|
ಲೇಖಕರು : ಗಂಗಾಧರ ರೆಡ್ಡಿ ಎನ್. ಮತ್ತು ಡಾ. ಲೋಕೇಶ ಎಂ.ಯು ಸಮಾಜಕಾರ್ಯದ ಉದಯೋನ್ಮುಖ ಕ್ಷೇತ್ರವನ್ನು ಪರಿಚಯಿಸುವ ಕೃತಿ 'ವಿಪತ್ತು ನಿರ್ವಹಣೆಯಲ್ಲಿ ಸಮಾಜಕಾರ್ಯ'. ಈ ಪುಸ್ತಕದ ಮೂಲ ಆಶಯ ಗ್ರಾಮೀಣ ಹಾಗೂ ಕನ್ನಡ ಭಾಷಾ ಮಾದ್ಯಮ ಹಿನ್ನೆಲೆ ಹೊಂದಿರುವ ವಿದ್ಯಾರ್ಥಿಗಳಿಗೆ ವಿಪತ್ತು ನಿರ್ವಹಣಾ ಶಾಸ್ತ್ರದ ಮೂಲ ಪರಿಕಲ್ಪನೆಗಳು ಮತ್ತು ವಿಪತ್ತು ನಿರ್ವಹಣೆಯಲ್ಲಿ ಸಮಾಜಕಾರ್ಯದ ಮಧ್ಯಸ್ಥಿಕೆಯನ್ನು ಅರ್ಥ ಮಾಡಿಸುವುದೇ ಆಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಚನೆಯಾದ ಸದರಿ ಪುಸ್ತಕ ಪ್ರಶಿಕ್ಷಕರಿಗೆ, ಸಂಶೋಧಕರಿಗೆ, ವೃತ್ತಿಪರರಿಗೆ ಹಾಗೂ ಕ್ಷೇತ್ರ ಕಾರ್ಯಕರ್ತರಿಗೆ ಮಾರ್ಗದರ್ಶಿ ಕೈಪಿಡಿಯಾಗಿದೆ. ಇದು ವಿಪತ್ತು ನಿರ್ವಹಣಾ ಶಾಸ್ತ್ರವನ್ನು ಅಧ್ಯಯನ ಮಾಡಬಯಸುವ ಎಲ್ಲಾ ವೃತ್ತಿಪರರಿಗೆ ಕನ್ನಡ ಭಾಷೆಯಲ್ಲಿ ಸಿಗುವ ಪ್ರಾಥಮಿಕ ಮಾಹಿತಿಯ ಮೂಲವೇ ಆಗಿದೆ. ಸಮಾಜಕಾರ್ಯ ಸಾಹಿತ್ಯ ಕ್ಷೇತ್ರದ ಉದಯೋನ್ಮುಖ ಬರಹಗಾರ ಶ್ರೀಯುತ ಗಂಗಾಧರ ರೆಡ್ಡಿ ಎನ್. ರವರು ಶೈಕ್ಷಣಿಕ ಕ್ಷೇತ್ರದಲ್ಲಿ ಸೇವಾನಿರತರಾದ ಡಾ. ಲೋಕೇಶ ಎಂ.ಯು. ರವರ ಸಹಯೋಗದಲ್ಲಿ ರಚಿಸಿದ ಚೊಚ್ಚಲ ಪುಸ್ತಕವೇ ವಿಪತ್ತು ನಿರ್ವಹಣೆಯಲ್ಲಿ ಸಮಾಜಕಾರ್ಯ. ವ್ಯಕ್ತಿಗತ ಸಮಾಜಕಾರ್ಯ ಪರಿಚಯ ಯುವ ಲೇಖಕ ಗಂಗಾಧರ ರೆಡ್ಡಿ ಎನ್. ರವರು ಸಮಾಜಕಾರ್ಯ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಚೊಚ್ಚಲ ಕಾಣಿಕೆಯಾಗಿದ್ದು, ಪ್ರಶಿಕ್ಷಕ, ವಿದ್ಯಾರ್ಥಿ ಹಾಗೂ ವೃತ್ತಿಪರ ಸಮಾಜಕಾರ್ಯಕರ್ತರಿಂದ ಪ್ರಶಂಸೆಗೊಳಪಟ್ಟ ಪುಸ್ತಕವಾಗಿದೆ. ಸಮಾಜಕಾರ್ಯ ಹಾಗೂ ವಿಪತ್ತು ನಿರ್ವಹಣೆ ವಿಷಯದ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲನ್ನು ನಿರ್ಮಿಸಲಿರುವ ಸದರಿ ಪುಸ್ತಕದಲ್ಲಿ ಬಳಕೆಯಾಗಿರುವ ಭಾಷೆ ಸರಳವಾಗಿದೆ. ಪದಗಳ ಆರಿಸುವಿಕೆ ಮತ್ತು ಪದ ಪ್ರಯೋಗ ಸಮಂಜಸವಾಗಿದ್ದು, ಬರವಣಿಗೆಯಲ್ಲಿ ಸ್ಪಷ್ಟತೆ ಇದೆ. ನಿರೂಪಣೆ ಆತ್ಮೀಯವಾಗಿದ್ದು, ಓದಿಸಿಕೊಂಡು ಹೋಗುತ್ತದೆ. ಬರಹ ಮನಮುಟ್ಟುವಂತಿದ್ದು, ಓದುಗರನ್ನು ಸೆಳೆಯುತ್ತದೆ. ಪುಸ್ತಕದ ಮೂಲ ಓದುಗರಿಗೆ ವಿಷಯಗಳನ್ನು ಸ್ಪಷ್ಟವಾಗಿ ಅರ್ಥ ಮಾಡಿಸುವ ಉದ್ದೇಶದಿಂದ ನೀಡುರುವ ಜೀವಂತ ಉದಾಹರಣೆಗಳು ಸಮರ್ಪಕ ಹಾಗೂ ಸಮಯೋಚಿತವಾಗಿದ್ದು, ಅರ್ಥಗರ್ಭಿತವಾಗಿವೆ. ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಹಂತಗಳಲ್ಲಿ ಸಮಾಜಕಾರ್ಯ ವಿಷಯವನ್ನು ಅಧ್ಯಯನ ಮಾಡುವ ಪ್ರಶಿಕ್ಷಣಾರ್ಥಿಗಳಿಗೆ ಅನುಕೂಲವಾಗಲೆಂದು ಪಠ್ಯಕ್ರಮಕ್ಕೆ ಅನುಗುಣವಾಗಿ ರಚಿಸಲಾಗಿದೆ. ಈ ಎಲ್ಲಾ ವೈಶಿಷ್ಟ್ಯಗಳಿಂದ ಕೂಡಿದ ಪುಸ್ತಕ ಓದುಗ ಸಮುದಾಯದಿಂದ ಪ್ರಶಂಸಿಸಲ್ಪಟ್ಟಿದೆ. ಪರಿವಿಡಿ
ಅಧ್ಯಾಯ - 1, ವಿಪತ್ತು ಅರ್ಥ ಮತ್ತು ವ್ಯಾಖ್ಯೆಗಳು, ಜಾಗತಿಕ ಸನ್ನಿವೇಶದಲ್ಲಿ ಪ್ರಾಕೃತಿಕ ವಿಪತ್ತುಗಳು, ವಿಶ್ವದ ಹತ್ತು ಅತೀ ವಿಧ್ವಂಸಕಾರಿ ವಿಪತ್ತುಗಳು, ಕಳೆದ ಶತಮಾನದಲ್ಲಿ ಸಂಭವಿಸಿದ ಭಯಾನಕ ಪ್ರಾಕೃತಿಕ ವಿಕೋಪಗಳು, ಜಾಗತಿಕ ಸನ್ನಿವೇಶದಲ್ಲಿ ಮಾನವ ನಿರ್ಮಿತ ವಿಪತ್ತುಗಳು, ಭಾರತೀಯ ಸನ್ನಿವೇಶದಲ್ಲಿ ಪ್ರಾಕೃತಿಕ ವಿಪತ್ತುಗಳು, ಭಾರತದ ಹತ್ತು ಅತೀ ವಿನಾಶಕಾರಿ ಪ್ರಾಕೃತಿಕ ವಿಪತ್ತುಗಳು, ಕಳೆದ ಶತಮಾನದಲ್ಲಿ ಭಾರತದಲ್ಲಿ ಸಂಭವಿಸಿದ ಭಯಾನಕ ಪ್ರಾಕೃತಿಕ ವಿಕೋಪಗಳು, ಭಾರತೀಯ ಸನ್ನಿವೇಶದಲ್ಲಿ ಮಾನವ ನಿರ್ಮಿತ ವಿಪತ್ತುಗಳು, ವಿಪತ್ತುಗಳ ವರ್ಗೀಕರಣ. ಅಧ್ಯಾಯ - 2, ನೈಸರ್ಗಿಕ ವಿಪತ್ತುಗಳು ನೈಸರ್ಗಿಕ ವಿಪತ್ತಿನ ಪ್ರಕಾರಗಳು, ಭೂಕಂಪ-ಕಾರಣಗಳು, ಪರಿಣಾಮಗಳು, ಭಾರತದಲ್ಲಿ ಭೂಕಂಪಗಳ ಹಂಚಿಕೆ, ಭೂಕಂಪದಿಂದಾಗಬಹುದಾದ ಹಾನಿಯನ್ನು ತಡೆಗಟ್ಟಲು ಕೈಗೊಳ್ಳಬಹುದಾದ ಮುನ್ನೆಚ್ಚರಿಕಾ ಕ್ರಮಗಳು. ಜ್ವಾಲಾಮುಖಿ-ಕಾರಣಗಳು, ವಿಧಗಳು, ಪರಿಣಾಮಗಳು. ಸುನಾಮಿ-ಕಾರಣಗಳು, ಲಕ್ಷಣಗಳು, ಸುನಾಮಿಯ ಮುನ್ಸೂಚನೆಗಳು, ಪರಿಣಾಮಗಳು. ಭೂಕುಸಿತ-ಕಾರಣಗಳು, ಪರಿಣಾಮಗಳು, ನಿಯಂತ್ರಣ ಕ್ರಮಗಳು, ಭಾರತದಲ್ಲಿ ಭೂಕುಸಿತದ ಹಂಚಿಕೆ. ಹಿಮಪಾತ-ಕಾರಣಗಳು, ಪರಿಣಾಮಗಳು, ನಿಯಂತ್ರಣ ಕ್ರಮಗಳು, ಭಾರತದಲ್ಲಿ ಹಿಮಪಾತಗಳ ಹಂಚಿಕೆ. ಕಡಲ ಕೊರೆತ-ಕಾರಣಗಳು, ಪರಿಣಾಮಗಳು, ನಿಯಂತ್ರಣ ಕ್ರಮಗಳು, ಭಾರತದಲ್ಲಿ ಕಡಲ ಕೊರೆತದ ಹಂಚಿಕೆ. ಪ್ರವಾಹ-ಕಾರಣಗಳು, ಪರಿಣಾಮಗಳು, ನಿಯಂತ್ರಣ ಕ್ರಮಗಳು, ಭಾರತದಲ್ಲಿ ಪ್ರವಾಹದ ಹಂಚಿಕೆ. ಆವರ್ತಮಾರುತ / ಚಂಡಮಾರುತ-ಕಾರಣಗಳು, ಪರಿಣಾಮಗಳು, ಭಾರತದಲ್ಲಿ ಆವರ್ತ / ಚಂಡಮಾರುತಗಳ ಹಂಚಿಕೆ. ಬರ ಅಥವಾ ಕ್ಷಾಮ-ಕಾರಣಗಳು, ಪರಿಣಾಮಗಳು, ನಿಯಂತ್ರಣ ಕ್ರಮಗಳು, ಭಾರತದಲ್ಲಿ ಬರ/ಕ್ಷಾಮದ ಹಂಚಿಕೆ. ಜೈವಿಕ ವಿಪತ್ತು-ಕಾರಣಗಳು, ಪರಿಣಾಮಗಳು. ಅಧ್ಯಾಯ - 3, ಮಾನವ ನಿರ್ಮಿತ ವಿಪತ್ತುಗಳು ವಿಶ್ವದ ಪ್ರಮುಖ ಮಾನವ ನಿರ್ಮಿತ ವಿಪತ್ತುಗಳು, ಯುದ್ಧ, ಭೋಪಾಲ್ ಅನಿಲ ದುರಂತ, ಜಿಲಿನ್ ರಾಸಾಯನಿಕ ಸ್ಪೋಟ, ಟೆನ್ನೆಸ್ಸೆ ಕಲ್ಲಿದ್ದಲು ಬೂದಿ ಸೋರಿಕೆ, ಸಿಡಾರ್ಜೋ ಮಣ್ಣಿನ ಜ್ವಾಲಾಮುಖಿ, ದಕ್ಷಿಣ ಫೆಸಿಪಿಕ್ ಕಸದ ತೇಪೆ (ಪ್ಯಾಚ್), ತೈಲ ಸೋರಿಕೆ ದುರಂತಗಳು, ಚೀನಾದ ಎಲೆಕ್ಟ್ರಾನಿಕ್ ತ್ಯಾಜ್ಯ ದುರಂತ, ನೀರಿನಲ್ಲಿ ಸೈನೆಡ್ ಮಾಲಿನ್ಯ ದುರಂತ: ಬಾ ಮರೆ ಸೈನೆಡ್ ಕಲುಷಿತ ನೀರಿತ ದುರಂತ-2000 ಮೀನಾಮಾಟಾ ರೋಗ / ಮರ್ಕ್ಯೂರಿ ವಿಷ, ಅರಲ್ ಸಮುದ್ರದ ಅವಸಾನ-2009, ಪರಮಾಣು ದುರಂತಗಳು, ಭಾರತದಲ್ಲಿ ಸಂಭವಿಸಿದ ಪ್ರಮುಖ ಮಾನವ ನಿರ್ಮಿತ ವಿಪತ್ತುಗಳು, ನಕ್ಸಲ್ ಮತ್ತು ಭಯೋತ್ಪಾದಕ ಕೃತ್ಯಗಳು, ಸಾರಿಗೆ ಅಪಘಾತಗಳು, ರಾಸಾಯನಿಕ ಅಪಘಾತಗಳು, ಎಂಡೋಸಲ್ಫಾನ್ ದುರಂತ, ಉದ್ಧಾನಂ ಮಲಿನ ನೀರಿನ ದುರಂತ. ಅಧ್ಯಾಯ - 4, ವಿಪತ್ತು ನಿರ್ವಹಣೆ ಅರ್ಥ ಮತ್ತು ವ್ಯಾಖ್ಯೆ, ವಿಪತ್ತು ನಿರ್ವಹಣೆಯ ತತ್ವಗಳು, ವಿಪತ್ತು ನಿರ್ವಹಣೆಯ ಹಂತಗಳು, ತಗ್ಗಿಸುವಿಕೆ, ಸನ್ನದ್ಧತೆ, ಪ್ರತಿಕ್ರಿಯೆ, ಚೇತರಿಕೆ, ವಿಪತ್ತಿನ ತೀವ್ರತೆ / ಪರಿಣಾಮದ ವಿಶ್ಲೇಷಣೆ, ಒಂದು ವೃತ್ತಿಯಾಗಿ ವಿಪತ್ತು ನಿರ್ವಹಣೆ. ಅಧ್ಯಾಯ - 5, ವಿಪತ್ತು ನಿರ್ವಹಣೆಯಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಘಟನೆಗಳು ವಿಪತ್ತು ನಿರ್ವಹಣೆಯಲ್ಲಿ ಅಂತರರಾಷ್ಟ್ರೀಯ ಸಂಘಟನೆಗಳು, ಇಂಟರ್ ನ್ಯಾಷನಲ್ ಅಸೋಸಿಯೇಷನ್ ಆಫ್ ಎಮೆರ್ಜೆನ್ಸಿ ಮ್ಯಾನೇಜರ್ಸ್ (IAEM), ರೆಡ್ ಕ್ರಾಸ್ / ರೆಡ್ ಕ್ರೆಸೆಂಟ್, ವಿಶ್ವಸಂಸ್ಥೆ (UNO), ವಿಶ್ವಬ್ಯಾಂಕ್, ಐರೋಪ್ಯ ಒಕ್ಕೂಟ, ಅಂತರರಾಷ್ಟ್ರೀಯ ಚೇತರಿಕೆಯ ವೇದಿಕೆ (IRP), ವಿಪತ್ತು ನಿರ್ವಹಣೆಯಲ್ಲಿ ಭಾರತ ರಾಷ್ಟ್ರೀಯ ಸಂಘಟನೆಗಳು, ಭಾರತದಲ್ಲಿ ವಿಪತ್ತು ನಿರ್ವಹಣಾ ವ್ಯವಸ್ಥೆಯ ರಚನೆ, ವಿಪತ್ತು ನಿರ್ವಹಣಾ ಕಾಯ್ದೆ-2005. ಅಧ್ಯಾಯ - 6, ವಿಪತ್ತು ನಿರ್ವಹಣೆಯಲ್ಲಿ ಸಮಾಜಕಾರ್ಯಕರ್ತರು ವಿಪತ್ತು ನಿರ್ವಹಣೆಯಲ್ಲಿ ಸಮಾಜಕಾರ್ಯದ ಮಧ್ಯಸ್ಥಿಕೆ, ವ್ಯಕ್ತಿಗತ ಸಮಾಜಕಾರ್ಯ, ವೃಂದಗತ ಸಮಾಜಕಾರ್ಯ, ಸಮುದಾಯ ಸಂಘಟನೆ, ಸಮಾಜಕಾರ್ಯದ ಮಾಧ್ಯಮಿಕ ವಿಧಾನಗಳು, ವಿಪತ್ತು ನಿರ್ವಹಣೆಯಲ್ಲಿ ಸಮಾಜಕಾರ್ಯಕರ್ತರ ಪಾತ್ರ, ವಿಪತ್ತು ನಿರ್ವಹಣೆಯ ವಿವಿಧ ಹಂತಗಳಲ್ಲಿ ಸಮಾಜಕಾರ್ಯಕರ್ತರ ಪಾತ್ರ, ವಿಪತ್ತು ಪೂರ್ವ ಹಂತ, ವಾಸ್ತವಿಕ ವಿಪತ್ತು ಹಂತ, ವಿಪತ್ತೋತ್ತರ ಹಂತ, ವಿಪತ್ತು ನಿರ್ವಹಣಾ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ ಸಮಾಜಕಾರ್ಯಕರ್ತರ ಪಾತ್ರ, ತಗ್ಗಿಸುವಿಕೆ / ನಿಯಂತ್ರಣ ಹಂತ, ಸನ್ನದ್ಧತೆ / ತಯಾರಿ ಹಂತ, ಪ್ರತಿಕ್ರಿಯೆ ಹಂತ, ಚೇತರಿಕೆ ಹಂತ, ವಿಪತ್ತಿನ ತೀವ್ರತೆ / ಪರಿಣಾಮದ ವಿಶ್ಲೇಷಣೆ ಹಂತ. ಅನುಬಂಧ - 1 ಕೊರೋನಾ ಬಿಕ್ಕಟ್ಟನ್ನು ಬಗೆಹರಿಸುವಲ್ಲಿ ಸಮಾಜಕಾರ್ಯಕರ್ತರ ಪಾತ್ರ ಅನುಬಂಧ - 2 ಆಕರ ಗ್ರಂಥಗಳು ಅನುಬಂಧ - 3 ಕೃತಿಯ ಬಗ್ಗೆ ಓದುಗರ ಅನಿಸಿಕೆಗಳು |
Archives
March 2026
Categories
All
MHR LEARNING ACADEMYGet it on Google Play store
|
| Niruta Publications Books (Dec 2025) | |
| File Size: | 756 kb |
| File Type: | |
SITE MAP
SiteNIRATHANKA |
POSHOUR OTHER WEBSITESSubscribe |
RSS Feed