|
Author: Narasimham Rayadurgam Preface This book on “Vocational Rehabilitation of Disabled in India, Principles & Practice” is an attempt to educate the present and future rehabilitation professionals in the area of vocational rehabilitation.
Vocational Rehabilitation as a concept can be traced back to the First World War (1914 -1918), wherein the entire Europe and United States of America (USA) were involved. Several war veterans were injured but were skilled and available for bringing the country’s economy to keel. The Veterans’ Rehabilitation Act of 1920 of USA was the first in the modern times to utilize the services of the war disabled in reviving the country’s economy. This has been amended in due course to include other disabilities. The Department in the government of United States of America (USA) was named Veterans Rehabilitation Administration, later changed as Social & Rehabilitation Services (SRS) Administration and now known as Rehabilitation Services Administration. Internationally, it is a young profession. Such services are available in U.K., European countries, Japan, Singapore and other African and Asian countries. ಲೇಖಕರು : ಡಾ. ಸಿ.ಆರ್. ಗೋಪಾಲ್ ಯಾವುದೇ ಸಮಾಜ, ರಚನೆ ಮತ್ತು ಕಾರ್ಯಶೀಲತೆಯ ದೃಷ್ಟಿಯಿಂದ, ಸ್ಥಿರವಲ್ಲ ಮತ್ತು ನಿಷ್ಕ್ರಿಯದಲ್ಲ. ಅದು ರಚನೆಯ ದೃಷ್ಟಿಯಿಂದ ಮತ್ತು ಕ್ರಿಯೆಗಳ ದೃಷ್ಟಿಯಿಂದ ಚಲನಶೀಲವಾಗಿರುತ್ತದೆ ಮತ್ತು ಪರಿವರ್ತನಾಶೀಲವಾಗಿರುತ್ತದೆ. ಹಾಗಾಗಿ ಯಾವುದೇ ಸಮಾಜ ನಿರಂತರವಾಗಿ ಬದಲಾಗುತ್ತಿರುತ್ತದೆ. ಅಂತಹ ಬದಲಾವಣೆಗಳಿಗೆ ತೀವ್ರತೆ ಮತ್ತು ವ್ಯಾಪಕತೆ ಇರಬಹುದು, ಇಲ್ಲದಿರಬಹುದು. ಬದಲಾವಣೆ ಗೋಚರಿಸಬಹುದು ಇಲ್ಲವೇ ಗೋಚರಿಸದಿರಬಹುದು. ಇಂದು ಗೋಚರಿಸದೇ ಇದ್ದದ್ದು, ಇನ್ನೆಂದೊ ಗೋಚರಿಸಬಹುದು. ಈ ಬದಲಾವಣೆ ಆರ್ಥಿಕ, ಕೈಗಾರಿಕಾ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಮನರಂಜನಾ, ವೈಜ್ಞಾನಿಕ, ಸಾಂಸ್ಕೃತಿಕ, ಇನ್ನೂ ಮುಂತಾದ ಕ್ಷೇತ್ರಗಳಲ್ಲಿ ಆಗುತ್ತದೆ. ಇಂತಹ ಬದಲಾವಣೆಗಳನ್ನು, ಸಾಮಾಜಿಕ ಸಂಸ್ಥೆಗಳಾದ ಕುಟುಂಬ, ಸಮೂಹ, ಸಂಘಸಂಸ್ಥೆಗಳು, ಸಮುದಾಯ ಮತ್ತು ಕೊನೆಯದಾಗಿ ಇಡೀ ಸಮಾಜದಲ್ಲಿ ಕಾಣುತ್ತೇವೆ. ಬದಲಾವಣೆ ಈ ಸಂಸ್ಥೆಗೆಳ ರಚನೆಯಲ್ಲಷ್ಟೇ ಆಗದೆ ಕ್ರಿಯೆಗಳಲ್ಲಿಯೂ, ಸಂಬಂಧಗಳಲ್ಲಿಯೂ ಆಗುತ್ತದೆ. ಅದು ಹೊಸ ಸಂಬಂಧಗಳನ್ನು ಸೃಷ್ಟಿಸುವುದಲ್ಲದೆ ಹೊಸ ಕಟ್ಟುಪಾಡುಗಳಿಗೆ, ಹೊಸ ಮೌಲ್ಯಗಳಿಗೆ ದಾರಿ ಮಾಡಿಕೊಡುತ್ತದೆ. ಇದೇ ಸ್ಥಿತಿ ಮುಂದುವರೆದು ನಿಧಾನವಾಗಿ ಸಮಾಜದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಿತ್ರಣವೇ ಬದಲಾಗುತ್ತದೆ.
ಲೇಖಕರು : ಗಂಗಾಧರ ರೆಡ್ಡಿ ಎನ್. ಮತ್ತು ಡಾ. ಲೋಕೇಶ ಎಂ.ಯು ಸಮಾಜಕಾರ್ಯದ ಉದಯೋನ್ಮುಖ ಕ್ಷೇತ್ರವನ್ನು ಪರಿಚಯಿಸುವ ಕೃತಿ 'ವಿಪತ್ತು ನಿರ್ವಹಣೆಯಲ್ಲಿ ಸಮಾಜಕಾರ್ಯ'. ಈ ಪುಸ್ತಕದ ಮೂಲ ಆಶಯ ಗ್ರಾಮೀಣ ಹಾಗೂ ಕನ್ನಡ ಭಾಷಾ ಮಾದ್ಯಮ ಹಿನ್ನೆಲೆ ಹೊಂದಿರುವ ವಿದ್ಯಾರ್ಥಿಗಳಿಗೆ ವಿಪತ್ತು ನಿರ್ವಹಣಾ ಶಾಸ್ತ್ರದ ಮೂಲ ಪರಿಕಲ್ಪನೆಗಳು ಮತ್ತು ವಿಪತ್ತು ನಿರ್ವಹಣೆಯಲ್ಲಿ ಸಮಾಜಕಾರ್ಯದ ಮಧ್ಯಸ್ಥಿಕೆಯನ್ನು ಅರ್ಥ ಮಾಡಿಸುವುದೇ ಆಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಚನೆಯಾದ ಸದರಿ ಪುಸ್ತಕ ಪ್ರಶಿಕ್ಷಕರಿಗೆ, ಸಂಶೋಧಕರಿಗೆ, ವೃತ್ತಿಪರರಿಗೆ ಹಾಗೂ ಕ್ಷೇತ್ರ ಕಾರ್ಯಕರ್ತರಿಗೆ ಮಾರ್ಗದರ್ಶಿ ಕೈಪಿಡಿಯಾಗಿದೆ. ಇದು ವಿಪತ್ತು ನಿರ್ವಹಣಾ ಶಾಸ್ತ್ರವನ್ನು ಅಧ್ಯಯನ ಮಾಡಬಯಸುವ ಎಲ್ಲಾ ವೃತ್ತಿಪರರಿಗೆ ಕನ್ನಡ ಭಾಷೆಯಲ್ಲಿ ಸಿಗುವ ಪ್ರಾಥಮಿಕ ಮಾಹಿತಿಯ ಮೂಲವೇ ಆಗಿದೆ.
ಸಮಾಜಕಾರ್ಯ ಸಾಹಿತ್ಯ ಕ್ಷೇತ್ರದ ಉದಯೋನ್ಮುಖ ಬರಹಗಾರ ಶ್ರೀಯುತ ಗಂಗಾಧರ ರೆಡ್ಡಿ ಎನ್. ರವರು ಶೈಕ್ಷಣಿಕ ಕ್ಷೇತ್ರದಲ್ಲಿ ಸೇವಾನಿರತರಾದ ಡಾ. ಲೋಕೇಶ ಎಂ.ಯು. ರವರ ಸಹಯೋಗದಲ್ಲಿ ರಚಿಸಿದ ಚೊಚ್ಚಲ ಪುಸ್ತಕವೇ ವಿಪತ್ತು ನಿರ್ವಹಣೆಯಲ್ಲಿ ಸಮಾಜಕಾರ್ಯ. ವ್ಯಕ್ತಿಗತ ಸಮಾಜಕಾರ್ಯ ಪರಿಚಯ ಯುವ ಲೇಖಕ ಗಂಗಾಧರ ರೆಡ್ಡಿ ಎನ್. ರವರು ಸಮಾಜಕಾರ್ಯ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಚೊಚ್ಚಲ ಕಾಣಿಕೆಯಾಗಿದ್ದು, ಪ್ರಶಿಕ್ಷಕ, ವಿದ್ಯಾರ್ಥಿ ಹಾಗೂ ವೃತ್ತಿಪರ ಸಮಾಜಕಾರ್ಯಕರ್ತರಿಂದ ಪ್ರಶಂಸೆಗೊಳಪಟ್ಟ ಪುಸ್ತಕವಾಗಿದೆ. ಸಮಾಜಕಾರ್ಯ ಹಾಗೂ ವಿಪತ್ತು ನಿರ್ವಹಣೆ ವಿಷಯದ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲನ್ನು ನಿರ್ಮಿಸಲಿರುವ ಸದರಿ ಪುಸ್ತಕದಲ್ಲಿ ಬಳಕೆಯಾಗಿರುವ ಭಾಷೆ ಸರಳವಾಗಿದೆ. ಪದಗಳ ಆರಿಸುವಿಕೆ ಮತ್ತು ಪದ ಪ್ರಯೋಗ ಸಮಂಜಸವಾಗಿದ್ದು, ಬರವಣಿಗೆಯಲ್ಲಿ ಸ್ಪಷ್ಟತೆ ಇದೆ. ನಿರೂಪಣೆ ಆತ್ಮೀಯವಾಗಿದ್ದು, ಓದಿಸಿಕೊಂಡು ಹೋಗುತ್ತದೆ. ಬರಹ ಮನಮುಟ್ಟುವಂತಿದ್ದು, ಓದುಗರನ್ನು ಸೆಳೆಯುತ್ತದೆ. ಪುಸ್ತಕದ ಮೂಲ ಓದುಗರಿಗೆ ವಿಷಯಗಳನ್ನು ಸ್ಪಷ್ಟವಾಗಿ ಅರ್ಥ ಮಾಡಿಸುವ ಉದ್ದೇಶದಿಂದ ನೀಡುರುವ ಜೀವಂತ ಉದಾಹರಣೆಗಳು ಸಮರ್ಪಕ ಹಾಗೂ ಸಮಯೋಚಿತವಾಗಿದ್ದು, ಅರ್ಥಗರ್ಭಿತವಾಗಿವೆ. ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಹಂತಗಳಲ್ಲಿ ಸಮಾಜಕಾರ್ಯ ವಿಷಯವನ್ನು ಅಧ್ಯಯನ ಮಾಡುವ ಪ್ರಶಿಕ್ಷಣಾರ್ಥಿಗಳಿಗೆ ಅನುಕೂಲವಾಗಲೆಂದು ಪಠ್ಯಕ್ರಮಕ್ಕೆ ಅನುಗುಣವಾಗಿ ರಚಿಸಲಾಗಿದೆ. ಈ ಎಲ್ಲಾ ವೈಶಿಷ್ಟ್ಯಗಳಿಂದ ಕೂಡಿದ ಪುಸ್ತಕ ಓದುಗ ಸಮುದಾಯದಿಂದ ಪ್ರಶಂಸಿಸಲ್ಪಟ್ಟಿದೆ. |
Archives
October 2025
Categories
All
Social Work
|
|
|
|
| ||||||||||||||||||||||||
SITE MAP
SiteNIRATHANKA |
POSHOUR OTHER WEBSITESSubscribe |
RSS Feed