|
ಅದೊಂದು ದಿನ ಹಿರಿಯ ಸಮಾಜಕಾರ್ಯಕರ್ತರೊಬ್ಬರು ಫೇಸ್ ಬುಕ್ ಮೂಲಕ ಪರಿಚಿತರಾದರು. ಪರಿಚಯ ಕೆಲವೇ ದಿನಗಳಲ್ಲಿ ಸ್ನೇಹವಾಯಿತು. ಸ್ನೇಹ ತಂದೆ ಮಗನ ರೀತಿಯ ಬಾಂಧವ್ಯವನ್ನು ಸೃಷ್ಟಿಸಿತು. ಆದರೆ ಒಮ್ಮೆಯೂ ಅವರನ್ನು ನಾನು ಭೇಟಿಯಾಗಿರಲಿಲ್ಲ.
ನನ್ನ ಜೀವನದ ಪ್ರತಿ ವಿಷಯದಲ್ಲಿ ಅವರಿಗೆ ಆಸಕ್ತಿ. ಅವರ ಜೀವನದ ಪ್ರತಿ ವಿಷಯವನ್ನು ಅವರು ನನಗೆ ಹೇಳುತ್ತಿದ್ದರು. ದಿನಕ್ಕೆ ಒಮ್ಮೊಮ್ಮೆ ಹಲವು ಬಾರಿ ದೂರವಾಣಿಯ ಮೂಲಕ ಮಾತನಾಡುತ್ತಿದ್ದೆವು. ಅವರ 3 ಪುಸ್ತಕಗಳನ್ನು ನನಗೆ ಪ್ರಕಟಿಸಲು ಅವಕಾಶ ಮಾಡಿಕೊಟ್ಟರು. ಈ ಒಡನಾಟ ಸುಮಾರು ಎರಡು ವರ್ಷ ನಿರಂತರವಾಗಿ ನಡೆಯಿತು.
0 Comments
ಬೆಳಿಗ್ಗೆ 5.00 ಗಂಟೆಗೆ ಎಂದಿನಂತೆ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಸುತ್ತು ಹೊಡೆಯುವ ಅಭ್ಯಾಸ.
ಪ್ರತಿ ದಿನ ನನಗೆ ಪರಿಚಿತರಲ್ಲದ ಅಪ್ಪ ಮಗ ನನ್ನಂತೆಯೆ ನಸುಕಿನಲ್ಲಿ ಸುತ್ತಲು ಬರುತ್ತಿದ್ದರು. ನನಗೆ ತಿಳಿದವರೊಬ್ಬರು ನೋಡಿ ಸಾರ್ ಅಪ್ಪ ಮಗ ಇಬ್ಬರೂ ಒಂದೇ ಸಾರಿ ಬೆಳಿಗ್ಗೆ ಬರುತ್ತಾರೆ. ಆದರೆ ಮಗನಿಗೆ ಸ್ವಲ್ಪ ಮಂದ ಬುದ್ದಿ, ಆದರೆ ಅಪ್ಪ ಕೋಟ್ಯಾಧೀಶ್ವರ ಅಂದರು. ಸರಿ ಎಂದು ಸುಮ್ಮನಾದೆ. ಸ್ವಲ್ಪ ಸಮಯದ ನಂತರ ಮಗನ ಶೂಗಳನ್ನು ಗಮನಿಸಿದೆ. ಇನ್ನೇನು ಕಿತ್ತುಹೋಗುವ, ತುಂಬಾ ಹಳೆಯದಾದ ಹಾಗೆ ಕಾಣಿಸುತ್ತಿದ್ದವು. ಮನಸ್ಸಿನಲ್ಲಿ "ಕೋಟ್ಯಾಧಿಪತಿ ಆದರೇನು ಅಪ್ಪ ಮಗನಿಗೆ ಸರಿಯಾದ ಒಂದು ಜೊತೆ ಜೋಡು ಕೊಡಿಸಿಲ್ಲವಲ್ಲ ಅಂದುಕೊಂಡೆ." ಅಪ್ಪನ ಬಗ್ಗೆ ನನ್ನ ತಲೆಯಲ್ಲಿ ಕೊಳಕು ಭಾವನೆ ಬಂತು. ಅಷ್ಟರಲ್ಲಿ ಅವರ ಸ್ನೇಹಿತರೊಬ್ಬರು ನಿಮ್ಮ ಮಗನ ಶೂ ಹರಿದಿದೆ ಬೇರೆಯದು ಕೊಡಿಸಿಲ್ಲವೇಕೆ ಎಂದರು? ಇಲ್ಲ ಸಾರ್, ಆರ್ಡರ್ ಮಾಡಿ ಆರು ತಿಂಗಳಾಯಿತು. ಇನ್ನೂ ಬಂದಿಲ್ಲ ಎಂದರು. ನಾನು ಥಟ್ಟನೆ ಅವರೆಡೆಗೆ ತಿರುಗಿ ಕಿವಿಗೊಟ್ಟೆ. ಆಗ ಅವರು "ನನ್ನ ಮಗನ ಕಾಲಿನಲ್ಲಿ ಆರು ಬೆರಳುಗಳಿವೆ. ಸಾಮಾನ್ಯವಾದ ಅಂಗಡಿಗಳಲ್ಲಿ ಸಿಗುವ ಶೂಗಳು ಅವನಿಗೆ ಹೊಂದುವುದಿಲ್ಲ, ಅವನಿಗೆ ವಿಶೇಷವಾಗಿ ತಮಿಳುನಾಡಿನಿಂದ ನನ್ನ ಮಗನ ಕಾಲಿನ ಅಳತೆಗೆ ಶೂ ಆರ್ಡರ್ ಕೊಟ್ಟು ಮಾಡಿಸಬೇಕು" ಎಂದರು. |
HR BooksSocial Work Books |
|
|
|
| ||||||||||||||||||||||||
SITE MAP
SiteNIRATHANKA |
POSHOUR OTHER WEBSITESSubscribe |
RSS Feed