಕರ ಜೀವನ ಶೈಲಿಯನ್ನು ರೂಪಿಸಿಕೊಳ್ಳಲು ಯುವಜನರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. |
Prof. H.M. Marulasiddaiah
|
ಡಾ. ಎಚ್.ಎಂ. ಮರುಳಸಿದ್ಧಯ್ಯ ಅವರು ಸಮಾಜಶಾಸ್ತ್ರ (ಮೈಸೂರು ವಿ.ವಿ.) ಮತ್ತು ಸಮಾಜಕಾರ್ಯ (ದಿಲ್ಲಿ ವಿಶ್ವವಿದ್ಯಾಲಯ) ಎಂ.ಎ. ಪದವಿ ಪಡೆದಿರುವುದಲ್ಲದೆ ಸಮಾಜ ಕಾರ್ಯದಲ್ಲಿ (ವಾರಣಾಸಿಯ ಮಹಾತ್ಮಾಗಾಂಧೀ ಕಾಶೀ ವಿದ್ಯಾಪೀಠ ವಿಶ್ವವಿದ್ಯಾಲಯದಿಂದ) ಡಾಕ್ಟರೇಟ್ ಗಳಿಸಿದ್ದಾರೆ. ಸಮಾಜಕಾರ್ಯ, ಸಮಾಜಶಾಸ್ತ್ರ ಮತ್ತು ಮಾನವಶಾಸ್ತ್ರ ಇವುಗಳ (ಮದ್ರಾಸ್, ಕರ್ನಾಟಕ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ) ಅಧ್ಯಾಪನ ಮಾಡಿದ್ದಲ್ಲದೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ತಮ್ಮ ಬೋಧನೆಯ ವೃತ್ತಿಯಿಂದ 1994ರಲ್ಲಿ ನಿವೃತ್ತರಾದರು. ಪ್ರಾಚ್ಯ-ಪಾಶ್ಚಾತ್ಯ ರಾಷ್ಟ್ರಗಳಲ್ಲಿ (ಶ್ರೀಲಂಕಾ, ಅಮೆರಿಕ, ಕೆನಡಾ, ಇಂಗ್ಲೆಂಡ್, ಸ್ವೀಡನ್ ಮತ್ತು ಇಸ್ರೇಲ್) ವಿಶ್ವವಿದ್ಯಾಲಯಗಳ ಆಹ್ವಾನಿತ ಉಪನ್ಯಾಸಕರಾಗಿ, ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಂಪ್ರಬಂಧನ ಮಂಡನಕಾರರಾಗಿ ಭಾಗವಹಿಸಿದ್ದಾರೆ. ಈಜಿಪ್ಟಿನಲ್ಲೂ ಪ್ರವಾಸ ಮಾಡಿದ್ದಾರೆ. ಇಂಗ್ಲಿಷ್ ಮತ್ತು ಕನ್ನಡ ಎರಡು ಭಾಷೆಗಳಲ್ಲೂ (ಸೃಜನಾತ್ಮಕ, ಸಮಾಜಶಾಸ್ತ್ರ ಮತ್ತು ಸಮಾಜಕಾರ್ಯಗಳಲ್ಲಿ ಅನುವಾದಿತ ಮತ್ತು ಸಂಪಾದಿತ ಕೃತಿಗಳು ಸೇರಿದಂತೆ) ಸುಮಾರು ಐವತ್ತು ಕೃತಿಗಳನ್ನು ಹೊರತಂದಿದ್ದಾರೆ. ಇವರಿಗೆ ಡಿ.ಪಿ. ಮುಖರ್ಜಿ ಫೆಲೊಷಿಪ್ ಹಿರಿಯಣ್ಣ ಗೋಲ್ಡ್ಮೆಡಲ್ ನೀಡಲಾಗಿದೆ. ಜಗಳೂರಿನ ನಾಲಂದ ಶಿಕ್ಷಣ ಸಂಸ್ಥೆಯವರು ನೀಡುವ ಡಾ. ತಿಪ್ಪೇಸ್ವಾಮಿ ಪುರಸ್ಕಾರಕ್ಕೆ ಮೊದಲನೆಯವರಾಗಿದ್ದಾರೆ.
ಸಹಸ್ರಾರು ವಿದ್ಯಾರ್ಥಿ ಮಿತ್ರ ಬಳಗವನ್ನು ಹೊಂದಿರುವ ಡಾ. ಮರುಳಸಿದ್ಧಯ್ಯನವರು `ಸಮಾಜಕಾರ್ಯದ ಹೆಜ್ಜೆಗಳು’ ಮಾಸಪತ್ರಿಕೆಯ ಮುಖ್ಯ ಸಲಹೆಗಾರರು ಹಾಗೂ ಮಾರ್ಗದರ್ಶಕರು. ತಮ್ಮ ಅಮೂಲ್ಯ ಕೊಡುಗೆಯನ್ನು ಸಮಾಜಕಾರ್ಯ ಕ್ಷೇತ್ರಕ್ಕೆ ನೀಡಿದ್ದಾರೆ, ನೀಡುತ್ತಿದ್ದಾರೆ. ಕರ್ನಾಟಕದಲ್ಲಿ, ಮೊಟ್ಟ ಮೊದಲ ಬಾರಿಗೆ, ವಿಶ್ವವಿದ್ಯಾಲಯಗಳಲ್ಲಿ ಸಮಾಜಕಾರ್ಯ ಪ್ರಶಿಕ್ಷಣವನ್ನು ಸ್ನಾತಕೋತ್ತರ ಮಟ್ಟದಲ್ಲಿ ಆರಂಭ ಮಾಡುವ (ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 1964ರಲ್ಲಿ) ಉಪಕ್ರಮದಲ್ಲಿ ಪ್ರಧಾನ ಪಾತ್ರ ವಹಿಸಿದರು ; ಸ್ವಸ್ತಿ ಸ್ವಯಂ ಸೇವಾ ಸಂಸ್ಥೆಯನ್ನು ಆರಂಭಿಸಿ, ಕೆಲವು ಕ್ರಾಂತಿಕಾರಕ ಕ್ರಮಗಳಿಗೆ ಕಾರಣಕರ್ತರಾದರು ; ಸ್ವೀಡನ್ನಿನ ಮಿಡ್‌ಸ್ವೀಡನ್ ಮತ್ತು ಉಮ್ಯೋ ವಿಶ್ವವಿದ್ಯಾಲಯಗಳ ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳಿಗೆ ಭಾರತದಲ್ಲಿ ಕ್ಷೇತ್ರಕಾರ್ಯದ ಮಾರ್ಗದರ್ಶಿಯಾಗಿ ಅಂತಾರಾಷ್ಟ್ರೀಯ ಸಮಾಜಕಾರ್ಯಕ್ಕೆ ಪುಷ್ಟಿಯನ್ನು ನೀಡಿದರು ; `ನಿರ್ಮಲ ಕರ್ನಾಟಕ’ಅಭ್ಯುದಯ ಪ್ರಾಯೋಜನೆಯನ್ನು ರೂಪಿಸಿದರು (ಇದನ್ನು ಕರ್ನಾಟಕ ಸರಕಾರವು ತನ್ನ ಅಧಿಕೃತ ಕಾರ್ಯಕ್ರಮವಾಗಿ ಅನುಷ್ಠಾನಕ್ಕೆ ತಂದಿತು-1995-96) ; ಕನ್ನಡದಲ್ಲಿ ಸಮಾಜಕಾರ್ಯ ಸಾಹಿತ್ಯ ನಿರ್ಮಿಸುವಲ್ಲಿ ಮೊದಲಿಗರಾದರು. |
Shankar Pathak
|
Shankar Pathak is a retired Professor of Social Work, Delhi University. He studied at Karnataka and Lucknow Universities with economics as a major subject, and also political science, sociology and social anthropology. He obtained the post-graduate diploma in social work at the Tata Institute of Social Sciences and M.A. at the Indiana University, U.S.A. He has widely read in social sciences and social work, and uses this knowledge in all his writings. He has authored six books on social work and contributed articles to the Encyclopedia of Social Work in India (1966 and 1987) and to several anthologies on social work. He is a founder member of I.A.T.S.W., its first President of the Delhi Branch and Editor of its quarterly journal-Social Work Forum (1969-71).
He was U.N.ECAFE (now ESCAP) Senior Lecturer at the Philippine School of Social Work, Manila and the International Association of Schools of Social Work Consultant on Family Planning, at the Faculty of Social Administration, Thammasat University, Bangkok, during 1973-74. |
Ram K. Navarathna
|
ಶ್ರೀಯುತ ರಾಮ್ ಕೆ ನವರತ್ನ, ಮಾನವ ಸಂಪನ್ಮೂಲ ವೃತ್ತಿ ನಿರತರು ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವಿಯ ಜೊತೆಗೆ ಕಾನೂನು ಮತ್ತು ಡಿಪ್ಲೂಮಾ ಇನ್ ಟ್ರೈನಿಂಗ್ ಡೆವಲಪ್‌ಮೆಂಟ್ ಮತ್ತು ಡಿಪ್ಲೂಮಾ ಇನ್ ಪರಸೊನೆಲ್ ಮ್ಯಾನೆಜ್‌ಮೆಂಟ್ ಅಂಡ್ ಇಂಡಸ್ಟ್ರಿಯಲ್ ರಿಲೆಶನ್ಸ್ ಪಡೆದು ಎರಡು ದಶಕಕ್ಕು ಹೆಚ್ಚಿನ ಸೇವೆಯನ್ನು ಅನೇಕಾನೇಕ ಕೈಗಾರಿಕಾ ಉದ್ದಿಮೆಗಳ ಹಿರಿಯ ಹುದ್ದೆಗಳಲ್ಲಿ ಸೇವೆಯನ್ನು ಸಲ್ಲಿಸಿ ಎಲ್ಲರ ಪರ ಕಾಳಜಿಯನ್ನು ಹೊಂದಿದ್ದಾರೆ.
ವೃತ್ತಿ ನಿರತರಿಗೆ ಅನೇಕ ಇಂಗ್ಲೀಷ್ ಸಾಹಿತ್ಯ ಇದ್ದರೂ ಕೂಡ ಸಾಮಾನ್ಯ ಕೈಗಾರಿಕೆ, ಸೇವಾ ನಿರತ / ಕಟ್ಟಡ ನಿರ್ಮಾಣ / ಅಸಂಘಟಿತ ಕಾರ್ಮಿಕರಿಗೆ ಹಾಗೂ ಕಾನೂನು ಮತ್ತು ಆಡಳಿತದ ವೃತ್ತಿ ನಿರತರಿಗೆ ಕನ್ನಡ ಭಾಷೆಯಲ್ಲಿ ಸುಲಭ ಸರಳ ರೀತಿಯಲ್ಲಿ ಅವರಿಗೆ ಅನ್ವಯಿಸುವ ಕನ್ನಡ ಎಚ್‌ಆರ್‌ಡಿ ಹಾಗೂ ಉಪಯೋಗದ ಬಗ್ಗೆ ಅರಿವು ಮೂಡಿಸುವಂತಹ ಕೃತಿಯನ್ನು ರಚಿಸಿದ್ದಾರೆ. |
M. Basavanna
|
ಡಾ. ಎಂ. ಬಸವಣ್ಣನವರು ಚಾಮರಾಜನಗರ ಜಿಲ್ಲೆಯ ಮಂಗಲ ಗ್ರಾಮದವರು; ಜನಿಸಿದ್ದು 1933 ರಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಪ್ರಾಯೋಗಿಕ ಮನೋವಿಜ್ಞಾನದಲ್ಲಿ ಬಿ.ಎಸ್ಸಿ (ಆನರ್ಸ್) ಮತ್ತು ಎಂ.ಎ., ಬೆಂಗಳೂರಿನ ನಿಮ್ಹಾನ್ಸ್ನಿಂದ ಚಿಕಿತ್ಸಾ ಮನೋವಿಜ್ಞಾನದಲ್ಲಿ ಡಿ.ಎಂ.ಪಿ., ಮತ್ತು ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿಗಳನ್ನು ಪಡೆದರು. ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ 35 ವರ್ಷಗಳು ಸೇವೆ ಸಲ್ಲಿಸಿ, 1993 ರಲ್ಲಿ ನಿವೃತ್ತರಾದರು. ಅಧ್ಯಾಪಕ ವೃತ್ತಿಯನ್ನು ಅಪಾರವಾಗಿ ಪ್ರೀತಿಸುವ ಬಸವಣ್ಣನವರಿಗೆ ದೇಶಾದ್ಯಂತ ಶಿಷ್ಯರ ದೊಡ್ಡ ಬಳಗವಿದೆ. ವ್ಯಕ್ತಿತ್ವ ವಿಕಾಸ, ಆಪ್ತ ಸಮಾಲೋಚನೆ, ಮತ್ತು ಮನಶ್ಶಾಸ್ತçದ ಇತಿಹಾಸದ ಬಗ್ಗೆ ಇವರಿಗೆ ವಿಶೇಷ ಆಸಕ್ತಿ. ದೇಶದ ಉದ್ದಗಲಕ್ಕೂ ಸಂಚರಿಸಿ, ಮನೋವಿಜ್ಞಾನದ ಹಲವಾರು ವಿಷಯಗಳ ಬಗ್ಗೆ ಉಪನ್ಯಾಸಗಳನ್ನು ನೀಡಿದ್ದಾರೆ, ಕಮ್ಮಟಗಳನ್ನು ನಡೆಸಿದ್ದಾರೆ, ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಇವರ ಸಂಶೋಧನಾ ಲೇಖನಗಳು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕರ್ನಾಟಕ, ಬೆಂಗಳೂರು, ಗುಲಬರ್ಗಾ, ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಫಕರಾಗಿ ಕಾರ್ಯನಿರ್ವಹಿಸಿದ್ದಾರೆ. ದೇಶದ ಪ್ರಮುಖ ವಿಶ್ವವಿದ್ಯಾಲಯಗಳೊಡನೆ ಒಂದಲ್ಲ ಒಂದು ಬಗೆಯಲ್ಲಿ ಸಂಪರ್ಕ ಹೊಂದಿದ್ದಾರೆ. ಇಂಗ್ಲಿಷ್ ಮತ್ತು ಕನ್ನಡದಲ್ಲಿ ಗ್ರಂಥ ರಚನೆ ಮಾಡಿದ್ದಾರೆ.
|
Narasimham Rayadurgam
|
R. Narasimham, born in Irala village , Chittoor District, Andhra Pradesh and a post graduate in Social Work from Madras School of Social Work (1963 – 65) has been providing vocational counseling, vocational training and rehabilitation to persons with all categories of disabilities since January 1968. Retired as Joint Director from the Ministry of Labour, he supervised the Vocational Rehabilitation Centres for the Handicapped (VRCs) in India. Worked all over India. He is a pioneer in vocational rehabilitation in India and introduced several innovative rehabilitation programs for the benefit of pwd. As supervisor for the Vocational Rehabilitation Centres for Handicapped in the Country, he streamlined the functioning of the VRCs by designing a Manual of Procedures and also developed “Signs for Tools” for use in training the deaf in vocational trades. Would have seen over 50,000 persons and helped over 15000-20000 in wage paid or self-employment besides providing guidance to the rest.
He was in charge of service delivery in the beginning and was later involved in developing schemes, policy, budgeting, inter-ministerial interaction and participation in all govt. and Non govt. institutes for developing and designing schemes. He has been teaching trainees in several courses of RCI and Schools of Social Work. Guided future professionals from Certificate level to post graduate and doctorate level in the field through teaching and mentoring. He had his training in Rehabilitation of the Deaf at Hotsprings Rehabilitation Center, Hotsprings, Arkansas, USA (1969) and Computer Application in Management of Vocational Training Institutions at the Advanced Training Center, International Labour Organization at Turin, Italy and Paris, France.(1988). He was decorated with the National Award by the President of India for his services to the disabled in 1983 and by the Lions Clubs and Rotary and other service Clubs on several occasions. Included in “Contemporary Who is Who” brought out by American Biographical Institute, USA in 2003 for outstanding contribution to the disabled, and Received the Lifetime Achievement Award from International Biographical Institute, U.K. in 2004. He was awarded for exemplary service as Best Rehabilitation Consultant by Tamilnadu Dr. MGR Medical University, Chennai (2012). A consultant on the Rehabilitation Council of India (RCI) for manpower development is now nominated as Chairman of the Committee constituted by RCI for developing courses on Vocational Rehabilitation, Rehabilitation Social Work and other placement, counseling activities. He was involved in developing course for M.A. in Disability Studies, Diploma in Vocational Rehabilitation (Mentally Retarded) and designed Diploma course in Vocational Rehabilitation (Cross Disabilities) for RCI. He is also a Member of National Board of Examinations in Rehabilitation constituted by the Govt. of India and a Life Member of Professional Social Worker's Association. His expertise is being used by several NGOs and government departments for streamlining, improving, evaluating and designing innovative ways of service delivery system and livelihood programs for the disadvantaged. |
Ramesha M.H.
|
ಸಮಾಜಕಾರ್ಯ ಕ್ಷೇತ್ರದಲ್ಲಿ ಅಪೂರ್ವ ಬದ್ಧತೆ ಹೊಂದಿರುವ ಸಾಮಾನ್ಯ ಯುವಕ ಎಂ.ಎಚ್. ರಮೇಶ. ಇವರು ೨೦೦೪ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಸಮಾಜಕಾರ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಕಳೆದ ಒಂದು ದಶಕದಲ್ಲಿ ಸಮಾಜಕಾರ್ಯ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆ ಅಪಾರ. ಇವರು ಆರಂಭಿಸಿದ “ನಿರುತ ಪ್ರಕಾಶನ”ಸಂಸ್ಥೆ ಸಮಾಜಕಾರ್ಯ ಸಾಹಿತ್ಯ ಕ್ಷೇತ್ರದಲ್ಲಿ ಮೈಲಿಗಲ್ಲನ್ನು ಸೃಷ್ಟಿಸಿದೆ. ಕಳೆದ ದಶಕದಲ್ಲಿ ಸಮಾಜಕಾರ್ಯ ವಿಷಯಕ್ಕೆ ಸಂಬಂಧಿಸಿದ ಸುಮಾರು 75ಕ್ಕೂ ಅಧಿಕ ಪುಸ್ತಕಗಳನ್ನು ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಪ್ರಕಟಿಸಿದ ಭಾರತದ ಏಕೈಕ ಪ್ರಕಾಶನಾಲಯ ಎಂದರೆ ಅತಿಶಯೋಕ್ತಿಯಾಗದು. ಇವರು 2007ರಲ್ಲಿ “ನಿರಾತಂಕ” ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ, ಸಮಾಜಕಾರ್ಯವನ್ನು ಪ್ರಾಯೋಗಿಕವಾಗಿ ಆಚರಿಸುತ್ತಿದ್ದಾರೆ. ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಹೊರಬರುತ್ತಿರುವ “ಸಮಾಜಕಾರ್ಯದ ಹೆಜ್ಜೆಗಳು” ಎಂಬ ತ್ರೈಮಾಸಿಕ ಪತ್ರಿಕೆ ಇವರ ಕನಸಿನ ಕೂಸು.
|
Dr. Lokesh M.U.
|
ಡಾ. ಲೋಕೇಶ್ ಎಮ್ ಯು ರವರು ಕರ್ನಾಟಕ ರಾಜ್ಯದ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಸಮಾಜಕಾರ್ಯ ಹಾಗೂ ಡಾಕ್ಟರೇಟ್ ಪದವಿಯನ್ನು ಪಡೆದಿರುತ್ತಾರೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ಶ್ರೀಯುತರು ತದನಂತರ ಕರಾವಳಿಯ ಹೆಸರಾಂತ ಶಿಕ್ಷಣ ಸಂಸ್ಥೆಯಾದ ಉಜಿರೆಯ SDM ಮಹಾವಿದ್ಯಾಲಯದಲ್ಲಿ ಪೂರ್ಣಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. 2010 ರಲ್ಲಿ ತುಮಕೂರು ವಿಶ್ವವಿದ್ಯಾಲಯಕ್ಕೆ ಸಹಾಯಕ ಪ್ರಾಧ್ಯಾಪಕನಾಗಿ ಆಯ್ಕೆಯಾಗುವುದರ ಮೂಲಕ ಸರ್ಕಾರಿ ಸೇವೆಯಲ್ಲಿ ತಮ್ಮ ವೃತ್ತಿ ಬದುಕನ್ನು ಪ್ರಾರಂಭಿಸಿದರು. ಉಪನ್ಯಾಸದ ಜೊತೆಜೊತೆಗೆ ವಿಶ್ವವಿದ್ಯಾಲಯದ ಹಲವಾರು ಆಡಳಿತಾತ್ಮಕ ಕ್ಷೇತ್ರಗಳಲ್ಲಿಯೂ ಸೇವೆ ಸಲ್ಲಿಸಿದ ಅನುಭವ ಪಡೆದಿದ್ದಾರೆ. ಪ್ರಸ್ತುತ ಶ್ರೀಯುತರು ದಾವಣಗೆರೆ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗಕ್ಕೆ ಸಹ ಪ್ರಾಧ್ಯಾಪಕರಾಗಿ ಆಯ್ಕೆಯಾಗುವುದರ ಮೂಲಕ ವೃತ್ತಿ ಜೀವನದ ಪದೋನ್ನತ್ತಿಯನ್ನು ಪಡೆದು ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಉಪನ್ಯಾಸಕ ವೃತ್ತಿ ಬದುಕಿನಲ್ಲಿ ಮತ್ತು ಅಧ್ಯಯನದಲ್ಲಿ ಅಪಾರ ಅನಭವ ಹೊಂದಿರುವ ಶ್ರೀಯುತರು ತಮ್ಮ ಸೇವಾ ಕ್ಷೇತ್ರದಲ್ಲಿ ಹಲವಾರು ಅಂತರಾಷ್ಟ್ರೀಯ ರಾಜ್ಯಮಟ್ಟದ ವಿಚಾರ ಸಂಕೀರ್ಣ ಹಾಗೂ ಕಾರ್ಯಗಾರಗಳನ್ನು ಯಶಸ್ವಿಯಾಗಿ ಆಯೋಜಿಸಿರುತ್ತಾರೆ. ಹಾಗೆಯೇ ಉತ್ತಮ ಸಂಶೋಧನಾರ್ಥಿಯಾಗಿರುವ ಶ್ರೀಯುತರು ಹಲವಾರು ಪ್ರತಿಷ್ಠಿತ ಅಂತರಾಷ್ಟ್ರೀಯ, ರಾಷ್ಟ್ರೀಯ ಹಾಗೂ ವಿಶ್ವವಿದ್ಯಾಲಯಗಳ ಧನ ಆಯೋಗ ಅನುಮೋದಿತ ನಿಯತಕಾಲಿಕೆಗಳಲ್ಲಿ ಸರಿಸುಮಾರು 50ಕ್ಕೂ ಹೆಚ್ಚು ಸಂಶೋಧನಾ ಪತ್ರಿಕೆಗಳನ್ನು ಪ್ರಕಟಿಸುವ ಮೂಲಕ ಸಮಾಜಕಾರ್ಯ, ಸಾಹಿತ್ಯ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿರುತ್ತಾರೆ. ಸುಮಾರು 25 ಕ್ಕೂ ಹೆಚ್ಚು ಪುಸ್ತಕಗಳಲ್ಲಿ ತಮ್ಮ ಲೇಖನಗಳನ್ನು ಪ್ರಕಟಿಸುವುದರ ಜೊತೆಗೆ ಪ್ರಧಾನ ಸಂಪಾದಕರಾಗಿ 6 ಗ್ರಂಥಗಳನ್ನು ಪ್ರಕಟಿಸಿರುತ್ತಾರೆ. ಶ್ರೀಯುತರು ಆಡಳಿತಾತ್ಮಕ ಸೇವೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಸೇವೆಯನ್ನು ಗುರುತಿಸಿ ಸಾವಿತ್ರಿ ಬಾ ಪುಲೆ ರಾಜ್ಯ ಪ್ರಶಸ್ತಿ ಹಾಗೂ ಬಸವ ಶ್ರೀ ರಾಜ್ಯ ಪ್ರಶಸ್ತಿಗಳು ಸಂದಿವೆ. |
Prof. K. Byrappa
|
ಪ್ರೊ|| ಕೆ. ಭೈರಪ್ಪ ಎಂ.ಎ. ತುಮಕೂರು ಜಿಲ್ಲೆ, ತುರುವೇಕೆರೆ ತಾಲ್ಲೋಕು, ಮಾಯಸಂದ್ರ ಹೋಬಳಿ, ವಿಠಲಾಪುರ ಗ್ರಾಮದಲ್ಲಿ 1947ರಲ್ಲಿ ಜನಿಸಿದವರು. ಸಮಾಜಶಾಸ್ತ್ರ ಉಪನ್ಯಾಸಕರಾಗಿ, ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ, ಕ್ರಿಯಾಶೀಲ ಹಾಗೂ ಆದರ್ಶ ಪ್ರಾಂಶುಪಾಲರಾಗಿ ಮೂರುವರೆ ದಶಕಗಳ ಸುದೀರ್ಘ ಅವಧಿ ಸತತವಾಗಿ ಸೇವೆ ಸಲ್ಲಿಸಿ, ವಿಷಯ ಪಾಂಡಿತ್ಯ, ಬೋಧನಾ ಸಾಮರ್ಥ್ಯ ಹಾಗೂ ಬರವಣಿಗೆಯಲ್ಲಿ ಸಾಕಷ್ಟು ಹೆಸರು ಮಾಡಿರುವವರು. ಸಾಕ್ಷರತಾ ಆಂದೋಲನ, ಕನ್ನಡ ಸಾಹಿತ್ಯ ಪರಿಷತ್‌ಗಳಲ್ಲಿ ಸ್ವಯಂಸೇವಾ ಭಾವನೆಯಿಂದ ದುಡಿದಿರುವವರು. ಇವರು ನೂರ ಅರವತ್ತಕ್ಕಿಂತಲೂ ಹೆಚ್ಚು ಸೃಜನಶೀಲ ಹಾಗೂ ಸೃಜನೇತರ ಕೃತಿಗಳನ್ನು ರಚಿಸಿ ಹೆಚ್ಚು ಬೇಡಿಕೆಯಲ್ಲಿರುವ ಹಿರಿಯ ಬರಹಗಾರರಲ್ಲಿ ಒಬ್ಬರಾಗಿದ್ದಾರೆ. ಇವರ ಕೃತಿಗಳು ಪಿ.ಯು.ಇ. ಇಲಾಖೆ, ವಿಶ್ವವಿದ್ಯಾನಿಲಯಗಳಿಂದ ಆಕರ ಗ್ರಂಥಗಳಾಗಿ ಶಿಫಾರಸುಗೊಂಡಿವೆ. ಸಮಾಜಶಾಸ್ತ್ರ ಮತ್ತು ಪರಿಸರಕ್ಕೆ ಸಂಬಂಧಿಸಿದ ಇವರ ಅನೇಕ ಕೃತಿಗಳು ಹಲವಾರು ಸಲ ಪುನರ್ ಮುದ್ರಣ ಕಂಡಿವೆ. `ರಾಜ್ಯೋತ್ಸವ ಪ್ರಶಸ್ತಿ’, ದೆಹಲಿಯ ಸಿಟಿಜನ್ಸ್ ಸೊಸೈಟಿ ಆಫ್ ಇಂಡಿಯಾ ವತಿಯಿಂದ `ಎಕ್ಸೆಲೆನ್ಸ್ ಪ್ರಶಸ್ತಿ’ ಪುರಸ್ಕೃತರಾಗಿರುವ ಬಹುಮುಖ ಪ್ರತಿಭೆಯನ್ನುಳ್ಳ ಲೇಖಕ, ಸಾಹಿತಿ. ಪ್ರೊ|| ಕೆ. ಭೈರಪ್ಪನವರು ತಮ್ಮ ಕೃತಿಗಳ ಮೂಲಕ ಸಮಾಜಶಾಸ್ತ್ರ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳ ನಡುವೆ ಮನೆಮಾತಾಗಿದ್ದಾರೆ.
|
K.V. Ram
|
ಡಾ|| ಕೃಷ್ಣಮೂರ್ತಿ ವೆಂಕಟರಾಮ್ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಡಿಗ್ರಿ ಪಡೆದು ಉತ್ತಮ ವ್ಯಾಸಂಗಕ್ಕೆ ಕೆನಡಾ ದೇಶಕ್ಕೆ ಹೋದರು. ಅಲ್ಲಿ ಅಂತರರಾಷ್ಟ್ರೀಯ ಸಂಬಂಧಗಳ ಇತಿಹಾಸದಲ್ಲಿ ಪರಿಣಿತಿ ಪಡೆದು ಮೆಮೋರಿಯಲ್ ವಿಶ್ವವಿದ್ಯಾನಿಲಯದಿಂದ ಎರಡನೇ ಎಂ.ಎ. ಡಿಗ್ರಿಯನ್ನು ಡಾಲ್‌ಹೌಸಿ ವಿಶ್ವವಿದ್ಯಾನಿಲಯದಲ್ಲಿ ಪಿಹೆಚ್.ಡಿ.ಯನ್ನೂ ಪಡೆದರು. ಇವರು ಇಥಿಯೋಪಿಯಾ ಮತ್ತು ಬ್ರಿಟಿಷ್ ದೇಶಗಳ ಆಂತರಿಕ ಸಂಬಂಧ ಹಾಗೂ ವ್ಯವಹಾರಗಳ ಇತಿಹಾಸ ಸಂಬಂಧಗಳ ಕುರಿತು ಎರಡು ಪುಸ್ತಕಗಳನ್ನು ಬರೆದಿದ್ದಾರೆ. ಇವರು ಮೊದಲಿನಿಂದ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಇಥಿಯೋಪಿಯ, ಯುಗಾಂಡ, ಕೆನಡಾ ದೇಶಗಳಲ್ಲಿ ಕೆಲಸ ಮಾಡಿ, ಭಾರತಕ್ಕೆ ವಾಪಸ್ಸು ಬಂದ ಮೇಲೆ ಪ್ರಶಾಂತಿ ನಿಲಯದ ಸರ್ ಸಾಯಿ ವಿಶ್ವವಿದ್ಯಾನಿಲಯದಲ್ಲೂ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.
|
Dr. Venkat Pulla
|
Dr. Venkat Pulla, PhD is a Tata Dorabji Merit scholar from the Tata Institute of Social Sciences India. Formerly Foundation Head of the Department of Social Work, Northern Territory University, Darwin, Australia, Venkat more recently taught social work at the Charles Sturt University and is currently Senior Lecturer, University of the Sunshine Coast, Queensland, Australia. His research interests are in human coping and resilience, spirituality, green social work and strengths approach to social work. He has founded the Brisbane Institute of Strengths Based Practice. He has co-edited Papers in Strengths Based Practice, Allied Publishers, 2012; and Perspectives on Coping and Resilience, Authors Press Global Network, 2013.
|
Dr. Kalpana Goel
|
Dr Kalpana Goel is an academic and researcher in the Social Work and Rural Practice Unit at the Centre for Regional Engagement, University of South Australia. She has both practice and teaching experience in the field of community development and mental health. She has taught community organization and development for two decades both in India and Australia and also teaches wide subject areas in social work. She has widely published in the area of migration, community settlement, unorganized sector, mental health and teaching and learning. She is a member of Australian Association of Social Worker, Refugee and Migration research Network and Centre for Rural Health and Community Development.
|
Dr. Abraham Francis
|
Dr Abraham Francis is a Senior Lecturer in Social Work at the James Cook University. Combined with international exposure, extensive experience in community development and research activities, he has been instrumental in developing many initiatives both in Australia and in India. Abraham has established many international partnerships and research collaborations with various Universities and non-government organizations in Asia. He is the convener of international consortium on strengths based social work practice in mental health and founding director of DePaul International Centre of Wellbeing, Kochi, India.
|
T.K. Nair
|
Professor T.K. Nair was a former Principal of Madras School of Social Work and a former General of Social Work in India. In 1979, he founded the Centre for the Welfare of the Aged (CEWA) and pioneered community-based elder care services in India. He conducted three major studies on ageing, two of which were funded by the US Government and one by the International Sandoz Foundation for Gerontological Research.
|
Beena Krishnamurthy
|
Beena Krishnamurthy is one of the trustees at NITHYA SAADHANA. She is a post graduate, with a gold medal in Physics and has a diploma in special education and a diploma in Mental Health. She has more than 20 years of experience in the field of special education and rehabilitation of adults with IDD. She connects with trainees and their parents easily, helps them to aim high and encourages them to be disciplined and systematic. Her expertise is in documentation for the processes of training in various skill sectors, giving equal importance to all the non-domain aspects as well.
|
Meena Jain
|
Meena Jain is a rehabilitation expert with 3 decades of rich grass root experience both at urban and rural level. She comes with immense expertise and opulent knowledge, being a subject matter expert in the field of disability. She is a visionary and progressive thinker and believes in servant leadership. She has impacted thousands of lives through her unconditional acceptance, commitment and dedication by empowering individuals with IDD and their families to live a socially valued life. She wears many hats in the social sector and is a role model to many. She says “Acceptance of the disability is the key to progress in life”.
|
Dr. Kannekanti Parameshwar
|
Dr. Kannekanti Parameshwar born in Akkenepally village, Nalgonda District in Andhra Pradesh. Presently he is working as an Intake Assistant for Vocational Rehabilitation Centre for Handicapped (VRC), Govt. of India, Bangalore. He received Doctorate Degree (Ph.D in Sociology) on this entitled thesis from Kuvempu University under the guidance of Dr. M. Purvachar, Karnataka.
|
Dr. Kodur Venkatesh
|
Dr Venkatesh, has served the armed forces of the country and thereafter fully dedicated himself for social work and humanitarian service. He runs a couple of NGOs namely Snehajyothi and Arise India Foundation, engaged in running orphanages, conducting personality development and motivational campaigns. He is a State Awardee for Child Welfare and dilligently working for the cause of Child Rights.
He is an Honorary and visiting faculty to various institutions including Universities and premier Training Institutions. He is a Limca Book Record holder and his name figures in the Marquis World Whos Who. He has authored more than 9 books and addressed thousands of students and corporate employees all over the country and abroad. Dr. Venkatesh believes that by writing effective books and reaching them at a very affordable cost to every interested reader one can try to bring a social change which is the need of the hour. He also believes that todays Youth are the most precious assets of our Nation and if their energies are channelised in the right direction we can become one of the greatest Nations of the World. |
Ramesh M. Sonakamble
|
ಡಾ. ರಮೇಶ ಎಂ. ಸೋನಕಾಂಬಳೆ ಯವರು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 1997ರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದಿಂದ ಪಿಎಚ್.ಡಿ ಪದವಿಯನ್ನು ಪಡೆದುಕೊಂಡವರಲ್ಲಿ ಇವರು ಮೊದಲಿಗರು. ಇವರು 1998ರಲ್ಲಿ, ಯು.ಜಿ.ಸಿ ನೆಟ್ ಪರೀಕ್ಷೆಯಲ್ಲಿ ತೇರ್ಗಡೆಯನ್ನು ಹೊಂದಿದರು. ಇವರ 25ಕ್ಕೂ ಹೆಚ್ಚಿನ ಸಂಶೋಧನಾ ಲೇಖನಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ, 4 ಲೇಖನಗಳು ಸಂಪಾದಿತ ಪುಸ್ತಕಗಳಲ್ಲಿ ಪ್ರಕಟಗೊಂಡಿವೆ. ಇವರು ಈವರೆಗೆ 6 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಒಂದನ್ನು ಸಮಾಜಕಾರ್ಯ ವೃತ್ತಿಯ ಮೇಲೆ ಕನ್ನಡದಲ್ಲಿ ಪ್ರಕಟಿಸಿದ್ದಾರೆ. ಈ ಕೃತಿಯು ಕರ್ನಾಟಕದಾದ್ಯಂತ ಪ್ರಸಿದ್ಧಿಯಾಗಿದೆ. ಇವರು ಅನೇಕ ವಿಚಾರಗೋಷ್ಠಿಗಳಲ್ಲಿ ತಮ್ಮ ಲೇಖನಗಳನ್ನು ಮಂಡಿಸಿದ್ದಾರೆ, ಅನೇಕ ಸಮಾವೇಶಗಳಲ್ಲಿ, ಕಾರ್ಯಾಗಾರಗಳಲ್ಲಿ ಮತ್ತು ವಿಚಾರಗೋಷ್ಠಿಗಳಲ್ಲಿ ಪಾಲ್ಗೊಂಡಿದ್ದಾರೆ. ವೃತ್ತಿಪರ ಸಂಸ್ಥೆಗಳಲ್ಲಿ ಇವರಿಗೆ ಜೀವಿತಾವಧಿ ಸದಸ್ಯತ್ವವಿದೆ ಮತ್ತು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಯೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಇವರು ಎನ್‌ಎಸ್‌ಎಸ್ ನ ಕಾರ್ಯಕ್ರಮ ಅಧಿಕಾರಿಯಾಗಿ ಮತ್ತು ಸಮಾಜಕಾರ್ಯ ವಿಭಾಗದ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದಾರೆ. ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಐದು ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿಗಳು ಇವರ ಮಾರ್ಗದರ್ಶನವನ್ನು ಪಡೆದುಕೊಳ್ಳುತ್ತಿದ್ದಾರೆ. ಇವರು ನವದೆಹಲಿಯ 'ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್’(ಐ.ಸಿ.ಎಸ್.ಎಸ್.ಆರ್) ಸಂಸ್ಥೆಯು ಅನುದಾನಿಸಿದ 2016ರಲ್ಲಿ ನಡೆದ 10 ದಿನಗಳ ಸಂಶೋಧನಾ ವಿಧಾನದ ಕಾರ್ಯಾಗಾರವನ್ನು (ರಿಸರ್ಚ್ ಮೆಥಡಾಲಜಿ ವರ್ಕ್ಶಾಪ್) ಯಶಸ್ವಿಯಾಗಿ ಆಯೋಜಿಸಿದ್ದಾರೆ.
|
Dr. S.B. Muniraju
|
ಡಾ. ಎಸ್.ಬಿ. ಮುನಿರಾಜು ಅವರು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಸೊಣ್ಣೂರು ಗ್ರಾಮದ ಪಶುಪಾಲಕ ಬುಡಕಟ್ಟಿನ ಸಂಪಮ್ಮ ಮತ್ತು ಬೀರಪ್ಪ ದಂಪತಿಗಳ ಮಗನಾಗಿ ಜನಿಸಿ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ, ಮಾಧ್ಯಮಿಕ ಶಿಕ್ಷಣವನ್ನು ಜಯಮಂಗಲ ಗ್ರಾಮದಲ್ಲಿ, ಪ್ರೌಢ ಶಿಕ್ಷಣವನ್ನು ಚಿಕ್ಕತಿರುಪತಿ ಗ್ರಾಮದಲ್ಲಿ, ಪದವಿಪೂರ್ವ ಮತ್ತು ಕಲಾ ಪದವಿ ಶಿಕ್ಷಣವನ್ನು ಮಾಲೂರಿನಲ್ಲಿ ಸ್ನಾತಕೋತ್ತರ ಸಮಾಜಕಾರ್ಯವನ್ನು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮತ್ತು ಪಿಎಚ್‌ಡಿ ಅಧ್ಯಯನವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿಸಿರುವರು. ಡಾ. ಮುನಿರಾಜು ಅವರು ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕ ನಿರೀಕ್ಷಕರಾಗಿ, ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಪರಿಶಿಷ್ಟ ಪಂಗಡಗಳ ರಾಷ್ಟಿçÃಯ ಆಯೋಗದಲ್ಲಿ ತನಿಖಾಧಿಕಾರಿಯಾಗಿ, ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಉಪ ವಿಭಾಗೀಯ ಉದ್ಯೋಗಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದವರಾಗಿದ್ದಾರೆ.
|
Dr. T.M. Shivanandaiah
|
1936ರಲ್ಲಿ ಬಳ್ಳಾರಿ ಜಿಲ್ಲಾ ಕೂಡ್ಲಿಗಿ ತಾಲ್ಲೂಕು ಕೊಟ್ಟೂರು ಪಟ್ಟಣದಲ್ಲಿ (ಶ್ರೀ ವೇ||ಮೂ|| ತೆಗ್ಗಿನಮಠದ ಅಜ್ಜಪ್ಪಯ್ಯ ಮತ್ತು ಶ್ರೀಮತಿ ಶಾಂತವೀರಮ್ಮ ದಂಪತಿಗಳ) ಮಧ್ಯಮ ಪುತ್ರನಾಗಿ ಜನಿಸಿದರು. ಮೈಸೂರಿನ ಸರಕಾರಿ ಆಯುರ್ವೇದ ಕಾಲೇಜಿನಲ್ಲಿ 1954-1958 ರವರೆಗೆ ಆಯುರ್ವೇದ ವಿದ್ವಾನ್ ಎಲ್.ಎ.ಎಂ.ಎಸ್. ವೈದ್ಯಕೀಯ ಪದವಿಯನ್ನು ಪಡೆದು, ಹೊಳೆಹೊನ್ನೂರು ಮತ್ತು ಶಿವಮೊಗ್ಗ ನಗರದಲ್ಲಿ ಎರಡೂ ಕಡೆ “ಪ್ರಕಾಶ್ ಕ್ಲಿನಿಕ್” 1959 ಮೇನಿಂದ ನಡೆಸುತ್ತಿದ್ದರು. ಜೊತೆಯಲ್ಲಿ ಆಯುರ್ವೇದ ಔಷಧ ತಯಾರಿಕಾ ಘಟಕ ಪ್ರಕಾಶ್ ಫರ್ಮಸೂಟಿಕಲ್ಸ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಔಷಧ ಗಿಡಮೂಲಿಕೆಗಳ ಸಂಶೋಧನೆಯಲ್ಲಿ ನಿರತರಾಗಿದ್ದು, ರಾಷ್ಟ್ರೀಯ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ ಅನೇಕ ಪ್ರಬಂಧಗಳನ್ನು ಮಂಡಿಸಿದ್ದಾರೆ. ಹಲವು ಉಪಯುಕ್ತ ವೈದ್ಯಕೀಯ ಲೇಖನಗಳನ್ನು ದಿನಪತ್ರಿಕೆ, ಮಾಸಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಇವರ ನಿರಂತರ ಸೇವೆಯನ್ನು ಗುರುತಿಸಿ NIMA, AYUSH ಮೊದಲುಗೊಂಡು ಇಂತಹ ಅನೇಕ ಸಂಘ ಸಂಸ್ಥೆಗಳಲ್ಲದೆ, ಬಾಳೆಹೊನ್ನೂರು ಮತ್ತು ಕೇದಾರ ಜಗದ್ಗುರುಗಳಿಂದ “ವೃತ್ತಿಶ್ಚೈತನ್ಯ ರತ್ನ”ಮುಂತಾದ ಬಿರುದುಗಳಿಂದ ಸನ್ಮಾನಿಸಲ್ಪಟ್ಟಿದ್ದಾರೆ. ayurvedasutra.com ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ರೋಗಿಗಳನ್ನು ಆನ್‌ಲೈನ್ ಮೂಲಕ ಚಿಕಿತ್ಸೆ ಸಲಹೆಗಳನ್ನು ನೀಡುತ್ತಿದ್ದಾರೆ. ಇತ್ತೀಚಿಗೆ ಅಮೇರಿಕಾ ಪ್ರವಾಸವನ್ನು ಮುಗಿಸಿರುತ್ತಾರೆ. |
Mohan Das
|
ಡಾ. ಮೋಹನ್ ದಾಸ್ ರವರು ಅನಕ್ಷರಸ್ಥ ಕುಟುಂಬಕ್ಕೆ ಸೇರಿದ ಬಡ ತಂದೆತಾಯಿಗಳ ಮಗನಾಗಿ, ತಮ್ಮ ಜೀವನದ ಬಹುತೇಕ ಸಮಯವನ್ನು ಕೇವಲ ವಿದ್ಯಾರ್ಥಿನಿಲಯಗಳಲ್ಲಿ ಹಾಗೂ ಸ್ನಾತಕೋತ್ತರ ಪದವಿವರೆಗಿನ ವಿದ್ಯಾಭ್ಯಾಸವನ್ನು ಸರ್ಕಾರಿ ಶಾಲಾ-ಕಾಲೇಜುಗಳಲ್ಲೇ ಪೂರೈಸಿ, ಸತತ ಪರಿಶ್ರಮದಿಂದ ಅತ್ಯುನ್ನತ ಪಿಹೆಚ್.ಡಿ. ಪದವಿಯನ್ನೂ ಪಡೆದು ಸಮಾಜಶಾಸ್ತ್ರಕ್ಕೆ ಒಂದು ಹೊಸ ರೂಪ-ಆವಿಷ್ಕಾರ ನೀಡಹೊರಟಿರುವುದು ನಿಜಕ್ಕೂ ಹೆಮ್ಮೆಯ ವಿಷಯವೇ ಸರಿ. ಈ ಮೊದಲೇ ಹೇಳಿದಂತೆ ಶ್ರೀಯುತರು ಸುಮಾರು 12 ವರ್ಷಗಳ ಕಾಲ ಮನಃಶಾಸ್ತ್ರಜ್ಞರ ತಂಡದಲ್ಲಿ ವೃತ್ತಿ ಸಲಹೆ ಮತ್ತು ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿ ವಿದ್ಯಾರ್ಥಿಗಳಿಗೆ ಪೂರಕ ಸಲಹೆ ಮತ್ತು ಮಾರ್ಗದರ್ಶನ ನೀಡುವ ಕ್ಷೇತ್ರದಲ್ಲಿ ಪರಿಣಿತರಾಗಿದ್ದಾರೆ. ಜೊತೆಗೆ, ಪ್ರಸ್ತುತವಾಗಿ ಶಿಕ್ಷಣ ಇಲಾಖೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿಯೂ ಸಹ ಸೇವೆ ಸಲ್ಲಿಸುತ್ತಿದ್ದು, ಇಂದಿನ ಯುವ ಜನತೆಯ ವೃತ್ತಿ ಬದುಕಿಗೆ ಆಸರೆಯಾಗುವಂತಹ “ಭಾರತೀಯ ಹಿನ್ನಲೆಯಲ್ಲಿ: ವೃತ್ತಿ ಮಾಹಿತಿ ಕೈಪಿಡಿ”ಎಂಬ ಇವರ ಕೃತಿ ಕನ್ನಡ ಮತ್ತು ಇಂಗೀಷ್ ಭಾಷೆಗಳಲ್ಲಿ ಮೊದಲ ಆವೃತಿ (ಕೃತಿ) ಯಾಗಿ ಹೊರಬಂದಿದೆ, ಇದು ಯುವ ಜನತೆಗೆ ಬೆಳಕನ್ನು ನೀಡುವ ಅಪ್ರತಿಮ ಕೃತಿಯಾಗಿದೆ ಎಂದರೆ ಉತ್ಪ್ರೇಕ್ಷೆಯಾಗಲಾರದು. ವಿದ್ಯಾರ್ಥಿಗಳ ಮತ್ತು ಓದುಗರ ಅನುಕೂಲಕ್ಕಾಗಿ ಈ ಕೃತಿಯನ್ನು ಕನ್ನಡ ಮತ್ತು ಇಂಗೀಷ್ ಎರಡು ಭಾಷೆಗಳಲ್ಲಿಯೂ ಹೊರತಂದಿರುವುದು ಅವರ ಕಾಳಜಿಯನ್ನು ಎತ್ತಿಹಿಡಿಯುತ್ತದೆ. ವೃತ್ತಿ ಸಲಹೆ ಮತ್ತು ಮಾರ್ಗದರ್ಶಕರಾಗಿ ಇವರು ಮಾಡಿರುವ ಸಾಧನೆಯನ್ನು ಪರಿಗಣಿಸಿ 2013 ರಲ್ಲಿ ಬೆಂಗಳೂರಿನ ರೋಟರಿ ಕ್ಲಬ್ ವತಿಯಿಂದ ಇವರಿಗೆ ಉತ್ತಮ ವೃತ್ತಿ ಸಲಹೆ ಮತ್ತು ಮಾರ್ಗದರ್ಶಕರೆಂದು ಪ್ರಶಸ್ತಿಯನ್ನು ನೀಡಿರುತ್ತಾರೆ.
|
Padmasubbaiah
|
`ಮಾತೃಛಾಯಾ' ಸ್ವಯಂಸೇವಾ ಸಂಸ್ಥೆಯ ಮೂಲಕ ಹಲವು ವರ್ಷಗಳಿಂದ ದತ್ತು ಸ್ವೀಕಾರ ಹಾಗೂ ಆ ಮಕ್ಕಳ ಪಾಲನೆಯ ವಿಷಯದಲ್ಲಿ ಮಾರ್ಗದರ್ಶನ ನೀಡುತ್ತಿದ್ದರು. ಅನೇಕ ಮಕ್ಕಳ ಪಾಲನಾ ಕೇಂದ್ರಗಳನ್ನು, ಶಿಕ್ಷಣ ಯೋಜನೆಗಳನ್ನು ಸಂಘಟಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯಪಡೆಯ ಸಲಹಾಗಾರರಾಗಿ, ನೊಂದ ಮಹಿಳೆಯರ ಪುನರ್ವಸತಿ ಸಂಬAಧ ಕೌನ್ಸೆಲಿಂಗ್ ನೀಡುವವರಾಗಿ ಜನಪ್ರಿಯರಾಗಿದ್ದರು.
|