|
ಲೇಖಕರು: ಸದಾಶಿವಯ್ಯಾ ಮ. ಜಿರ್ಲಿಮಠ ಮುನ್ನುಡಿ
ಈ ಆವೃತ್ತಿಯನ್ನು ಸಾಕಷ್ಟು ಹೊಸ ಅಂಶಗಳೊಂದಿಗೆ ಪ್ರಸ್ತುತ ಪಡಿಸಲಾಗಿದೆ. ಮುಖ್ಯವಾಗಿ ವರ್ತನೆಯ ರೂಪಿಸುವಿಕೆ ಮತ್ತು ಸರಿಪಡಿಸುವಿಕೆಯ ಸಿದ್ಧಾಂತಗಳನ್ನು ಉದಾಹರಣೆಯೊಂದಿಗೆ, ಸಮಾಜಕಾರ್ಯ ಕ್ಷೇತ್ರಗಳಲ್ಲಿ ಇತ್ತೀಚಿನ ಬೆಳವಣಿಗೆ, ಸಮಾಜಕಾರ್ಯ ವಿಧಾನಗಳ ಸರಳ, ಸವಿವರವಾದ ವಿವರಣೆ ಮತ್ತು ಸಮಾಜಕಾರ್ಯ ವಿಧಾನಗಳಲ್ಲಿ ಕಾರ್ಯಕರ್ತರ ಪಾತ್ರ ಸೇರಿಸಲಾಗಿದೆ. ಅದರಲ್ಲಿಯೂ ಸಮುದಾಯ ಸಂಘಟನೆ, ಸಾಮಾಜಿಕ ಕ್ರಿಯೆಯೆ ಮಾದರಿ, ತತ್ವಗಳು, ತಂತ್ರಗಳು, ಪ್ರಕಾರಗಳೊಂದಿಗೆ ಅರ್ಥಿಯ ಮಾಹಿತಿ ಸಂಗ್ರಹಣೆಯ ಸಾಧನಗಳ ಸಂಕ್ಷಿಪ್ತ ವಿವರ ಮತ್ತು ವೃತ್ತಿಯಲ್ಲಿ ಕಂಡುಬರುವ ಕೆಲ ನೈತಿಕ ದ್ವಂದ್ವಗಳನ್ನು ಓದುಗರ ಮಾಹಿತಿಗಾಗಿ ಒದಗಿಸಲಾಗಿದೆ. ಹೊಸ ಅಂಶಗಳೊಂದಿಗೆ ನವೀಕರಿಸಲ್ಪಟ್ಟ ಮುದ್ರಣವನ್ನು ಓದುಗರಾದ ಸಮಾಜಕಾರ್ಯ ವಿದ್ಯಾರ್ಥಿಗಳಿಗೆ, ವೃತ್ತಿಯಲ್ಲಿ ತೊಡಗಿರುವ ವಿವಿಧ ವರ್ಗದವರಿಗೆ ಸಹಾಯಕವಾಗುವದೆಂಬ ಆಶಯದೊಂದಿಗೆ ಈ ಪ್ರಯತ್ನ ಮಾಡಲಾಗಿದೆ. ಈ ಪ್ರಯತ್ನದಲ್ಲಿ ಹೆಚ್ಚಿನ ವಿವರಗಳೊಂದಿಗೆ ಓದುಗರನ್ನು ತಲುಪಲು ಸೂಕ್ತ ಸಲಹೆಗಳನ್ನಿತ್ತು ಸಹಕರಿಸಿದ ಸಹೊದ್ಯೋಗಿಗಳಿಗೆ ಮತ್ತು ಪ್ರಸ್ತುತ ವೃತ್ತಿಬಾಂಧವರಾಗಿರುವ ಶಿಷ್ಯ ಮಿತ್ರರಿಗೂ ಧನ್ಯವಾದ ಹೇಳುವದನ್ನು ಮರೆಯಲು ಅಸಾಧ್ಯ. ಭವಿಷ್ಯದಲ್ಲಿ ಹೆಚ್ಚಿನ ಸುಧಾರಣೆಗೆ ಸೂಕ್ತ ವಿಮರ್ಶೆ ಸಲಹೆಗಳನ್ನು ಇವರೆಲ್ಲರಿಂದ ಎದುರು ನೋಡುತ್ತಾ ಪುಟ ವಿನ್ಯಾಸ ಮತ್ತು ಮುದ್ರಣದಲ್ಲಿ ಸಹಕರಿಸಿದ ಶ್ರೀ ಆಫ್ಸೆಟ್ ನವರಿಗೂ ಅಭಿನಂದನೆಗಳು. ಲೇಖಕರು ಸದಾಶಿವಯ್ಯಾ. ಮ. ಜಿರ್ಲಿಮಠ. ಲೇಖಕರು: ಸದಾಶಿವಯ್ಯಾ ಮ. ಜಿರ್ಲಿಮಠ ನನ್ನುಡಿ
ವೃಂದ ಸಮಾಜಕಾರ್ಯ ಸಾಕಷ್ಟು ಅಂಶಗಳೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಪಸರಿಸುತ್ತಿದೆ. ಕಳೆದ 30 ವರ್ಷಗಳಿಗಿಂತಲೂ ಹೆಚ್ಚು ಅವಧಿಯಲ್ಲಿ ಸಮಾಜಕಾರ್ಯದ ವಿವಿಧ ಆಯಾಮಗಳಲ್ಲಿ ವೃತ್ತಿ ಆಚರಣೆಯ ಅನುಭವ, ಸಮಾಜಕಾರ್ಯ ವಿದ್ಯಾರ್ಥಿಗಳಿಗಾಗಿ ಸಾಹಿತ್ಯ ಲಭ್ಯವಾಗಿಸುವ ಬಯಕೆ ಹೆಚ್ಚಿಸಿದೆ. ಮೊದಲೆರಡು ಮುದ್ರಣಗಳಿಗೆ ವ್ಯಕ್ತವಾದ ಪ್ರತಿಕ್ರಿಯೆ, ಪ್ರತಿಗಳಿಗಾಗಿ ಮೇಲಿಂದ ಮೇಲೆ ಕಂಡು ಬಂದ ಬೇಡಿಕೆ ಮತ್ತು ಲಭ್ಯವಾದ ಸಲಹೆ, ವಿಮರ್ಶೆಗಳನ್ನು ಒಳಗೂಡಿಸಿಕೊಂಡು ಸುಧಾರಿಸಿದ ಮತ್ತು ಹೆಚ್ಚಿನ ವಿವರದೊಂದಿಗೆ ಮೂರನೇಯ ಮುದ್ರಣಕ್ಕೆ ಕೈ ಹಾಕುವಂತೆ ಪ್ರೇರೇಪಿಸಿತು. ಈ ಆವೃತ್ತಿಯಲ್ಲಿ ಮುಖ್ಯವಾಗಿ ವರ್ತನೆಯ ಸುಧಾರಿಸುವ ಸಿದ್ದಾಂತಗಳನ್ನು ಉದಾಹರಣೆಗಳೊಂದಿಗೆ, ವೃಂದ ಪ್ರಕ್ರಿಯೆಯಲ್ಲಿ ಹೆಚ್ಚಿನ ಮಾಹಿತಿ, ವೃಂದ ಚಲನಾತ್ಮಕತೆಯಲ್ಲಿ (ಒಂಟಿತನ. ನಾಯಕತ್ವ, ಬಲಿಪಶುವಾಗುವಿಕೆ, ನಿಯಂತ್ರಣ ಇತ್ಯಾದಿ), ಇದರೊಂದಿಗೆ ತಂತ್ರ ಮತ್ತು ಕೌಶಲ್ಯಗಳ ವಿವರ, ಮಾಹಿತಿ ಸಂಗ್ರಹದ ಸಾಧನಗಳ ಸಂಕ್ಷಿಪ್ತ ವಿವರಣೆ ಮತ್ತು ನೈತಿಕ ದ್ವಂದ್ವಗಳ ಕುರಿತು ಸೇರ್ಪಡೆ ಮಾಡಿ ಓದುಗರಿಗೆ ಹೆಚ್ಚಿನ ಮಾಹಿತಿ ಲಭ್ಯವಾಗುವಂತೆ ಪ್ರಯತ್ನಿಸಲಾಗಿದೆ. |
Archives
March 2026
Categories
All
MHR LEARNING ACADEMYGet it on Google Play store
|
| Niruta Publications Books (Dec 2025) | |
| File Size: | 756 kb |
| File Type: | |
SITE MAP
SiteNIRATHANKA |
POSHOUR OTHER WEBSITESSubscribe |
RSS Feed