|
ಲೇಖಕರು : ಡಾ. ಸಿ.ಆರ್. ಗೋಪಾಲ್ ಯಾವುದೇ ಸಮಾಜ, ರಚನೆ ಮತ್ತು ಕಾರ್ಯಶೀಲತೆಯ ದೃಷ್ಟಿಯಿಂದ, ಸ್ಥಿರವಲ್ಲ ಮತ್ತು ನಿಷ್ಕ್ರಿಯದಲ್ಲ. ಅದು ರಚನೆಯ ದೃಷ್ಟಿಯಿಂದ ಮತ್ತು ಕ್ರಿಯೆಗಳ ದೃಷ್ಟಿಯಿಂದ ಚಲನಶೀಲವಾಗಿರುತ್ತದೆ ಮತ್ತು ಪರಿವರ್ತನಾಶೀಲವಾಗಿರುತ್ತದೆ. ಹಾಗಾಗಿ ಯಾವುದೇ ಸಮಾಜ ನಿರಂತರವಾಗಿ ಬದಲಾಗುತ್ತಿರುತ್ತದೆ. ಅಂತಹ ಬದಲಾವಣೆಗಳಿಗೆ ತೀವ್ರತೆ ಮತ್ತು ವ್ಯಾಪಕತೆ ಇರಬಹುದು, ಇಲ್ಲದಿರಬಹುದು. ಬದಲಾವಣೆ ಗೋಚರಿಸಬಹುದು ಇಲ್ಲವೇ ಗೋಚರಿಸದಿರಬಹುದು. ಇಂದು ಗೋಚರಿಸದೇ ಇದ್ದದ್ದು, ಇನ್ನೆಂದೊ ಗೋಚರಿಸಬಹುದು. ಈ ಬದಲಾವಣೆ ಆರ್ಥಿಕ, ಕೈಗಾರಿಕಾ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಮನರಂಜನಾ, ವೈಜ್ಞಾನಿಕ, ಸಾಂಸ್ಕೃತಿಕ, ಇನ್ನೂ ಮುಂತಾದ ಕ್ಷೇತ್ರಗಳಲ್ಲಿ ಆಗುತ್ತದೆ. ಇಂತಹ ಬದಲಾವಣೆಗಳನ್ನು, ಸಾಮಾಜಿಕ ಸಂಸ್ಥೆಗಳಾದ ಕುಟುಂಬ, ಸಮೂಹ, ಸಂಘಸಂಸ್ಥೆಗಳು, ಸಮುದಾಯ ಮತ್ತು ಕೊನೆಯದಾಗಿ ಇಡೀ ಸಮಾಜದಲ್ಲಿ ಕಾಣುತ್ತೇವೆ. ಬದಲಾವಣೆ ಈ ಸಂಸ್ಥೆಗೆಳ ರಚನೆಯಲ್ಲಷ್ಟೇ ಆಗದೆ ಕ್ರಿಯೆಗಳಲ್ಲಿಯೂ, ಸಂಬಂಧಗಳಲ್ಲಿಯೂ ಆಗುತ್ತದೆ. ಅದು ಹೊಸ ಸಂಬಂಧಗಳನ್ನು ಸೃಷ್ಟಿಸುವುದಲ್ಲದೆ ಹೊಸ ಕಟ್ಟುಪಾಡುಗಳಿಗೆ, ಹೊಸ ಮೌಲ್ಯಗಳಿಗೆ ದಾರಿ ಮಾಡಿಕೊಡುತ್ತದೆ. ಇದೇ ಸ್ಥಿತಿ ಮುಂದುವರೆದು ನಿಧಾನವಾಗಿ ಸಮಾಜದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಿತ್ರಣವೇ ಬದಲಾಗುತ್ತದೆ. ಪರಿವಿಡಿ ಮುನ್ನುಡಿ ಪ್ರಕಾಶಕರ ನುಡಿ ಲೇಖಕರ ಪರಿಚಯ ಪ್ರಸ್ತಾವನೆ - ಕೃತಜ್ಞತೆ 1. ಅಧ್ಯಾಯ - ಒಂದು ಗುಣತ್ರಯಗಳು ಮತ್ತು ಜೀವನ ಪದ್ಧತಿ-ಪೀಠಿಕೆ, ಮನುಷ್ಯನ ಸ್ವಭಾವಗಳು, ಸಾತ್ವಿಕ, ರಾಜಸ, ತಾಮಸ ಗುಣಗಳು, ಗುಣಗಳ ಕಾರಬಾರು, ಗುಣಗಳನ್ನು ಗುರುತಿಸುವ ಬಗೆ, ಸ್ಥಿತಪ್ರಜ್ಞನ ಲಕ್ಷಣಗಳು, ಅರಿಷಡ್ವರ್ಗಗಳು, ಯೋಗ ಮಾರ್ಗಗಳು, ಯೋಗ ಸಮನ್ವಯ. 2. ಅಧ್ಯಾಯ - ಎರಡು, ಭಾಗ - ಒಂದು ಸನಾತನ ಧರ್ಮದಲ್ಲಿ ಶರೀರದ ಪರಿಕಲ್ಪನೆ - ಸನಾತನ ಜೀವನ ಪದ್ಧತಿಯಲ್ಲಿ ಶರೀರ, ಧಾರ್ಮಿಕ ಗ್ರಂಥಗಳಲ್ಲಿ ಶರೀರ, ಭಗವದ್ಗೀತೆ, ಮನುಷ್ಯರ ಸೃಷ್ಟಿ, ನಾಲ್ಕು ಶರೀರಗಳು, ಸ್ಥೂಲ ಶರೀರ, ಸಪ್ತ ಧಾತುಗಳು, ಅನಿರುದ್ಧ ಶರೀರ, ಪಂಚತನ್ಮಾತ್ರ, ಪಂಚ ಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಪ್ರಾಣಗಳು, ಮನೋವೃತ್ತಿಗಳು, ಲಿಂಗಶರೀರ, ಸ್ವರೂಪ ಶರೀರ, ಅನ್ನಮಯಾದಿ ಪಂಚ ಕೋಶಗಳು, (ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಮತ್ತು ಆನಂದಮಯ ಕೋಶಗಳು). 3. ಅಧ್ಯಾಯ - ಎರಡು, ಭಾಗ - ಎರಡು ಪಂಚಭೂತಗಳು, ಚತುರಶರೀರಗಳು, ದೇಹದ ಅಂಗಗಳಲ್ಲಿ ಭಗವಂತ - ಮನುಷ್ಯನ ನಾಲ್ಕು ತರಹದ ಶರೀರದಲ್ಲಿ ಭಗವಂತನ ರೂಪಗಳು, ಮನುಷ್ಯ ಶರೀರದಲ್ಲಿ - ಅಂಗಗಳಲ್ಲಿ ಭಗವಂತನ ಅಸ್ತಿತ್ವ, ಕಾಯವೆಂಬ ಪಟ್ಟಣ-ದೇಹವೆಂಬ ದೇಹಾಲಯ - ಶರೀರವೆಂಬ ರಥ, ದೇಹ ಒಂದು ಪಟ್ಟಣ, ಒಂದು ದೇವಾಲಯ, ಮನುಷ್ಯ ಶರೀರ ಒಂದು ರಥವೂ ಹೌದು. 4. ಅಧ್ಯಾಯ - ಎರಡು, ಭಾಗ - ಮೂರು ಮನುಷ್ಯ ದೇಹದಲ್ಲಿನ ನಾಡಿಗಳು ಮತ್ತು ಅವುಗಳ ಮಹತ್ವ, ಸುಷುಮ್ನಾನಾಡಿ, ಇಡಾ ಮತ್ತು ಪಿಂಗಳಾ ನಾಡಿಗಳು, ಇತರೆ ನಾಡಿಗಳು. 5. ಅಧ್ಯಾಯ - ಎರಡು, ಭಾಗ - ನಾಲ್ಕು ಮನುಷ್ಯ ಶರೀರದಲ್ಲಿನ ಚಕ್ರಗಳು ಮತ್ತು ಅವುಗಳ ಪಾತ್ರ, ಮೂರಾಧಾರ ಚಕ್ರ, ಸ್ವಾಧಿಷ್ಟಾನ ಚಕ್ರ, ಮಣಿಪೂರ ಚಕ್ರ, ಸೂರ್ಯ ಚಕ್ರ, ಮಾನಸ ಚಕ್ರ - ಹೃದಯೋಧ್ವ ಕಮಲ, ಅನಾಹತ ಚಕ್ರ, ವಿಶುಧ್ಧ ಚಕ್ರ, ಆಜ್ಞಾ ಚಕ್ರ, ಸೋಮಚಂದ್ರ ಚಕ್ರ, ಲಲಾಟ ಚಕ್ರ, ಸಹುಸ್ರಾರ-ತುರೀಯ, ಗ್ರಂಥಿಗಳು, ಧ್ಯಾನ ಪ್ರಕ್ರಿಯೆಯಲ್ಲಿ ಸ್ವರಗಳು. 6. ಅಧ್ಯಾಯ - ಎರಡು, ಭಾಗ - ಐದು ಜೀವಶಾಸ್ತ್ರದ ದೃಷ್ಟಿಯಲ್ಲಿ ಮನುಷ್ಯ ದೇಹ - ಪಂಚೇಂದ್ರಿಯಗಳು, ಹೃದಯ, ರಕ್ತ, ಉಸಿರಾಟದ ವ್ಯವಸ್ಥೆ, ಜೀರ್ಣಾಂಗ ವ್ಯವಸ್ಥೆ, ಮೂತ್ರ ಜನನಾಂಗಗಳು, ಮೂಳೆ- ಕೀಲು - ಸ್ನಾಯು ವ್ಯವಸ್ಥೆ, ಗ್ರಂಥಿಗಳು. 7. ಅಧ್ಯಾಯ ಮೂರು, ಭಾಗ - ಒಂದು ಆಹಾರ-ವ್ಯಾಖ್ಯೆ, ಆಹಾರದ ಅವಶ್ಯಕತೆ, ಅನ್ನಬ್ರಹ್ಮ, ಆಹಾರದ ವರ್ಗೀಕರಣ, ಸಾತ್ವಿಕ ಆಹಾರ, ರಾಜಸ ಆಹಾರ, ತಾಮಸ ಆಹಾರ, ಪಂಚಭೂತಗಳನ್ನಾಧರಿಸಿ ಆಹಾರದ ವರ್ಗೀಕರಣ, ರಸ ಆಧಾರಿತ ವರ್ಗೀಕರಣ, ಗುಣ ಆಧಾರಿತ ವರ್ಗೀಕರಣ, ರಸಾಯನಿಕ ಸಂಯೋಜನೆ ಮತ್ತು ಆಹಾರ ಮಾಡುವ ಕೆಲಸವನ್ನು ಆಧರಿಸಿ ಆಹಾರ ಪದಾರ್ಥಗಳ ವರ್ಗೀಕರಣ, ವೈವಿಧ್ಯತೆಯನ್ನಾಧರಿಸಿ ಆಹಾರದ ವರ್ಗೀಕರಣ, ಉತ್ಪತ್ತಿ ಮೂಲದ ವರ್ಗೀಕರಣ, ಸೇವಿಸುವ ವಿಧಾನವನ್ನು ಅನುಸರಿಸಿ ವರ್ಗೀಕರಣ, ಮನುಷ್ಯನ ಪ್ರಕೃತಿಗೆ ತಕ್ಕಂತೆ ಆಹಾರ. 8. ಅಧ್ಯಾಯ ಮೂರು, ಭಾಗ-ಎರಡು ಆಹಾರದ ಇನ್ನಷ್ಟು ಮಾಹಿತಿ-ದೋಷಗಳು ಮತ್ತು ಆಹಾರ, ಮನಸ್ಸಿನ ಪ್ರವೃತ್ತಿ ಮತ್ತು ಆಹಾರ, ವಿರುದ್ಧ ಆಹಾರ, ಸಮತೂಕದ ಆಹಾರ, ಋತುಗಳಿಗೆ ತಕ್ಕಂತೆ ಆಹಾರ, ಅಡುಗೆ ಮನೆ ಮತ್ತು ಆಹಾರ ತಯಾರಿ, ಅಡುಗೆ ತಯಾರಿಸುವ ವಿಧಾನ, ಆಹಾರ ಪದಾರ್ಥಗಳನ್ನು ತಯಾರಿಸುವವರು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳು, ಊಟದ ಜಾಗ, ಊಟದ ಎಲೆಗಳು-ತಟ್ಟೆಗಳು, ಊಟ ಬಡಿಸುವ ವಿಧಾನ, ಯಾವ ಅನ್ನ ತಿನ್ನಬಾರದು, ಊಟಮಾಡುವಾಗ ನೆನಪಿನಲ್ಲಿಟ್ಟು ಕೊಳ್ಳಬೇಕಾದ ಅಂಶಗಳು, ಊಟದ ಪ್ರಕ್ರಿಯೆ, ಊಟಕ್ಕೆ ಸಂಬಂಧಪಟ್ಟ ಕೆಲವು ಧಾರ್ಮಿಕ ಅಂಶಗಳು, ನವಗ್ರಹಗಳು ಮತ್ತು ಧಾನ್ಯ, ನೇವೇದ್ಯ, ಚಂದ್ರಮಾನ ಸೂರ್ಯಮಾನ ಮಾಸಗಳು ಮತ್ತು ನಕ್ಷತ್ರಗಳು ರಾಸಿಗಳು, ಆಹಾರ ಪದಾರ್ಥಗಳಲ್ಲಿ ಭಗವಂತನ ರೂಪಗಳು. 9. ಅಧ್ಯಾಯ-ನಾಲ್ಕು ದಿನಚರಿ- ಏಳುವುದು, ಶೌಚಕ್ರಿಯೆ, ದಂತಧಾವನ, ಬಾಯಿ ತೊಳೆಯುವುದು, ಮುಖ ತೊಳೆಯುವುದು, ಉಷ:ಪಾನ, ಬೆಳಗಿನ ಪಾನೀಯ, ಚಂಕ್ರಮಣ, ವ್ಯಾಯಾಮ, ಯೋಗಾಸನ, ಪ್ರಾಣಾಯಾಮ, ಮುದ್ರೆಗಳು, ಸ್ನಾನ, ತೈಲಾಭ್ಯಂಗ, ಆಯುಷ್ಕರ್ಮ, ವಸ್ತ್ರ ಧಾರಣೆ, ಮುದ್ರ ಧಾರಣೆ, ಸಂಧ್ಯಾವಂದನೆ, ಪೂಜೆ, ಊಟ, ತಾಂಬೂಲ, ನಿದ್ರೆ ಮಾಡುವುದು, ಮಲಗುವಾಗ ತಲೆ ಯಾವ ದಿಕ್ಕಿಗೆ ಇರಬೇಕು, ಸದ್ವೃತ್ತ- ಸದಾಚಾರ. 10. ಅಧ್ಯಾಯ-ಐದು ಮಂತ್ರಗಳು, ಗೋವಿಂದನಿಗೆ ಸುಪ್ರಭಾತ, ಜಗನ್ಮಾತೆಗೆ ವಂದನೆ, ಭೂತಾಯಿಗೆ ವಂದನೆ, ದೇವ ದೇವತೆಗಳಿಗೆ ವಂದನೆ. ಪವಮಾನ, ಮಧ್ವಾಚಾರ್ಯರು, ಜಯತೀರ್ಥರು, ವ್ಯಾಸರಾಯರು, ವಾದಿರಾಜರು, ರಾಘವೇಂದ್ರರು, ಸಮಸ್ತ ಲೋಕಕ್ಕಾಗಿ ಪ್ರಾರ್ಥನೆ, ಶಂಕರಾಚಾರ್ಯರು, ರಾಮಾನುಜಾಚಾರ್ಯರು, ತ್ರಿಮತಾಚಾರ್ಯರು, ಭಗವಂತ, ಲಕ್ಷ್ಮಿದೇವಿ, ತುಳಸಿ, ಗೋಮಾತೆ, ಸರಸ್ವತಿ, ಪಾರ್ವತಿ, ಶಿವ, ಗಣೇಶ, ಸುಬ್ರಹ್ಮಣ್ಯ, ನವಗ್ರಹಗಳು, ಗುರು ಇವರ ಮಂತ್ರಗಳು, ಯೋಗಾಸನ ಪ್ರಾರಂಭಿಸುವ ಮುನ್ನ-ನಂತರ, ಸ್ನಾನ ಮಾಡುವಾಗ, ಊಟ ಮಾಡುವಾಗ, ವೇದವ್ಯಾಸ, ವಾಲ್ಮೀಕಿ, ಮನೋ ನಿವೇದನಾ ಮಂತ್ರಗಳು, ರಾತ್ರಿ ಮಲಗುವಾಗ ಹೇಳುವ ಮಂತ್ರಗಳು, ಪುಣ್ಯ ಶ್ಲೋಕ, ಚಿರಂಜೀವಿಗಳ ಸ್ಮರಣೆ, ಶಯನ ಮಂತ್ರ, ದು:ಸ್ವಪ್ನ ನಾಶನ ಮಂತ್ರ ಶಾಂತಿಮಂತ್ರಗಳು, ಬೇರೆ ಬೇರೆ ಧರ್ಮಗಳ ಪ್ರಾರ್ಥನೆ, ಸರ್ವಧರ್ಮ ಪ್ರಾರ್ಥನೆ. ಅನುಬಂಧಗಳು: 1. ಶ್ರೀ ಶಂಕರಾಚಾರ್ಯರ ವಿವೇಕಚೂಡಾಮಣಿ ಗ್ರಂಥದಲ್ಲಿ ವಿವರಣೆಗೊಂಡ ಮನುಷ್ಯ ಶರೀರ 2. ಯೋಗಮಾರ್ಗ 3. ಆಧಾರ ಗ್ರಂಥಗಳು 4. ಶಬ್ದಕೋಶ Social Work Books |
Archives
October 2025
Categories
All
Social Work
|
|
|
|
| ||||||||||||||||||||||||
SITE MAP
SiteNIRATHANKA |
POSHOUR OTHER WEBSITESSubscribe |
RSS Feed