ಮುಖ್ಯ ಅಗತ್ಯತೆಗಳು
ಘೋಷಣೆ
ಪ್ರತಿಯೊಂದು ಲೇಖನವೂ ಲೇಖಕನ/ರ ಘೋಷಣೆಯನ್ನು ಒಳಗೊಂಡಿರಬೇಕು. ಘೋಷಣೆ ಈ ಕೆಳಕಂಡ ಅಂಶಗಳನ್ನು ಒಳಗೊಂಡಿರಬೇಕು:
ಲೇಖನ ಸಲ್ಲಿಕೆ
ಕೃತಿಸ್ವಾಮ್ಯ (Copyright)
ಲೇಖನವು ಒಮ್ಮೆ ಅಂಗೀಕೃತವಾದಲ್ಲಿ, ಲೇಖನದ ಕೃತಿಸ್ವಾಮ್ಯವನ್ನು 'ಸಮಾಜಕಾರ್ಯದ ಹೆಜ್ಜೆಗಳು' ಪತ್ರಿಕೆಯು ಹೊಂದುತ್ತದೆ. ಇದನ್ನು ಪತ್ರಿಕೆಯ ಸಂಪಾದಕರ ಲಿಖಿತ ಅನುಮತಿಯಿಲ್ಲದೆ ಬೇರೆಲ್ಲಿಯೂ ಮರುಬಳಕೆ ಮಾಡಕೂಡದು.
ಪುಸ್ತಕ ವಿಮರ್ಶೆ
- ಲೇಖನದ ಶೀರ್ಷಿಕೆಯು 'ಸಮಾಜಕಾರ್ಯದ ಹೆಜ್ಜೆಗಳು' ಪತ್ರಿಕೆಯ ಉದ್ದೇಶಗಳಿಗೆ ಸಂಗತವಾಗಿರಬೇಕು.
- ಸುಮಾರು 100 ಪದಗಳನ್ನೊಳಗೊಂಡ ಸಾರಾಂಶವಿರಬೇಕು
- ಲೇಖನವು 5,000 ದಿಂದ 8000 ಪದಗಳನ್ನೊಳಗೊಂಡಿರಬೇಕು.
- ಪರಾಮರ್ಶನ ಹಾಗೂ ಆಕರ ಗ್ರಂಥಗಳು ಹಾಗೂ ಲೇಖನಗಳ (Reference) ವಿನ್ಯಾಸವು 'ಸಮಾಜಕಾರ್ಯದ ಹೆಜ್ಜೆಗಳು' ಪತ್ರಿಕೆಯ ಮಾರ್ಗಸೂಚಿಗನುಸಾರವಾಗಿರಬೇಕು.
ಘೋಷಣೆ
ಪ್ರತಿಯೊಂದು ಲೇಖನವೂ ಲೇಖಕನ/ರ ಘೋಷಣೆಯನ್ನು ಒಳಗೊಂಡಿರಬೇಕು. ಘೋಷಣೆ ಈ ಕೆಳಕಂಡ ಅಂಶಗಳನ್ನು ಒಳಗೊಂಡಿರಬೇಕು:
- ಆತ/ಆಕೆ ಲೇಖನದ ಲೇಖಕರಾಗಿರುವ ಬಗ್ಗೆ.
- ಲೇಖನವು ಸ್ವಂತದ್ದು ಮತ್ತು ಮೂಲದ್ದಾಗಿರುವ ಬಗ್ಗೆ.
- ಲೇಖನವು ಈ ಮುಂಚೆ ಬೇರೆಲ್ಲೂ ಪ್ರಕಟಗೊಂಡಿರದ ಮತ್ತು ಪ್ರಕಟಣೆಗೆ ಬೇರೆಲ್ಲೂ ಕಳುಹಿಸಿಕೊಟ್ಟಿರದ ಬಗ್ಗೆ.
- ಒಂದು ವೇಳೆ ಲೇಖಕನು/ಳು 500 ಪದಕ್ಕಿಂತ ಹೆಚ್ಚು ಅಥವಾ ಕೋಷ್ಟಕಗಳನ್ನು ಅಥವಾ ಚಿತ್ರಗಳನ್ನು ಈಗಾಗಲೆ ಪ್ರಕಟಗೊಂಡಿರುವ ಕೃತಿಯಿಂದ ನಕಲು ಮಾಡಿದ್ದರೆ ಕೃತಿಸ್ವಾಮ್ಯ ಹೊಂದಿರುವವರ ಅನುಮತಿ ಪತ್ರವನ್ನು ಪಡೆದುಕೊಂಡಿರುವ ಬಗ್ಗೆ.
ಲೇಖನ ಸಲ್ಲಿಕೆ
- ಲೇಖನವನ್ನು ವಿದ್ಯುನ್ಮಾನ ಪ್ರತಿ (soft copy) ಮತ್ತು ಮುದ್ರಿತ ಪ್ರತಿ (ನಕಲು) (hard copy in duplicate) ಯಂತೆ ಸಲ್ಲಿಸಬಹುದು
- ಮುದ್ರಿತ ಪ್ರತಿಯು (hard copy) A4 ಕಾಗದದ ಒಂದು ಬದಿಯಲ್ಲಿ (hard copy) ಡಬಲ್ ಸ್ಪೇಸ್‍ನಲ್ಲಿ ಟೈಪ್ ಆಗಿರಬೇಕು.
- ಲೇಖನದ ಶೀರ್ಷಿಕೆ ಪುಟವು ಶೀರ್ಷಿಕೆ, ಲೇಖಕರ ಹೆಸರನ್ನು (Dr, Mr, Ms, ಇತ್ಯಾದಿಗಳು ಇರಬಾರದು) ಒಳಗೊಂಡಿರಬೇಕು. ಸಾರಾಂಶದ ಅಕ್ಷರವು ಚಿಕ್ಕ ಗಾತ್ರದಲ್ಲಿ ಟೈಪ್ ಆಗಿರಬೇಕು.
- ಲೇಖಕರ ಪದವಿಗಳು ಮತ್ತು ಇನ್ನಿತರ ವಿವರಗಳು ಲೇಖನದ ಕೊನೆಯಲ್ಲಿರಬೇಕು.
- ಲೇಖನದ ಕುರಿತ ಯಾವುದೇ ಸ್ಪಷ್ಟೀಕರಣವಿದ್ದಲ್ಲಿ, ನಿಮ್ಮ ಪ್ರಶ್ನೆ ಮತ್ತು ಅನಿಸಿಕೆಯನ್ನು [email protected] ಗೆ ಕಳುಹಿಸಿಕೊಡಿ.
ಕೃತಿಸ್ವಾಮ್ಯ (Copyright)
ಲೇಖನವು ಒಮ್ಮೆ ಅಂಗೀಕೃತವಾದಲ್ಲಿ, ಲೇಖನದ ಕೃತಿಸ್ವಾಮ್ಯವನ್ನು 'ಸಮಾಜಕಾರ್ಯದ ಹೆಜ್ಜೆಗಳು' ಪತ್ರಿಕೆಯು ಹೊಂದುತ್ತದೆ. ಇದನ್ನು ಪತ್ರಿಕೆಯ ಸಂಪಾದಕರ ಲಿಖಿತ ಅನುಮತಿಯಿಲ್ಲದೆ ಬೇರೆಲ್ಲಿಯೂ ಮರುಬಳಕೆ ಮಾಡಕೂಡದು.
ಪುಸ್ತಕ ವಿಮರ್ಶೆ
- ಪುಸ್ತಕ ವಿಮರ್ಶೆಯು ಲೇಖನ ಸಲ್ಲಿಕೆಯ ಕ್ರಮಗಳಂತೆಯೇ ಇರುತ್ತದೆ.
- ಪುಸ್ತಕ ವಿಮರ್ಶೆಯ ಕೃತಿಸ್ವಾಮ್ಯವು 'ಸಮಾಜಕಾರ್ಯದ ಹೆಜ್ಜೆಗಳು' ಪತ್ರಿಕೆಯದ್ದಾಗಿರುತ್ತದೆ.
- ಪುಸ್ತಕ ವಿರ್ಶೆಗೆ 'ಸಮಾಜಕಾರ್ಯದ ಹೆಜ್ಜೆಗಳು' ಪತ್ರಿಕೆಯ ಸಂಪಾದಕರ ಸಮ್ಮತಿಯಿರಬೇಕಾಗುತ್ತದೆ.