Niruta Publications
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
  • Home
  • About Us
  • Editor's Blog
  • Our Services
    • Human Resources
    • Publications
    • NGO & CSR
    • PoSH
    • Training Programmes
    • Certificate Training Courses
  • Leader's Talk
  • Inviting Articles
  • Blog
  • HR Blog
  • Online Store
  • Videos
  • Join Our Online Groups
  • Search
  • Contact Us
Niruta Publications

Blog 

‘ಮನಸ್ಸು ಮತ್ತು ಅದರ ನಿಗ್ರಹ’ - ಸ್ವಾಮಿ ಬುಧಾನಂದ

4/28/2022

0 Comments

 
1. ಮನೋನಿಗ್ರಹವಿಲ್ಲದೆ ಯಾವ ಕೆಲಸವನ್ನು ಮಾಡಲಾಗುವುದಿಲ್ಲ. ವ್ಯಕ್ತಿಯ ಉದ್ಧಾರ, ಸಮಾಜದ ಉದ್ಧಾರ ಮನೋನಿಗ್ರಹದಿಂದ.
  • ಭಗವಂತನಲ್ಲಿ ಭಕ್ತಿ ಇದ್ದವರಿಗೆ ಮನೋನಿಗ್ರಹ ಸುಲಭ. ಸಮಸ್ಯೆಗಳು ಬೇಗ ಬಗೆಹರಿಯುತ್ತವೆ.
  • ಮನೋನಿಗ್ರಹ ಕಷ್ಟ, ಆದರೆ ಸಾಧ್ಯ.
  • ಮನೋನಿಗ್ರಹಕ್ಕೆ ಕುಶಲತೆ ಬೇಕು, ಎಚ್ಚರ ಬೇಕು, ವಿನೋದ ಪ್ರಜ್ಞೆ ಬೇಕು, ಹೃದಯವಂತಿಕೆ ಬೇಕು, ಚತುರತೆ ಬೇಕು, ತಾಳ್ಮೆ ಬೇಕು, ಸೋಲುಗಳ ಸಮ್ಮುಖದಲ್ಲಿಯೂ ಎದೆಗುಂದದ ಧೀರೋದಾತ್ತತೆ ಬೇಕು.
  • ಮನಸ್ಸನ್ನು ಅಭ್ಯಾಸ ಮತ್ತು ವೈರಾಗ್ಯದಿಂದ ನಿಗ್ರಹಿಸಬಹುದು ಗೀತೆ 6.35 ಇದೇ ಅಭ್ಯಾಸಯೋಗ.
  • ಬಂಧನ ಹಾಗೂ ಬಿಡುಗಡೆ ಮನಸ್ಸಿಗೆ ಸಂಬಂಧಿಸಿದ್ದು.
  • ಮನೋನಿಗ್ರಹವನ್ನು ಸಾಧಿಸುವುದು ಹೇಗೆ?
1. ದೃಢ ಸಂಕಲ್ಪ ಬೆಳೆಸಿಕೊಳ್ಳಿ.
2. ಮನಸ್ಸಿನ ಸ್ವರೂಪವನ್ನು ಅರ್ಥಮಾಡಿಕೊಳ್ಳಿ.
3. ತಂತ್ರಗಳನ್ನು ತಿಳಿದುಕೊಂಡು ಬಳಸುವುದನ್ನು ಕಲಿಯಿರಿ.​

Read More
0 Comments

Online program of Appreciative Inquiry (AI) for Whole System Development

4/13/2022

0 Comments

 
Picture
0 Comments

A GREAT LOSS TO SOCIAL WORK IN THE DEMISE OF PROF. Ilango Ponnuswami

3/10/2022

0 Comments

 
Picture
0 Comments

ಇ.ಎಸ್.ಐ. ಅಧಿನಿಯಮ 1948 ರ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಘಟಕಗಳ ಆಡಳಿತ ಮಂಡಳಿ ಮುಖ್ಯವಾಗಿ ಗಮನಿಸಬೇಕಾದ ಮುಖ್ಯಾಂಶ

1/12/2022

0 Comments

 
Picture
ಪ್ರಶ್ನೆ: ನೀವೇ ಹೇಳಿದಂತೆ ಜನವರಿ 2017 ರಿಂದ ಇ.ಎಸ್.ಐ ವೇತನದ ಮಿತಿಯನ್ನು ಮಾಸಿಕ 21000-00 ರೂಪಾಯಿಗೆ ಹೆಚ್ಚಿಸಿದೆ. ಇಲ್ಲೊಂದು ಉಪ ಪ್ರಶ್ನೆ ನೌಕರನೊಬ್ಬ ಪಡೆಯುತ್ತಿರುವ ವೇತನವು ವೇತನ ವೃದ್ಧಿ, ಬೋನಸ್, ಅಧಿಕ ಕಾರ್ಯ ನಿರ್ವಹಿಸಿದುದಕ್ಕಾಗಿ ಪಡೆದ ಹಣವೂ ಸೇರಿ ತಿಂಗಳ ಒಂದರಲ್ಲಿ 21000-00 ರೂಪಾಯಿಗಿಂತ ಹೆಚ್ಚಾಗಿ ಬಿಟ್ಟರೆ, ಅಂತಹ ಸಂದರ್ಭದಲ್ಲಿ ವಿಮಾದಾರ ನೌಕರರು ಇ.ಎಸ್.ಐ ವ್ಯಾಪ್ತಿಯಿಂದ ಹೊರಗೆ ಉಳಿಯುತ್ತಾರೆಯೆ?
ಉತ್ತರ: ಅಂದರೆ, ವೇತನ ಮಿತಿಯನ್ನು ಮೀರಿದ ತಕ್ಷಣವೇ ನೌಕರ ವಿಮಾದಾರರು ಇ.ಎಸ್.ಐ ವ್ಯಾಪ್ತಿಯಿಂದ ಹೊರಗೆ ಉಳಿಯುತ್ತಾರೆ ಎಂಬುದು ನಿಮ್ಮ ಅನಿಸಿಕೆ. ಅದು ಹಾಗಲ್ಲ. ಇ.ಎಸ್.ಐ ಕಾನೂನಿನಂತೆ ವಂತಿಗೆ ಅವಧಿಯನ್ನು ವರ್ಷವೊಂದರಲ್ಲಿ ಎರಡು ಭಾಗವಾಗಿ ವಿಂಗಡಿಸಲಾಗಿದೆ. ಏಪ್ರಿಲ್‌ನಿಂದ ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಿಂದ ಮಾರ್ಚ್. ವಿಷಯ ಹೀಗಿರುವಾಗ ವಂತಿಗೆಯ ಅವಧಿಯ ಮಧ್ಯದಲ್ಲಿ ವೇತನವು ಹೆಚ್ಚಾದರೂ ನೌಕರರು ಇ.ಎಸ್.ಐ ವ್ಯಾಪ್ತಿಯಿಂದ ಹೊರಗೆ ಉಳಿಯಲಾರರು. ವಂತಿಗೆಯ ಅವಧಿಯು ಮುಗಿಯುವವರೆಗೆ ಅವರು ಮುಂದುವರೆಯುತ್ತಾರೆ. ಅಷ್ಟೇ ಏಕೆ, ಹೆಚ್ಚಾದ ಮೊತ್ತಕ್ಕೂ ವಂತಿಗೆಯನ್ನು ಸಲ್ಲಿಸಬೇಕಾಗುತ್ತದೆ. ಉದಾಹರಣೆಗೆ: ವಂತಿಗೆಯ ಅವಧಿ ಏಪ್ರಿಲ್‌ನಿಂದ ಸೆಪ್ಟೆಂಬರ್ ಮಧ್ಯೆ ಜೂನ್ ತಿಂಗಳಿನಲ್ಲಿ ವೇತನ ವೃದ್ಧಿಯ ಪರಿಣಾಮವಾಗಿ ನೌಕರನೊಬ್ಬನ ವೇತನ ರೂಪಾಯಿ. 22000-00 ಆಗಿಬಿಟ್ಟರೆ, ವಂತಿಗೆಯನ್ನು 22000-00 ಕ್ಕೆ ಸಲ್ಲಿಸಬೇಕು. ಅದಕ್ಕಾಗಿ ವೇತನ ಮಿತಿಯಾದ ರೂಪಾಯಿ. 22000-00 ಗೆ ಮಾಡಲಾಗದು ಎನ್ನುವುದನ್ನು ಪ್ರಮುಖವಾಗಿ ಇಲ್ಲಿ ಗಮನಿಸಬೇಕು. ಮುಂದೆ ವಂತಿಗೆಯ ಅವಧಿ ಮುಗಿಯುತ್ತಲೆ ಆಗಲೂ 21000-00 ಕ್ಕೆ ಹೆಚ್ಚಾಗಿದ್ದರೆ, ಅನಾಯಾಸವಾಗಿ ಅಂತಹ ವಿಮಾದಾರರು ವ್ಯಾಪ್ತಿಯಿಂದ ಹೊರಗೆ ಉಳಿಯುತ್ತಾರೆ.
 
ಪ್ರಶ್ನೆ: ಇ.ಎಸ್.ಐ ಅಧಿನಿಯಮದ ಅಡಿಯಲ್ಲಿ ನೋಂದಾಯಿಸಿಕೊಂಡ ಸಂಸ್ಥೆಯು ಆವಧಿಕವಾಗಿ ಯಾವುದಾದರೂ ವಿವರಗಳನ್ನು ಸಲ್ಲಿಸಬೇಕೆ ?
ಉತ್ತರ: ಹೌದು.
  1. ಪ್ರತಿ ವರ್ಷ 31 ನೆಯ ಜನವರಿಯ ಒಳಗೆ ಕಳೆದ ಕ್ಯಾಲೆಂಡರ್ ವರ್ಷದಲ್ಲಿ ಘಟಕದ ವಿಳಾಸ ಬದಲಾವಣೆಯಾಗಿದ್ದರೆ ಅದರ ಉಲ್ಲೇಖದೊಂದಿಗೆ ಪ್ರಪತ್ರ 01 ‘ಎ’ ಭರ್ತಿಮಾಡಿ ಸಂಬಂಧಪಟ್ಟ ಪ್ರಾದೇಶಿಕ ಅಥವಾ ಉಪ ಪ್ರಾದೇಶಿಕ ಕಾರ್ಯಾಲಯಕ್ಕೆ ಕಳುಹಿಸಿ ಕೊಡಬೇಕು.
  2. ವರ್ಷದ 2 ವಂತಿಗೆಯ ಅವಧಿಗಳಾದ ಏಪ್ರಿಲ್‌ನಿಂದ ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಿಂದ ಮಾರ್ಚ್ ಅವಧಿಯ ನಂತರ ಅವಧಿಯು ಮುಕ್ತಾಯವಾದ 42  ದಿನಗಳ ಒಳಗಾಗಿ ಹಣ ಸಂದಾಯ ಮಾಡಿದ ಚಲನ್ ಪ್ರತಿಗಳನ್ನು ಲಗತ್ತಿಸಿ ಸಂಬಂಧಪಟ್ಟ ಶಾಖಾ ಕಛೇರಿಗೆ ಕಳುಹಿಸಿಕೊಡಬೇಕು. ನಿಯಮಗಳು ಹೀಗಿದ್ದರೂ ಇತ್ತೀಚಿನ ದಿನಗಳಲ್ಲಿ ವಂತಿಗೆಯನ್ನು ಆನ್‌ಲೈನ್ ಮುಖಾಂತರ ಸಲ್ಲಿಸುವುದರಿಂದ ಸಂದಾಯದ ವಿವರ ಸಿಸ್ಟಂನಲ್ಲಿ ಗೊತ್ತಾಗಿಬಿಡುತ್ತದೆ. ಹೀಗಾಗಿ ಈ ವ್ಯವಸ್ಥೆ ಈಗ ಮಹತ್ವವನ್ನು ಕಳೆದುಕೊಂಡಿದೆ.
  3. ಇ.ಎಸ್.ಐ ಅಧಿನಿಯಮ 1948 ರ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಘಟಕವು ದುರ್ಘಟನಾ ರಿಜಿಸ್ಟರ್ ಅಂದರೆ ಪ್ರಪತ್ರ 11ನ್ನು ಕಡ್ಡಾಯವಾಗಿ ಇಟ್ಟುಕೊಂಡಿರಬೇಕು. ಘಟಕ ಅಥವಾ ಸಂಸ್ಥೆಯ ಪರಿಸರವೂ ಸೇರಿದಂತೆ ವಿಮಾದಾರರು ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ದುರ್ಘಟನೆಗೆ ತುತ್ತಾದರೆ ಅದರ ವಿವರವನ್ನು ಪ್ರಪತ್ರ 11ರಲ್ಲಿ ಭರ್ತಿಮಾಡಿ 24 ಘಂಟೆಯ ಒಳಗಾಗಿ ಸಂಬಂಧಪಟ್ಟ ಶಾಖಾ ಕಚೇರಿಗೆ ಹಾಗೂ ಅದರ ಒಂದು ಪ್ರತಿಯನ್ನು ಸಂಬಂಧಪಟ್ಟ ಇ.ಎಸ್.ಐ ಚಿಕಿತ್ಸಾಲಯಕ್ಕೂ ಕಳುಹಿಸಿಕೊಡಬೇಕು. ದುರ್ಘಟನೆಯ ವಿವರಗಳನ್ನು ಸುರಕ್ಷಿತವಾಗಿ ಇಟ್ಟುಕೊಂಡಿದ್ದು ಇ.ಎಸ್.ಐ ಇಲಾಖೆಯ ಅಧಿಕಾರಿಗಳು ಪರಿವೀಕ್ಷಣೆಗೆ ಬಂದಾಗ ಪ್ರಸ್ತುತ ಪಡಿಸಬೇಕು. ಅಂದರೆ, ಮುಂದೊಮ್ಮೆ ದುರ್ಘಟನೆಯಿಂದ ವಿಮಾದಾರ ತೀರಿಕೊಂಡರೆ ಅಥವಾ ದುರ್ಘಟನೆಯ ನಂತರ ವಿಕಲಾಂಗನಾದರೆ ಫಲಾನುಭವಗಳಿಗೆ ಈ ದಾಖಲೆಗಳು ಸಹಕಾರಿಯಾಗುತ್ತವೆ. ಇನ್ನೊಂದು ಮಾತಿನಲ್ಲಿ ಹೇಳಬೇಕೆಂದರೆ, ಫಲಾನುಭವಗಳಿಗೆ ಈ ದಾಖಲೆಗಳೇ ಮೂಲ ಆಧಾರಗಳು.
ಈ ವಿವರಗಳನ್ನು ಲಿಖಿತದಲ್ಲಿ ಕಳುಹಿಸಿಕೊಡುವ ಅವಶ್ಯಕತೆ ಇಲ್ಲ. ಯಾಕೆಂದರೆ, ಈಗ ಎಲ್ಲಾ ವಿವರವನ್ನು ಆನ್‌ಲೈನ್ ನಲ್ಲಿ ಕಳುಹಿಸಿಕೊಡುವ ವ್ಯವಸ್ಥೆ ಇದೆ. ಹಾಗೂ ಸಂಪೂರ್ಣ ವಿವರಗಳು ಸಿಸ್ಟಮ್‌ನಲ್ಲಿ ಲಭ್ಯವಿರುವುದರಿಂದ ಮೊದಲಿನಂತೆ ಆವಧಿಕವಾಗಿ ಕಳುಹಿಸಿಕೊಡಲೇಬೇಕು ಎಂಬ ನಿಯಮವಿಲ್ಲ. ಸುಲಭ ಸಂದರ್ಭಕ್ಕಾಗಿ ಇ.ಎಸ್.ಐ. ಇಲಾಖೆಯು ದಾಖಲೆಗಳ ವಿವರಗಳನ್ನು ಪರಿವೀಕ್ಷಿಸಿಕೊಳ್ಳುವುದು.
 
ಪ್ರಶ್ನೆ: ವಿಮಾದರ ಎಷ್ಟು ದಿನಗಳ ನಂತರ ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳಲು ಅರ್ಹನಾಗುತ್ತಾನೆ ?
ಉತ್ತರ: ಇ.ಎಸ್.ಐ ವಿಮಾದಾರನಾಗಿದ್ದು ಕನಿಷ್ಟ 2 ವರ್ಷಗಳವರೆಗೆ ಸೇವೆ ಸಲ್ಲಿಸಿ 156 ದಿನಗಳ ವಂತಿಗೆಯನ್ನು ಸಲ್ಲಿಸಿದ್ದರೆ ಸಾಕು. ಮುಂದುವರೆದ ಕಾಯಿಲೆಯ ನಿಯಮದನ್ವಯ 34 ಕಾಯಿಲೆಗಳಿಗೆ ಗುಣಮುಖವಾಗುವವರೆಗೆ ಅಥವಾ ಗರಿಷ್ಟ 3 ವರ್ಷಗಳವರೆಗೆ ವಿಮಾದಾರರು ಸೇರಿ ಅವಲಂಬಿತ ಕುಟುಂಬದ ಸದಸ್ಯರುಗಳು ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳಲು ಅವಕಾಶವಿದೆ. ಆಸ್ಪತ್ರೆಗೆ ದಾಖಲಾಗದೇ ಸಾಮಾನ್ಯ ರೋಗಿಯಾಗಿ ಇ.ಎಸ್.ಐ. ಚಿಕಿತ್ಸಾಲಯ ಹಾಗೂ ಆಸ್ಪತ್ರೆಯಲ್ಲಿ ಔಷಧಿ ಪಡೆಯುವುದು ವಿಮಾದಾರನಾದ ದಿನದಿಂದಲೇ ಆರಂಭವಾಗುತ್ತದೆ. ವಿಶೇಷ ಶುಶ್ರೂಷೆಯ ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳುವುದಕ್ಕೆ ಮಾತ್ರ ಎರಡು ವರ್ಷ ಕಾಯಬೇಕು.

Read More
0 Comments

ಶ್ರೇಷ್ಠ ಪುಸ್ತಕಗಳ ಒಡನಾಟವಿದ್ದರೆ ನಮ್ಮ ನಾಯಕರ ನಡೆ ನುಡಿಗಳು ಕೊಂಚ ನೆಟ್ಟಗಾಗಬಲ್ಲವು

12/31/2021

0 Comments

 
ಪುಸ್ತಕಗಳ ಸಂಗ ಬಿಡದ ಡೈನಮಿಕ್ ನಾಯಕಿ ಜೆಸಿಂದಾ ಕಳೆದ ವರ್ಷ ತಾವು ಮೆಚ್ಚಿದ ಪುಸ್ತಕಗಳ ಪಟ್ಟಿ ಕೊಟ್ಟರು. ನ್ಯೂಜಿಲೆಂಡಿನಲ್ಲಿ ರಾಜಕಾರಣಿಗಳಿಗೆ ಒಳ್ಳೆಯ ಪುಸ್ತಕಗಳನ್ನು ಕೊಡುವ ಸಂಸ್ಥೆಗಳೇ ಇವೆ. ಜೆಸಿಂದಾ ಪಟ್ಟಿಯ ಜೊತೆಗೇ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕಾಲಕಾಲಕ್ಕೆ ಕೊಟ್ಟ ನೂರು ಪುಸ್ತಕಗಳ ಪಟ್ಟಿ ಗಮನಿಸಿದೆ. ಜೆಸಿಂದಾರಂತೆ ಒಬಾಮ ಕೂಡ ತಮ್ಮ ಆಯ್ಕೆಯ ಪುಸ್ತಕಗಳನ್ನು ಓದಿದ್ದಾರೆ. ಕೊರೊನಾ ಕಾಲದಲ್ಲಿ ಪುಸ್ತಕ, ಸಂಗೀತ ತಮ್ಮನ್ನು ಪೊರೆದಿದ್ದನ್ನು ನೆನೆದಿದ್ದಾರೆ. ಒಬಾಮರ ಪ್ರಿಯ ಪುಸ್ತಕಗಳ ಪಟ್ಟಿಯಲ್ಲಿ ಚಿನುವ ಅಚಿಬೆ, ಟೋನಿ ಮಾರಿಸನ್, ಅಡಿಚಿಯರ ಕಾದಂಬರಿಗಳು, ಆರ್ಥಿಕ, ರಾಜಕೀಯ ಲೋಕದ ಪುಸ್ತಕಗಳಿವೆ. ಪುಸ್ತಕ ಓದಿ ಹುಟ್ಟಿದ ಸೂಕ್ಷ್ಮತೆ ಜೆಸಿಂದಾ, ಒಬಾಮರ ಮಾತು, ನಡವಳಿಕೆಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಲಿಂಕನ್, ಫಿಡೆಲ್ ಕ್ಯಾಸ್ಟ್ರೊ, ನೆಹರೂ ಸೇರಿದಂತೆ ಪುಸ್ತಕಗಳ ಸಖ್ಯದಲ್ಲಿದ್ದ ದೊಡ್ಡ ನಾಯಕರುಗಳ ಎದುರು ಯಾವ ಪುಸ್ತಕಗಳನ್ನೂ ಓದದೆ ಪಶುಗಳಂತೆ ವರ್ತಿಸುವ ಲೀಡರುಗಳನ್ನು ಹೋಲಿಸಿ: ಒಳ್ಳೆಯ ಪುಸ್ತಕಗಳ ಸಂಗದಲ್ಲಿರುವ ರಾಜಕಾರಣಿಗಳು ದೇಶದ ಆರೋಗ್ಯಕ್ಕೆ ಎಷ್ಟು ಅತ್ಯಗತ್ಯ ಎನ್ನುವುದು ತಂತಾನೇ ಹೊಳೆಯುತ್ತದೆ.

ರಾಜಕಾರಣಿಗಳಿರಲಿ, ಲಕ್ಷಗಟ್ಟಲೆ ಸಂಬಳ ಪಡೆಯುವ ಅಧ್ಯಾಪಕರು ಕೂಡ ತಂತಮ್ಮ ವಿಷಯಗಳಿಗೆ ಸಂಬಂಧಿಸಿದ ಒಂದೆರಡು ಹೊಸ ಪುಸ್ತಕಗಳನ್ನಾದರೂ ಪ್ರತೀ ತಿಂಗಳು ಕೊಳ್ಳದಿರುವ ಬೇಜವಾಬ್ದಾರಿತನ ಕೂಡ ಇಲ್ಲಿದೆ. ಡಿಜಿಟಲ್ ಮಂದಿ ಕಿಂಡಲ್, ಇ-ಪುಸ್ತಕ, ಕೇಳು ಪುಸ್ತಕಗಳಲ್ಲಿ ಮುಳುಗಿದ್ದಾರೆ. ಆದರೂ ಕೈಯಲ್ಲಿ ಪುಸ್ತಕ ಹಿಡಿಯುವ ಪುಳಕ, ಪುಸ್ತಕಗಳೊಡನೆ ಗಂಟೆಗಟ್ಟಲೆ ಬದುಕುವ ಸುಖ ಇತರ ಬಗೆಯ ಓದಿನಲ್ಲಿರುವಂತಿಲ್ಲ. ಶ್ರೇಷ್ಠ ಪುಸ್ತಕಗಳ ಒಡನಾಟದಲ್ಲಿರುವುದೆಂದರೆ ನಮ್ಮೊಳಗಿನ ವಿಕಾರಗಳನ್ನು ಮೀರಿ ಇತರರನ್ನು, ಲೋಕದ ಕಷ್ಟಗಳನ್ನು ಅರಿಯುವುದು.

ಹೊಸ ವರ್ಷದಲ್ಲಾದರೂ ಈ ಸರಳ ಸುಂದರ ದಿನಚರಿ ಎಲ್ಲರ ಬದುಕಿನ ಭಾಗವಾಗಲಿ. ಒಳ್ಳೆಯ ಪುಸ್ತಕಗಳ ಪಟ್ಟಿ ಸಿದ್ಧವಾಗಲಿ! ಚಿಯರ್ಸ್!
ಪುಸ್ತಕಗಳ ಸಂಗ ಬಿಡದ ಡೈನಮಿಕ್ ನಾಯಕಿ ಜೆಸಿಂದಾ ಕಳೆದ ವರ್ಷ ತಾವು ಮೆಚ್ಚಿದ ಪುಸ್ತಕಗಳ ಪಟ್ಟಿ ಕೊಟ್ಟರು. ನ್ಯೂಜಿಲೆಂಡಿನಲ್ಲಿ ರಾಜಕಾರಣಿಗಳಿಗೆ ಒಳ್ಳೆಯ ಪುಸ್ತಕಗಳನ್ನು ಕೊಡುವ ಸಂಸ್ಥೆಗಳೇ ಇವೆ. ಜೆಸಿಂದಾ ಪಟ್ಟಿಯ ಜೊತೆಗೇ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕಾಲಕಾಲಕ್ಕೆ ಕೊಟ್ಟ ನೂರು ಪುಸ್ತಕಗಳ ಪಟ್ಟಿ ಗಮನಿಸಿದೆ. ಜೆಸಿಂದಾರಂತೆ ಒಬಾಮ ಕೂಡ ತಮ್ಮ ಆಯ್ಕೆಯ ಪುಸ್ತಕಗಳನ್ನು ಓದಿದ್ದಾರೆ. ಕೊರೊನಾ ಕಾಲದಲ್ಲಿ ಪುಸ್ತಕ, ಸಂಗೀತ ತಮ್ಮನ್ನು ಪೊರೆದಿದ್ದನ್ನು ನೆನೆದಿದ್ದಾರೆ. ಒಬಾಮರ ಪ್ರಿಯ ಪುಸ್ತಕಗಳ ಪಟ್ಟಿಯಲ್ಲಿ ಚಿನುವ ಅಚಿಬೆ, ಟೋನಿ ಮಾರಿಸನ್, ಅಡಿಚಿಯರ ಕಾದಂಬರಿಗಳು, ಆರ್ಥಿಕ, ರಾಜಕೀಯ ಲೋಕದ ಪುಸ್ತಕಗಳಿವೆ. ಪುಸ್ತಕ ಓದಿ ಹುಟ್ಟಿದ ಸೂಕ್ಷ್ಮತೆ ಜೆಸಿಂದಾ, ಒಬಾಮರ ಮಾತು, ನಡವಳಿಕೆಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಲಿಂಕನ್, ಫಿಡೆಲ್ ಕ್ಯಾಸ್ಟ್ರೊ, ನೆಹರೂ ಸೇರಿದಂತೆ ಪುಸ್ತಕಗಳ ಸಖ್ಯದಲ್ಲಿದ್ದ ದೊಡ್ಡ ನಾಯಕರುಗಳ ಎದುರು ಯಾವ ಪುಸ್ತಕಗಳನ್ನೂ ಓದದೆ ಪಶುಗಳಂತೆ ವರ್ತಿಸುವ ಲೀಡರುಗಳನ್ನು ಹೋಲಿಸಿ: ಒಳ್ಳೆಯ ಪುಸ್ತಕಗಳ ಸಂಗದಲ್ಲಿರುವ ರಾಜಕಾರಣಿಗಳು ದೇಶದ ಆರೋಗ್ಯಕ್ಕೆ ಎಷ್ಟು ಅತ್ಯಗತ್ಯ ಎನ್ನುವುದು ತಂತಾನೇ ಹೊಳೆಯುತ್ತದೆ.

ರಾಜಕಾರಣಿಗಳಿರಲಿ, ಲಕ್ಷಗಟ್ಟಲೆ ಸಂಬಳ ಪಡೆಯುವ ಅಧ್ಯಾಪಕರು ಕೂಡ ತಂತಮ್ಮ ವಿಷಯಗಳಿಗೆ ಸಂಬಂಧಿಸಿದ ಒಂದೆರಡು ಹೊಸ ಪುಸ್ತಕಗಳನ್ನಾದರೂ ಪ್ರತೀ ತಿಂಗಳು ಕೊಳ್ಳದಿರುವ ಬೇಜವಾಬ್ದಾರಿತನ ಕೂಡ ಇಲ್ಲಿದೆ. ಡಿಜಿಟಲ್ ಮಂದಿ ಕಿಂಡಲ್, ಇ-ಪುಸ್ತಕ, ಕೇಳು ಪುಸ್ತಕಗಳಲ್ಲಿ ಮುಳುಗಿದ್ದಾರೆ. ಆದರೂ ಕೈಯಲ್ಲಿ ಪುಸ್ತಕ ಹಿಡಿಯುವ ಪುಳಕ, ಪುಸ್ತಕಗಳೊಡನೆ ಗಂಟೆಗಟ್ಟಲೆ ಬದುಕುವ ಸುಖ ಇತರ ಬಗೆಯ ಓದಿನಲ್ಲಿರುವಂತಿಲ್ಲ. ಶ್ರೇಷ್ಠ ಪುಸ್ತಕಗಳ ಒಡನಾಟದಲ್ಲಿರುವುದೆಂದರೆ ನಮ್ಮೊಳಗಿನ ವಿಕಾರಗಳನ್ನು ಮೀರಿ ಇತರರನ್ನು, ಲೋಕದ ಕಷ್ಟಗಳನ್ನು ಅರಿಯುವುದು.

ಹೊಸ ವರ್ಷದಲ್ಲಾದರೂ ಈ ಸರಳ ಸುಂದರ ದಿನಚರಿ ಎಲ್ಲರ ಬದುಕಿನ ಭಾಗವಾಗಲಿ. ಒಳ್ಳೆಯ ಪುಸ್ತಕಗಳ ಪಟ್ಟಿ ಸಿದ್ಧವಾಗಲಿ! ಚಿಯರ್ಸ್!


https://www.prajavani.net/columns/nataraj-huliyar-column-new-book-for-the-new-year-897910.html?fbclid=IwAR1RxdFkBzf2nfvk3p8bwlpnWlLkZNNZZuSGI9ZbL5-uTjFYAxNnUcfbX9A​
0 Comments

ಜೀವನದಲ್ಲಿ ಕಲಿತ ದೊಡ್ಡ ಪಾಠವೆಂದರೆ “ಇನ್ನು ಕಲಿಯಬೇಕಾದುದು ಬಹಳಷ್ಟಿದೆ”

12/9/2021

0 Comments

 
Picture
ಇತ್ತೀಚೆಗೆ ಪ್ರೊ. ವೆಂಕಟ್ ಪುಲ್ಲಾ ಭಾರತದಲ್ಲಿ ಸಮಾಜಕಾರ್ಯ ವಿಷಯದಲ್ಲಿ ಡಾಕ್ಟರೇಟ್ ಪಡೆದರು. ಆಸ್ಟ್ರೇಲಿಯಾದಲ್ಲಿ ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ಹಲವು ವರ್ಷಗಳ ಹಿಂದೆ (ಸುಮಾರು 90ರ ದಶಕದಲ್ಲಿ) TISS (Tata Institute of Social Science) ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಒಬ್ಬ ಅರ್ಹ ವಿದ್ಯಾರ್ಥಿಗೆ 500/- ಗಳ ಸಹಾಯವನ್ನು ನೀಡಿದ್ದರಂತೆ. ಪ್ರೊ. ವೆಂಕಟ್ ಪುಲ್ಲಾ ರವರಿಗೂ ಬರುತ್ತಿದ್ದ ಸಂಬಳ ಐದಾರು ಸಾವಿರವಿದ್ದಿರಬಹುದು. ಆ 500/- ರೂ.ಗಳು ಸಹಾಯ ಪಡೆದ ವಿದ್ಯಾರ್ಥಿ ಮುಂದೊಂದು ದಿನ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಪಡೆದ ನಂತರ ಪ್ರೊ. ವೆಂಕಟ್ ಪುಲ್ಲಾ ರವರಿಗೆ ತಾನು ಪಡೆದ ಸಹಾಯಧನವನ್ನು ಹಿಂತಿರುಗಿಸಲು ಭೇಟಿಯಾದರು. ಆಗ ಪ್ರೊ. ವೆಂಕಟ್ ಪುಲ್ಲಾ ರವರು ನಾನು ನಿನಗೆ ಸಹಾಯ ಮಾಡಿದಂತೆ ನೀನು ಒಬ್ಬ ಅರ್ಹ ವಿದ್ಯಾರ್ಥಿಯನ್ನು ಹುಡುಕಿ ಅವನಿಗೆ ನಿನ್ನ ಕೈಲಾದ ಮಟ್ಟಿಗೆ ಸಹಾಯ ಮಾಡು ಎಂದು ಸಲಹೆ ಇತ್ತರಂತೆ. ಈ ರೀತಿಯಾಗಿ ಸಹಾಯ ಪಡೆದವರು ಇಂದು ವಿಶ್ವದಾದ್ಯಂತ ಸುಮಾರು 400ಕ್ಕೂ ಹೆಚ್ಚು ಮಂದಿ ಇದ್ದಾರಂತೆ. ಪ್ರೊ. ವೆಂಕಟ್ ಪುಲ್ಲಾ ರವರಿಂದ ಮೊದಲು ಸಹಾಯ ಪಡೆದ ವ್ಯಕ್ತಿ ತಾನು ಸಹಾಯ ನೀಡಿದ ವ್ಯಕ್ತಿಯೊಂದಿಗೆ ಮಾತನಾಡಿ ಅದೇ ರೀತಿ ಒಬ್ಬರಿಂದ ಒಬ್ಬರು ಮಾತನಾಡಿಕೊಂಡು ಎಲ್ಲರೂ ಇತ್ತೀಚಿಗೊಮ್ಮೆ ಪ್ರೊ. ವೆಂಕಟ್ ಪುಲ್ಲಾ ರವರನ್ನು ಆಹ್ವಾನಿಸಿದರಂತೆ. ಆಗ ಪ್ರೊ. ವೆಂಕಟ್ ಪುಲ್ಲಾ ರವರಿಗೆ ತಾನು ಸಹಾಯ ನೀಡಿದ ತನ್ನ ಶಿಷ್ಯ ಮಾತ್ರ ಗೊತ್ತಿತ್ತು. ಅದೇ ರೀತಿ ಅಲ್ಲಿದ್ದ ಎಲ್ಲರಿಗೂ ಅವರವರು ಸಹಾಯ ನೀಡಿದ ವ್ಯಕ್ತಿಗಳು ಮಾತ್ರ ಗೊತ್ತಿತ್ತು. ಆದರೆ ಅಲ್ಲಿ ಒಟ್ಟಿಗೆ ಸೇರಿದ್ದು 300 ಕ್ಕೂ ಹೆಚ್ಚು ಜನರು ಇದ್ದರು. ಪ್ರೊ. ವೆಂಕಟ್ ಪುಲ್ಲಾ ರವರು ಅವರೆಲ್ಲರನ್ನೂ ಉದ್ದೇಶಿಸಿ ಮಾತನಾಡಿದರಂತೆ. ಒಂದು ಪುಟ್ಟ ಸಹಾಯ ಯಾವ ರೀತಿ ಇತರರ ಬದುಕನ್ನು ಬದಲಾಯಿಸಬಲ್ಲದು ಎಂಬುದು ಇದಕ್ಕೆ ನಿದರ್ಶನವಾಗಿದೆ. ಹಾಗಾಗಿ ಅಗತ್ಯವಿರುವವರಿಗೆ ಸಹಾಯ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಒಂದು ಪುಟ್ಟ ಸಹಾಯದಿಂದ ಸುಮಾರು 400 ಕ್ಕೂ ಹೆಚ್ಚು ಜನರು ಪ್ರೊ. ವೆಂಕಟ್ ಪುಲ್ಲಾ ರವರ ವ್ಯಕ್ತಿತ್ವಕ್ಕೆ ಮಾರುಹೋದರು. ಹಾಗೆಯೇ ಇಂದು ಪ್ರೊ. ವೆಂಕಟ್ ಪುಲ್ಲಾ ರವರು ಸಮಾಜಕಾರ್ಯ ವಿಶ್ವವಿದ್ಯಾಲಯ ಮಾಡಬೇಕೆಂದು ಹೊರಟರೆ ಇಂತಹ ಮಹತ್ವದ ಕೆಲಸಕ್ಕೆ 400 ಜನರು ಪ್ರೊ. ವೆಂಕಟ್ ಪುಲ್ಲಾ ರವರ ಬೆಂಬಲಕ್ಕೆ ನಿಲ್ಲುವುದರಲ್ಲಿ ಆಶ್ಚರ್ಯವೇನಿಲ್ಲವಲ್ಲ.
 
ರಮೇಶ ಎಂ.ಎಚ್.
ನಿರಾತಂಕ

www.mhrspl.com
www.nirutapublications.org
0 Comments

A GREAT LOSS TO SOCIAL WORK IN THE DEMISE OF Prof. Vimla Nadkarni

11/19/2021

0 Comments

 
Picture
0 Comments

‘ಬದುಕಿನಾನಂದ ಕಲೆ’ ವ್ಯಕ್ತಿತ್ವ ವಿಕಸನದ ಒಂದು ಉತ್ತಮ ಕೃತಿ

9/25/2021

0 Comments

 
Picture
ಮಾನವ ಸಂಪನ್ಮೂಲ ಕ್ಷೇತ್ರದ, ಕಾರ್ಯ ನಿರ್ವಹಣೆ ಮತ್ತು ತರಬೇತಿ ವಲಯಗಳಲ್ಲಿ, ಅಂತರಾಷ್ಟ್ರೀಯ ಮಟ್ಟದ ಖ್ಯಾತಿಯನ್ನು ಗಳಿಸಿದ, ಮಿತ್ರ ಶ್ರೀ ಲಕ್ಷ್ಮೀಪ್ರಸಾದ್‌ರವರು ಬರೆದ ‘ಬದುಕಿನಾನಂದ ಕಲೆ’ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಒಂದು ಉತ್ತಮ ಕೃತಿಯಾಗಿದೆ. ತಮ್ಮ ಅಪಾರವಾದ ಜ್ಞಾನ ಮತ್ತು ಅನುಭವಗಳನ್ನು ಕ್ರೋಡೀಕರಿಸಿ, ದೈನಂದಿನ ಬದುಕಿಗೆ ಉಪಯುಕ್ತವಾಗುವ ವಿಷಯವನ್ನು ಆರಿಸಿಕೊಂಡು, ಸರಳ ಭಾಷೆಯಲ್ಲಿ ಸುಂದರವಾಗಿ ಪುಸ್ತಕವನ್ನು ರಚಿಸಿದ್ದಾರೆ. 

Read More
0 Comments

ಡಿ. ವೀರೇಂದ್ರ ಹೆಗ್ಗಡೆಯವರ ಶುಭ ಹಾರೈಕೆಗಳು

3/12/2021

0 Comments

 
Picture
0 Comments

A One-Day Collaborative Workshop for Trade Union and Management Personnel on “WINNING - The most desired outcome of Trade Union and Management”

3/12/2021

0 Comments

 
Picture
0 Comments

ಗೆಲುವು

3/5/2021

0 Comments

 
Picture
ಮುನ್ನುಡಿ
ಗೆದ್ದೇ ಬಿಡೋಣ... ಸೋತು ಸುಮ್ಮನಿರಲು ನಾವು ಈ ಜಗತ್ತಿನಲ್ಲಿ ಹುಟ್ಟಿಲ್ಲ! ನೆನಪಿರಲಿ, ಗೆಲುವುಗಳು ರಾತ್ರೋರಾತ್ರಿ ನಮ್ಮ ಮನೆ ಬಾಗಿಲು ಬಡಿಯುವುದಿಲ್ಲ. ಗೆಲುವುಗಳು ಅವಿರತ ಪರಿಶ್ರಮ, ಸಮರ್ಪಣೆ ಮತ್ತು ಛಲದ ಪ್ರತಿಫಲಗಳು. ಪ್ರತಿಯೊಬ್ಬರೂ ಗೆಲುವುಗಳನ್ನು ಬೆನ್ನಟ್ಟಲು ಪ್ರಯತ್ನಿಸುತ್ತಾರೆ ಆದರೆ ಗೆಲುವುಗಳು ಮಾತ್ರ ಗೆಲ್ಲುವ ಛಲವಿರುವ ವ್ಯಕ್ತಿಗಳನ್ನು ಬಿಡದೆ ಬೆನ್ನಟ್ಟುತ್ತವೆ. 

ಅಂಬಿಕಾ ತಮಿಳುನಾಡಿನ ದಿಂಡಿಗಲ್ ಮೂಲದ ಹದಿನಾಲ್ಕು ವರ್ಷದ ಹುಡುಗಿ. ತನ್ನ ಹದಿನಾಲ್ಕನೆಯ ವರ್ಷಕ್ಕೆ ಪೊಲೀಸ್ ಪೇದೆಯನ್ನು ಮದುವೆಯಾಗಿ, ಹದಿನೆಂಟು ವರ್ಷಕ್ಕೆ ಇಬ್ಬರು ಮಕ್ಕಳ ತಾಯಿಯಾದಳು. ತನ್ನ ಮಕ್ಕಳು ಮತ್ತು ಪ್ರೀತಿಯ ಗಂಡನೊಂದಿಗೆ ಸಂತೋಷದ ಜೀವನವನ್ನು ನಡೆಸುತ್ತಿದ್ದಳು. ಇದುವೇ, ತನ್ನ ಜೀವನದ ಬಹುಮುಖ್ಯ ಗೆಲುವೆಂದು ಭಾವಿಸಿದ್ದಳು. ಆ ಒಂದು ದಿನ ಪೊಲೀಸ್ ಪೆರೇಡ್ ನಡೆಯುತ್ತಿತ್ತು. ಗಂಡ ಎಂದಿನಂತೆ ಊಟಕ್ಕೆ ಮನೆಗೆ ಬರಲಿಲ್ಲ. ಆತಂಕಗೊಂಡ ಅಂಬಿಕಾ ತನ್ನ ಮಕ್ಕಳೊಂದಿಗೆ ಆ ಪೆರೇಡ್ ನಡೆಯುತ್ತಿದ್ದ ಸ್ಥಳಕ್ಕೆ ಬಂದಳು. ಪೆರೇಡ್ನಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಗಾಂಭೀರ್ಯದಿಂದ ನಿಂತಿದ್ದರು. ನೂರಾರು ಪೊಲೀಸರು ಸಾಲಿನಲ್ಲಿ ಅವರಿಗೆ ಶಿಸ್ತಿನಿಂದ ಸೆಲ್ಯೂಟ್ ಹೊಡೆದು ಗೌರವ ತೋರಿಸುತ್ತಾ ಮುಂದಕ್ಕೆ ಸಾಗುತಿದ್ದರು. ಗಂಡ ಕೂಡ ಅದೇ ಸಾಲಿನಲ್ಲಿ ನಿಂತು ಆ ವ್ಯಕ್ತಿಗೆ ಸೆಲ್ಯೂಟ್ ಮಾಡಿದ್ದನ್ನು ಅಂಬಿಕಾ ದೂರದಿಂದಲೇ ಗಮನಿಸಿದಳು. ಇದೆಲ್ಲಾವನ್ನು ನೋಡಿದ ಅಂಬಿಕಾಳಿಗೆ “ಆ ಸೆಲ್ಯೂಟ್ ಸ್ವೀಕರಿಸುತ್ತಿರುವ ವ್ಯಕ್ತಿ ಯಾರಿರಬಹುದು?” ಎಂಬ ಪ್ರಶ್ನೆ ಮೂಡಿತು. ಗಂಡ ಮನೆಗೆ ಬಂದ ತಕ್ಷಣ ಆಕೆ  ಈ ಪ್ರಶ್ನೆಯನ್ನು ಅವನಲ್ಲಿ ಕೂತಹಲದಿಂದ ಕೇಳಿದಳು. ಅದಕ್ಕೆ ಗಂಡ, “ಅವರು ನಮ್ಮ ರಾಜ್ಯದ ಪೋಲಿಸ್ ಮುಖ್ಯಸ್ಥರು, ಐಪಿಎಸ್ ಅಧಿಕಾರಿ” ಎಂದು ತಿಳಿಸಿದರು. ಇದನ್ನು ತಿಳಿದ ಆಕೆಗೆ ಆ ರಾತ್ರಿ ನಿದ್ದೆ ಬರಲಿಲ್ಲ. ಬೆಳಿಗ್ಗೆ ಎದ್ದು ಆತ್ಮವಿಶ್ವಾಸದಿಂದ ಗಂಡನಿಗೆ “ನಾನು ಐಪಿಎಸ್ ಅಧಿಕಾರಿಯಾಗಲು ಬಯಸುತ್ತೇನೆ” ಎಂದು ತಿಳಿಸಿದಳು. ಎಸ್‌ಎಸ್‌ಎಲ್‌ಸಿ ಓದದ ಪತ್ನಿಯ ಮಾತುಗಳಿಂದ ಆಶ್ಚರ್ಯಗೊಂಡ ಗಂಡ, ಅವಳ ಆಲೋಚನೆಯಲ್ಲಿನ ಸ್ಪಷ್ಟತೆಯನ್ನು ಗಮನಿಸಿ, ಆಕೆಯ ನಿರ್ಧಾರಕ್ಕೆ ಸಹಕರಿಸಿ, ಆ ನಿಟ್ಟಿನಲ್ಲಿ  ಪ್ರೋತ್ಸಾಹಿಸುಲು ಮುಂದಾದನು. ತನ್ನ ಗುರಿಯ ಗಮ್ಯಸ್ಥಾನವನ್ನು ನಿರ್ಧರಿಸಿದ ಅಂಬಿಕಾ, ತನ್ನ ಪದವಿ ಮತ್ತು ಪದವಿ ಪೂರ್ವದ ಎಲ್ಲಾ ಕೋರ್ಸ್‌ಗಳನ್ನು ದೂರ ಶಿಕ್ಷಣದ ಮೂಲಕ ತಮ್ಮ ಮಾತೃಭಾಷೆಯಾದ ತಮಿಳು ಮಾಧ್ಯಮದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದಳು. ತದನಂತರ, ಯುಪಿಎಸ್‌ಸಿ ಪರೀಕ್ಷೆಗೆ ಅಧ್ಯಯನ ಮಾಡಲು ಮಕ್ಕಳನ್ನು ಗಂಡನ ಬಳಿಯೇ ಬಿಟ್ಟು ಚೆನ್ನೈಗೆ ಗೆಲ್ಲುವ ಮನೋಭಾವದೊಂದಿಗೆ ಕನಸು ಹೊತ್ತು ಹೊರಟಳು.

Read More
0 Comments

An Open Appeal to Schools of Social Work

2/22/2021

0 Comments

 
Picture
K.Vittala Rao
Management Consultant & Trainer, Bangalore
I happened to see an analysis by Deloitte’s 12th Annual Tech Trends Report about the new norms towards HR –Professionals challenge in the light of HR Digitalization. The following are the new norms that the Professionals need to carry out as indicated in the Report.

HR Departments focus on optimizing employee productivity, Engagement, Teamwork and Career Growth

HR Builds Innovative, Company-specific programs, Develop Apps and leverage the platform for scale

HR Technology Team moves beyond ERP to develop digital capabilities and mobile apps with a focus on “Productivity at Work”

HR Center of Excellence leverage AI, chat, apps, and other advanced technologies to scale and empower employees


Read More
0 Comments

“ಗೆಲುವು” ಮತ್ತು “ವಿಪತ್ತು ನಿರ್ವಹಣೆಯಲ್ಲಿ ಸಮಾಜಕಾರ್ಯ” ಪುಸ್ತಕಗಳ ಬಿಡುಗಡೆ ಸಮಾರಂಭ

1/28/2021

0 Comments

 
Picture

Read More
0 Comments

ಮಹಿಳೆ ಮತ್ತು ಮಕ್ಕಳಿಗಾಗಿ ಪೋಷಣ ಅಭಿಯಾನ

10/2/2020

0 Comments

 
ಡಾ. ಎಸ್. ಸಿದ್ಧರಾಮಣ್ಣ, ಜಿಲ್ಲಾ ನಿರೂಪಣಾ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು, ರವರು 1995 ರ ಬೆಂ.ವಿ.ವಿ ಯಿಂದ ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಸಮಾಜಕಾರ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಹಾಗೂ ಹಲವು ಪ್ರಶಸ್ತಿ ಪಡೆದು ನಮ್ಮೆಲ್ಲರಿಗೂ ಹೆಮ್ಮೆಯ ತಂದವರು.

Read More
0 Comments

Discrimination, Challenge and Response

9/23/2020

0 Comments

 
Picture
This book explores discrimination against Northeast Indians, who have been frequently stereotyped as backwards, anti-national, anti-assimilationist, immoral, and relegated to low paying positions across retail, hospitality, telecommunications and wellness industries. 
The contributions draw on interviews with individuals who have migrated to other Indian cities and towns to find jobs and escape from native poverty, and provide a critical examination of the intersections between power, privilege and racial hierarchy in India today. The chapters cover a variety of perspectives including social movements and activism, history, policy, youth studies and gender studies. With a focus on marginalised communities, and the effects and persistence of racial inequality in a South Asian context, this collection will be an important contribution to critical race studies, public policy, human rights discourse, and social work
https://www.palgrave.com/gp/book/9783030462505  ​
Venkat Pulla is Senior Research Fellow (Adjunct), Institute of Land, Water and Society, Charles Sturt University, and Foundation Professor at the Brisbane Institute of Strengths-based Practice, Australia.
Rituparna Bhattacharyya is an independent research consultant, and Editor-in-Chief of the Journal Space and Culture, India.
Sanjai Bhatt is Professor of Social Work at the University of Delhi, and President of the National Association of Professional Social Workers in India.
0 Comments

ವ್ಯಕ್ತಿಗತ ಸಮಾಜಕಾರ್ಯದ ಪರಿಚಯ ಪುಸ್ತಕದ ಕುರಿತು ಒಂದು ತುಲನಾತ್ಮಕ ಸಂವಾದ

8/27/2020

0 Comments

 
Picture
Niratanka & Niruta Publications, Bangalore are inviting you to a scheduled Zoom meeting.

Topic: Niratanka: ವ್ಯಕ್ತಿಗತ ಸಮಾಜಕಾರ್ಯದ ಪರಿಚಯ ಪುಸ್ತಕದ ಕುರಿತು ಒಂದು ತುಲನಾತ್ಮಕ ಸಂವಾದ: 6-Sept-2020, Sunday @ 4pm
Time: Sept 6, 2020 04:00 PM India

Join Zoom Meeting
https://us02web.zoom.us/j/85355007186?pwd=SUgwdjYzQzlLYitJakxIdTQ2bW1tZz09

Meeting ID: 853 5500 7186
Passcode: 933078

Read More
0 Comments

ಮಾನಸಿಕ ಅನಾರೋಗ್ಯ ಒಂದು ಸಮಸ್ಯೆ ವಿನಃ ಸವಾಲಲ್ಲ...

7/28/2020

0 Comments

 
ಆತ್ಮೀಯರೆ…ಓಡುತ್ತಿರುವ ಈ ಕಾಲದಲ್ಲಿ ಕಾಡುತ್ತಿರುವ ಸಮಸ್ಯೆಗಳ ಸಂಖ್ಯೆಯೇ ಹೆಚ್ಚು. ಜವಾಬ್ದಾರಿಗಳ ಮೂಟೆ ಹೊತ್ತು ಕಂಡ ಕನಸ್ಸುಗಳನ್ನು ನನಸಾಗಿಸಲು ಮನುಷ್ಯ ಸೆಣಸುತ್ತಾನೆ. ಜೀವನದಲ್ಲಿ ಉದ್ಭವಿಸಿದ ಭಾಧೆಗಳನ್ನು ಬದಿಗೊತ್ತಿ ಜೀವನ ನಿರ್ವಹಣೆಯ ಉದ್ದೇಶದಿಂದ ಕೈಗೆ ಸಿಕ್ಕ ಉದ್ಯೋಗವನ್ನು ಮಾಡುತ್ತಾ ಜೀವನ ಸಾಗಿಸುವಂತಹ ಜನಸಾಮಾನ್ಯರ ಜೀವನದಲ್ಲಿ ಎಂದೂ ಕಾಣದ ಕೇಳದ ಕೊರೋನಾ ವೈರಸ್ ಎಂಬ ಮಹಾಮಾರಿ ದುತ್ ಎಂದು ಉದ್ಬವಿಸಿ ಕಂಡ ಕನಸುಗಳನ್ನ ದಿಕ್ಕಾಪಾಲಾಗಿಸಿ ಪ್ರತಿಯೊಬ್ಬರ ಜೀವನದಲ್ಲೂ ಒಂದಿಲ್ಲೊಂದು ರೀತಿಯಲ್ಲಿ ಸಮಸ್ಯೆಗಳನ್ನು ಸೃಷ್ಟಿಸಿರುವುದು ಎಲ್ಲರೂ ತಿಳಿದಿರುವ ಸತ್ಯಸಂಗತಿ ಅದು ಅವರವರ ಅನುಭವಕ್ಕೆ ಬಂದಿರುತ್ತದೆ.

Read More
0 Comments

Documents Required to Obtain 80G Registration

6/4/2020

0 Comments

 
  1. Dully filled in Form – 10A for registration u/s 12A registration and also 80G registration
  2. Registration Certificate and MOA /Trust Deed (two copies – self attested by NGO head)
  3. NOC from Landlord (from registered office)
  4. A Copy of PAN card of your NGO
  5. Photocopy of Electricity Bill / House tax Receipt /Water Bill
  6. Evidence of welfare activities carried out & Progress Report since inception or last 3 years
  7. Books of Accounts, Balance Sheet & ITR (if any), since inception or last 3years
  8. List of donors along with their address and PAN
  9. List of governing body or board of trustees members with their contact details
  10. Original RC and MOA /Trust Deed for verification
  11. Authority letter in favour of NGO Factory
  12. Any other document or affidavit / undertaking, if extra information is by the Income Tax department
0 Comments

Participation in the survey on "Impact of Covid-19 Lockdown on Families"

5/13/2020

0 Comments

 
Dear sir/madam,

The following survey aims at capturing the impact of Covid-19 lockdown on families. I invite you to kindly fill the online questionnaire. Also, I request you to forward the link to whomever you think will be interested in participating in the survey.  Your participation will be helpful in generating valuable information to understand families better.

https://forms.gle/5uTM2CdW4aeNFo1u8
P.S: Pl note that the survey will close by 18 May 2020 midnight.

B. Devi Prasad
Former Professor of Social Work, TISS, Mumbai.,
Andhra University, Visakhapatnam, A.P., India
Mob:9702871115
deviprasadb2@gmail.com (use this mail ID only)
Picture
For More Details
0 Comments

SA-MUDRA FOUNDATION

5/11/2020

0 Comments

 
Hi all, SA-MUDRA FOUNDATION Bangalore, an NGO working for youth wellness & Empowerment (with a core commitment to prevent suicides) calls for members to its Governing Board (Honorary)  Interested persons ( preferably from Bangalore) please mail profile to bharathi.samudra@gmail.com
0 Comments
<<Previous

    Categories

    All
    Conference
    Kannada Articles
    Kannada Books
    Others
    Registration
    Social Work
    SWFP
    Women


    Picture

    Inviting Articles

    More details

    20,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join HR Online Groups


    RSS Feed


Site
  • Home
  • About Us
  • Editor's Blog
  • Leader's Talk
  • Blog
  • Online Store
  • Videos
  • Join Our Online Groups
Vertical Divider
HR Online Groups
20,000 HR PROFESSIONALS ARE CONNECTED THROUGH OUR NIRATHANKA HR GROUPS.
Join

Vertical Divider
Contact us
080-23213710
+91-8073067542
Mail-nirutapublications@gmail.com
Our Other Websites
www.hrkancon.com 
www.niratanka.org  
www.mhrspl.com
www.nirutapublications.org
Receive email updates on the new books & offers
for the subjects of interest to you.
Copyright Niruta Publications 2021
Website Designing & Developed by: www.mhrspl.com