|
ಲೇಖಕರು : ಡಾ. ಸಿ.ಆರ್. ಗೋಪಾಲ್ `ಸಮುದಾಯ ಸಂಘಟನೆ ಕೃತಿಯಲ್ಲಿ ಉಪಯುಕ್ತವಾಗುವ ವಿಷಯ ಸಂಗ್ರಹ ಸಾಕಷ್ಟು ಹೇರಳವಾಗಿದೆ. ಸಮುದಾಯ, ಸಮುದಾಯದ ಪ್ರಕಾರಗಳು, ಸಮುದಾಯದ ಲಕ್ಷಣಗಳು, ಸಮಸ್ಯೆಗಳು, ಸಮುದಾಯ ಸಂಘಟನೆಯ ಇತಿಹಾಸ, ಸಂಘಟನೆ, ಅಭಿವೃದ್ಧಿ, ಸಂಘಟನಾ ಮಾದರಿಗಳು, ಗ್ರಹಿಕೆಗಳು, ವೈಶಿಷ್ಟ್ಯತೆಗಳು, ಧ್ಯೇಯೋದ್ದೇಶಗಳು, ತತ್ತ್ವಗಳು, ಪ್ರಕ್ರಿಯೆಗಳು, ಕಾರ್ಯತಂತ್ರಗಳು ಸಮಾಜಕಾರ್ಯ ಕಾರ್ಯಕರ್ತನ ಪಾತ್ರ, ಇವೇ ಮೊದಲಾದ ಹಲವು ಹತ್ತು ಉಪಯುಕ್ತ ವಿಚಾರಗಳ ಬಗ್ಗೆ ಸಮೃದ್ಧ ಮಾಹಿತಿಗಳನ್ನು ವಿಶೇಷ ರೀತಿಯಲ್ಲಿ ಒದಗಿಸಿದ್ದಾರೆ. ಇವುಗಳ ಜೊತೆಗೆ ಮಹಾತ್ಮಾ ಗಾಂಧೀಜಿಯವರು ಪ್ರತಿಪಾದಿಸಿರುವ ಸರ್ವೋದಯ ಮತ್ತು ಇತರ ವಿಶಿಷ್ಟ ರಚನಾತ್ಮಕ ಕಾರ್ಯಕ್ರಮಗಳ ಬಗ್ಗೆಯೂ ಸಾಕಷ್ಟು ಸಮರ್ಪಕವಾಗಿ ಪರಿಚೈಸಿದ್ದಾರೆ. ಪ್ರತಿಪಾದಿಸಬೇಕಾದ ವಿವಿಧ ವಿಚಾರಗಳನ್ನು ಅಧ್ಯಾಯ, ಉಪ ಅಧ್ಯಾಯ ಹಾಗೂ ಶೀರ್ಷಿಕೆಗಳನ್ನಾಗಿ ವಿಭಾಗಿಸಿಕೊಂಡಿರುವ ಅನುಕ್ರಮ ಸಮಂಜಸವಾಗಿದೆ. ವಿಷಯಗಳನ್ನು ವಿಭಾಗಿಸಿಕೊಂಡಿರುವುದರಲ್ಲಿ ಒಂದು ಸೂಕ್ತ ಕ್ರಮಬದ್ಧತೆ ಇದೆ. ಒಂದು ಬಂಧ ಇದೆ. ಪರಿವಿಡಿ 1. ಅಧ್ಯಾಯ-ಒಂದು ಪೀಠಿಕೆ, ಸಮುದಾಯ, ವ್ಯಾಖ್ಯೆಗಳು, ಸಮುದಾಯದ ವೈಲಕ್ಷಣಗಳು, ಸಮುದಾಯದ ಬಗ್ಗೆ ಸ್ವಾಭಿಮಾನ, ಐಕ್ಯಭಾವ, ಪರಾವಲಂಬನಾ ಭಾವ, ಪಾತ್ರ ನಿರ್ವಹಣಾ ಭಾವ, ಬದಲಾಗುತ್ತಿರುವ ಪರಿಸ್ಥಿತಿ, ಸಮುದಾಯ-ಸಮಾಜ, ನೆರೆಹೊರೆ, ಸಂಘ, ಸಂಸ್ಥೆ ಇವುಗಳಲ್ಲಿರುವ ವ್ಯತ್ಯಾಸಗಳು. 2. ಅಧ್ಯಾಯ-ಎರಡು ಸಮುದಾಯದ ಪ್ರಕಾರಗಳು :- ಭೌಗೋಲಿಕ ಮತ್ತು ಕ್ರಿಯಾತ್ಮಕ ಸಮುದಾಯಗಳು, ಗ್ರಾಮ ಸಮುದಾಯ, ಗ್ರಾಮ ಸಮುದಾಯದ ವೈಲಕ್ಷಣಗಳು, ಗ್ರಾಮ ಸಮುದಾಯಗಳ ವೈವಿಧ್ಯತೆ, ನಗರ ಸಮುದಾಯ, ಕೆಲವು ಆಯ್ದ ವ್ಯಾಖ್ಯೆಗಳು, ನಗರ ಸಮುದಾಯದ ವೈಲಕ್ಷಣಗಳು, ಬುಡಕಟ್ಟು ಸಮುದಾಯಗಳು, ಬುಡಕಟ್ಟು ಸಮುದಾಯದ ಪ್ರಮುಖ ಲಕ್ಷಣಗಳು. 3. ಅಧ್ಯಾಯ-ಮೂರು, ಭಾಗ-ಒಂದು ಗ್ರಾಮೀಣ ಸಮುದಾಯಗಳ ಸಮಸ್ಯೆಗಳ ಪಕ್ಷಿನೋಟ :- ಕೃಷಿ, ಭೂಮಿ, ಸುಧಾರಿತ ತಳಿಯ ಬೀಜ, ಗೊಬ್ಬರಗಳು, ಔಷಧಗಳು, ಯಾಂತ್ರೀಕರಣ, ಸಣ್ಣ ಹಿಡುವಳಿ, ಅಸ್ಥಿರ ಮಳೆ, ದಾಸ್ತಾನು, ಮಾರುಕಟ್ಟೆ, ಸಾರಿಗೆ-ಸಂಪರ್ಕ, ರೈತರ ಆತ್ಮಹತ್ಯೆ, ಆರ್ಥಿಕ ಸಮಸ್ಯೆಗಳು, ಸಾಮಾಜಿಕ ಸಮಸ್ಯೆಗಳು, ಮೂಢನಂಬಿಕೆ, ಅಸ್ಪೃಶ್ಯತೆ, ಸಾಂಪ್ರದಾಯಿಕತೆ ಮತ್ತು ಪ್ರತಿಗಾಮಿ ಧೋರಣೆ, ಜೀತದಾಳುಗಳ ಸಮಸ್ಯೆ, ಮದ್ಯಪಾನ, ನಿರುದ್ಯೋಗ, ಮಹಿಳಾ ಅಸಮಾನತೆ, ಸ್ತ್ರೀಯರ ಸಮಸ್ಯೆಗಳು, (ಲಿಂಗ ತಾರತಮ್ಯ, ಶಿಕ್ಷಣ, ಉದ್ಯೋಗ, ಆರೋಗ್ಯ, ರಾಜಕೀಯ ಕ್ಷೇತ್ರ,) ನಾಗರೀಕ ಸೌಲಭ್ಯಗಳ ಕೊರತೆ, ನಿರಕ್ಷರತೆ, ಆರೋಗ್ಯ, ವಸತಿ, ಬಾಲಕಾರ್ಮಿಕರು, ಗ್ರಾಮೀಣ ರಸ್ತೆಗಳು, ಜನಸಂಖ್ಯಾ ಏರಿಕೆ, ವೃದ್ಧರ ಸಮಸ್ಯೆಗಳು, ಆರ್ಥಿಕ ಸಮಸ್ಯೆಗಳು, ಸಾಮಾಜಿಕ ಸಮಸ್ಯೆಗಳು, ಆರೋಗ್ಯದ ಸಮಸ್ಯೆಗಳು. 4. ಅಧ್ಯಾಯ-ಮೂರು, ಭಾಗ-ಎರಡು ನಗರ ಸಮುದಾಯಗಳ, ಬುಡಕಟ್ಟು ಸಮುದಾಯಗಳ ಸಮಸ್ಯೆಗಳು :- ಜನಸಾಂದ್ರತೆ, ವಸತಿ, ಕೊಳೆಗೇರಿಗಳು, ನೀರು ಪೂರೈಕೆ ಮತ್ತು ಒಳ ಚರಂಡಿ ವ್ಯವಸ್ಥೆ, ಮಾಲಿನ್ಯತೆ, ಸಾಗಾಣಿಕೆ ಮತ್ತು ಸಂಚಾರ, ವಿದ್ಯುಚ್ಛಕ್ತಿ, ಅನಿಶ್ಚಿತತೆ, ವಿಹಾರಗಳಿಗೆ ಅನವಕಾಶ, ಬುಡಕಟ್ಟು ಸಮುದಾಯದ ಸಮಸ್ಯೆಗಳು, ಪ್ರತ್ಯೇಕತೆ, ಮೂಢನಂಬಿಕೆ, ಅಂಧಶ್ರದ್ಧೆ, ಸಾಂಸ್ಕೃತಿಕ ಭಿನ್ನತೆ, ಮದ್ಯಪಾನ, ಸಾಂಸ್ಕೃತಿಕ ಸಾಮಾನ್ಯೀಕರಣ, ವೃತ್ತಿಯಲ್ಲಿ ಬದಲಾವಣೆ ಮತ್ತು ಆರ್ಥಿಕ ಸ್ಥಿತಿಗತಿ, ಆರೋಗ್ಯ, ಬದಲಾಗುತ್ತಿರುವ ಬುಡಕಟ್ಟು ಸಮುದಾಯಗಳು. 5. ಅಧ್ಯಾಯ-ನಾಲ್ಕು, ಭಾಗ-ಒಂದು ಸಮುದಾಯ ಸಂಘಟನೆಯ ಇತಿಹಾಸ :- ಬ್ರಿಟನ್ನಿನ ಸಮುದಾಯ ಸಂಘಟನೆಯ ಇತಿಹಾಸ-ಕಾರ್ಮಿಕ ಶಾಸನ 1343, ಬಡತನದ ಪರಿಹಾರ ಶಾಸನ 1531, ರಾಣಿ ಎಲಿಜಬೆತ್ ಅವರ ಬಡವರ ಕಾನೂನು ಸಂಹಿತೆ 1601, ದಾನ ಸಂಘಟನಾ ಸಮಾಜಗಳು, ಬೆವರಿಡ್ಜ್ ವರದಿ 1941, ಆಧುನಿಕ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳು, ಬ್ರಿಟನ್ ದೇಶದ ಆಧುನಿಕ ಸಮುದಾಯ ಸಂಘಟನೆಯ ಪರಂಪರೆ, ಮೊದಲನೆ ಹಂತ 1880-1920, ಎರಡನೇ ಹಂತ 1920-1950, ಮೂರನೆಯ ಹಂತ 1950ರ ನಂತರ, ನಾಲ್ಕನೇ ಹಂತ. ಅಮೇರಿಕದಲ್ಲಿ ಸಮುದಾಯ ಸಂಘಟನೆಯ ಪರಂಪರೆ-ದಾನ ಸಂಘಟನಾ ಕಾಲಾವಧಿ, ಸಮುದಾಯ ಕೋಶಗಳು ಮತ್ತು ಸಮಿತಿಗಳು, ಅಮೇರಿಕಾ ಸಮುದಾಯ ಸಂಘಟನಾ ಸಂಸ್ಥೆ, ಸಮುದಾಯ ಸಂಘಟನೆಯ ವಿಸ್ತಾರ ಮತ್ತು ವೃತ್ಯಾತ್ಮಕ ಅಭಿವೃದ್ಧಿ, ಎರಡನೇ ಜಾಗತಿಕ ಸಮರ ಮತ್ತು ಸಮುದಾಯ ಸಂಘಟನೆ, ನಾಲ್ಕನೆಯ ಹಂತ (1955ರ ನಂತರ), ಸಾಮಾಜಿಕ ಬದಲಾವಣೆಗೆ ಒತ್ತು, ಸಮುದಾಯ ಸಂಘಟನೆಯ ಪ್ರಚಲಿತ ಧೋರಣೆಗಳು. 6. ಅಧ್ಯಾಯ-ನಾಲ್ಕು, ಭಾಗ-ಎರಡು ಭಾರತದಲ್ಲಿ ಸಮುದಾಯ ಸಂಘಟನೆಯ-ಅಭಿವೃದ್ಧಿಯ ಇತಿಹಾಸ :- ವೇದಕಾಲ, ದಾನ, ಬದಲಾದ ಪರಿಸ್ಥಿತಿ, ಋಗ್ವೇದದ ನಂತರದ ಕಾಲ, ಪಂಚ ಮಹಾಯಜ್ಞಗಳು, ಇಷ್ಟ-ಪೂರ್ತಗಳು, ಭಗವದ್ಗೀತೆಯಲ್ಲಿ, ಸ್ಮೃತಿಗಳು, ಮನುಸ್ಮೃತಿ ಇತ್ಯಾದಿ, ನೀತಿಗ್ರಂಥಗಳು, ಕೌಟಿಲ್ಯನ ನೀತಿಶಾಸ್ತ್ರ, ವಿದುರ ನೀತಿ, ಬೌದ್ಧ ಯುಗ, ಇಸ್ಲಾಂಯುಗ, ಪಾರ್ಸಿಯುಗ, ಜೈನಧರ್ಮ, ಯಹೂದಿ (ಹಿಬ್ರೂ ಧರ್ಮ), ಕ್ರೈಸ್ತ ಧರ್ಮ, ಧನ್ಯವಾಕ್ಯಗಳು, ಸಿಖ್ ಧರ್ಮ, ಸೂಫೀ ಧರ್ಮ, ಕನ್ಫ್ಯೂಶಿಯಸ್ ಧರ್ಮ, ಟಾವೋ ಧರ್ಮ, ಪಿಂಟೋಧರ್ಮ, ಬಹಾಯಿ ಧರ್ಮ, ಶರಣ ಸಾಹಿತ್ಯ, ದಾಸ ಸಾಹಿತ್ಯ, ಆಶ್ರಮಗಳು, ವಿದ್ಯಾಪೀಠಗಳು, ದೇವಸ್ಥಾನಗಳು. 7. ಅಧ್ಯಾಯ-ನಾಲ್ಕು, ಭಾಗ-ಮೂರು ಆಧುನಿಕ ಕಾಲದ ಸಮಾಜ ಸುಧಾರಣೆ-ಸಮಾಜಕಾರ್ಯ-ಸಮುದಾಯ ಅಭಿವೃದ್ಧಿ ಯೋಜನೆಗಳು:- ಕ್ರೈಸ್ತ ಧರ್ಮ ಪ್ರಚಾರಕರು ಮತ್ತು ಸಮಾಜ ಸುಧಾರಣೆ, ಸಮಾಜ ಸುಧಾರಣಾ ಚಟುವಟಿಕೆಗಳು (1780-1880), ಸಮಾಜ ಸೇವಾ ಸಂಘಗಳು (1980-1900), ಸಮಾಜಕಾರ್ಯ ಚಟುವಟಿಕೆಗಳು (1900-1920), ಸಮಾಜಕಾರ್ಯ (1920-1937), ಗಾಂಧೀಜಿಯ ರಚನಾತ್ಮಕ ಕಾರ್ಯಕ್ರಮಗಳು, ಸಾಮಾಜಿಕ ಕಾನೂನುಗಳು, ಸಮುದಾಯ ಅಭಿವೃದ್ಧಿ ಯೋಜನೆಗಳು (ಪ್ರಯೋಗಗಳು), ಶ್ರೀನಿಕೇತನ ಯೋಜನೆ, ಸೇವಾಗ್ರಾಮ ಯೋಜನೆ, ಮಾರ್ತಾಂಡಂ ಯೋಜನೆ, ಗುರ್ಗಾಂವ್ ಯೋಜನೆ, ಬರೋಡಾ ಯೋಜನೆ, ನಿಲೋಖೇರಿ ಯೋಜನೆ, ಫಿರ್ಕಾ ಅಭಿವೃದ್ಧಿ ಯೋಜನೆ, ಎಟಾವ್ಹಾ ಯೋಜನೆ, ಗ್ರಾಮ ಪಂಚಾಯಿತಿಗಳು ಮತ್ತು ಸಮುದಾಯ ಸಂಘಟನೆ. 8. ಅಧ್ಯಾಯ-ಐದು ಸಮುದಾಯ ಸಂಘಟನೆ-ಸಮುದಾಯ ಅಭಿವೃದ್ಧಿ :- ಸಮುದಾಯ, ಅವಶ್ಯಕತೆಗಳನ್ನು ಗುರುತಿಸುವುದು, ಆದ್ಯತಾಪಟ್ಟ ತಯಾರಿಕೆ, ಸಂಪನ್ಮೂಲಗಳ ಕ್ರೂಢೀಕರಣ, ಕೆಲಸ ಮಾಡಲು ಭರವಸೆಯನ್ನು ಮೂಡಿಸಿಕೊಳ್ಳುವುದು, ನಿರ್ಣಯ ತೆಗೆದುಕೊಳ್ಳುವುದು, ಕಾರ್ಯಕ್ರಮಗಳ ಅನುಷ್ಠಾನ, ಸಹಯೋಗ-ಸಹಕಾರಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು, ಹೊಸ ಪದ್ಧತಿಯನ್ನು ರೂಪಿಸಿಕೊಳ್ಳುವುದು, ಸಮುದಾಯ ಸಂಘಟನೆ ಒಂದು ಪ್ರಜ್ಞಾಪೂರ್ಣ ಪ್ರಕ್ರಿಯೆ, ಇತರೆ ವ್ಯಾಖ್ಯೆಗಳು, ಅವುಗಳ ವಿವರಣೆ, ಸಮುದಾಯ ಸಂಘಟನೆ ಮತ್ತು ಸಮಾಜಕಾರ್ಯದ ಇತರೆ ವಿಧಾನಗಳಿಗಿರುವ ವ್ಯತ್ಯಾಸ, ಆಡಳಿತ ಮತ್ತು ಸಮುದಾಯ ಸಂಘಟನೆ, ಸಮುದಾಯ ಸಂಘಟನೆ ಹಾಗೂ ಸಮುದಾಯ ಅಭಿವೃದ್ಧಿ, ಈ ಪರಿಕಲ್ಪನೆಗಳ ವ್ಯತ್ಯಾಸಗಳು. 9. ಅಧ್ಯಾಯ-ಆರು ಸಮುದಾಯ ಸಂಘಟನೆಯ ಮಾದರಿಗಳು :- ನಿಶ್ಚಿತ ಉದ್ದೇಶವುಳ್ಳ ದೃಷ್ಟಿಕೋನ, ವಿವಿಧೋದ್ದೇಶ ದೃಷ್ಟಿಕೋನ, ಪ್ರಕ್ರಿಯೆ ಉದ್ದೇಶಿತ ದೃಷ್ಟಿಕೋನ, ಸಮುದಾಯಗಳಲ್ಲಿ ಕೆಲಸ ಮಾಡುವಾಗ ಗಣನೆಗೆ ತೆಗೆದುಕೊಳ್ಳಬೇಕಾದ ಅಂಶಗಳು, ಸ್ಥಳೀಯ ಅಭಿವೃದ್ಧಿ ಮಾದರಿ-ನೆರೆಹೊರೆ ಅಭಿವೃದ್ಧಿ ಮಾದರಿ, ಸಾಮಾಜಿಕ ಯೋಜನಾ ಮಾದರಿ, ಸಾಮಾಜಿಕ ಕಾರ್ಯಾಚರಣೆ ಮಾದರಿ, ವ್ಯತ್ಯಾಸಗಳು, ಸೌಲ್ ಅಲೆನ್ಸ್ಕೀ ಮಾದರಿ, ಮಾದರಿಯ ಪ್ರಮುಖ ಅಂಶಗಳು. 10. ಅಧ್ಯಾಯ-ಏಳು ಸಮುದಾಯ ಸಂಘಟನೆಯ ಗ್ರಹಿಕೆಗಳು, ವೈಶಿಷ್ಟ್ಯಗಳು, ಧ್ಯೇಯೋದ್ದೇಶಗಳು, ವ್ಯಾಪ್ತಿ ಇತ್ಯಾದಿ :- ಮೂಲ ಗ್ರಹಿಕೆಗಳು, ಸಮುದಾಯದ ಮೌಲ್ಯಗಳು, ಆಧುನಿಕ ಸಮಾಜದ ಸಮಸ್ಯೆಗಳು-ಸವಾಲುಗಳು, ಸಮುದಾಯಗಳಲ್ಲಿ ಗುಂಪುಗಳ-ಉಪಗುಂಪುಗಳ ಬಲಾಢ್ಯತೆ, ಸಮಸ್ಯೆಗಳನ್ನು ನಿವಾರಿಸಿಕೊಳ್ಳುವಲ್ಲಿ ಸಮುದಾಯದ ಸದಸ್ಯರು ಸಮರ್ಥರು ಎಂಬ ನಂಬಿಕೆ, ಜನರು ಬದಲಾವಣೆಯನ್ನು ವಿರೋಧಿಸುವುದಿಲ್ಲ, ಬದಲಾವಣೆ ತರುವಲ್ಲಿ ಸದಸ್ಯರು ಉತ್ಸುಕರಾಗಿರುತ್ತಾರೆ, ಬದಲಾವಣೆ ಸ್ವ ನಿರ್ಣಯ ಆಗಿರಬೇಕು, ಸಮುದಾಯಕ್ಕೆ ಸಹಾಯ-ನೆರವು, ಸಮುದಾಯದಲ್ಲಿ ಬಾಂಧವ್ಯ, ಆಂತರಿಕ-ಬಾಹ್ಯ ಸಂಪನ್ಮೂಲಗಳು, ಸಮಗ್ರ ಧೋರಣೆ, ಪ್ರಜಾಪ್ರಭುತ್ವದ ತಳಹದಿ, ಸಮುದಾಯ ಸಂಘಟನೆಯ ಪ್ರಮುಖ ವೈಶಿಷ್ಟ್ಯಗಳು, ಸಂಘಟನೆ ಎಲ್ಲೆಲ್ಲಿ ಆಗಬೇಕು, ಸಂಘಟನೆಯನ್ನು ಯಾರು ಮಾಡಬೇಕು. ಸಮುದಾಯ ಸಂಘಟನೆಯ ಗುರಿ, ಧ್ಯೇಯೋದ್ದೇಶಗಳು, ಸಮುದಾಯ ಸಂಘಟನೆಯ ವ್ಯಾಪ್ತಿ, ಸಮುದಾಯ ಸಂಘಟನೆ ಸಮಾಜಕಾರ್ಯದ ಒಂದು ವಿಧಾನ. 11. ಅಧ್ಯಾಯ-ಎಂಟು ಸಮುದಾಯ ಸಂಘಟನೆಯ ತತ್ತ್ವಗಳು :- ಅತೃಪ್ತಿ-ಅಸಮಾಧಾನ, ಅತೃಪ್ತಿಯನ್ನು ಸಂಸ್ಥೆ ಸ್ಥಾಪಿಸಲು, ಯೋಜನೆ ರೂಪಿಸಲು, ಕಾರ್ಯರೂಪಕ್ಕೆ ತರಲು ಉಪಯೋಗಿಸಬೇಕು, ಅತೃಪ್ತಿಯು ಸಾರ್ವತ್ರಿಕವಾಗಿರಬೇಕು. ನಾಯಕರನ್ನು ತೊಡಗಿಸಿಕೊಳ್ಳಬೇಕು, ಸಂಸ್ಥೆಗೆ ಧ್ಯೇಯೋದ್ದೇಶಗಳು, ಗುರಿಗಳು ಮತ್ತು ವಿಧಾನಗಳು ಇರಬೇಕು, ಕೆಲವು ಕಾರ್ಯಕ್ರಮಗಳು ಭಾವನಾತ್ಮಕ ಅಂಶಗಳನ್ನು ಒಳಗೊಂಡಿರಬೇಕು, ಸಮುದಾಯದಲ್ಲಿರುವ ಸದ್ಭಾವನೆಗಳನ್ನು ಸಂಘಟನೆಗೆ ಬಳಸಿಕೊಳ್ಳಬೇಕು. ಚೈತನ್ಯಪೂರ್ಣ ಮತ್ತು ಪ್ರಭಾವಯುತವಾದ ಸಂಪರ್ಕವನ್ನು ಅಭಿವೃದ್ಧಿಪಡಿಸಬೇಕು, ಗುಂಪುಗಳನ್ನು ಬೆಂಬಲಿಸಬೇಕು-ಪ್ರಭಾವಶಾಲಿಯಾಗಲು ಅನುವು ಮಾಡಿಕೊಡಬೇಕು, ಪರಿಸ್ಥಿತಿಗೆ ತಕ್ಕಂತೆ ಕಾರ್ಯವೈಖರಿಯ ಗತಿ, ನಾಯಕರನ್ನು ಬೆಳೆಸುವಲ್ಲಿ ಸಂಸ್ಥೆಯ ಪಾತ್ರ, ಸಂಸ್ಥೆ ಸಮುದಾಯದಲ್ಲಿ ತನ್ನ ಶಕ್ತಿ, ಸ್ಥಿರತೆ, ಗೌರವಗಳನ್ನು ಹೆಚ್ಚಿಸಿಕೊಳ್ಳಬೇಕು, ಆರ್ಥರ್ ಡನ್ಹ್ಯಾಮ್ ಅವರ ಸೂತ್ರಗಳು, ಪ್ರಜಾಪ್ರಭುತ್ವದ ತಳಹದಿ, ಸ್ಥಳೀಯ ಜನರಿಂದ ಬೆಂಬಲದ ನಿಯಂತ್ರಣ, ಜನರು ತೊಡಗಿಕೊಳ್ಳುವಿಕೆ, ಸಮಾಜಕಲ್ಯಾಣ ಸಂಸ್ಥೆಗಳು, ಕಾರ್ಯಕ್ರಮಗಳು, ನಾಗರೀಕರ ಕಲ್ಪನೆ, ಸ್ವಸಹಾಯ ಇತ್ಯಾದಿ ಅಂಶಗಳು, ಸಮಾಜಕಲ್ಯಾಣ ಕಾರ್ಯಕ್ರಮಗಳು, ಮ್ಯಾಕ್ನೀಯಲ್, ಪ್ರೊ. ಸಿದ್ಧಿಕಿಯವರು ಪ್ರತಿಪಾದಿಸಿದ ತತ್ತ್ವಗಳು. 12. ಅಧ್ಯಾಯ-ಒಂಭತ್ತು ಸಮುದಾಯ ಸಂಘಟನೆಯ ಪ್ರಕ್ರಿಯೆ :- ಸಮುದಾಯ ಭಾವೈಕ್ಯತೆ, ಸಾಮಾಜಿಕ ರಚನೆ, ಯೋಜನೆಯ ಅವಶ್ಯಕತೆಗಳು, ಸಮಸ್ಯೆಯ ಸ್ವರೂಪ, ಸಮಸ್ಯೆಗೆ ಪರಿಹಾರವನ್ನು ನಿರ್ಣಯಿಸುವುದು, ಯೋಜನೆಯ ಅನುಷ್ಠಾನ, ಜನ-ಸಾಮಾನ್ಯರ ಭಾಗವಹಿಸುವಿಕೆ, ಸಮುದಾಯದ ಚಿತ್ರಣ, ಕಾರ್ಯಕ್ರಮ ಯೋಜನೆ, ಆಡಳಿತ ಮತ್ತು ಯೋಜನಾ ನಿರ್ವಹಣೆ, ಹೊಣೆಗಾರಿಕೆ ನಿರ್ವಹಣೆ, ಮೌಲ್ಯಮಾಪನ, ಮೌಲ್ಯಗಳ ಬಗ್ಗೆ ವಿವಾದ. 13. ಅಧ್ಯಾಯ-ಹತ್ತು ಸಮುದಾಯ ಸಂಘಟನೆಯ ಪದ್ಧತಿಗಳು-ವಿಧಾನಗಳು-ಕಾರ್ಯತಂತ್ರಗಳು:- ಪ್ರೊ. ಆರ್ಥರ್ ಡನ್ಹ್ಯಾಮ್, ಪ್ರೊ. ಎಚ್.ಎಂ. ಮರುಳಸಿದ್ಧಯ್ಯ ಅವರು ಪ್ರತಿಪಾದಿಸಿದ ವಿಭಾಗಗಳು-ತಂತ್ರಗಳು, ಯೋಜನೆ-ಕಾರ್ಯಕ್ರಮಗಳು, ಮಾಹಿತಿ ಸಂಗ್ರಹಣೆ, ಸಂಶೋಧನೆ, ವಿಧಾನಗಳು, ಸಾಮಾಜಿಕ ಸಮೀಕ್ಷೆ, ವ್ಯತ್ಯಾಸಗಳು, ಸಮೀಕ್ಷೆಯ ಹಂತಗಳು, ಸಂದರ್ಶನ, ಪ್ರಶ್ನಾವಳಿ, ಅವಲೋಕನ, ಆಕರಗಳು, ಪ್ರಾಥಮಿಕ-ಅನುಷಂಗಿಕ, ಸಾರ್ವಜನಿಕ ದಾಖಲೆಗಳು, ವಿಶ್ಲೇಷಣೆ, ಪರಿಷ್ಕರಣ, ಸಂಕೇತಿಕರಣ ಮತ್ತು ಕೋಷ್ಟಕೀಕರಣ, ಮೌಲ್ಯ ನಿರ್ಣಯ, ವ್ಯಾಖ್ಯಾನ, ವಿವರಣೆ, ವರದಿ ತಯಾರಿಸುವುದು, ಯೋಜನೆಯನ್ನು ರೂಪಿಸುವುದು, ಸಮಾಜಕಲ್ಯಾಣ ಕಾರ್ಯಕ್ರಮ, ಸಂಯೋಜನೆ ಮತ್ತು ಸಮೀಕರಣ, ಸಮಾಲೋಚನೆ, ಸಲಹೆ, ಮಾತುಕತೆ-ಸಂಧಾನ, ಸಂಘಟನೆ ಮತ್ತು ವ್ಯವಸ್ಥೆ, ಗುಂಪಿನ ಪ್ರೇರಕ ಶಕ್ತಿಗಳು, ಮಾನವ ಸಂಪನ್ಮೂಲ ಯೋಜನೆ, ಸಮುದಾಯ ಸಂಘಟನೆ ಮತ್ತು ಕಾನೂನು ಕ್ಷೇತ್ರ, ಸಂಪನ್ಮೂಲಗಳ ಕ್ರೂಢೀಕರಣ, ವೈವಿಧ್ಯತೆ, ಸ್ವಯಂ ಸೇವಾ ಸಂಸ್ಥೆಗಳಲ್ಲಿ ಸಮಿತಿಗಳು, ಸರಾಗಗೊಳಿಸುವಿಕೆ, ಕಥೆ ಹೇಳುವುದು, ಸೂಕ್ಷ್ಮ ಅಂತರ್ದೃಷ್ಟಿ, ಸಮುದಾಯದ ಚಿತ್ರಣ ತಂತ್ರಗಳು, ಕ್ಷೇತ್ರ ಶಕ್ತಿ ವಿಶ್ಲೇಷಣೆ, ಚುಕ್ಕಿ ಪದ್ಧತಿ, ವಿರುದ್ಧ ಗೋಡೆಗಳು, ರೂಪಾಯಿ ಹಂಚಿಕೆ. 14. ಅಧ್ಯಾಯ-ಹನ್ನೊಂದು ಸಮುದಾಯ ಸಂಘಟಕನ ಕೌಶಲ, ಪಾತ್ರ ಮತ್ತು ಮನೋಭಾವ :- ಪ್ರೊ. ಆರ್ಥರ್ ಡನ್ಹ್ಯಾಮ್ (ಅರ್ಲಿನ್ ಜಾನ್ಸನ್), ಮ್ಯಾಕ್ ಮೋಹನ್, ಪ್ರೊ. ಸಿದ್ಧಿಕಿಯವರು ಪ್ರತಿಪಾದಿಸಿರುವ ಕೌಶಲಗಳು, ಸಮುದಾಯ ಸಂಘಟಕನ ಪಾತ್ರ, ಮಾರ್ಗದರ್ಶಕ, ಪ್ರೋತ್ಸಾಹಕ, ಪರಿಣತನ ಪಾತ್ರ, ಶಿಕ್ಷಕ, ವಕೀಲ (ಸಮರ್ಥನೆಕಾರ), ಸಹಯೋಗಿ, ಸುಗಮಗಾರ, ಸಾಮಾಜಿಕ ಚಿಕಿತ್ಸೋಪಚಾರಕ, ಇತರೆ ಪಾತ್ರಗಳು, ಪಾತ್ರ ನಿರ್ವಹಣೆ, ಸಂಘಟಕನ ಮನೋಭಾವ. 15. ಅಧ್ಯಾಯ-ಹನ್ನೆರಡು ಗಾಂಧಿ ಪ್ರಣೀತ ಅಭಿವೃದ್ಧಿ ಮಾರ್ಗ-ಸರ್ವೋದಯ :- ಪೀಠಿಕೆ, ಗಾಂಧೀಜಿಯ ಸಾಮಾಜಿಕ ಸಿದ್ಧಾಂತ, ಗಾಂಧೀಜಿ ಪ್ರತಿಪಾದಿಸಿದ ಸಮಾಜಕಾರ್ಯ ಯೋಜನೆ, ಹದಿನೆಂಟು ರಚನಾತ್ಮಕ ಕಾರ್ಯಕ್ರಮಗಳ ತತ್ತ್ವಗಳು, ಸ್ವರಾಜ್ಯ, ಸ್ವದೇಶಿ, ಸ್ವಾವಲಂಬನ, ಸ್ವಾನುಭವ, ಸ್ವಾಧ್ಯಾಯ, ರಚನಾತ್ಮಕ ಕಾರ್ಯಕ್ರಮಗಳು, ಕೋಮು ಸೌಹಾರ್ದತೆ, ಅಸ್ಪೃಶ್ಯತಾ ನಿವಾರಣೆ, ಮಧ್ಯಪಾನ ನಿಷೇಧ, ಖಾದಿ, ಗ್ರಾಮೋದ್ಯೋಗ, ಗ್ರಾಮ ನೈರ್ಮಲ್ಯ/ಸ್ವಚ್ಛತೆ, ಮೂಲ ಶಿಕ್ಷಣ, ವಯಸ್ಕರ ಶಿಕ್ಷಣ, ಮಹಿಳೆಯರು, ಸಾರ್ವಜನಿಕ ಆರೋಗ್ಯ ಶಿಕ್ಷಣ, ಪ್ರಾಂತೀಯ ಭಾಷೆಗಳು, ಸಂಸ್ಕೃತದ ಸ್ಥಾನ, ರಾಷ್ಟ್ರಭಾಷೆ/ರಾಷ್ಟ್ರಭಾಷೆಗಳು, ಆರ್ಥಿಕ ಸಮಾನತೆ, ರೈತರ ಅಭಿವೃದ್ಧಿ, ಕಾರ್ಮಿಕರ ಕಲ್ಯಾಣ, ಮುಷ್ಕರಗಳು, ಆದಿವಾಸಿಗಳ ಪ್ರಗತಿ, ರೋಗಿಗಳ ಶುಶ್ರೂಷೆ, ವಿದ್ಯಾರ್ಥಿಗಳ ಬೆಳವಣಿಗೆ, ಜಾನುವಾರು ಅಭಿವೃದ್ಧಿ, ರಚನಾತ್ಮಕ ಕಾರ್ಯಕ್ರಮಗಳಿಂದ ಸರ್ವೋದಯದೆಡೆಗೆ, ಸರ್ವೋದಯದ ವೈಶಿಷ್ಟ್ಯಗಳು, ಸರ್ವೋದಯದ ಕಾರ್ಯವಿಧಾನ, ಸರ್ವೋದಯ ಕಾರ್ಯಕರ್ತ, ಏಕಾದಶ ವ್ರತಗಳು, ಸರ್ವೋದಯ ಕಾರ್ಯಕರ್ತನ ಅರ್ಹತೆಗಳು. ಅನುಬಂಧಗಳು 1. ಆಕರ ಗ್ರಂಥಗಳು 2. ಸಂಕ್ಷಿಪ್ತ ಶಬ್ದಕೋಶ Social Work Books |
Archives
February 2026
Categories
All
Social Work
|
|
|
|
| ||||||||||||||||||||||||
SITE MAP
SiteNIRATHANKA |
POSHOUR OTHER WEBSITESSubscribe |
RSS Feed