ಮಿತ್ರ ಶ್ರೀ ಜಿ.ಎನ್. ಶೇಖರ್‌ರವರು ಲೇಖಿಸಿದ, ‘ಭಾರತೀಯ ಸಾಕ್ಷಿ ಅಧಿನಿಯಮ-2023’ರ ಸುದೀರ್ಘ ಮಾರ್ಗದರ್ಶಿ ಕೃತಿಯನ್ನು ಆಸಕ್ತಿಯಿಂದ ಅವಲೋಕಿಸಿದ್ದೇನೆ. ಗ್ರಂಥವು ಸದರಿ ಅಧಿನಿಯಮದ ಪರಿಚ್ಛೇದಗಳ-ಕಲಮುಗಳ ಸರಳವಾದ ಹಾಗೂ ವಿಶದವಾದ ವಿವರಗಳನ್ನು ಒಳಗೊಂಡಿದೆ.
ಸಂಕೀರ್ಣ ಕಾನೂನಿನ ಅನುಚ್ಛೇದಗಳನ್ನು / ಕಲಮುಗಳನ್ನು ಅರ್ಥೈಸಿಕೊಳ್ಳುವುದು ಪ್ರಯಾಸದ ಕೆಲಸ. ಕೆಲವೊಮ್ಮೆ ಗೊಂದಲಗಳಾಗುವುದೂ ಸಹಜ. ಕಾನೂನು, ನ್ಯಾಯಾಲಯ, ವಿಚಾರಣೆ ಇತ್ಯಾದಿ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರಿಗೆ ಅವುಗಳ ನಿಖರವಾದ ಹಾಗೂ ಸ್ಪಷ್ಟವಾದ ಅರ್ಥಗಳನ್ನು ಕಂಡುಕೊಳ್ಳುವುದು ಅವಶ್ಯಕವಾಗುತ್ತದೆ. ಆ ಸಂದರ್ಭಗಳಲ್ಲಿ ಈ ಕೃತಿ ಸದರಿ ಪರಿಚ್ಛೇದಗಳನ್ನು ಸರಳವಾಗಿ ಮನದಟ್ಟು ಮಾಡುವ ಮಾರ್ಗದರ್ಶಿ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುತ್ತದೆ.
ಅನ್ಯಾಯವಾಗಿ ಇಲ್ಲವೆ ನಿಷ್ಕಾರಣವಾಗಿ ವಿಚಾರಣೆಗೆ ಒಳಗಾದವರಿಗೆ ಹಾಗೂ ನ್ಯಾಯಾಲಯದ ಮೆಟ್ಟಿಲು ಹತ್ತಿದವರಿಗೆ, ತಮಗಾದ ಅನ್ಯಾಯವನ್ನು ದೃಢೀಕರಿಸಲು, ಸಂಬಂಧಪಟ್ಟ ಕಾಗದ ಪತ್ರಗಳ ಜೊತೆಗೆ, ಅವಶ್ಯಕವಾದ ಸಾಕ್ಷಿಗಳನ್ನು ವಿಚಾರಣೆಯಲ್ಲಿ ಅಥವಾ ನ್ಯಾಯಾಲಯದಲ್ಲಿ ಹಾಜರುಪಡಿಸಬೇಕಾಗುತ್ತದೆ. ವಿಚಾರಣಾಧಿಕಾರಿಗಳು ಅಥವಾ ನ್ಯಾಯಾಧೀಶರು, ಅಂತಹ ಸಾಕ್ಷಿಗಳ ಹೇಳಿಕೆಯನ್ನು ಆಲಿಸಿ, ಅವುಗಳ ಸತ್ಯಾಸತ್ಯತೆಗಳನ್ನು ಪರಿಶೀಲಿಸಿ, ತಮ್ಮ ನ್ಯಾಯನಿರ್ಣಯಗಳನ್ನು ಪ್ರಕಟಿಸಬೇಕಾಗುತ್ತದೆ. ಬಹುಮುಖ್ಯವಾದ ಈ ನ್ಯಾಯನಿರ್ಣಯ ವ್ಯವಸ್ಥೆಗೆ ಸಾಕ್ಷಿಗಳ ಹೇಳಿಕೆಗಳು ಪ್ರಮುಖವಾಗುತ್ತವೆ. ಈ ಹಿನ್ನೆಲೆಯಲ್ಲಿ ಮಿತ್ರ ಶ್ರೀ ಶೇಖರ್‌ರವರ ಈ ಬೃಹತ್ಕೃತಿ ನೆರವಿಗೆ ಬರುತ್ತದೆ.
ಕೃತಿಕಾರರೇ ಹೇಳುವಂತೆ ಈ ಗ್ರಂಥವು ಮೂರು ವೈಲಕ್ಷಣ್ಯಗಳನ್ನು ಒಳಗೊಂಡಿದೆ.
ವಿಚಾರಣೆಗಳಲ್ಲಿ ಹಾಗೂ ಅಥವಾ ನ್ಯಾಯಾಲಯಗಳಲ್ಲಿ ಸಾಕ್ಷಿ ಪುರಾವೆ, ವಾದ ಪ್ರತಿವಾದಗಳ ಜೊತೆಗೆ, ವಿಚಾರಣಾಧಿಕಾರಿಗಳು ಅಥವಾ ನ್ಯಾಯಾಧೀಶರು ವಿಚಾರಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ, ದುರ್ನಡತೆಗಳ / ಅಪರಾಧಗಳ ಉದ್ದೇಶ ಹಾಗೂ ನ್ಯಾಯವಾದಿಗಳು ಪ್ರಕರಣಗಳನ್ನು ಪ್ರಸ್ತುತಪಡಿಸುವ ವಿಧಾನಗಳನ್ನು ಗಮನಿಸುತ್ತಾರೆ. ಹಾಗೇನೆ ಇಡೀ ಪ್ರಕ್ರಿಯೆಯಲ್ಲಿ ಕೆಲವು ಒಳನೋಟಗಳನ್ನು ಕಂಡುಕೊಳ್ಳಲು ಸದರಿ ಅಧಿನಿಯಮದ ಸಂಪೂರ್ಣ ಜ್ಞಾನ ಇರಬೇಕಾಗುತ್ತದೆ. ಅದಕ್ಕೆ ಶ್ರೀ ಶೇಖರ್‌ರವರ ಮಾರ್ಗದರ್ಶಿ ಕೃತಿ ನೆರವಿಗೆ ಬರುತ್ತದೆ. ಮೂರನೆಯದಾಗಿ, ಸಾಕ್ಷಿ ಅಧಿನಿಯಮದಲ್ಲಿ ಉಲ್ಲೇಖಗೊಂಡ ಕಾನೂನಿನ ಪಾರಿಭಾಷಿಕ ಶಬ್ದಗಳಿಗೆ ಸೂಕ್ತ ಅರ್ಥವಿವರಣೆಯನ್ನು ಒದಗಿಸಲಾಗಿದೆ. ಕಾನೂನು ಜ್ಞಾನ, ವಾಸ್ತವ, ವಾಸ್ತವದ ಊಹೆ, ಅರ್ಹ ಸಾಕ್ಷಿ, ನೇರ ಸಾಕ್ಷಿ, ಅಸಂಬದ್ಧ ಸಾಕ್ಷಿ, ಪ್ರಮುಖ ಸಾಕ್ಷಿ, ಮೌಖಿಕ ಸಾಕ್ಷಿ, ಜಾಲತಾಣಗಳ ಸಾಕ್ಷಿ, ಸಾಕ್ಷಿ ಇಲ್ಲದಿರುವಿಕೆ, ಸಾಕ್ಷಿಗಳ ಪ್ರಾರಂಭಿಕ ವಿಚಾರಣೆ, ಸಾಕ್ಷಿ ಪ್ರಸ್ತುತಪಡಿಸುವ ಅಧಿಕೃತ ದಾಖಲೆಗಳು, ನಿರ್ದಿಷ್ಟ ಉತ್ತರಗಳನ್ನು ಕೊಡುವ ಪ್ರಶ್ನೆಗಳು, ಪಾಟಿಸವಾಲು, ತಕರಾರು, ಪ್ರಮಾಣಪತ್ರ, ಹೇಳಿಕೆಗಳು, ಅಧಿಕೃತತೆ, ಉತ್ತಮ ಪುರಾವೆಗಳು, ಉದ್ದೇಶ, ತಪ್ಪಿತಸ್ಥ / ದುರ್ನಡತೆಗಳಲ್ಲಿ ಭಾಗಿಯಾಗಿರುವವ ತನ್ನ ತಪ್ಪನ್ನು ಸ್ವಯಂಪ್ರೇರಣೆಯಿಂದ ಒಪ್ಪಿಕೊಳ್ಳುವಿಕೆ, ವಂಚನೆ, ಸಾಕ್ಷಿಯ ವಿರುದ್ಧವಾದ, ತಡೆಯಾಜ್ಞೆ, ಪುನರ್ವಿಚಾರಣೆ, ಮರಣ ಪ್ರಮಾಣಪತ್ರ, ನ್ಯಾಯಾಲಯದ ತೀರ್ಪು ಇತ್ಯಾದಿ ಇತ್ಯಾದಿ ಪಾರಿಭಾಷಿಕ ಶಬ್ದಗಳಿಗೆ ಸ್ಪಷ್ಟ ಅರ್ಥ ಮತ್ತು ಅವುಗಳು ಉಪಯೋಗವಾಗುವ ಸಂದರ್ಭಗಳನ್ನು ತಿಳಿಸಲಾಗಿದೆ. ಮಾನ್ಯ ಶ್ರೀ ಶೇಖರ್‌ರವರ ಈ ನೀಳಗ್ರಂಥ ಶಾಸಕರು, ಕಾನೂನು ಜಾರಿಗೊಳಿಸುವ ಅಧಿಕಾರಿಗಳು, ನ್ಯಾಯಾಲಯದ ಅಧಿಕಾರಿಗಳು, ಪೋಲೀಸ್ ಅಧಿಕಾರಿಗಳು, ಕಾನೂನು ಕ್ಷೇತ್ರದಲ್ಲಿ ಕೆಲಸ ಮಾಡುವ ನ್ಯಾಯವಾದಿಗಳು / ವೃತ್ತಿನಿರತರು, ಕಾರ್ಮಿಕ ಸಂಘಗಳ ಮುಖ್ಯಸ್ಥರು, ನ್ಯಾಯವನ್ನು ದೊರಕಿಸಿಕೊಡುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡವರು, ಕಾನೂನು ವಿದ್ಯಾರ್ಥಿಗಳು ಮುಂತಾದವರಿಗೆ ತುಂಬಾ ಉಪಯುಕ್ತವಾಗುತ್ತದೆ. ಶ್ರೀ ಶೇಖರ್‌ರವರು ಮಾನವ ಸಂಪನ್ಮೂಲ ಕ್ಷೇತ್ರದಲ್ಲಿನ ಸ್ನಾತಕೋತ್ತರ ಪದವಿಯ ಜೊತೆಗೆ, ಕಾನೂನು ಮತ್ತು ತರಬೇತಿ ಕ್ಷೇತ್ರಗಳಲ್ಲಿ ಶಿಕ್ಷಣ ಪಡೆದಿರುವುದರಿಂದ ಹಾಗೂ ನಿರಂತರ ಕೃಷಿ ಮಾಡಿರುವುದರಿಂದ, ಇಂತಹ ಉಪಯುಕ್ತವಾದ ಕೃತಿಯನ್ನು ಬರೆಯಲು ಸಾಧ್ಯವಾಗಿದೆ. ಮಾನವ ಸಂಪನ್ಮೂಲ ಮತ್ತು ಕಾನೂನು ಕ್ಷೇತ್ರಗಳಿಗೆ ಉಪಯೋಗವಾಗುವ ಈ ಬಗೆಯ ಬೃಹದ್ಗ್ರಂಥವನ್ನು ರಚಿಸಿರುವುದಕ್ಕಾಗಿ, ಅವರನ್ನು ಸಂಬಂಧಪಟ್ಟವರ ಪರವಾಗಿ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಮಾನ್ಯ ಶೇಖರ್‌ರವರಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೃತಿಗಳು ಹೊರಬರಲಿ ಎಂದು ಹಾರೈಸುತ್ತೇನೆ. ಪುಸ್ತಕ ಪ್ರಕಟಣೆಯ ಬಗ್ಗೆ ಹೇಳಲೇಬೇಕು. ಕೃತಿಯ ಮುಖಪುಟ ತುಂಬಾ ಆಕರ್ಷಕವಾಗಿದೆ. ಬಳಸಿರುವ ಕಾಗದದ ಗುಣಮಟ್ಟ ಉತ್ತಮವಾಗಿದೆ. ಪುಟಗಳ ಯೋಜನೆ-ಸಾಲುಗೂಡಿಕೆ ಸಮಂಜಸವಾಗಿದೆ. ಮುದ್ರಣ ಅಚ್ಚುಕಟ್ಟಾಗಿದೆ. ನಿರುತ ಪ್ರಕಾಶನದ ಪ್ರಕಟಣೆಯೆಂದ ಮೇಲೆ ಕೇಳಬೇಕೆ. ಈ ಎಲ್ಲ ಚಟುವಟಿಕೆಗಳನ್ನು ಆಸಕ್ತಿಯಿಂದ ನಿರ್ವಹಿಸಿದ ಮಿತ್ರ ಶ್ರೀ ಎಂ.ಎಚ್. ರಮೇಶರವರೂ ಅಭಿನಂದನಾರ್ಹರು. ಸಿ.ಆರ್. ಗೋಪಾಲ್ ಸಮಾಜಕಾರ್ಯ ಸಾಹಿತಿ ಶೇಖರ್ ಗಣಗಲೂರು ರವರ ಇತರೆ ಕೃತಿಗಳು
0 Comments
Leave a Reply. |
Welcome to our HR and Labour Law blog!
We invite you to share your articles, book reviews, or any content related to labour laws and human resources. We will publish your contributions on our blog and circulate them among the HR community. Together, let’s share knowledge and foster growth in the HR and labour law domain. Categories
All
Stay updated and informed by joining our WhatsApp group for HR and Employment Law Classes - Every Fortnight. The Zoom link for the sessions will be shared directly in the group.
MHR LEARNING ACADEMYGet it on Google Play store
|
![]()
|
![]()
|
![]()
|
![]()
|
SITE MAP
SitePOSH |
NIRATHANKAOUR OTHER WEBSITESSubscribe |
HR and Employment Law Classes - Every Fortnight
Stay updated and informed by joining our WhatsApp group for HR and Employment Law Classes - Every Fortnight.
The Zoom link for the sessions will be shared directly in the group. |
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |