ಲೇಖಕರು : ರಾಮ್ ಕೆ. ನವರತ್ನ ಪುಟ : 176 ಪರಿವಿಡಿ 1. ಸಂಸ್ಥೆಯ ಗುರಿ, ಧ್ಯೇಯ, ಮೌಲ್ಯಗಳು (Objective), ದೃಷ್ಟಿ (Vision), ಧ್ಯೇಯ (Mission) 2. ಸಾಮಾನ್ಯ ನಿಯೋಜನಾ ಪತ್ರಗಳು
3. ಒಪ್ಪಂದಗಳು (Contracts/Agreements)
4. ಸ್ಥಾಯಿ ಆದೇಶಗಳ ನಮೂನೆ (Standing Order) 5. ಸುರಕ್ಷಾ ನೀತಿ (Safety Policy 6. ಮಾನವ ಸಂಪನ್ಮೂಲ ನೀತಿಗಳು (HR Policies)
7. HRD ನೀತಿಯಲ್ಲಿ ಇರಬೇಕಾದ ಕೆಲವೊಂದು ಮುಖ್ಯ ಅಂಶಗಳು
8. ಲೈಂಗಿಕ ಕಿರುಕುಳ ನಿವಾರಣೆ ರೀತಿ ನಿಯಮಗಳ ಮಾದರಿ. (Prevention of Sexual Harassment Rules Model) 9. ತರಬೇತಿಯ ಅಭಿಪ್ರಾಯ ನಮೂನೆ (Traning Feedback) 10. ಕಾರ್ಮಿಕ ಕಾಯಿದೆ ಪದ್ಯಗಳು 11. ಆಯ್ದ ಆಂಗ್ಲ ಭಾಷೆ ನಮೂನೆಗಳು (Selected English Formats)
12. ಶಬ್ದ ಸೂಚಿ - ಇಂಗ್ಲೀಷ ಕನ್ನಡ (Words to Know English Kannada) 13. ಗ್ರಂಥ ಋಣಿ (Bibliography) 14. ಲೇಖಕರ ಇತರೆ ಕೃತಿಗಳು (Other Publications of Author) ಮುನ್ನುಡಿ ಯಾವುದೇ ಸಂಸ್ಥೆಯಲ್ಲಿ ಉದ್ಯೋಗ ಪ್ರಾರಂಭವಾದಾಗ, ಪ್ರತಿ ನೌಕರನಿಗೆ ಆಯಾ ಸಂಸ್ಥೆಯ ಸಂಪೂರ್ಣ ಮಾಹಿತಿ, ಅವನ ಕೆಲಸ ಕೆಲಸದ ರೀತಿ, ನೀತಿ, ನಿಯಮಗಳು, ಜವಾಬ್ದಾರಿ, ಹಕ್ಕು ಬಾಧ್ಯತೆಗಳು, ಇತ್ಯಾದಿಗಳ ತಿಳುವಳಿಕೆ ನೀಡುವುದು ಅವಶ್ಯ. ನೌಕರ ಮಾನಸಿಕವಾಗಿ ಹಾಗೂ ವ್ಯವಹಾರಿಕವಾಗಿ ತನ್ನ ಸಂಸ್ಥೆಯ ಕೆಲಸದ ಜೊತೆ ಹೊಂದಿಕೊಳ್ಳುತ್ತಾನೆ. ಹಾಗೆಯೇ ಸಂಸ್ಥೆ/ ಕಂಪನಿಯ ಕೂಡ ತನ್ನ ಗುರಿಗಳನ್ನು ಸಾಧಿಸಲು ಹಾಗೂ ನೌಕರನ ಸಂಪೂರ್ಣ ಸಾಮರ್ಥ್ಯ ಕೌಶಲ್ಯಗಳನ್ನು ಉಪಯೋಗಿಸುವ ವಾತಾವರಣ ನಿರ್ಮಾಣ ಮಾಡಬೇಕಾಗುತ್ತದೆ. ಅಲ್ಲದೆ ಇದು ಕಾನೂನಿನ ಒಂದು ಸಹಜ ಕ್ರಿಯೆ ಹಾಗೂ ಕಾರ್ಮಿಕ ಕಾನೂನಿನ ವ್ಯವಹಾರ/ಸಂಬಂಧಿಗಳ ಭದ್ರ ಬುನಾದಿಯ ಅವಶ್ಯಕತೆಯೂ ಹೌದು. ಇದು ಯಶಸ್ವಿಯಾಗಿ, ಪರಿಣಾಮಕಾರಿ ಆಗಬೇಕಾದರೆ ನೌಕರನಿಗೆ ತನ್ನ ಸಂಸ್ಥೆಯ, ತನ್ನ ಕೆಲಸದ ರೀತಿ ನೀತಿಗಳ ಆಡಳಿತ ವೈಖರಿ ಬಗೆಗೆ ಸಂಪೂರ್ಣ ಜ್ಞಾನ ಅರಿವು ಬೇಕು. ಈ ದಿಶೆಯಲ್ಲಿ ಪ್ರಾರಂಭಿಕ ಹಂತದಲ್ಲಿ ಅವನಿಗೆ ಸಂಸ್ಥೆಯ ಪರಿಚಯ, ಧ್ಯೇಯ, ಉದ್ದೇಶ, ಗುರಿ, ಮೌಲ್ಯಗಳು, ಸುರಕ್ಷೆ, ಗುಣಮಟ್ಟ, ಪರಿಸರ ಇತ್ಯಾದಿ ನೀತಿಗಳ ಬಗ್ಗೆ, ಕಂಪನಿಯು ಹೊಂದಿರುವ ಬದ್ಧತೆ ಮತ್ತು ಜಾರಿ ಮಾಡುವ ವಿಧಾನದ ಅರಿವು ಇದ್ದರೆ ಅವನು ತಾನು ಯಶಸ್ವಿ ಉದ್ಯೋಗಿ ಆಗುವುದರ ಜೊತೆ ಕಂಪನಿಯ ಯಶಸ್ವಿಗೂ ತನ್ನ ಪಾಲಿನ ದೇಣಿಗೆ ನೀಡಲು ಸಮರ್ಥನಾಗುತ್ತಾನೆ.
ಇದಕ್ಕೆ ಸಂಬಂಧಿಸಿದ ಅನೇಕಾನೇಕ ದಿನನಿತ್ಯದ ಸಂಸ್ಕರಣೆಯ ವಿಷಯಗಳ ಬಗ್ಗೆ ಸದಾ ಮನನ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಎಲ್ಲೆಡೆ ವ್ಯವಹಾರದಲ್ಲಿ ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆ ಪ್ರತಿಗಳು, ಟಿಪ್ಪಣಿ ಸೂಚನೆಗಳು ನಡವಳಿಕೆಗಳು ಸಾಮಾನ್ಯ ಭಾಷೆ ಇಂಗ್ಲೀಷಿನಲ್ಲಿ ಇರುವುದು ವಾಡಿಕೆ. ಆದರೆ ಅನೇಕ ಸಾರಿ ಈ ರೀತಿಯ ಭಾಷೆ ಸಾಹಿತ್ಯ ಅದರಲ್ಲಡಗಿದ ಮೂಲ ಅರ್ಥ ಉದ್ದೇಶಗಳನ್ನು ಅವರವರ ಮಾತೃ ಭಾಷೆ ಅಥವಾ ಸ್ಥಳೀಯ ಆಡು ಭಾಷೆಯಲ್ಲಿ ದೊರೆತು ತಿಳಿಸಿ ಓದಿ ಹೇಳಿದಾಗ, ಓದಿದಾಗ, ವ್ಯಾಸ್ಯಾಂಗ ಮಾಡಿದಾಗ ಮನನವಾಗುವುದು ಸಹಜ. ಆ ಮೂಲಕ ಅವನ ಆತ್ಮ ವಿಶ್ವಾಸ ಹೆಚ್ಚುವುದು ಹಾಗೂ ಒಂದು ರೀತಿಯ ಅಭಿಮಾನ ಅಸ್ಥೆ ಬಂದಲ್ಲಿ ಆಶ್ಚರ್ಯವಿಲ್ಲ. ವಿಶೇಷವಾಗಿ ಗ್ರಾಮೀಣ ಭಾಗದಿಂದ ಬಂದ ಸಮುದಾಯ ಹಿಂದುಳಿದ ಸ್ಥಳಗಳಿಂದ ಬಂದ/ ಸಮುದಾಯ, ಅನೇಕಾನೇಕ ಕಾರಣಗಳಿಂದ ಇಂಗ್ಲೀಷ ಭಾಷೆಯಲ್ಲಿ ಹಿಂದುಳಿದಾಗ ಅಥವಾ ಅದರ ಬಗ್ಗೆ ಅರಾಮವೆನಿಸದೆ ಇರುವವರಿಗೆ, ಸಂಕೋಚ ಹಾಗೂ ಕೆಲವೊಮ್ಮೆ ತಾರತಮ್ಯ ಭಾವನೆ/ ಕೀಳರಮೆ ಎನಿಸಿದಲ್ಲಿ ಅವರ ಭಾಷೆಯಲ್ಲಿ ಅರ್ಥಮಾಡಿಕೊಂಡಲ್ಲಿ, ತಿಳಿದಲ್ಲಿ ಅವರು ತುಂಬಾ ಅರಾಮವಾಗಿ ಹೆಚ್ಚಿನ ಆತ್ಮ ಸ್ಥೈರ್ಯದಿಂದ ಕೆಲಸ/ ವ್ಯವಹಾರದಲ್ಲಿ ಮುನ್ನುಗಿ ಉತ್ತಮ ಉತ್ಕೃಷ್ಟ ನೌಕರರಾದ ಉದಾಹರಣೆಗಳಿವೆ. ಇದನ್ನು ಮನಗಂಡು ಹಾಗೂ ಇದರ ಅವಶ್ಯಕತೆ ಅನೇಕಾನೇಕ ಕಡೆ ನಾನು ಕಂಡಿದ್ದರಿಂದ, ಕೆಲವರು ವ್ಯಕ್ತಪಡಿಸಿದ್ದರಿಂದ ನಾಡ ಭಾಷೆ ಪ್ರಚಲಿತ ಆದ್ಯತೆ ಎಂದು ಹೇಳುತ್ತಿರುವುದರಿಂದ ಈ ಗ್ರಂಥದ ನಿರ್ಮಾಣ ಸರಳವಾಗಿ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಎಂದರೆ ಸಂಸ್ಥೆಯ ಗುರಿ ಧ್ಯೇಯ ದೃಷ್ಟಿ ಮೌಲ್ಯಗಳಿಂದ ಪ್ರಾರಂಭಿಸಿ ಸುರಕ್ಷತೆ ಗುಣಮಟ್ಟ ಪರಿಸರ ಇತ್ಯಾದಿಗಳನ್ನು ಜೋಡಿಸಿ ನೌಕರನ ನಿಯೋಜನಾ (Appointment) ಪತ್ರಗಳನ್ನು ವಿವಿಧ ಹುದ್ದೆಗಳಿಗೆ ಅವನ ಪರಿಕ್ಷಾ ಅವಧಿಯ ನಡೆ (Probation)ರೀತಿ ನಮೂನೆ ನಿರ್ಮಿಸಿದ್ದೇನೆ. ಅದೇ ರೀತಿ ಸಂಸ್ಥೆ ನಡೆಯಲು ಅವಶ್ಯವಿರುವ ಅನೇಕ ಪೂರಕ ಒಪ್ಪಂದಗಳ (Contracts) ಎಂದರೆ ಸೆಕ್ಯೂರಿಟಿ, ಲೇಬರ ಕಾಂಟ್ರಾಕ್ಟ, ಉಪಹಾರದ ಗೃಹ ಗುತ್ತಿಗೆ (Contract) ಇತ್ಯಾದಿಗಳ ನಮೂನೆ ನೌಕರನ ಕಾರ್ಯಕ್ಷಮತೆಯ ಮಾದರಿ ನಮೂನೆ ಸಂಘಗಳ ಜೊತೆ ಆದ ಒಪ್ಪಂದಗಳನ್ನು ನೌಕರನ (Service Condition) ಅನುಕೂಲತೆಗಳು ನಿಯೋಜನಾ ನೀತಿ (Leave Policy etc)ಗಳ ನಮೂನೆ ನೀಡಿದ್ದೇನೆ. ಈ ರೀತಿಯ ಬಗೆ ಬಗೆಯ ರೀತಿಯ ಅಯಾಮ ವಿಷಯಕ್ಕೆ ಸಂಬಂಧಿಸಿದ ರೀತಿ, ನಮೂನೆಗಳನ್ನು ನನ್ನ ಇತರ ಕೃತಿಗಳಲ್ಲಿ ವಿವರವಾಗಿ ನೀಡಿದ್ದೇನೆ. ಅದರಲ್ಲಿಯ ಕೆಲವೊಂದನ್ನು ಇದರಲ್ಲಿ ಪುನಃ ನೀಡಿದ್ದೇನೆ. ಒಂದೇ ಮಾತಿನಲ್ಲಿ ತಿಳಿಸಬೇಕೆಂದರೆ ಅವಶ್ಯವಿರುವವರು, ಬೇಕೆಂದವರು ತಮ್ಮ ತಮ್ಮ ಅನುಕೂಲ ಬೇಡಿಕೆ ಅಧರಿಸಿ ಈ ನಮೂನೆಗಳನ್ನು ನೋಡಬಹುದು, ಉಪಯೋಗಿಸಬಹುದು. ಹಾಗೂ ಎಚ್ಆರ್‍ಡಿ (HRD) ಸಾಹಿತ್ಯದಲ್ಲಿ ಈ ರೀತಿಯ ದೊರೆಯುವ (Ready Made) ವಿಷಯಗಳು ಲಭ್ಯವಾಗಿ ಸಿದ್ಧಪಡಿಸಿದ ರೂಪದಲ್ಲಿ ಬರಲಿರುವ ಜನಾಂಗಕ್ಕೆ ಇದೂಂದು ಮಾದರಿ ಕೃತಿ ಆಗಲಿ ಎಂದು ತಿಳಿದು ಸಹೃದಯ ಓದುಗರಿಗೆ ವಿನಮ್ರವಾಗಿ ನೀಡುತ್ತಿದ್ದೇನೆ. ಇದರಲ್ಲಿಯ ತಪ್ಪು ಒಪ್ಪುಗಳಿಗೆ ನಾನು ಮುಕ್ತ. ಸಲಹೆ, ಟೀಕೆಗಳು ಸದಾ ಸ್ವಾಗತ. ಕೃತಿ ತರಲು ಸಹಕರಿಸಿದ ನನ್ನ ಸಹಾಯಕ ಮಂಜುನಾಥ ಆರ್ ಎಸ್ ಸಹಾಯ, ಕಂಪ್ಯೂಟರಿಗೊಳಿಸಲು ಅಪಾರ, ಅವರ ಸಹಕಾರ ನಾನು ಸ್ಮರಿಸಲೇಬೇಕು. ಅದೇ ರೀತಿ ಕೃತಿ ಹೊರಬರಲು, ರಚಿಸಲು ಸಹಾಯ, ಮಾರ್ಗದರ್ಶನ ನೀಡಿದ ಅನೇಕಾನೇಕರಿಗೆ ನನ್ನ ಧನ್ಯವಾದಗಳು. ಈ ಕೃತಿ ಪುಸ್ತಕ ರೂಪದಲ್ಲಿ ತಂದು ಪ್ರಕಟಿಸಲು ಮುಂದೆ ಬಂದು ನೆರವಾದ ಶ್ರೀ ರಮೇಶ ಎಂ.ಎಚ್., ನಿರಾತಂಕ ಇವರಿಗೆ ನಾನು ಆಭಾರಿ. ನನ್ನ ವೃತ್ತಿ ಮಿತ್ರರು, ತರುಣ ಪೀಳಿಗೆ, ಓದುಗರು ತಮ್ಮ ತಮ್ಮ ಅಭಿಪ್ರಾಯ ಈ ಕೃತಿ ಬಗ್ಗೆ ತಿಳಿಸಿದಲ್ಲಿ ನನಗೆ ಸಂತೋಷ. ಇತಿ ವಂದನೆಗಳೂಂದಿಗೆ ರಾಮ್ ಕೆ ನವರತ್ನ
0 Comments
Leave a Reply. |
20,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. Archives
January 2022
Categories
All
|
Site
|
Vertical Divider
|
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
|
Vertical Divider
|
Contact us
080-23213710
+91-8073067542 Mail-nirutapublications@gmail.com Our Other Websites
|
Receive email updates on the new books & offers
for the subjects of interest to you. |