|
ಲೇಖಕರು : ಡಾ. ಸಿ.ಆರ್. ಗೋಪಾಲ್ ಹಿರಿಯ ಸಾಹಿತಿಗಳು ಹಾಗೂ ವಾಗ್ಮಿ ಡಾ. ಸಿ.ಆರ್. ಗೋಪಾಲ್ ಅವರು ರಚಿಸಿದ ಭಾಷಣ ಕೈಪಿಡಿ ಒಂದು ಸಂಶೋಧನಾ ಗ್ರಂಥವಾಗಿದೆ. ಭಾಷಣ ಒಂದು ಕಲೆ ಎಂದು ಜಗತ್ತಿನಾದ್ಯಂತ ಪರಿಗಣನೆಗೆ ಒಳಗಾಗಿದೆ. ಮಾತನಾಡುವವರೆಲ್ಲ ಭಾಷಣಕಾರರಾಗಲು ಸಾಧ್ಯವಿಲ್ಲ. ಅದೇ ರೀತಿ ಉಪನ್ಯಾಸ ಮಾಡುವವರು ಭಾಷಣಕಾರರಲ್ಲ. ಏಕೆಂದರೆ ಉಪನ್ಯಾಸವೆಂಬುದು ತರಗತಿಯ ಮಿತಿಯಲ್ಲಿ ವಿಷಯದ ನಿರ್ದಿಷ್ಟತೆಯಲ್ಲಿ ಹೇಳುವ ಬೋಧನೆ. ಇದು ಶೈಕ್ಷಣಿಕ ಶಿಸ್ತಿನ ಬೋಧನೆ. ಆದರೆ ಭಾಷಣ ಹಾಗಲ್ಲ, ಅಲ್ಲಿ ಕಲಿಯುವ ಆಸಕ್ತಿಯ ವಿದ್ಯಾರ್ಥಿಗಳಿರುವುದಿಲ್ಲ. ಅದಕ್ಕೆ ಬದಲಾಗಿ ಕೇಳುವ ಕುತೂಹಲದ ಪ್ರೇಕ್ಷಕರಿರುತ್ತಾರೆ. ಜೊತೆಗೆ ಕೇಳುಗರೆಲ್ಲ ಒಂದೇ ಮನೋಧರ್ಮದವರಲ್ಲ, ಒಂದೇ ಮನಸ್ಥಿತಿಯವರೂ ಅಲ್ಲ. ಭಿನ್ನ ಭಿನ್ನ ಅಭಿರುಚಿಯ, ಭಿನ್ನ ಭಿನ್ನ ಆಸಕ್ತಿಗಳ, ಭಿನ್ನ ಸಮುದಾಯಗಳ ಗುಂಪುಗಳು ಅಲ್ಲಿರುತ್ತವೆ. ಹೀಗಾಗಿ ಭಾಷಣ ಆಯಾ ಭಾಷಣಕಾರನ / ಭಾಷಣಕಾರ್ತಿಯ ಕಲಾತ್ಮಕ ಮೆರುಗಿನಿಂದಾಗಿ ಅದು ಸ್ವೀಕಾರ ಅಥವಾ ನಿರಾಕರಣೆಗೆ ಒಳಗಾಗುತ್ತದೆ. ಪರಿವಿಡಿ 1. ಅಧ್ಯಾಯ ಒಂದು ಪೀಠಿಕೆ, ಭಾಷಣ ಒಂದು ಕಲೆ, ಭಾಷಣದ ವ್ಯಾಖ್ಯೆ-ವಿವರಣೆ, ಭಾಷಣದ ಉದ್ದೇಶ, ಭಾಷಣದ ಅಂಶಗಳು. 2. ಅಧ್ಯಾಯ ಎರಡು ಭಾಷಣದ ವೇದಿಕೆ / ಸ್ಥಳ, ಮಹತ್ವ, ಉಪಯೋಗ . 3. ಅಧ್ಯಾಯ ಮೂರು ಭಾಷಣದ ವೈಶಿಷ್ಟ್ಯಗಳು, ಗುಣಲಕ್ಷಣಗಳು, ಆತ್ಮವಿಶ್ವಾಸ, ಸಕಾರಾತ್ಮಕ-ನಕಾರಾತ್ಮಕ ಭಾವನೆಗಳು. 4. ಅಧ್ಯಾಯ ನಾಲ್ಕು ಭಾಷಣದ ವೈವಿಧ್ಯತೆ :- ಪ್ರಕಾರಗಳು, ವೇದಿಕೆ ಮತ್ತು ಭಾಷಣಗಳು, ನಿರೂಪಣೆ, ಪ್ರಾರ್ಥನೆ, ಸ್ವಾಗತ, ಪ್ರಾಸ್ತಾವಿಕ, ಪರಿಚಯ, ಉದ್ಘಾಟನೆ, ಮುಖ್ಯ ಅತಿಥಿಗಳ ಭಾಷಣ, ಬೀಳ್ಕೊಡಿಗೆ, ಸಮಾರೋಪ, ಅಧ್ಯಕ್ಷರ ಭಾಷಣ, ಅಭಿನಂದನಾ ಭಾಷಣ, ಸಂತಾಪ ಸೂಚನ ಭಾಷಣ, ಪ್ರಶಸ್ತಿ ಸ್ವೀಕಾರ ಸಮಯದಲ್ಲಿ ಭಾಷಣ, ವಂದನಾರ್ಪಣೆ, ವಾರ್ಷಿಕ ಆಚರಣೆಗಳು, ಹಬ್ಬಗಳು, ಜಯಂತಿಗಳು. 5. ಅಧ್ಯಾಯ ಐದು ಭಾಷಣದ ಸಿದ್ಧತೆ :- ಮಾನಸಿಕ ತಯಾರಿ, ಮನುಷ್ಯನ ಶಕ್ತಿ ಸಾಮರ್ಥ್ಯಗಳಿಗೆ ಸೂತ್ರ, ವಿಷಯದ ಆಯ್ಕೆ, ಉತ್ತಮ ಕೇಳುಗನ ಲಕ್ಷಣಗಳು, ವಿಷಯ ಸಂಗ್ರಹ, ಮಾಹಿತಿಯ ಮೂಲಗಳು, ಕರಡುಭಾಷಣ. ಅಭ್ಯಾಸ. 6. ಅಧ್ಯಾಯ ಆರು ಸಭಾಕಂಪವನ್ನು ಗೆಲ್ಲಿ :- ವ್ಯಾಖ್ಯೆ, ಕಾರಣಗಳು, ಪರಿಹಾರೋಪಾಯಗಳು, ದಶಸೂತ್ರಗಳು. 7. ಅಧ್ಯಾಯ ಏಳು ಭಾಷಣದ ಮಂಡನೆ :- ಸಂವಹನ, ಸಂಭಾಷಣೆ, ಭಾಷಣ, ಸಂವಹನ ಕೌಶಲಗಳು, ಭಾಷೆ, ವಾಕ್ಪ್ರವಾಹ, ವಸ್ತ್ರಸಂಹಿತೆ, ವೇದಿಕೆಯ ಮೇಲೆ ನಿಮ್ಮ ಅಸ್ತಿತ್ವ, ವಾಚನಾಪೀಠ, ಹಾವಭಾವ, ದೇಹವಿನ್ಯಾಸ, ಸಂಬೋಧನೆ, ಭಾಷಣದ ಆರಂಭ, ಅನುಸರಣೆ. 8. ಅಧ್ಯಾಯ ಎಂಟು ಭಾಷಣಗಳಲ್ಲಿ ಉದ್ಧೃತಗಳು-ಉದ್ಧರಣಗಳು :- ದೇವರು ಒಬ್ಬನೆ, ಭಗವದ್ಗೀತೆಯಲ್ಲಿ, ಸುಭಾಷಿತಗಳು, ಮಂಕುತಿಮ್ಮನ ಕಗ್ಗ, ಶರಣ ಸಾಹಿತ್ಯ, ದಾಸ ಸಾಹಿತ್ಯ, ಗಾದೆಮಾತುಗಳು. 9. ಅಧ್ಯಾಯ ಒಂಬತ್ತು ಭಾಷಣಗಳಲ್ಲಿ ಶ್ರವಣ-ದೃಶ್ಯ ಮಾಧ್ಯಮಗಳು :- ಗಮನಿಸುವ ಅಂಶಗಳು, ಮಾರ್ಗದರ್ಶಿ ಸೂತ್ರಗಳು, ಧ್ವನಿವರ್ಧಕಗಳು, ಭಾಷಣಪೀಠ, ಬೆಳಕಿನ ವ್ಯವಸ್ಥೆ, ದೃಶ್ಯ ಪರಿಕರಗಳು, ಕಪ್ಪು/ಬಿಳಿ ಹಲಗೆ, ಮೇಲ್ಭಾಗದ ಪ್ರಕ್ಷೇಪಕ, ಜಾರಿಕೆ ಪ್ರಕ್ಷೇಪಕ, ಚಲನಚಿತ್ರ/ಕಿರುಚಿತ್ರ ಪ್ರಕ್ಷೇಪಕ, ಧ್ವನಿಮುದ್ರಕ ಸಾಧನ, ದೃಶ್ಯ-ಶ್ರವಣ ಮುದ್ರಿತ ಸಾಧನ, ಲ್ಯಾಪ್ಟಾಪ್. 10. ಅಧ್ಯಾಯ ಹತ್ತು ವ್ಯವಸ್ಥಾಪಕರು ಮತ್ತು ವೇದಿಕೆಯ ಏರ್ಪಾಡು :- ಯಾರು ವ್ಯವಸ್ಥಾಪಕರಾಗಬಹುದು, ವ್ಯವಸ್ಥಾಪಕರ ಸಭೆ, ಆಹ್ವಾನ ಪತ್ರಿಕೆ, ಪುಸ್ತಕ ಬಿಡುಗಡೆ ಕಾರ್ಯಕ್ರಮ, ವೇದಿಕೆ, ಪಟ್ಟಿ ಪತಾಕೆ, ವೇದಿಕೆಯ ಮೇಲಿನ ಆಸನ ವ್ಯವಸ್ಥೆ, ಸಭಿಕರ ಆಸನ ವ್ಯವಸ್ಥೆ, ಕಾರ್ಯಕ್ರಮ ಪಟ್ಟಿ, ಸಭಾ ಮರ್ಯಾದೆ, ಸಮ್ಮೇಳನದ ಆಹ್ವಾನ ಪತ್ರಿಕೆ ಮತ್ತು ಪ್ರಕ್ರಿಯೆ. 11. ಅಧ್ಯಾಯ ಹನ್ನೊಂದು ಸಭಿಕರು-ಸಭಿಕರಲ್ಲಿ ವೈವಿಧ್ಯತೆ, ಕೇಳುವ ಕಲೆ, ಕೇಳುವ ಪ್ರಕ್ರಿಯೆಯ ಅಂಶಗಳು, ಕೇಳುಗರು ಗಮನಿಸಬೇಕಾದ ಅಂಶಗಳು, ಟಿಪ್ಪಣಿ ಹೇಗೆ ಮಾಡಿಕೊಳ್ಳಬೇಕು, ಕೇಳುವುದರಿಂದ ಆಗುವ ಅನುಕೂಲಗಳು. 12. ಅಧ್ಯಾಯ ಹನ್ನೆರಡು ಶ್ರೇಷ್ಠ ಭಾಷಣಕಾರರ ಕೆಲವು ಮಾದರಿಗಳು. ಅನುಬಂಧಗಳು 1. ಆಕರ ಸಾಹಿತ್ಯ 2. ಶಬ್ದಕೋಶ Social Work Books |
Archives
March 2026
Categories
All
Social Work
|
|
|
|
| ||||||||||||||||||||||||
SITE MAP
SiteNIRATHANKA |
POSHOUR OTHER WEBSITESSubscribe |
RSS Feed