Niruta Publications
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
Niruta Publications

ನಾನು ಕಂಡ ಡಾ. ಸಿ.ಆರ್. ಗೋಪಾಲ್

8/13/2020

0 Comments

 
Picture
ಡಾ. ಸಿ.ಆರ್. ಗೋಪಾಲ್
ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕರು, ಸ್ಮಯೋರ್ (SMIORE)
ಇಂದು ಬೆಳಿಗ್ಗೆ ಡಾ. ಸಿ.ಆರ್. ಗೋಪಾಲ್ ರವರು ನನಗೊಂದು Whatsapp ಕಳುಹಿಸಿದ್ದರು.
“Dear Ramesh, Can you do me a favour. You know me for the last 10 years. In my books, as a publisher you have written me few good things about me. You have never got a chance to analyze my personality. Now you can do it here. You can talk to me or you can put it on paper. You should be analysis my personality, my positives and negatives without any hesitation, so that I can correct myself. Feel free to do it, I will not misuse.”
ಡಾ. ಸಿ.ಆರ್ ಗೋಪಾಲ್ ಹಾಗೂ ನನ್ನ ಪರಿಚಯವಾಗಿ ಸುಮಾರು 10 ವರ್ಷ ಕಳೆದಿವೆ. ಅವರಿಗೆ ಈಗ 67 ವರ್ಷಗಳು. ಅವರು MSW ಸ್ನಾತಕೋತ್ತರ ಪದವಿಯನ್ನು ಪಡೆದು, ಬೆಂಗಳೂರು ವಿಶ್ವವಿದ್ಯಾಲಯ ದಿಂದ Ph.D. ಅನ್ನು ಪಡೆದಿದ್ದಾರೆ. ದಿ ಸೊಂಡೂರು ಮ್ಯಾಂಗನೀಸ್ ಅಂಡ್ ಐರನ್ ಓರ್ಸ್ (ಲಿ) ರಲ್ಲಿ ಕೆಲಸ ನಿರ್ವಹಿಸಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಇದುವರೆಗೂ 10 ಪುಸ್ತಕಗಳನ್ನು ರಚಿಸಿದ್ದಾರೆ. ಅತ್ಯಂತ ಸೌಮ್ಯ, ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದವರು. ನನಗೂ ಡಾ. ಸಿ.ಆರ್. ಗೋಪಾಲ್ ರವರಿಗೂ ಎಚ್.ಎಂ. ಮರುಳಸಿದ್ಧಯ್ಯ ರವರ ಮನೆಯಲ್ಲಿ ಆಗಾಗ ಭೇಟಿ ಆಗುತ್ತಿತ್ತು ಹಾಗೂ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ನಂತರದ ದಿನಗಳಲ್ಲಿ ನಮ್ಮ ಪತ್ರಿಕೆಯ ಸಂಪಾದಕ ಮಂಡಳಿಯಲ್ಲಿ ಇರಲು ಕೋರಿಕೊಂಡೆವು. ನಂತರ ಪತ್ರಿಕೆಯ ಸಂಪೂರ್ಣ ಜವಾಬ್ದಾರಿ ಹೊತ್ತು ಅದನ್ನು ಹೊರತರಲು ನಮ್ಮ ಸಂಸ್ಥೆ ಹಾಗೂ ತಂಡಕ್ಕೆ ಸಹಕಾರ ನೀಡುತ್ತಾ, ಸಹಕರಿಸಿದರು. 
ಒಮ್ಮೆ ನಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮ “ಜೆ.ಎಸ್.ಎಸ್. ಆಡಿಟೋರಿಯಂ (ಶಿವರಾತ್ರೀಶ್ವರ ಕೇಂದ್ರ” ನಲ್ಲಿ ನಡೆದಿತ್ತು. ಆ ಕಾರ್ಯಕ್ರಮದಲ್ಲಿ ನಾನು ಸ್ವಲ್ಪ ಕಪ್ಪು ಬಣ್ಣದ ಅಂಗಿಯನ್ನು ತೊಟ್ಟಿದ್ದೆ. ಕಾರ್ಯಕ್ರಮ ಮುಗಿದ ನಂತರ ಅವರು ನನ್ನ ಬಳಿ ಬಂದು ನೀವು ಈ ರೀತಿಯ ಕಾರ್ಯಕ್ರಮಗಳಲ್ಲಿ ಬಿಳಿ ಅಥವಾ ತೆಳು ಬಣ್ಣದ ಬಟ್ಟೆ ಧರಿಸುವುದು ಸೂಕ್ತ ಎಂದರು. ನಾನು ಬಟ್ಟೆ ಬಣ್ಣದ ಬಗ್ಗೆ ಅಷ್ಟೇನೂ ಕಾಳಜಿ ವಹಿಸುತ್ತಿರಲಿಲ್ಲ. ಆದರೆ ಅವರ ಸಲಹೆಯ ನಂತರ ಬಟ್ಟೆಯ ಬಗ್ಗೆ ಗಮನ ಹರಿಸಿದೆ. ಆಗ ನನ್ನ ಹಾಗೂ ಡಾ. ಸಿ.ಆರ್. ಗೋಪಾಲ್ ರವರ ಪರಿಚಯ ಅಷ್ಟೇನೂ ಗಾಢವಾಗಿ ಇರಲಿಲ್ಲ. ಆದರೂ ಅವರು ನನಗೆ ಸಲಹೆ ನೀಡಿದ್ದು ಅತ್ಯಂತ ಆಶ್ಚರ್ಯ ತರಿಸಿತ್ತು. ಮನದಲ್ಲಿ ಅತ್ಯಂತ ಅವರ ಬಗ್ಗೆ ಸುಮಧುರ ಭಾವನೆ ಮೂಡುವಂತೆ ಮಾಡಿತ್ತು. ಒಬ್ಬ ಹಿರಿಯ ನಮ್ಮ ಹಿತೈಷಿಯಾಗಿ ಅವರು ನನ್ನ ಮೇಲೆ ತೋರಿದ ಕಾಳಜಿ ನನಗಿಷ್ಟವಾಗತೊಡಗಿತು. ನಾವು ನಮ್ಮ ಸುತ್ತಮುತ್ತಲಿನ ಸ್ನೇಹಿತರಲ್ಲಿ ಯಾವುದೇ ಬದಲಾವಣೆ ತರಲು ಪ್ರಯತ್ನ ಪಡುವುದಿಲ್ಲ. ಕೇವಲ ವ್ಯವಹಾರಿಕ ಸ್ನೇಹವನ್ನಷ್ಟೇ ಬಹುಪಾಲು ಜನಗಳು ಮಾಡುವುದು. ಆದರೆ ಅಂದು ಅವರ ನಡೆಯಿಂದ ನಾನೂ ನನ್ನ ಸುತ್ತಮುತ್ತಲಿನ ಸ್ನೇಹಿತರಲ್ಲಿ ಚಿಕ್ಕ ಪುಟ್ಟ ಬದಲಾವಣೆ ತರಬೇಕೆಂಬ ಪಾಠವನ್ನು ಕಲಿತೆ. ಅಂದಿನಿಂದ ಇದುವರೆಗೂ ನನ್ನ ಸ್ನೇಹಿತ ಬಳಗದಲ್ಲಿ ಚಿಕ್ಕ ಪುಟ್ಟ ವಿಷಯಗಳ ಕುರಿತು ಬದಲಾವಣೆ ತರಲು ಪ್ರಯತ್ನ ಪಡುತ್ತಿದ್ದೇನೆ. ನಾನು ಓದಿದ ಪುಸ್ತಕವಿರಬಹುದು, ಜೀವನದಿಂದ ಕಲಿತ ಪಾಠವಿರಬಹುದು, ನೋಡಿದ ಸಿನಿಮಾ ಇರಬಹುದು, ನಾನು ಪೆಟ್ಟು ತಿಂದು ಅನುಭವಿಸಿದ ಸತ್ಯ ಘಟನೆಯಿರಬಹುದು ಎಲ್ಲವನ್ನೂ ನನ್ನ ಸ್ನೇಹಿತರಲ್ಲಿ ಹಂಚಿಕೊಳ್ಳುತ್ತೇನೆ. ಹಾಗೆಯೇ ನನಗೆ ಸರಿ ಎನಿಸಿದರೆ ನನ್ನ ಸ್ನೇಹಿತರ ಕೆಲವು ತಪ್ಪುಗಳನ್ನು ಎತ್ತಿ ತೋರಿಸಿ ಸಾಧ್ಯವಾದರೆ ತಿದ್ದಲು ಪ್ರಯತ್ನ ಪಡುತ್ತೇನೆ.

ಡಾ. ಸಿ.ಆರ್. ಗೋಪಾಲ್ ರವರು ನಮ್ಮ ನಿರುತ ಪಬ್ಲಿಕೇಷನ್ಸ್‍ ನಿಂದ ಪುಸ್ತಕ ಪ್ರಕಟಿಸಿರುವ ಮೊದಲೇ ಬೇರೊಂದು ಸಂಸ್ಥೆಯಿಂದ ಅವರ ಕೆಲವು ಪುಸ್ತಕಗಳನ್ನು ಪ್ರಕಟಿಸಿದ್ದರು. ಡಾ. ಸಿ.ಆರ್. ಗೋಪಾಲ್ ರವರ ಬಳಿ ಅವರು ಬೇರೆ ಸಂಸ್ಥೆಯಿಂದ ಪ್ರಕಟಿಸಿರುವ ಪುಸ್ತಕಗಳನ್ನು ಹಾಗೂ ಅವುಗಳ ಒಪ್ಪಂದದ ಕುರಿತಾಗಿ ಕೇಳಿದಾಗ ಅದನ್ನು ಸವಿವರವಾಗಿ ಯಾವುದೇ ಮುಚ್ಚುಮರೆಯಿಲ್ಲದೆ ವಿವರಿಸಿ ಹೇಳಿದ್ದರು. ಸಾಮಾನ್ಯವಾಗಿ ಪಾರದರ್ಶಕವಾಗಿ ಯಾರೂ ಹಿಂದೆ ಮಾಡಿಕೊಂಡ ಒಪ್ಪಂದದ ಬಗ್ಗೆ ಹಂಚಿಕೊಳ್ಳುವುದಿಲ್ಲ. ಡಾ. ಸಿ.ಆರ್. ಗೋಪಾಲ್ ರವರಲ್ಲಿ ವ್ಯವಹಾರಿಕತೆಯಾಗಲಿ, ಪುಸ್ತಕ ಪ್ರಕಟಿಸಿ ಲಾಭ ಮಾಡಿಕೊಳ್ಳಬೇಕೆಂದಾಗಲಿ ಅವರು ನಾಟಕೀಯವಾಗಿ ಏನನ್ನೂ ಹೇಳುತ್ತಿಲ್ಲ ಎಂದು ನನಗೆ ಅನಿಸಿತು. ಕೆಲವೊಂದು ಸಲ ಮನುಷ್ಯ ಕೇವಲ ವ್ಯವಹಾರಕ್ಕಾಗಿ ಸ್ನೇಹ ಮಾಡುತ್ತಾನೆ. ಆದರೆ ಡಾ. ಸಿ.ಆರ್. ಗೋಪಾಲ್ ರವರು ಆ ರೀತಿಯ ವರ್ಗಕ್ಕೆ ಸೇರಿದವರಲ್ಲ. ಅವರ 4 ಪುಸ್ತಕಗಳನ್ನು ನಿರುತ ಪಬ್ಲಿಕೇಷನ್ಸ್ ಸಂಸ್ಥೆಯಿಂದ ಪ್ರಕಟಿಸಿದ್ದೇವೆ. ಡಾ. ಸಿ.ಆರ್. ಗೋಪಾಲ್ ರವರು ಆ ಪುಸ್ತಕವನ್ನು ವ್ಯವಹಾರಿಕವಾಗಿಯಾಗಲಿ ಅಥವಾ ಹಣದ ಕುರಿತಾಗಲಿ ಮಾತನಾಡಲೇ ಇಲ್ಲ ಎಂದರೆ ಆಶ್ಚರ್ಯವಾಗಬಹುದಲ್ಲವೇ. ಇದುವರೆಗೂ ನಾವು ಪುಸ್ತಕದ ವ್ಯವಹಾರದ ಬಗ್ಗೆ ಹಾಗೂ ಅವುಗಳ ಮಾರಾಟದ ಬಗ್ಗೆ 5 ವರ್ಷಗಳು ಕಳೆದರೂ ಮಾತನಾಡಲೇ ಇಲ್ಲ.
ಡಾ. ಸಿ.ಆರ್. ಗೋಪಾಲ್ ರವರ ಬಳಿ ಮಾತನಾಡುವುದು, ಒಂದು ಛಾಪಾ ಕಾಗದದ ಮೇಲೆ ಒಪ್ಪಂದ ಮಾಡಿಕೊಳ್ಳುವುದು ಎರಡೂ ಒಂದೇ. ಒಮ್ಮೆ ಮಾತು ಕೊಟ್ಟರೆ ಅವರು ಹಿಂತೆಗೆದುಕೊಂಡು ಉದಾಹರಣೆ ದೊರಕದು.
ಒಮ್ಮೆ ನನ್ನ ಆತ್ಮೀಯರಿಗೆ ತುಂಬಾ ಆರ್ಥಿಕ ಸಂಕಷ್ಟ ಎದುರಾಗಿತ್ತು. ನಾನು ವೈಯಕ್ತಿಕವಾಗಿ ಹಣದ ಸಹಾಯ ಮಾಡಿದ್ದೇನಾದರೂ ಇನ್ನು ಹಲವು ಸ್ನೇಹಿತರಿಂದ ಹಣದ ಸಹಾಯ ಮಾಡಲು ನಿರ್ಧರಿಸಿದ್ದೆ. ಆಗ ನನ್ನ ನೆನಪಿಗೆ ಬಂದದ್ದು ಡಾ. ಸಿ.ಆರ್. ಗೋಪಾಲ್ ರವರು. ಅವರಲ್ಲಿ ನಾನು ನನ್ನ ಸ್ನೇಹಿತ ಈ ರೀತಿ ಸಂಕಷ್ಟದಲ್ಲಿದ್ದಾನೆ. ಅವನು ನಿಮಗೂ ಪರಿಚಯ ಎಂದು ತಿಳಿಸಿದೆ ಅಷ್ಟೆ. ಅವರು ಬ್ಯಾಂಕ್ ಖಾತೆ ಕಳುಹಿಸಲು ತಿಳಿಸಿದರು. ನಾನು ಕಳುಹಿಸಿಕೊಟ್ಟೆ. ಅವರು ರೂ. 5000/- ಗಳನ್ನು ನನ್ನ ಸ್ನೇಹಿತನ ಖಾತೆಗೆ ಜಮಾವಣೆ ಮಾಡಿದ್ದರು (ಅದೇ ರೀತಿಯಾಗಿ ನನ್ನ ಮತ್ತೊಬ್ಬ ಗೆಳೆಯ ಶೇಖರ್ ಸಹ ಆ ನನ್ನ ಸ್ನೇಹಿತನಿಗೆ ರೂ. 10000/- ಗಳನ್ನು ಜಮಾವಣೆ ಮಾಡಿದ್ದರು). ಡಾ. ಸಿ.ಆರ್. ಗೋಪಾಲ್ ರವರು ಆರ್ಥಿಕವಾಗಿ ಶ್ರೀಮಂತರೇನಲ್ಲ. ಆದರೆ ಯಾರೋ ಒಬ್ಬರು ಕಷ್ಟದಲ್ಲಿದ್ದಾರೆ ಎಂದಾಗ ಸಹಾಯ ಮಾಡಿದ್ದು ಅವರ ವ್ಯಕ್ತಿತ್ವವನ್ನು ಸೂಚಿಸುತ್ತದಲ್ಲವೇ. ಈಗಿನ ಕಾಲದಲ್ಲಿ ಸಾಲದ ರೂಪದಲ್ಲಿ ಹಣ ಕೇಳಿದರೂ ಕಷ್ಟವಲ್ಲವೇ ಗೆಳೆಯರೇ?

ಡಾ. ಸಿ.ಆರ್. ಗೋಪಾಲ್ ರವರು ಅತ್ಯಂತ ಹಿರಿಯರು, ಬುದ್ಧಿವಂತರು ಹಾಗೂ ಜ್ಞಾನವಂತರು. ಪ್ರತಿ ಬಾರಿ ಕರೆ ಮಾಡಿದಾಗ ನನ್ನ ತಂದೆ, ತಾಯಿ ಹಾಗೂ ಮಕ್ಕಳ ಬಗ್ಗೆ ಕೇಳುವುದನ್ನು ಮರೆಯುವುದಿಲ್ಲ. ಹಾಗೆಯೇ ಅವರ ಶ್ರೀಮತಿ, ಮಗಳ ಬಗ್ಗೆಯೂ ಸಹ ನನ್ನಲ್ಲಿ ಕೆಲವೊಂದು ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ನಮ್ಮ ಜೀವನದಲ್ಲಿ ಕೌಟುಂಬಿಕ ಮಾಹಿತಿಯನ್ನು ಸ್ನೇಹಿತರು ಕೇಳುವುದು ಅತ್ಯಂತ ಕಡಿಮೆ. ಕೆಲವೊಮ್ಮೆ ನಮ್ಮ ಸ್ನೇಹವೇನಿದ್ದರೂ ವ್ಯವಹಾರ, ಕುಡಿ, ತಿನ್ನು, ಮಜಾ ಮಾಡುವುದಷ್ಟಕ್ಕೇ ಸೀಮಿತವಲ್ಲವೇ?

ಇಷ್ಟು ವರ್ಷಗಳ ಸುದೀರ್ಘ ಸ್ನೇಹದಲ್ಲಿ ಡಾ. ಸಿ.ಆರ್. ಗೋಪಾಲ್ ರವರು ಎಂದೂ ಖಾರವಾಗಿ ಮಾತನಾಡಿದ್ದು ನಾನು ಕೇಳಲಿಲ್ಲ. ಈ ಕೆಲಸ ನನಗಾಗಿ ಮಾಡಿಕೊಡು ಎಂದು ಅವರು ಕೇಳಲಿಲ್ಲ. ಎಂದಿಗೂ ನನ್ನನ್ನು ಅವರು ಕಟುವಾಗಿ ಟೀಕಿಸಿದ್ದು ನನಗೆ ನೆನಪಿಲ್ಲ. ಅವರು ಎಂದೂ ನನ್ನನ್ನು ಒಮ್ಮೆಯೂ ಅನುಮಾನವಾಗಿ ನೋಡಲಿಲ್ಲ. ನಾನು ವಯಸ್ಸಿನಲ್ಲಿ ಅವರಿಗಿಂತ ಅತ್ಯಂತ ಕಿರಿಯನಾದರೂ ಅವರ ಜೀವನದಲ್ಲಿ ನನಗೆ ಅತ್ಯಂತ ಪ್ರಾಮುಖ್ಯವಾದ ಸ್ಥಾನವನ್ನು ನೀಡಿದ್ದಾರೆ ಎಂಬ ಭಾವ ನನ್ನಲ್ಲಿ ತುಂಬಿದೆ.

ಕೆಲವೊಮ್ಮೆ ಡಾ. ಸಿ.ಆರ್. ಗೋಪಾಲ್ ರವರು ಕರೆ ಮಾಡಿದಾಗ ನಾನು ಬೇರೆ ಕೆಲಸದಲ್ಲಿ ಮಗ್ನಗೊಂಡಿದ್ದರೆ ಅವರ ಕರೆ ಸ್ವೀಕರಿಸಿರುವುದಿಲ್ಲ. ಹೀಗೆ ಹತ್ತು ಹಲವು ಬಾರಿ ನಾನು ಕರೆ ಸ್ವೀಕರಿಸದಿದ್ದಾಗ ಮತ್ತೆ ಅವರಿಗೆ ಕರೆ ಮಾಡುತ್ತೇನೆ. ಅವರು ಎಂದಿಗೂ ಕರೆ ಸ್ವೀಕರಿಸದಿದ್ದುದರ ಬಗ್ಗೆ ಬೇಸರ ವ್ಯಕ್ತಿಪಡಿಸಿದ್ದನ್ನು ನಾನು ನೋಡಲಿಲ್ಲ. ಕೆಲವೊಮ್ಮೆ ನಾವು ಸ್ನೇಹಿತರಿಗೆ ಕರೆ ಮಾಡಿ ಅವರು ಸ್ವೀಕರಿಸಲಿಲ್ಲವೆಂದರೆ ಅವರ ಬಗ್ಗೆ ಒಂದು ರೀತಿಯ ಜಿಗುಪ್ಸೆ ಮೂಡುತ್ತದೆ ಅಥವಾ ಕೋಪ ಬರುತ್ತದೆ. ಆದರೆ ಡಾ. ಸಿ.ಆರ್. ಗೋಪಾಲ್ ರವರ ವ್ಯಕ್ತಿತ್ವದಿಂದ ನನ್ನ ಕರೆ ಯಾರಾದರೂ ಸ್ವೀಕರಿಸದಿದ್ದರೆ ನನಗೆ ಬೇಸರವಾಗುವುದು ಅತ್ಯಂತ ತೀರ ವಿರಳ.
ಡಾ. ಸಿ.ಆರ್. ಗೋಪಾಲ್ ರವರ Whatsapp ಸಂದೇಶ ನೋಡಿ ನನಗೆ ಅನಿಸಿದ್ದು ನಮ್ಮ ಆತ್ಮೀಯ ಸ್ನೇಹಿತರಿಂದ ಡಾ. ಸಿ.ಆರ್. ಗೋಪಾಲ್ ರವರಂತೆಯೇ Feedback ತೆಗೆದುಕೊಂಡು ನಮ್ಮ ವ್ಯಕ್ತಿತ್ವವನ್ನು ಉತ್ತಮ ಪಡಿಸಿಕೊಳ್ಳುವುದು ಒಳಿತು ಎಂದು ಅನಿಸುತ್ತದೆ. ನಮ್ಮ ಮೂಗಿನ ನೇರಕ್ಕೆ ನಾವುಗಳು ಬದುಕುತ್ತಾ ನಾವು ಮಾಡಿದ್ದೇ ಸರಿ ಎಂಬ ಭ್ರಮಾ ಲೋಕವನ್ನು ಸೃಷ್ಟಿ ಮಾಡಿಕೊಂಡು ಬದುಕುತ್ತಿರುತ್ತೇವೆ ಎಂದು ಅನಿಸುತ್ತದೆ. ಕೆಲವೊಮ್ಮೆ ನಾನಾಯಿತು, ನನ್ನ ಹೆಂಡತಿ, ಮಕ್ಕಳು, ತಂದೆ, ತಾಯಿ ಮಾತ್ರ ನಮ್ಮ ಬದುಕನ್ನು ಸೀಮಿತಗೊಳಿಸಿಕೊಂಡಿರುತ್ತೇವೆ. ಇತರರ ಅಭಿಪ್ರಾಯಗಳನ್ನು ನಾವು ಕೇಳಿಸಿಕೊಂಡು ನಮ್ಮ ವ್ಯಕ್ತಿತ್ವ ಸರಿಪಡಿಸಿಕೊಳ್ಳುವ ಬಗ್ಗೆ ನಾವೆಂದಿಗೂ ತಲೆಕೆಡಿಸಿಕೊಳ್ಳುವುದಿಲ್ಲ.

ಇದುವರೆಗೂ ನನ್ನ ಸಂಪರ್ಕಕ್ಕೆ ಬಂದ ವ್ಯಕ್ತಿಗಳಲ್ಲಿ ಯಾವುದೇ ದೋಷವು ಕಾಣದೇ ಇರುವುದು ಡಾ. ಸಿ.ಆರ್. ಗೋಪಾಲ್ ರವರಲ್ಲಿ ಮಾತ್ರ ಎಂದರೆ ಆಶ್ಚರ್ಯವಾಗಬಹುದು. ಆದರೆ ಇದು ವಾಸ್ತವ ಸಂಗತಿ. ನನ್ನ ಬದುಕಿನಲ್ಲಿ ನನಗೆ ಸಿಕ್ಕ ಅತ್ಯಂತ ಆತ್ಮೀಯರಲ್ಲಿ ಡಾ. ಸಿ.ಆರ್. ಗೋಪಾಲ್ ರವರಿಗೆ ಅಗ್ರಮಾನ್ಯ ಸ್ಥಾನವಿದೆ.
 
ವಂದನೆಗಳೊಂದಿಗೆ
ರಮೇಶ ಎಂ.ಎಚ್.

ಡಾ. ಸಿ.ಆರ್. ಗೋಪಾಲ್ ರವರ ಕೃತಿಗಳು

0 Comments



Leave a Reply.

    Categories

    All
    Others
    Personality Developement
    Quotes
    YouTube ವಿಡಿಯೋಸ್
    ಕಥೆಗಳು
    ಕವನಗಳು
    ಪುಸ್ತಕ ಪರಿಚಯ

    CERTIFICATE COURSE ON 
    'DISCIPLINARY PROCEEDINGS AND DOMESTIC ENQUIRY'
    For More Details
    Picture

    RAMESHA NIRATANKA 
    NATIONAL ASSOCIATION OF PROFESSIONAL SOCIAL WORKERS IN INDIA 
    ( NAPSWI ) 
    YOUNG ACHIEVERS AWARDEE-2019
    ​

    Read More

    RSS Feed

    Ramesha Niratanka

    Picture
    M&HR Solutions Private Limited
    More details

    ​List Your Product on Our Website 

    Picture
    Kannada Conference
    More details

    Picture
    Translations
    More details


    Picture
    POSH
    More details

Site
  • Home
  • About Us
  • Editor's Blog
  • Leader's Talk
  • Blog
  • Online Store
  • Videos
  • Join Our Online Groups
Vertical Divider
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
Join

Vertical Divider
Contact us
080-23213710
+91-8073067542
Mail-nirutapublications@gmail.com
Our Other Websites
www.hrkancon.com 
www.niratanka.org  
www.mhrspl.com
www.nirutapublications.org
Receive email updates on the new books & offers
for the subjects of interest to you.
Copyright Niruta Publications 2021
Website Designing & Developed by: www.mhrspl.com