|
ಲೇಖಕರು: ಸದಾಶಿವಯ್ಯಾ ಮ. ಜಿರ್ಲಿಮಠ ನನ್ನುಡಿ ವೃಂದ ಸಮಾಜಕಾರ್ಯ ಸಾಕಷ್ಟು ಅಂಶಗಳೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಪಸರಿಸುತ್ತಿದೆ. ಕಳೆದ 30 ವರ್ಷಗಳಿಗಿಂತಲೂ ಹೆಚ್ಚು ಅವಧಿಯಲ್ಲಿ ಸಮಾಜಕಾರ್ಯದ ವಿವಿಧ ಆಯಾಮಗಳಲ್ಲಿ ವೃತ್ತಿ ಆಚರಣೆಯ ಅನುಭವ, ಸಮಾಜಕಾರ್ಯ ವಿದ್ಯಾರ್ಥಿಗಳಿಗಾಗಿ ಸಾಹಿತ್ಯ ಲಭ್ಯವಾಗಿಸುವ ಬಯಕೆ ಹೆಚ್ಚಿಸಿದೆ. ಮೊದಲೆರಡು ಮುದ್ರಣಗಳಿಗೆ ವ್ಯಕ್ತವಾದ ಪ್ರತಿಕ್ರಿಯೆ, ಪ್ರತಿಗಳಿಗಾಗಿ ಮೇಲಿಂದ ಮೇಲೆ ಕಂಡು ಬಂದ ಬೇಡಿಕೆ ಮತ್ತು ಲಭ್ಯವಾದ ಸಲಹೆ, ವಿಮರ್ಶೆಗಳನ್ನು ಒಳಗೂಡಿಸಿಕೊಂಡು ಸುಧಾರಿಸಿದ ಮತ್ತು ಹೆಚ್ಚಿನ ವಿವರದೊಂದಿಗೆ ಮೂರನೇಯ ಮುದ್ರಣಕ್ಕೆ ಕೈ ಹಾಕುವಂತೆ ಪ್ರೇರೇಪಿಸಿತು. ಈ ಆವೃತ್ತಿಯಲ್ಲಿ ಮುಖ್ಯವಾಗಿ ವರ್ತನೆಯ ಸುಧಾರಿಸುವ ಸಿದ್ದಾಂತಗಳನ್ನು ಉದಾಹರಣೆಗಳೊಂದಿಗೆ, ವೃಂದ ಪ್ರಕ್ರಿಯೆಯಲ್ಲಿ ಹೆಚ್ಚಿನ ಮಾಹಿತಿ, ವೃಂದ ಚಲನಾತ್ಮಕತೆಯಲ್ಲಿ (ಒಂಟಿತನ. ನಾಯಕತ್ವ, ಬಲಿಪಶುವಾಗುವಿಕೆ, ನಿಯಂತ್ರಣ ಇತ್ಯಾದಿ), ಇದರೊಂದಿಗೆ ತಂತ್ರ ಮತ್ತು ಕೌಶಲ್ಯಗಳ ವಿವರ, ಮಾಹಿತಿ ಸಂಗ್ರಹದ ಸಾಧನಗಳ ಸಂಕ್ಷಿಪ್ತ ವಿವರಣೆ ಮತ್ತು ನೈತಿಕ ದ್ವಂದ್ವಗಳ ಕುರಿತು ಸೇರ್ಪಡೆ ಮಾಡಿ ಓದುಗರಿಗೆ ಹೆಚ್ಚಿನ ಮಾಹಿತಿ ಲಭ್ಯವಾಗುವಂತೆ ಪ್ರಯತ್ನಿಸಲಾಗಿದೆ. ಕನ್ನಡದಲ್ಲಿ ಸಮಾಜಕಾರ್ಯ ಸಾಹಿತ್ಯ ಓದುಗರಿಗೆ ಲಭ್ಯವಾಗುವ ಪ್ರಮಾಣ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಇದರಿಂದಾಗಿ ಓದುಗರಿಗೆ ಹೆಚ್ಚಿನ ಆಯ್ಕೆಗಳು ಸಿಗುತ್ತಿರುವದು ಸಂತೋಷದ ವಿಷಯ. ನನ್ನ ಈ ಪ್ರಯತ್ನದಲ್ಲಿ ಸುಧಾರಣೆಯನ್ನು ತರಲು ತೆರೆದ ಮನಸ್ಸಿನಿಂದ ವೃತ್ತಿ ಬಾಂಧವರಿಂದ ತುಲನಾತ್ಮಕ ವಿಮರ್ಶೆ ಮತ್ತು ಸಲಹೆಗಳನ್ನು ಎದುರು ನೋಡುತ್ತಿರುವೆ. ಕಾರಣ ಇಂಗ್ಲೀಷನಲ್ಲಿ ಲಭ್ಯವಿರುವ ಸಾಹಿತ್ಯಕ್ಕೆ ಸಮನಾದ ಕನ್ನಡ ಸಾಹಿತ್ಯ ಓದುಗರಿಗೆ ಸಿಗಬೇಕೆಂಬ ಬಯಕೆ. ನನ್ನ ಈ ಪ್ರಯತ್ನಕ್ಕೆ ಸಹಕರಿಸಿದ ಸಹೋದ್ಯೋಗಿ ಮತ್ತು ವಿವಿಧ ವೃತ್ತಿಯಲ್ಲಿರುವ ಶಿಷ್ಯವರ್ಗ ಮತ್ತು ಕುಟುಂಬದ ಸದಸ್ಯರನ್ನು ಈ ಸಮಯದಲ್ಲಿ ನೆನೆಯದಿರಲು ಅಸಾಧ್ಯ. ಅವರೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು. ಪುಸ್ತಕದ ಮುದ್ರಣದಲ್ಲಿ ದೋಷಗಳನ್ನು ಸರಿಪಡಿಸಿ ನವೀನ ವಿನ್ಯಾಸದೊಂದಿಗೆ ಹೊರತರಲು ಸಹಕರಿಸಿದ ಶ್ರೀ ಆಫ್ಸೆಟ್ ನವರಿಗೂ ಧನ್ಯವಾದಗಳು. ಲೇಖಕರು ಸದಾಶಿವಯ್ಯಾ. ಮ. ಜಿರ್ಲಿಮಠ. ಪರಿವಿಡಿ1. ವೃಂದ ಸಮಾಜಕಾರ್ಯ ಪರಿಚಯ
2. ವೃಂದ ಸಮಾಜಕಾರ್ಯದ ತತ್ವ, ಮೌಲ್ಯ, ತಂತ್ರ ಮತ್ತು ಕೌಶಲ್ಯಗಳು 3. ವೃಂದ ಸಮಾಜಕಾರ್ಯ ಸಂಬಂಧಿತ ಸಿದ್ಧಾಂತ ಮತ್ತು ಮಾದರಿಗಳು 4. ವೃಂದ ಸಮಾಜಕಾರ್ಯ ಪ್ರಕ್ರಿಯೆ 5. ಮಾಹಿತಿ ಸಂಗ್ರಹದ ತಂತ್ರಗಳು ಮತ್ತು ಸಾಧನಗಳು 6. ವೃಂದ ಸಮಾಜಕಾರ್ಯದ ಅನ್ವಯಿಕೆಯ ಕ್ಷೇತ್ರಗಳು 7. ವೃಂದ ಸಮಾಜಕಾರ್ಯಕರ್ತರ ಪಾತ್ರಗಳು 8. ಸಮಾಜಕಾರ್ಯ ವೃತ್ತಿ ಮತ್ತು ನೈತಿಕ ದ್ವಂದ್ವಗಳು 9. ವೃಂದ ಸಮಾಜಕಾರ್ಯಕ್ಕೆ ಪೂರಕ ಚಟುವಟಿಕೆಗಳು 10. ಆಧಾರ ಗ್ರಂಥಗಳು |
Archives
March 2026
Categories
All
MHR LEARNING ACADEMYGet it on Google Play store
|
| Niruta Publications Books (Dec 2025) | |
| File Size: | 756 kb |
| File Type: | |
SITE MAP
SiteNIRATHANKA |
POSHOUR OTHER WEBSITESSubscribe |
RSS Feed