ನಿರುತ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್
ನೋಂದಣಿ: ಕ್ರಸಂ: ಎಆರ್-44/ಆರ್‍ಜಿಎನ್/23/3507/2014-15
ನಿರುತ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್, ನೋಂದಣಿ: ಕ್ರಸಂ: ಎಆರ್-44/ಆರ್‍ಜಿಎನ್/23/3507/2014-15, ದಿನಾಂಕ: 22-12-2014 ರಲ್ಲಿ ಪ್ರಾರಂಭವಾಗಿದ್ದು, ಸಂಸ್ಥೆಯು ಸ್ಥಳೀಯ ಜನ ಸಾಮಾನ್ಯರಿಗೆ ಆರ್ಥಿಕ ನೆರವು ನೀಡುವ ಸದುದ್ದೇಶದಿಂದ ಸ್ಥಾಪನೆಗೊಂಡಂತಹ ಸಂಸ್ಥೆಯಾಗಿದೆ. ನಮ್ಮ ಸಂಸ್ಥೆಯಲ್ಲಿ ಸಾಲ ಸೌಲಭ್ಯ, ಇ-ಸ್ಟಾಂಪ್, ಫಿಕ್ಸೆಡ್ ಡೆಪಾಸಿಟ್, ರಿಕರಿಂಗ್ ಡೆಪಾಸಿಟ್, ಈಜಿ಼ ಮನಿ ಹಾಗೂ ಇತರೆ ಸೌಲಭ್ಯಗಳು ಸದಸ್ಯರಿಗೆ ದೊರೆಯುತ್ತವೆ.
ಸಹಕಾರಿಯ ಸದಸ್ಯತ್ವ ಪಡೆಯಲು ಈ ಕೆಳಗಿನವರು ಅರ್ಹರಾಗಿರತಕ್ಕದ್ದು
- ಸಹಕಾರಿಯ ಕಾರ್ಯಕ್ಷೇತ್ರದಲ್ಲಿ ನಿವಾಸಿಯಾಗಿರುವ ಅಥವಾ ಆ ಕಾರ್ಯಕ್ಷೇತ್ರದಲ್ಲಿ ವ್ಯಾಪಾರ ಅಥವಾ ಉದ್ಯಮದಲ್ಲಿ ತೊಡಗಿರುವ ಮತ್ತು ಸಹಕಾರಿಯ ಸೇವೆಗಳ ಅಗತ್ಯವಿರುವ ಭಾರತೀಯ ಒಪ್ಪಂದಕಾಯ್ದೆ 1872ರ ಕಲಂ 11ರ ಪ್ರಕಾರ ಕರಾರು ಮಾಡಿಕೊಳ್ಳಲು ಅರ್ಹನಿರುವ, 18ವರ್ಷ ತುಂಬಿದ, ದಿವಾಳಿಯಾಗಿರದ ಮತ್ತು ಸ್ವಸ್ಥಮನಸ್ಕನಾದ ವ್ಯಕ್ತಿ.
- ಸಹಕಾರಿಯ ಕಾರ್ಯಕ್ಷೇತ್ರ ಯಲಹಂಕ, ಬ್ಯಾಟರಾಯನಪುರ, ಹೆಬ್ಬಾಳ, ಯಶವಂತಪುರ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ, ಗೋವಿಂದರಾಜನಗರ, ಮಲ್ಲೇಶ್ವರಂ, ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ಬಿಬಿಎಂಪಿ ವಾರ್ಡ್ ಗಳ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರತಕ್ಕದ್ದು.
- ಸದಸ್ಯರಾಗ ಬಯಸುವವರು ನಿಗದಿಪಡಿಸಿದ ಷೇರು ಶುಲ್ಕ ಮತ್ತು ಪ್ರವೇಶ ಶುಲ್ಕವನ್ನು ಹಾಗೂ ಕನಿಷ್ಠ ಒಂದು ಷೇರಿನ ಪೂರ್ಣ ಹಣವನ್ನು ಪಾವತಿ ಮಾಡಿ ಲಿಖಿತದಲ್ಲಿ ಅರ್ಜಿ ಸಲ್ಲಿಸತಕ್ಕದ್ದು.
- ಮಂಡಳಿಯು ಸದಸ್ಯತ್ವ ಕೋರಿ ಬಂದಿರುವ ಯಾವುದೇ ಅರ್ಜಿಯನ್ನು ಅಂಗೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ಹೊಂದಿರತಕ್ಕದ್ದು. ಅರ್ಜಿ ಸ್ವೀಕೃತವಾದ ಅರವತ್ತು ದಿನಗಳೊಳಗೆ ಅಂತಹ ವ್ಯಕ್ತಿಗೆ ಮಂಡಳಿಯು ತನ್ನ ತೀರ್ಮಾನವನ್ನು ತಿಳಿಸತಕ್ಕದ್ದು.
ಅಗತ್ಯ ದಾಖಲೆಗಳು :
1. ಗುರುತಿನ ಚೀಟಿ (Aadhar Card, Voter Id, Driving Licence, Passport)
2. Pan Card (Mandatory)
3. 3 Photos