|
ಲೇಖಕರು : ಡಾ. ಲೋಕೇಶ್ ಎಂ.ಯು. ಮತ್ತು ಪವಿತ್ರ ಎ.ವಿ. 20ನೇ ಶತಮಾನದಲ್ಲಿ ಆರಂಭಗೊಂಡ ನೂತನ ಜ್ಞಾನ ಶಾಖೆಯಾದ ಸಮಾಜಕಾರ್ಯ ವೃತ್ತಿಪರರಿಗೆ ವೈವಿಧ್ಯಮಯ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶವನ್ನು ಒದಗಿಸುವ ಬಹುಮುಖ ವೃತ್ತಿಯಾಗಿದೆ. ಪ್ರಸ್ತುತ ಸಮಾಜಕಾರ್ಯ ವೃತ್ತಿಯು ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಪಾತ್ರ ವಹಿಸುತ್ತಿದ್ದು, ಮಾನಸಿಕ ಆರೋಗ್ಯ ರಕ್ಷಣೆಯಲ್ಲೂ ತನ್ನದೇ ಆದ ಮಹತ್ವದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಆಧುನಿಕ ಸಮಾಜದಲ್ಲಿ ನಾನಾ ಕಾರಣಗಳಿಂದ ಮನೋವ್ಯಾಕುಲಕ್ಕೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಹಾಗೂ ಅದರಲ್ಲಿರುವ ಸಂಕೀರ್ಣತೆಯ ಸವಾಲುಗಳು ದಿನೇ ದಿನೇ ಅಧಿಕವಾಗುತ್ತಿರುವುದು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ವೃತ್ತಿಪರ ಸಮಾಜಕಾರ್ಯಕರ್ತರ ಅಗತ್ಯತೆಯನ್ನು ಎತ್ತಿ ತೋರಿಸುತ್ತದೆ.
Author : Shankar Pathak This book was revised and updated parts of the Shankar Pathak's book "Social Work and Social Welfare", published in 2012 and this book was republished by National Book Trust of India under its subsidy scheme.
Contents PART ONE Social Policy and Social Welfare - A Social Historical Perspective Preface 1. Introduction 2. Towards a Theoretical Framework for the Study of Social Welfare 3. Social Change and Social Welfare in Ancient India 4. Social Policy and Social Welfare in Medieval India (1206-1706) 5. Christian Missionaries and Social Reform in India 6. Social Reform During the Colonial Era 7. Social Policy and Social Welfare During the Colonial Period (1800-1947) 8. Social Welfare: A Comparative Historical Perspective Author : T.K. Nair This book is definite to be a watershed contribution for the reorientation of social work education in the country in the coming decades. Scholars and practitioners have written on different issues needing urgent consideration and intervention. The eighth decade of social work education is only months away and this book is most welcome at this time.
Contents 1. Introduction - T.K.Nair 2. Philosophy of Social Work in Changing India - M.V. Moorthy 3. Evolutionary Excellence in Social Work - J.M.Sampath and Kalpana Sampath 4. Substance Use Disorders and Social Work Interventions - Shanthi Ranganathan 5. Poverty Alleviation through Skill Building: A Social Work Initiative - Nalini Gangadharan 6 Social Justice in India: Reflections - Henry J D’ Souza 7. Promoting Social Justice, Human Rights and Empowerment - Annie Namala 8. Voluntary Sector and Professional Social Work: Trends and Challenges - B. Devi Prasad 9. Should We Re-think the Nature of Social Work? - M.Nadarajah 10. Education for Professional Social Work in India: Overview - R.R. Singh 11. Humanitarianism Professionalized: Dilemmas of Social Work in India - T.K.Nair ಲೇಖಕರು : ಡಾ. ಸಿ.ಆರ್. ಗೋಪಾಲ್ ಹಿರಿಯ ಸಾಹಿತಿಗಳು ಹಾಗೂ ವಾಗ್ಮಿ ಡಾ. ಸಿ.ಆರ್. ಗೋಪಾಲ್ ಅವರು ರಚಿಸಿದ ಭಾಷಣ ಕೈಪಿಡಿ ಒಂದು ಸಂಶೋಧನಾ ಗ್ರಂಥವಾಗಿದೆ. ಭಾಷಣ ಒಂದು ಕಲೆ ಎಂದು ಜಗತ್ತಿನಾದ್ಯಂತ ಪರಿಗಣನೆಗೆ ಒಳಗಾಗಿದೆ. ಮಾತನಾಡುವವರೆಲ್ಲ ಭಾಷಣಕಾರರಾಗಲು ಸಾಧ್ಯವಿಲ್ಲ. ಅದೇ ರೀತಿ ಉಪನ್ಯಾಸ ಮಾಡುವವರು ಭಾಷಣಕಾರರಲ್ಲ. ಏಕೆಂದರೆ ಉಪನ್ಯಾಸವೆಂಬುದು ತರಗತಿಯ ಮಿತಿಯಲ್ಲಿ ವಿಷಯದ ನಿರ್ದಿಷ್ಟತೆಯಲ್ಲಿ ಹೇಳುವ ಬೋಧನೆ. ಇದು ಶೈಕ್ಷಣಿಕ ಶಿಸ್ತಿನ ಬೋಧನೆ. ಆದರೆ ಭಾಷಣ ಹಾಗಲ್ಲ, ಅಲ್ಲಿ ಕಲಿಯುವ ಆಸಕ್ತಿಯ ವಿದ್ಯಾರ್ಥಿಗಳಿರುವುದಿಲ್ಲ. ಅದಕ್ಕೆ ಬದಲಾಗಿ ಕೇಳುವ ಕುತೂಹಲದ ಪ್ರೇಕ್ಷಕರಿರುತ್ತಾರೆ. ಜೊತೆಗೆ ಕೇಳುಗರೆಲ್ಲ ಒಂದೇ ಮನೋಧರ್ಮದವರಲ್ಲ, ಒಂದೇ ಮನಸ್ಥಿತಿಯವರೂ ಅಲ್ಲ. ಭಿನ್ನ ಭಿನ್ನ ಅಭಿರುಚಿಯ, ಭಿನ್ನ ಭಿನ್ನ ಆಸಕ್ತಿಗಳ, ಭಿನ್ನ ಸಮುದಾಯಗಳ ಗುಂಪುಗಳು ಅಲ್ಲಿರುತ್ತವೆ. ಹೀಗಾಗಿ ಭಾಷಣ ಆಯಾ ಭಾಷಣಕಾರನ / ಭಾಷಣಕಾರ್ತಿಯ ಕಲಾತ್ಮಕ ಮೆರುಗಿನಿಂದಾಗಿ ಅದು ಸ್ವೀಕಾರ ಅಥವಾ ನಿರಾಕರಣೆಗೆ ಒಳಗಾಗುತ್ತದೆ.
ಲೇಖಕರು : ಡಾ. ಸಿ.ಆರ್. ಗೋಪಾಲ್ `ಸಮುದಾಯ ಸಂಘಟನೆ ಕೃತಿಯಲ್ಲಿ ಉಪಯುಕ್ತವಾಗುವ ವಿಷಯ ಸಂಗ್ರಹ ಸಾಕಷ್ಟು ಹೇರಳವಾಗಿದೆ. ಸಮುದಾಯ, ಸಮುದಾಯದ ಪ್ರಕಾರಗಳು, ಸಮುದಾಯದ ಲಕ್ಷಣಗಳು, ಸಮಸ್ಯೆಗಳು, ಸಮುದಾಯ ಸಂಘಟನೆಯ ಇತಿಹಾಸ, ಸಂಘಟನೆ, ಅಭಿವೃದ್ಧಿ, ಸಂಘಟನಾ ಮಾದರಿಗಳು, ಗ್ರಹಿಕೆಗಳು, ವೈಶಿಷ್ಟ್ಯತೆಗಳು, ಧ್ಯೇಯೋದ್ದೇಶಗಳು, ತತ್ತ್ವಗಳು, ಪ್ರಕ್ರಿಯೆಗಳು, ಕಾರ್ಯತಂತ್ರಗಳು ಸಮಾಜಕಾರ್ಯ ಕಾರ್ಯಕರ್ತನ ಪಾತ್ರ, ಇವೇ ಮೊದಲಾದ ಹಲವು ಹತ್ತು ಉಪಯುಕ್ತ ವಿಚಾರಗಳ ಬಗ್ಗೆ ಸಮೃದ್ಧ ಮಾಹಿತಿಗಳನ್ನು ವಿಶೇಷ ರೀತಿಯಲ್ಲಿ ಒದಗಿಸಿದ್ದಾರೆ. ಇವುಗಳ ಜೊತೆಗೆ ಮಹಾತ್ಮಾ ಗಾಂಧೀಜಿಯವರು ಪ್ರತಿಪಾದಿಸಿರುವ ಸರ್ವೋದಯ ಮತ್ತು ಇತರ ವಿಶಿಷ್ಟ ರಚನಾತ್ಮಕ ಕಾರ್ಯಕ್ರಮಗಳ ಬಗ್ಗೆಯೂ ಸಾಕಷ್ಟು ಸಮರ್ಪಕವಾಗಿ ಪರಿಚೈಸಿದ್ದಾರೆ. ಪ್ರತಿಪಾದಿಸಬೇಕಾದ ವಿವಿಧ ವಿಚಾರಗಳನ್ನು ಅಧ್ಯಾಯ, ಉಪ ಅಧ್ಯಾಯ ಹಾಗೂ ಶೀರ್ಷಿಕೆಗಳನ್ನಾಗಿ ವಿಭಾಗಿಸಿಕೊಂಡಿರುವ ಅನುಕ್ರಮ ಸಮಂಜಸವಾಗಿದೆ. ವಿಷಯಗಳನ್ನು ವಿಭಾಗಿಸಿಕೊಂಡಿರುವುದರಲ್ಲಿ ಒಂದು ಸೂಕ್ತ ಕ್ರಮಬದ್ಧತೆ ಇದೆ. ಒಂದು ಬಂಧ ಇದೆ.
ಪರಿವಿಡಿ 1. ಅಧ್ಯಾಯ-ಒಂದು ಪೀಠಿಕೆ, ಸಮುದಾಯ, ವ್ಯಾಖ್ಯೆಗಳು, ಸಮುದಾಯದ ವೈಲಕ್ಷಣಗಳು, ಸಮುದಾಯದ ಬಗ್ಗೆ ಸ್ವಾಭಿಮಾನ, ಐಕ್ಯಭಾವ, ಪರಾವಲಂಬನಾ ಭಾವ, ಪಾತ್ರ ನಿರ್ವಹಣಾ ಭಾವ, ಬದಲಾಗುತ್ತಿರುವ ಪರಿಸ್ಥಿತಿ, ಸಮುದಾಯ-ಸಮಾಜ, ನೆರೆಹೊರೆ, ಸಂಘ, ಸಂಸ್ಥೆ ಇವುಗಳಲ್ಲಿರುವ ವ್ಯತ್ಯಾಸಗಳು. 2. ಅಧ್ಯಾಯ-ಎರಡು ಸಮುದಾಯದ ಪ್ರಕಾರಗಳು :- ಭೌಗೋಲಿಕ ಮತ್ತು ಕ್ರಿಯಾತ್ಮಕ ಸಮುದಾಯಗಳು, ಗ್ರಾಮ ಸಮುದಾಯ, ಗ್ರಾಮ ಸಮುದಾಯದ ವೈಲಕ್ಷಣಗಳು, ಗ್ರಾಮ ಸಮುದಾಯಗಳ ವೈವಿಧ್ಯತೆ, ನಗರ ಸಮುದಾಯ, ಕೆಲವು ಆಯ್ದ ವ್ಯಾಖ್ಯೆಗಳು, ನಗರ ಸಮುದಾಯದ ವೈಲಕ್ಷಣಗಳು, ಬುಡಕಟ್ಟು ಸಮುದಾಯಗಳು, ಬುಡಕಟ್ಟು ಸಮುದಾಯದ ಪ್ರಮುಖ ಲಕ್ಷಣಗಳು. 3. ಅಧ್ಯಾಯ-ಮೂರು, ಭಾಗ-ಒಂದು ಗ್ರಾಮೀಣ ಸಮುದಾಯಗಳ ಸಮಸ್ಯೆಗಳ ಪಕ್ಷಿನೋಟ :- ಕೃಷಿ, ಭೂಮಿ, ಸುಧಾರಿತ ತಳಿಯ ಬೀಜ, ಗೊಬ್ಬರಗಳು, ಔಷಧಗಳು, ಯಾಂತ್ರೀಕರಣ, ಸಣ್ಣ ಹಿಡುವಳಿ, ಅಸ್ಥಿರ ಮಳೆ, ದಾಸ್ತಾನು, ಮಾರುಕಟ್ಟೆ, ಸಾರಿಗೆ-ಸಂಪರ್ಕ, ರೈತರ ಆತ್ಮಹತ್ಯೆ, ಆರ್ಥಿಕ ಸಮಸ್ಯೆಗಳು, ಸಾಮಾಜಿಕ ಸಮಸ್ಯೆಗಳು, ಮೂಢನಂಬಿಕೆ, ಅಸ್ಪೃಶ್ಯತೆ, ಸಾಂಪ್ರದಾಯಿಕತೆ ಮತ್ತು ಪ್ರತಿಗಾಮಿ ಧೋರಣೆ, ಜೀತದಾಳುಗಳ ಸಮಸ್ಯೆ, ಮದ್ಯಪಾನ, ನಿರುದ್ಯೋಗ, ಮಹಿಳಾ ಅಸಮಾನತೆ, ಸ್ತ್ರೀಯರ ಸಮಸ್ಯೆಗಳು, (ಲಿಂಗ ತಾರತಮ್ಯ, ಶಿಕ್ಷಣ, ಉದ್ಯೋಗ, ಆರೋಗ್ಯ, ರಾಜಕೀಯ ಕ್ಷೇತ್ರ,) ನಾಗರೀಕ ಸೌಲಭ್ಯಗಳ ಕೊರತೆ, ನಿರಕ್ಷರತೆ, ಆರೋಗ್ಯ, ವಸತಿ, ಬಾಲಕಾರ್ಮಿಕರು, ಗ್ರಾಮೀಣ ರಸ್ತೆಗಳು, ಜನಸಂಖ್ಯಾ ಏರಿಕೆ, ವೃದ್ಧರ ಸಮಸ್ಯೆಗಳು, ಆರ್ಥಿಕ ಸಮಸ್ಯೆಗಳು, ಸಾಮಾಜಿಕ ಸಮಸ್ಯೆಗಳು, ಆರೋಗ್ಯದ ಸಮಸ್ಯೆಗಳು. ಲೇಖಕರು: ಸದಾಶಿವಯ್ಯಾ ಮ. ಜಿರ್ಲಿಮಠ ಮುನ್ನುಡಿ
ಈ ಆವೃತ್ತಿಯನ್ನು ಸಾಕಷ್ಟು ಹೊಸ ಅಂಶಗಳೊಂದಿಗೆ ಪ್ರಸ್ತುತ ಪಡಿಸಲಾಗಿದೆ. ಮುಖ್ಯವಾಗಿ ವರ್ತನೆಯ ರೂಪಿಸುವಿಕೆ ಮತ್ತು ಸರಿಪಡಿಸುವಿಕೆಯ ಸಿದ್ಧಾಂತಗಳನ್ನು ಉದಾಹರಣೆಯೊಂದಿಗೆ, ಸಮಾಜಕಾರ್ಯ ಕ್ಷೇತ್ರಗಳಲ್ಲಿ ಇತ್ತೀಚಿನ ಬೆಳವಣಿಗೆ, ಸಮಾಜಕಾರ್ಯ ವಿಧಾನಗಳ ಸರಳ, ಸವಿವರವಾದ ವಿವರಣೆ ಮತ್ತು ಸಮಾಜಕಾರ್ಯ ವಿಧಾನಗಳಲ್ಲಿ ಕಾರ್ಯಕರ್ತರ ಪಾತ್ರ ಸೇರಿಸಲಾಗಿದೆ. ಅದರಲ್ಲಿಯೂ ಸಮುದಾಯ ಸಂಘಟನೆ, ಸಾಮಾಜಿಕ ಕ್ರಿಯೆಯೆ ಮಾದರಿ, ತತ್ವಗಳು, ತಂತ್ರಗಳು, ಪ್ರಕಾರಗಳೊಂದಿಗೆ ಅರ್ಥಿಯ ಮಾಹಿತಿ ಸಂಗ್ರಹಣೆಯ ಸಾಧನಗಳ ಸಂಕ್ಷಿಪ್ತ ವಿವರ ಮತ್ತು ವೃತ್ತಿಯಲ್ಲಿ ಕಂಡುಬರುವ ಕೆಲ ನೈತಿಕ ದ್ವಂದ್ವಗಳನ್ನು ಓದುಗರ ಮಾಹಿತಿಗಾಗಿ ಒದಗಿಸಲಾಗಿದೆ. ಹೊಸ ಅಂಶಗಳೊಂದಿಗೆ ನವೀಕರಿಸಲ್ಪಟ್ಟ ಮುದ್ರಣವನ್ನು ಓದುಗರಾದ ಸಮಾಜಕಾರ್ಯ ವಿದ್ಯಾರ್ಥಿಗಳಿಗೆ, ವೃತ್ತಿಯಲ್ಲಿ ತೊಡಗಿರುವ ವಿವಿಧ ವರ್ಗದವರಿಗೆ ಸಹಾಯಕವಾಗುವದೆಂಬ ಆಶಯದೊಂದಿಗೆ ಈ ಪ್ರಯತ್ನ ಮಾಡಲಾಗಿದೆ. ಈ ಪ್ರಯತ್ನದಲ್ಲಿ ಹೆಚ್ಚಿನ ವಿವರಗಳೊಂದಿಗೆ ಓದುಗರನ್ನು ತಲುಪಲು ಸೂಕ್ತ ಸಲಹೆಗಳನ್ನಿತ್ತು ಸಹಕರಿಸಿದ ಸಹೊದ್ಯೋಗಿಗಳಿಗೆ ಮತ್ತು ಪ್ರಸ್ತುತ ವೃತ್ತಿಬಾಂಧವರಾಗಿರುವ ಶಿಷ್ಯ ಮಿತ್ರರಿಗೂ ಧನ್ಯವಾದ ಹೇಳುವದನ್ನು ಮರೆಯಲು ಅಸಾಧ್ಯ. ಭವಿಷ್ಯದಲ್ಲಿ ಹೆಚ್ಚಿನ ಸುಧಾರಣೆಗೆ ಸೂಕ್ತ ವಿಮರ್ಶೆ ಸಲಹೆಗಳನ್ನು ಇವರೆಲ್ಲರಿಂದ ಎದುರು ನೋಡುತ್ತಾ ಪುಟ ವಿನ್ಯಾಸ ಮತ್ತು ಮುದ್ರಣದಲ್ಲಿ ಸಹಕರಿಸಿದ ಶ್ರೀ ಆಫ್ಸೆಟ್ ನವರಿಗೂ ಅಭಿನಂದನೆಗಳು. ಲೇಖಕರು ಸದಾಶಿವಯ್ಯಾ. ಮ. ಜಿರ್ಲಿಮಠ. ಲೇಖಕರು: ಸದಾಶಿವಯ್ಯಾ ಮ. ಜಿರ್ಲಿಮಠ ನನ್ನುಡಿ
ವೃಂದ ಸಮಾಜಕಾರ್ಯ ಸಾಕಷ್ಟು ಅಂಶಗಳೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಪಸರಿಸುತ್ತಿದೆ. ಕಳೆದ 30 ವರ್ಷಗಳಿಗಿಂತಲೂ ಹೆಚ್ಚು ಅವಧಿಯಲ್ಲಿ ಸಮಾಜಕಾರ್ಯದ ವಿವಿಧ ಆಯಾಮಗಳಲ್ಲಿ ವೃತ್ತಿ ಆಚರಣೆಯ ಅನುಭವ, ಸಮಾಜಕಾರ್ಯ ವಿದ್ಯಾರ್ಥಿಗಳಿಗಾಗಿ ಸಾಹಿತ್ಯ ಲಭ್ಯವಾಗಿಸುವ ಬಯಕೆ ಹೆಚ್ಚಿಸಿದೆ. ಮೊದಲೆರಡು ಮುದ್ರಣಗಳಿಗೆ ವ್ಯಕ್ತವಾದ ಪ್ರತಿಕ್ರಿಯೆ, ಪ್ರತಿಗಳಿಗಾಗಿ ಮೇಲಿಂದ ಮೇಲೆ ಕಂಡು ಬಂದ ಬೇಡಿಕೆ ಮತ್ತು ಲಭ್ಯವಾದ ಸಲಹೆ, ವಿಮರ್ಶೆಗಳನ್ನು ಒಳಗೂಡಿಸಿಕೊಂಡು ಸುಧಾರಿಸಿದ ಮತ್ತು ಹೆಚ್ಚಿನ ವಿವರದೊಂದಿಗೆ ಮೂರನೇಯ ಮುದ್ರಣಕ್ಕೆ ಕೈ ಹಾಕುವಂತೆ ಪ್ರೇರೇಪಿಸಿತು. ಈ ಆವೃತ್ತಿಯಲ್ಲಿ ಮುಖ್ಯವಾಗಿ ವರ್ತನೆಯ ಸುಧಾರಿಸುವ ಸಿದ್ದಾಂತಗಳನ್ನು ಉದಾಹರಣೆಗಳೊಂದಿಗೆ, ವೃಂದ ಪ್ರಕ್ರಿಯೆಯಲ್ಲಿ ಹೆಚ್ಚಿನ ಮಾಹಿತಿ, ವೃಂದ ಚಲನಾತ್ಮಕತೆಯಲ್ಲಿ (ಒಂಟಿತನ. ನಾಯಕತ್ವ, ಬಲಿಪಶುವಾಗುವಿಕೆ, ನಿಯಂತ್ರಣ ಇತ್ಯಾದಿ), ಇದರೊಂದಿಗೆ ತಂತ್ರ ಮತ್ತು ಕೌಶಲ್ಯಗಳ ವಿವರ, ಮಾಹಿತಿ ಸಂಗ್ರಹದ ಸಾಧನಗಳ ಸಂಕ್ಷಿಪ್ತ ವಿವರಣೆ ಮತ್ತು ನೈತಿಕ ದ್ವಂದ್ವಗಳ ಕುರಿತು ಸೇರ್ಪಡೆ ಮಾಡಿ ಓದುಗರಿಗೆ ಹೆಚ್ಚಿನ ಮಾಹಿತಿ ಲಭ್ಯವಾಗುವಂತೆ ಪ್ರಯತ್ನಿಸಲಾಗಿದೆ. ಲೇಖಕರು: ಅಶೋಕ ಆರ್. ಭೂತಕಾಲ ಮತ್ತು ಭವಿಷ್ಯತ್ ಕಾಲದಲ್ಲಿ ವಾಸಿಸುವ ಬದಲು ವರ್ತಮಾನದಲ್ಲಿ ಜೀವಿಸಿ.
ಪ್ರತಿಯೊಬ್ಬರಿಗೂ ಇರುವುದು ಮನಸ್ಸು ಒಂದೇ ಆದರೆ ಅವರವರ ಅನುಭವ ಮತ್ತು ಆಲೋಚನೆಗಳ ಮೇಲೆ ಬೇರೆ ಬೇರೆ ರೀತಿಯಲ್ಲಿ ಕಾಣಿಸುತ್ತದೆ, ಬದುಕು ಎಂಬುದು ಕೂಡ ಹೀಗೆ ಕೆಲವರ ಬದುಕಲ್ಲಿ ತಂಗಾಳಿ ಬೀಸಿದರೆ ಇನ್ನೂ ಕೆಲವರ ಬದುಕಲ್ಲಿ ಬಿರುಗಾಳಿ ಬೀಸುತ್ತದೆ. ಸಂಬಂಧಗಳು ಹಾಗೆ ಕೆಲವರಿಗೆ ಸಿಹಿ ಅನಿಸಿದರೆ ಕೆಲವರಿಗೆ ಕಹಿ ಅನಿಸುತ್ತದೆ. ಇವುಗಳ ಬಗ್ಗೆ ನಿಮ್ಮದೇ ಮನಸ್ಸಿನ ಮಾತುಗಳನ್ನು, ಲೇಖಕರದೇ ಆದ ವಾಕ್ಯಗಳಲ್ಲಿ ಸೆರೆ ಹಿಡಿದು ಒಂದೆಡೆ ಸೇರಿಸುವ ಪ್ರಯತ್ನ ಮಾಡಲಾಗಿದೆ. ಮನಸ್ಸಿನ ಹಾಗೂ ಬದುಕಿನ ಸಂಬಂಧಗಳ ಆಳವನ್ನು ಸ್ಪರ್ಶಿಸುವ ಪ್ರಯತ್ನವನ್ನು ಲೇಖಕರು ಮಾಡಿರುತ್ತಾರೆ. Author: Narasimham Rayadurgam Preface This book on “Vocational Rehabilitation of Disabled in India, Principles & Practice” is an attempt to educate the present and future rehabilitation professionals in the area of vocational rehabilitation.
Vocational Rehabilitation as a concept can be traced back to the First World War (1914 -1918), wherein the entire Europe and United States of America (USA) were involved. Several war veterans were injured but were skilled and available for bringing the country’s economy to keel. The Veterans’ Rehabilitation Act of 1920 of USA was the first in the modern times to utilize the services of the war disabled in reviving the country’s economy. This has been amended in due course to include other disabilities. The Department in the government of United States of America (USA) was named Veterans Rehabilitation Administration, later changed as Social & Rehabilitation Services (SRS) Administration and now known as Rehabilitation Services Administration. Internationally, it is a young profession. Such services are available in U.K., European countries, Japan, Singapore and other African and Asian countries. ಲೇಖಕರು : ಡಾ. ಸಿ.ಆರ್. ಗೋಪಾಲ್ ಯಾವುದೇ ಸಮಾಜ, ರಚನೆ ಮತ್ತು ಕಾರ್ಯಶೀಲತೆಯ ದೃಷ್ಟಿಯಿಂದ, ಸ್ಥಿರವಲ್ಲ ಮತ್ತು ನಿಷ್ಕ್ರಿಯದಲ್ಲ. ಅದು ರಚನೆಯ ದೃಷ್ಟಿಯಿಂದ ಮತ್ತು ಕ್ರಿಯೆಗಳ ದೃಷ್ಟಿಯಿಂದ ಚಲನಶೀಲವಾಗಿರುತ್ತದೆ ಮತ್ತು ಪರಿವರ್ತನಾಶೀಲವಾಗಿರುತ್ತದೆ. ಹಾಗಾಗಿ ಯಾವುದೇ ಸಮಾಜ ನಿರಂತರವಾಗಿ ಬದಲಾಗುತ್ತಿರುತ್ತದೆ. ಅಂತಹ ಬದಲಾವಣೆಗಳಿಗೆ ತೀವ್ರತೆ ಮತ್ತು ವ್ಯಾಪಕತೆ ಇರಬಹುದು, ಇಲ್ಲದಿರಬಹುದು. ಬದಲಾವಣೆ ಗೋಚರಿಸಬಹುದು ಇಲ್ಲವೇ ಗೋಚರಿಸದಿರಬಹುದು. ಇಂದು ಗೋಚರಿಸದೇ ಇದ್ದದ್ದು, ಇನ್ನೆಂದೊ ಗೋಚರಿಸಬಹುದು. ಈ ಬದಲಾವಣೆ ಆರ್ಥಿಕ, ಕೈಗಾರಿಕಾ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಮನರಂಜನಾ, ವೈಜ್ಞಾನಿಕ, ಸಾಂಸ್ಕೃತಿಕ, ಇನ್ನೂ ಮುಂತಾದ ಕ್ಷೇತ್ರಗಳಲ್ಲಿ ಆಗುತ್ತದೆ. ಇಂತಹ ಬದಲಾವಣೆಗಳನ್ನು, ಸಾಮಾಜಿಕ ಸಂಸ್ಥೆಗಳಾದ ಕುಟುಂಬ, ಸಮೂಹ, ಸಂಘಸಂಸ್ಥೆಗಳು, ಸಮುದಾಯ ಮತ್ತು ಕೊನೆಯದಾಗಿ ಇಡೀ ಸಮಾಜದಲ್ಲಿ ಕಾಣುತ್ತೇವೆ. ಬದಲಾವಣೆ ಈ ಸಂಸ್ಥೆಗೆಳ ರಚನೆಯಲ್ಲಷ್ಟೇ ಆಗದೆ ಕ್ರಿಯೆಗಳಲ್ಲಿಯೂ, ಸಂಬಂಧಗಳಲ್ಲಿಯೂ ಆಗುತ್ತದೆ. ಅದು ಹೊಸ ಸಂಬಂಧಗಳನ್ನು ಸೃಷ್ಟಿಸುವುದಲ್ಲದೆ ಹೊಸ ಕಟ್ಟುಪಾಡುಗಳಿಗೆ, ಹೊಸ ಮೌಲ್ಯಗಳಿಗೆ ದಾರಿ ಮಾಡಿಕೊಡುತ್ತದೆ. ಇದೇ ಸ್ಥಿತಿ ಮುಂದುವರೆದು ನಿಧಾನವಾಗಿ ಸಮಾಜದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಿತ್ರಣವೇ ಬದಲಾಗುತ್ತದೆ.
ಲೇಖಕರು : ಗಂಗಾಧರ ರೆಡ್ಡಿ ಎನ್. ಮತ್ತು ಡಾ. ಲೋಕೇಶ ಎಂ.ಯು ಸಮಾಜಕಾರ್ಯದ ಉದಯೋನ್ಮುಖ ಕ್ಷೇತ್ರವನ್ನು ಪರಿಚಯಿಸುವ ಕೃತಿ 'ವಿಪತ್ತು ನಿರ್ವಹಣೆಯಲ್ಲಿ ಸಮಾಜಕಾರ್ಯ'. ಈ ಪುಸ್ತಕದ ಮೂಲ ಆಶಯ ಗ್ರಾಮೀಣ ಹಾಗೂ ಕನ್ನಡ ಭಾಷಾ ಮಾದ್ಯಮ ಹಿನ್ನೆಲೆ ಹೊಂದಿರುವ ವಿದ್ಯಾರ್ಥಿಗಳಿಗೆ ವಿಪತ್ತು ನಿರ್ವಹಣಾ ಶಾಸ್ತ್ರದ ಮೂಲ ಪರಿಕಲ್ಪನೆಗಳು ಮತ್ತು ವಿಪತ್ತು ನಿರ್ವಹಣೆಯಲ್ಲಿ ಸಮಾಜಕಾರ್ಯದ ಮಧ್ಯಸ್ಥಿಕೆಯನ್ನು ಅರ್ಥ ಮಾಡಿಸುವುದೇ ಆಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಚನೆಯಾದ ಸದರಿ ಪುಸ್ತಕ ಪ್ರಶಿಕ್ಷಕರಿಗೆ, ಸಂಶೋಧಕರಿಗೆ, ವೃತ್ತಿಪರರಿಗೆ ಹಾಗೂ ಕ್ಷೇತ್ರ ಕಾರ್ಯಕರ್ತರಿಗೆ ಮಾರ್ಗದರ್ಶಿ ಕೈಪಿಡಿಯಾಗಿದೆ. ಇದು ವಿಪತ್ತು ನಿರ್ವಹಣಾ ಶಾಸ್ತ್ರವನ್ನು ಅಧ್ಯಯನ ಮಾಡಬಯಸುವ ಎಲ್ಲಾ ವೃತ್ತಿಪರರಿಗೆ ಕನ್ನಡ ಭಾಷೆಯಲ್ಲಿ ಸಿಗುವ ಪ್ರಾಥಮಿಕ ಮಾಹಿತಿಯ ಮೂಲವೇ ಆಗಿದೆ.
ಸಮಾಜಕಾರ್ಯ ಸಾಹಿತ್ಯ ಕ್ಷೇತ್ರದ ಉದಯೋನ್ಮುಖ ಬರಹಗಾರ ಶ್ರೀಯುತ ಗಂಗಾಧರ ರೆಡ್ಡಿ ಎನ್. ರವರು ಶೈಕ್ಷಣಿಕ ಕ್ಷೇತ್ರದಲ್ಲಿ ಸೇವಾನಿರತರಾದ ಡಾ. ಲೋಕೇಶ ಎಂ.ಯು. ರವರ ಸಹಯೋಗದಲ್ಲಿ ರಚಿಸಿದ ಚೊಚ್ಚಲ ಪುಸ್ತಕವೇ ವಿಪತ್ತು ನಿರ್ವಹಣೆಯಲ್ಲಿ ಸಮಾಜಕಾರ್ಯ. ವ್ಯಕ್ತಿಗತ ಸಮಾಜಕಾರ್ಯ ಪರಿಚಯ ಯುವ ಲೇಖಕ ಗಂಗಾಧರ ರೆಡ್ಡಿ ಎನ್. ರವರು ಸಮಾಜಕಾರ್ಯ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಚೊಚ್ಚಲ ಕಾಣಿಕೆಯಾಗಿದ್ದು, ಪ್ರಶಿಕ್ಷಕ, ವಿದ್ಯಾರ್ಥಿ ಹಾಗೂ ವೃತ್ತಿಪರ ಸಮಾಜಕಾರ್ಯಕರ್ತರಿಂದ ಪ್ರಶಂಸೆಗೊಳಪಟ್ಟ ಪುಸ್ತಕವಾಗಿದೆ. ಸಮಾಜಕಾರ್ಯ ಹಾಗೂ ವಿಪತ್ತು ನಿರ್ವಹಣೆ ವಿಷಯದ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲನ್ನು ನಿರ್ಮಿಸಲಿರುವ ಸದರಿ ಪುಸ್ತಕದಲ್ಲಿ ಬಳಕೆಯಾಗಿರುವ ಭಾಷೆ ಸರಳವಾಗಿದೆ. ಪದಗಳ ಆರಿಸುವಿಕೆ ಮತ್ತು ಪದ ಪ್ರಯೋಗ ಸಮಂಜಸವಾಗಿದ್ದು, ಬರವಣಿಗೆಯಲ್ಲಿ ಸ್ಪಷ್ಟತೆ ಇದೆ. ನಿರೂಪಣೆ ಆತ್ಮೀಯವಾಗಿದ್ದು, ಓದಿಸಿಕೊಂಡು ಹೋಗುತ್ತದೆ. ಬರಹ ಮನಮುಟ್ಟುವಂತಿದ್ದು, ಓದುಗರನ್ನು ಸೆಳೆಯುತ್ತದೆ. ಪುಸ್ತಕದ ಮೂಲ ಓದುಗರಿಗೆ ವಿಷಯಗಳನ್ನು ಸ್ಪಷ್ಟವಾಗಿ ಅರ್ಥ ಮಾಡಿಸುವ ಉದ್ದೇಶದಿಂದ ನೀಡುರುವ ಜೀವಂತ ಉದಾಹರಣೆಗಳು ಸಮರ್ಪಕ ಹಾಗೂ ಸಮಯೋಚಿತವಾಗಿದ್ದು, ಅರ್ಥಗರ್ಭಿತವಾಗಿವೆ. ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಹಂತಗಳಲ್ಲಿ ಸಮಾಜಕಾರ್ಯ ವಿಷಯವನ್ನು ಅಧ್ಯಯನ ಮಾಡುವ ಪ್ರಶಿಕ್ಷಣಾರ್ಥಿಗಳಿಗೆ ಅನುಕೂಲವಾಗಲೆಂದು ಪಠ್ಯಕ್ರಮಕ್ಕೆ ಅನುಗುಣವಾಗಿ ರಚಿಸಲಾಗಿದೆ. ಈ ಎಲ್ಲಾ ವೈಶಿಷ್ಟ್ಯಗಳಿಂದ ಕೂಡಿದ ಪುಸ್ತಕ ಓದುಗ ಸಮುದಾಯದಿಂದ ಪ್ರಶಂಸಿಸಲ್ಪಟ್ಟಿದೆ. Author: Shankar Pathak This book is a selection of my published articles on a common theme. Most of them were written during a period of eight years 1979-1987 (chapters 1 to 4, and 6 and 7). Chapter 8 was written for the ASSWI seminar on poverty, December 1975 and published later in a book edited by R.R. Singh (Concept Publishing Co.). Chapter 5 was part of a special project conceived and executed by Dr. Murli Desai, who was then on the faculty of Tata Institute of Social Sciences and it was published in the Indian Journal of Social Work in April 1997. Chapter 9 was specially written during January-April 2013 for this publication, to provide the readers with an overview of India’s developmental planning of over sixty years, an empirial check on the conceptual-academic discussion of social development/ development in chapters No. 2 and 3. Readers may supplement the data and possibly arrive at a conclusion different than mine. For over six months a wealth of data from a variety of sources were collected-official/semi-official (government and industry) independent academic writers or other prestigius organisational sources like A.D.B. World Bank, O.E.C.D. and R.B.I. Only a small selection of the collected data is used in chapter 9 and some additional data is presented in the Appendix III, Statistical Profile.
ಲೇಖಕರು : ಡಾ. ಸಿ.ಆರ್. ಗೋಪಾಲ್ ಸಾಮಾಜಿಕ ಕ್ರಿಯಾಚರಣೆ ಸಮಾಜಕಾರ್ಯದ ಒಂದು ವಿಧಾನ. ವ್ಯಕ್ತಿಗತ ಸಮಾಜಕಾರ್ಯ, ವೃಂದಗತ ಸಮಾಜಕಾರ್ಯ ಮತ್ತು ಸಮುದಾಯ ಸಂಘಟನೆ, ಸಮಾಜಕಾರ್ಯದ ಮೂಲವಿಧಾನಗಳೆಂದು ಪರಿಗಣಿಸಿದ್ದರೆ, ಸಾಮಾಜಿಕ ಕ್ರಿಯಾಚರಣೆಯನ್ನು ಸಮಾಜಕಾರ್ಯದ ಒಂದು ಪೂರಕವಿಧಾನ ಎಂದು ಪರಾಮರ್ಶಿಸಲಾಗಿದೆ. ಸಾಮಾಜಿಕ ಕ್ರಿಯಾಚರಣೆ ಸಮಾಜಕಾರ್ಯದ ಪ್ರಮುಖ ವಿಧಾನಗಳಲ್ಲಿ ಒಂದು ಎಂದು ವಿಶ್ಲೇಷಣೆ ಮಾಡುವವರೂ ಇದ್ದಾರೆ.
ವ್ಯಕ್ತಿಗತ ಸಮಾಜಕಾರ್ಯ, ವೃಂದಗತ ಸಮಾಜಕಾರ್ಯ ಮತ್ತು ಸಮುದಾಯ ಸಂಘಟನೆ ಅನುಗಾಲ (ಅವಿರತ) ನಡೆಯುವ ಯೋಜನೆ / ಕಾರ್ಯಕ್ರಮಗಳಾಗಿರುವುದರಿಂದ ಅವುಗಳನ್ನು ಮೂಲವಿಧಾನಗಳೆಂದು ಕರೆಯಲಾಗಿದೆ. ಆದರೆ ಸಾಮಾಜಿಕ ಕ್ರಿಯಾಚರಣೆ ಸಮಯ ಸಂದರ್ಭಕ್ಕೆ ಅನುಗುಣವಾಗಿ ಸಂಘಟನೆಗೊಳ್ಳುತ್ತದಾದ್ದರಿಂದ, ಅವನ್ನು ಪೂರಕವಿಧಾನ ಎಂದು ನಿರ್ಣಯಿಸಿರಬೇಕು. ಸಮಾಜದ ಓರೆ-ಕೋರೆಗಳನ್ನು ತಿದ್ದಲು, ದೌರ್ಜನ್ಯಗಳನ್ನು ತಡೆಯಲು, ಕಾನೂನಾತ್ಮಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಮಾಜಿಕ ಕ್ರಿಯಾಚರಣೆ ಪ್ರಸ್ತುತ ಬಳಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಕ್ರಿಯಾಚರಣೆಯೂ ಅತಿ ಅವಶ್ಯಕವಾದ ವಿಧಾನವೇ ಹೌದು. ಸಾಮಾಜಿಕ ಕ್ರಿಯಾಚರಣೆ ಎರಡು ಶಬ್ದಗಳ ಪದಗುಚ್ಚ. ಆಂಗ್ಲ ಭಾಷೆಯ ‘Social Action’ ಎಂಬ ಪದಗುಚ್ಚಕ್ಕೆ ಸಾಮಾಜಿಕ ಪ್ರಚೋದನ ಕ್ರಿಯೆ, ಸಾಮಾಜಿಕ ಕ್ರಿಯೆ ಎಂಬ ಅರ್ಥಗಳಿವೆ. ಸಾಮಾಜಿಕ ಕ್ರಿಯಾಚರಣೆಯಲ್ಲಿ ಪ್ರಚೋದನೆಯ ಅಂಶದ ಹೊರತಾಗಿಯೂ ಇತರೆ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಸಾಮಾಜಿಕ ಕ್ರಿಯೆ ಎಂಬ ಪದಗುಚ್ಛ ಹೆಚ್ಚು ಸಮಂಜಸ. ಸಾಮಾಜಿಕ ಕ್ರಿಯಾಚರಣೆ ಬೃಹದಾಕಾರದ ಚಟುವಟಿಕೆ. ಅದನ್ನು ಸಾಧಿಸಲು ಬಹುಜನರ ಭಾಗವಹಿಸುವಿಕೆ ಅವಶ್ಯವಾಗಿರುತ್ತದೆ. ಈ ಬಹುಜನರಲ್ಲಿ ಸಾಮಾಜಿಕ ಕಾರ್ಯಕರ್ತ, ಕ್ರಿಯಾವಾದಿ, ದೌರ್ಜನ್ಯಕ್ಕೆ ಒಳಗಾದವರು, ನಾಯಕರು, ಗುಂಪುಗಳು, ವಿಷಯ ಪರಿಣಿತರು, ಸ್ವಯಂ ಸೇವಕರು, ಮುಂಚೂಣಿ ಕಾರ್ಯಕರ್ತರು, ಪ್ರಚಾರಕರು, ಹೋರಾಟಗಾರರು, ಭಾಷಣಕಾರರು, ಸಂಧಾನಕಾರರು, ವಿಪಕ್ಷದವರು ಮುಂತಾದವರು ಸೇರಿರುತ್ತಾರೆ. ಇವರೆಲ್ಲರೂ ಸಾಮಾಜಿಕ ಕ್ರಿಯಾಚರಣೆಯಲ್ಲಿ ತಮ್ಮ ತಮ್ಮ ಪಾತ್ರವನ್ನು ನಿರ್ವಹಿಸುತ್ತಾರೆ. ಈ ಸಾಮೂಹಿಕ ಸ್ವಭಾವವನ್ನು ಗುರುತಿಸಿ, ಸೋಷಲ್ ಯಾಕ್ಷನ್ಸ್ ಎಂಬ ಪದಗುಚ್ಚಕ್ಕೆ, `ಸಾಮಾಜಿಕ ಕ್ರಿಯಾಚರಣೆ’ ಎಂಬ ಪದಪುಂಜವನ್ನು ಬಳಸಲಾಗಿದೆ.
Edited by Murli Desai, R.R. Singh and Sanjai Bhatt
Jaipur: Rawat Publications, Rs. 1,195-00
Journeys in Social Work Education in India: Emerging Reflections comprises autobiographical narratives of 17 retired teachers about the “live [lived] history of social work education in India” (p 271). The book is edited by Murli Desai, R R Singh and Sanjai Bhatt. Set out by editors, the authors have recorded their academic contributions, administrative accomplishments, and collaborative works with state and non- state actors. Despite the claim of being a “live[d] history,” the book could not open up a nuanced discussion and a critical self-reflection on contemporary social work education and practice. It appears as a chronicle of a few urban institutions and biographies of selected teachers who provide a ringside view of social work in India and invariably extend information about the histories of various associations and the stories of their rise and fall. The review more specifically comments on the pathology of the social work discipline and its disengaged response to the sociocultural realities in India.
Though I am not a very regular user of WhatsApp I have opened my WhatsApp today in the evening soon after paying gratitude to the several emergency workers as warriors/ fighters against Coronavirus spread. During Janata curfew, I read a message on one of the WhatsApp group titled as social work professionals comprising of 145 members. I believe all of them are professional social workers. While there were many congratulatory messages on Janata Curfew suggested by Prime minister on 22nd March and also the expression of gratitude towards emergency workers from almost all parts of the country at 5 p.m., of course by members, I was stuck up with one message from a social work educator. The message reads like ‘while offering my respect to all people those who work in an emergency, how the social work profession can be a part of this list. Please guide us for professional visibility, identity, and credibility’. None of the members except one has made any comment on this post in the past 24 hours. I believe that members of this group may have different reasons for finding the question as not so significant or many others have their explanations.
Mr. Barnabas has thrown a great deal of light on the question of loka-sakti and I think the conclusions that he has arrived at, after analysing some action projects in different parts of the world, and the ways he has shown how peoples' enthusiasm is generated for loka-sakti, could be taken up for discussions as we proceed. Now, I shall very briefly try to give you the concept of loka-sakti as understood in the Gandhian movement.
To the members of the Working Group of Gandhian and professional social work this is a familiar subject. Therefore, I am only listing some of the impediments to the growth of social work in India in outline, as points for discussion, without any attempt to explain or elaborate them.
The Concept of Social Work There is a lack of clarity in the meaning of social work, a peculiarity to India. Like God, each beholder has his own vision of it and like the Scriptures each devotee interprets it in his own way. In Gandhian era, the political worker and social worker became interchangeable terms, and even after that era is over, the aroma continues to confuse individuals and groups, to the advantage of the politician and the detriment of the social worker. The process of clarification must begin from within, from where the confusion started. Attempts at sifting from "outside" are likely to be less successful and may set in motion defence mechanisms. Abstract
A poor man feels he is out of sight of other, groping in the dark. Mankind takes no-notice of him. Gandhi was very much concerned with the plight of the common man. He felt that we must change the current state of affairs so that the poor man too can raise his head with dignity. He found three ways to do this first; the gospel of love should be followed in place of that of hate. Second, violence should be preplaced by self-suffering. Third, do put soul force against that of brute force. Therefore, replace greed by love and everything will be all right. If this is followed in the truth sprit it will enhance the value of professional social work and enthuse others engaged in similar task to work with the people. Preliminary Note
It is nearly 65 years since Mahatma Gandhi was taken away for ever from our midst. But what was taken away was only his mortal physical body, while the ideology he propagated, the causes he stood and worked for, the values he held and the numerous tasks that he had taken up and left behind are all of eternal value and of eternal need for the good of humankind. Value based education and morality are important to mould our children.
Education is a process of teaching and learning -Education for right livelihood and integrated human development should promoter harmonious relationship between individuals and family and between man and nation. Education should build character of students. Without good character of people we cannot build a good society and good nation. Though India become politically independent in 1947. Indian education system continues to be a prisoner of the colonial legacy left by the British. Dr. Banerjee was the architect and builder of Medical and Psychiatric Social Work in Tata Institute of Social Sciences. She was the one who asked in 1946 the million dollar question: "What is Medical and Psychiatric Social work?" It was the occasion when Dr. Kumarappa, the then Director asked Dr. Banerjee to start the specialization of MPSW in response to the recommendation of the Bhore committee. After asking the question, she herself set about finding an answer and shaping MPSW over the next 24 years.
If I am allowed to use biblical language, I can say that Dr. Banerjee planted and nurtured the plant of MPSW for 24 years and it was my privilege to maintain and just water it for the next 13 years and I am happy about it. Abstract
Juvenile delinquency is a global issue which is a serious issue of concern. There is no exception in case of juvenile delinquents' presence either in developed nations, developing or under developed nations. This is a major issue of social concern which affects the very basis of our society. Social problems that exist in our society like broken families, illiteracy, unemployment, alcoholism leads to emergence ofJuvenile delinquency. These children are future citizens of the country thus it becomes very important to reform them so that they become valuable citizens. These children are either homeless, runaway ana- have no one to take care of. Thus it is very important to intervene with them so as to bring them up as good citizens. Abstract
Participation. in the context of development has two distinct interpretations. They are: a) participation as an input to development; and b). As a means of empowering the rural poor to play an effective role in rural development. Thus, participation is re cognised as an intrinsic part of the process of development rather than merely facilitator. This paper discusses the importance & process of people's participation, different stages. In the process of People's Participation, and various factors affecting people's participation In the context of development process. Key words: Conscientisation, resources. For many years India has worked on establishing a democratic decentralised system of local government with the intention of devolving political and administrative powers to the people. The system of local government is called Panchayati Raj, and it has existed for many decades. However, it has undergone several reforms - the latest of which took place in 1992 and resulted in a constitutional amendment act. The members of the local-governments in the Panchayati Raj system of 1992 have ended their first five-year term. With the evolution of the reforms in mind and the political intentions manifest, it is interesting to focus on the essential aspect of the local governments - peoples' involvement in local government and how they respond to the opportunity of running their own affairs. This chapter takes a close-up of popular participation in ~cal government in India. It reviews the evolution of India's system of local government, and, in order to illustrate some of the complexities concerning popular participation in local government, it presents the results of a specific case study . The study was carried out by the author in the state of Karnataka, in South India, in the summer of 1998. Kamataka was the first Indian state to introduce a system of decentralised government according to the 1992 amendment act. It was also the first state to implement the policy of one third of the seats being reserved for females in all local bodies.
|
Archives
March 2026
Categories
All
Social Work
|
|
|
|
| ||||||||||||||||||||||||
SITE MAP
SiteNIRATHANKA |
POSHOUR OTHER WEBSITESSubscribe |

RSS Feed